Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಖಾಸಗಿ ಹೋಟೆಲೊಂದರಲ್ಲಿ ಜಾಂಭವ ಯುವ ಸೇನೆಯ ಸಿಂದಗಿ ತಾಲೂಕು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಡಾ.ರಮೇಶ ಚಕ್ರವರ್ತಿ ಅವರ ಆದೇಶದ ಮೇರೆಗೆ ಆದೇಶ ಪತ್ರ ನೀಡಿದರು.ಇದೇ ಸಂದರ್ಭದಲ್ಲಿ ಕರ್ನಾಟಕ ಆದಿಜಾಂಭವ ಜನಸಂಘದ ಉಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ, ಕೆಂಚಪ್ಪ ಪುರದಾಳ, ಆಕಾಶ ಇಂಗಳಗಿ, ಕನಕಮೂರ್ತಿ ವಗ್ಗರ, ಕಲ್ಯಾಣಿ ಪುರದಾಳ, ಮಂಜುನಾಥ ಕಟ್ಟಿಮನಿ ಹಣಮಂತ ಹೊಸಮನಿ, ರಾಹುಲ ದೊಡಮನಿ, ಮಂಜುನಾಥ ಯಾದವ, ನಾಗೇಶ ವಗ್ಗರ, ಸೋಮು ಕಡಿಮನಿ, ಸಂಜು ಕಟ್ಟಿಮನಿ, ಪ್ರಜ್ವಲ ದೇವರಮನಿ, ರಾಘು ಮೇಲಿನಮನಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ ಆಲಮಟ್ಟಿಯ ಚಂದ್ರಶೇಖರ ನುಗ್ಗಲಿ ಆಯ್ಕೆಯಾದರು.ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಣ ಸಭೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು.ವಿಜಯೋತ್ಸವ;ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ನಿಡಗುಂದಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು, ಚಂದ್ರಶೇಖರ ನುಗ್ಗಲಿ ಅಭಿಮಾನಿಗಳು ಪಟ್ಟಣದ ಮುದ್ದೇಬಿಹಾಳ ಕ್ರಾಸ್ , ರೇಣುಕಾ ಮೆಡಿಕಲ್ ಶಾಪ್, ಬಸ್ ನಿಲ್ದಾಣ ಸೇರಿದಂತೆ ನಾನಾ ಕಡೆ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷರಾದ ಮಹಾಂತೇಶ, ಮುಕಾರ್ತಿಹಾಳ ಹಾಗೂ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ, ಆರ್.ಬಿ.ಗೌಡರ ಮತ್ತಿತರರು, ೧ಲಕ್ಷ ೮೦ ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಯ ಸದಸ್ಯರಿರುವ ಆರು ದಶಕಗಳ ಇತಿಹಾಸ ಹೊಂದಿರುವ ಸಂಘಟನೆಯ ಚುಕ್ಕಾಣಿ ನಮ್ಮ ಜಿಲ್ಲೆಗೆ ಪ್ರಥಮ ಬಾರಿಗೆ ಲಭಿಸಿದೆ.ಶಿಕ್ಷಕ ಸಂಘಟನೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಚಂದ್ರಶೇಖರ ನುಗ್ಗಲಿ ಅವರಿಗೆ ಈ ಹುದ್ದೆ ತಾನಾಗಿಯೇ ಒಲಿದು ಬಂದಿದೆ ಎಂದರು.ಸAಘದ ರಾಜ್ಯ ಸಹ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಿದ್ಯಾರ್ಥಿಗಳು ಸಾಕ್ಷಾತ್ ಸರಸ್ವತಿ ಆರಾಧಕ ರಾಗಬೇಕು. ಆ ನಿಟ್ಟಿನಲ್ಲಿ ಅಧ್ಯಯನವೇ ಜೀವನದ ಪಥವಾಗಬೇಕು. ಶಿಕ್ಷಕರ ಮಾತು ಗಳನ್ನು ಹೀರಿಕೊಂಡು ಬುದ್ದಿಯನ್ನು ಅರಳಿಸಿ ಕೊಳ್ಳಬೇಕು ಎಂದು ಹುಲ್ಯಾಳ ಗುರು ದೇವಾಶ್ರಮದ ಹರ್ಷಾನಂದ ಸ್ವಾಮೀಜಿ ಹೇಳಿದರು.ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಶನಿವಾರ ನಡೆದ ಸರಸ್ವತಿ ಪೂಜೆ, 2025-26ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬಾಹ್ಯ ಆಕರ್ಷಣೆ ಮೀರಿ ನಿಲ್ಲಬೇಕು. ವೇಗದ ಜಗತ್ತಿನಲ್ಲಿ ಕಾಲಕ್ಕೆ ತಕ್ಕಂತೆ ಬದುಕನ್ನು ಬದಲಿ ಸಿಕೊಳ್ಳಬೇಕು. ಕೇಳಿದ್ದನ್ನು ಮನನ ಮಾಡಿ ಕೊಂಡು ಸ್ಮರಣದಲ್ಲಿ ಇಟ್ಟುಕೊಳ್ಳಬೇಕು. ತಂದೆ-ತಾಯಿಗಳಿಗೆ, ಕಲಿತ ಶಿಕ್ಷಣ ಸಂಸ್ಥೆಗೆ, ನಾಡಿಗೆ ಕೀರ್ತಿ ತರುವ ಹಾಗೂ ಸಂಸ್ಥೆಯ ಗೌರವ ಹೆಚ್ಚಿಸುವ ವಿದ್ಯಾರ್ಥಿಗಳಾಗಬೇಕು ಎಂದು ಹೇಳಿದರು.ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೇನು ನೊಣಗಳು ಹೂವಿನ ಬಣ್ಣ ಮತ್ತು ವಾಸನೆ ಕಿತ್ತುಕೊಳ್ಳದೆ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಚಾರಿತ್ರ್ಯ ಚಕ್ರವರ್ತಿ ಶ್ರೀಶಾಂತಿಸಾಗರ ಮುನಿ ಮಹಾರಾಜರ 70ನೇ ಪುಣ್ಯತಿಥಿ ಆಚರಣೆಗೆ ಅವಕಾಶ ಲಭಿಸಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜನತೆ ಪುಣ್ಯವಂತರು ಎಂದು ಮಹಾರಾಷ್ಟ್ರದ ಜೈನ ಸಮುದಾಯದ ಮುಖ್ಯಸ್ಥ ಬಾಳಾಸಾಬ ಪಾಟೀಲ ಹೇಳಿದರು.ನಗರದ ಪ್ರಭಾತನಗರ ಬಡಾವಣೆಯಲ್ಲಿರುವ ಶ್ರೀ ಪಾಶ್ವನಾರ್ಥ ದಿಗಂಬರ ಜೈನ ಮಂದಿರದಲ್ಲಿ ಚಾರಿತ್ರ್ಯ ಚಕ್ರವರ್ತಿ 108 ಶ್ರೀಶಾಂತಿಸಾಗರಮುನಿ ಮಹಾರಾಜರ 70ನೇ ಪುಣ್ಯತಿಥಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಚಾರಿತ್ರ್ಯಚಕ್ರವರ್ತಿ ಶಾಂತಿಸಾಗರ ಮುನಿ ಮಹಾರಾಜರ 70ನೇ ಪುಣ್ಯತಿಥಿ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಬೃಹತ್ ಸಮಾರಂಭ ಯಶಸ್ವಿಗಾಗಿ ಆಯೋಜನೆಗೆ ಪ್ರತಿಯೊಬ್ಬರೂ ತನು-ಮನ-ಧನ ಸಹಾಯ ಮಾಡಬೇಕು. ಸಮಿತಿಯವರು ವಹಿಸುವ ಜವಾಬ್ದಾರಿಗಳನ್ನು ಸಮಾಜ ಬಂಧುಗಳು ಅಚ್ಚುಕಟ್ಟಾಗಿˌ ಮಾಡಬೇಕು. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಅಗಸ್ಟ್ ಅಥವಾ ಸೆಪ್ಟೆಂಬ‌ರ್ ತಿಂಗಳಲ್ಲಿ ಪುಣ್ಯತಿಥಿ ಆಚರಣೆ ದಿನಾಂಕ ನಿಗದಿಗೊಳ್ಳಲಿದೆ ಎಂದು ಹೇಳಿದರು.ಅಧ್ಯಕ್ಷ ಬಾಳಾಸಾಬ ಪಾಟೀಲ, ಉಪಾಧ್ಯಕ್ಷ ಸುಭಾಷ ಮಗದುಮ್, ಕಾರ್ಯದರ್ಶಿ ಅಜೀತ ಬಂಡೆ, ಖಜಾಂಚಿ ರಾವಸಾಹೇಬ ಕೊಣ್ಣೂರ, ಅಭಯಕುಮಾರ ಬಾಗಾದೆ, ಆನಂದ ಉಗಾರೆ,…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನ್ಯಾನೋ ರಸ ಗೊಬ್ಬರಗಳ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದು. ರಸಗೊಬ್ಬರ ಅಭಾವ ಶೇ.50ರಷ್ಟು ಕಡಿಮೆ ಮಾಡಬಹುದು ಎಂದು ಉಪಕೃಷಿ ನಿರ್ದೇಶಕಿ ಮಂಜುಳಾ ಬಸವರೆಡ್ಡಿ ತಿಳಿಸಿದರು.ಕೃಷಿ ಇಲಾಖೆ ಜಮಖಂಡಿ ಹಾಗೂ ಇಷ್ಟೋ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹುಲ್ಯಾಳ ಗ್ರಾಮದ ರುದ್ರಪ್ಪ ಮಲ್ಲಪ್ಪ ಝುಲಪಿ ಇವರ ತೋಟದಲ್ಲಿ ಗೋವಿನಜೋಳ ಬೆಳೆಯಲ್ಲಿ ನ್ಯಾನೋ ಯೂರಿಯಾ, ಡಿಎಪಿಯನ್ನು ದ್ರೋಣ್ ಮೂಲಕ ಸಿಂಪರಣೆ ಮಾಡಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.ನ್ಯಾನೋ ಗೊಬ್ಬರಗಳು ಪರಿಸರ ಸ್ನೇಹಿಯಾಗಿದ್ದು, ವಾತಾವರಣ ವೈಪರೀತ್ಯದ ಕಾಮ ತಡೆಗಟ್ಟುತ್ತವೆ. ಅರ್ಧ ದುಷ್ಪರಿಣಾಮ ಲೀಟರ್ ಒಂದು ಬಾಟಲ್ ಒಂದು ಚೀಲ ಹರಳು ರಸಗೊಬ್ಬರಕ್ಕೆ ಸಮವಾಗಿದೆ. ನ್ಯಾನೋ ಗೊಬ್ಬರಗಳ ಬಳಕೆಯಿಂದ ಬೆಳೆಗಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತವೆ. ಕೃಷಿ ಕಾರ್ಮಿಕರ ಅವಲಂಬನೆ ಕಡಿತಗೊಳಿಸುತ್ತದೆ. ಸಮಯವ ಉಳಿತಾಯವಾಗುತ್ತದೆ. ಡೋಣ್ ಣ್ ಯಂತ್ರ ಬಾಡಿ ಬಾಡಿಗೆ ಪಡೆದು ನ್ಯಾನೋ ಗೊಬ್ಬರ ಹಾಗೂ ಕೀಟನಾಶಕಗಳ ಸಿಂಪರಣೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ರೈತರು ನೇರ ಗೊಬ್ಬರಗಳ ಬದಲಾಗಿ ನ್ಯಾನೋ ಗೊಬ್ಬರಗಳ ಬಳಕೆ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಡಿಜಿಟಲ್ ವಂಚನೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಅವಶ್ಯಕತೆ ಇದೆ, ನಮ್ಮ ಇಲಾಖೆಯಿಂದ ಸಾರ್ವಜನಿಕರಿಗೆ ಎಚ್ಚರ ನೀಡುತ್ತಿದ್ದರು ವಂಚನೆ ಮಾತ್ರ ಕಡಿಮೆಯಾಗುತ್ತಿಲ್ಲ ಆದ್ದರಿಂದ ಸಂಘ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಿವೈಎಸ್ಪಿ ಎಸ್ ರೋಷನ ಜಮೀರ ಹೇಳಿದರು.ಇಲ್ಲಿನ ಬಸವ ಭವನದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಾಗಾರದ ನಿಮಿತ್ತ ಡಿಜಿಟಲ್ ವಂಚನೆ ತಡೆಗಟ್ಟುವಿಕೆ, ಹಣಕಾಸು, ಸಾಕ್ಷರತೆ, ಜವಾಬ್ದಾರಿಯುತ ಸಾಲ, ಕ್ರೆಡಿಟ್ ಶಿಸ್ತು ಬಗ್ಗೆ ಉಪನ್ಯಾಸ ಜರುಗಿದವು.ಬ್ಯಾಂಕ ಖಾತೆ ಕೆವೈಸಿ ಅಪ್ ಡೆಟ್ ಮಾಡಿಕೊಳ್ಳಿ, ಒಟಿಪಿ ಹೇಳುವದು, ಮೊಬೈಲನಲ್ಲಿ ಬರುವ ಲಿಂಕ ಒತ್ತುವದು, ಅನಾಮಿಕ ಕರೆಗಳು, ಬ್ಯಾಂಕ ಸಿಬ್ಬಂದಿ ಹೆಸರಿನಲ್ಲಿ ಕರೆಗಳು ಬಂದಾಗ ಗಾಬರಿಯಾಗಿ ಯಾರು ಸ್ಪಂದಿಸಬಾರದು, ತಾವು ಖುದ್ದಾಗಿ ಬ್ಯಾಂಕಗೆ ಹೋಗಿ ವಿಚಾರಿಸಬೇಕು ಎಂದರು.ಪ್ರಾದೇಶಿಕ ವ್ಯವಸ್ಥಾಪಕ ರಾಮಕೃಷ್ಣ ಮಾತನಾಡಿ ಆರ್ಥಿಕ ನೆರವು, ಹಣಕಾಸು ಸಾಕ್ಷರತೆ ಬಗ್ಗೆ ಮಾತನಾಡಿ ನಿಮ್ಮ ಹೂಡಿಕೆ ಹಣವನ್ನು ನಿಮ್ಮಷ್ಟು ಕಾಳಜಿಯಿಂದ ನಿರ್ವಹಿಸಲು ಯಾರಿಂದಲೂ ಸಾಧ್ಯವಿಲ್ಲ, ತಜ್ಞರಿಂದ ಸಲಹೆ…

Read More

ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಕನ್ನಡ ಸಾಹಿತ್ಯದಲ್ಲಿ ಕೈವಲ್ಯ ಪದ್ದತಿಯನ್ನು ಪರಂಪರೆಯನ್ನು ಮುಂದುವರೆಸಿಕೊಂಡು ಹೋದವರಲ್ಲಿ ಬಾಲಲೀಲಾ ಮಹಾಂತ ಸ್ವಾಮಿಗಳು ಪ್ರಮುಖರು.ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳು ಪ್ರಸಿದ್ಧ ಶಿವಯೋಗಿಗಳು ಮತ್ತು ಪವಾಡ ಪುರುಷ ಎಂದು ಹೆಸರುವಾಸಿಯಾಗಿದ್ದಾರೆ. ಅವರು ಮುಳಗುಂದ ಪಟ್ಟಣದಲ್ಲಿ ನೆಲೆಸಿದ್ದರು ಮತ್ತು ಅವರ ಸ್ಮರಣಾರ್ಥ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಅವರು ಬಾಲ್ಯದಲ್ಲಿಯೇ ವೈರಾಗ್ಯ ತಳೆದು, ದೇಶ ಸಂಚಾರ ಮಾಡಿ, ಅನೇಕ ಪವಾಡಗಳನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಅವರ ಬಗ್ಗೆ ಇನ್ನಷ್ಟು ಮಾಹಿತಿ ಇದೆ:ಜೀವನ ಮತ್ತು ವೈರಾಗ್ಯಬಾಲಲೀಲಾ ಮಹಾಂತ ಶಿವಯೋಗಿಗಳು ವಿಜಯಪುರ ಜಿಲ್ಲೆಯ ಎರಿನಾಳ ಗ್ರಾಮದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಅವರು ಎಂಟು ವರ್ಷದವರಾಗಿದ್ದಾಗ ವೈರಾಗ್ಯ ಪಡೆದು, ದೇಶ ಸಂಚಾರ ಮಾಡಿದರು.ಪವಾಡಗಳುಶಿವಯೋಗಿಗಳು ಅನೇಕ ಪವಾಡಗಳನ್ನು ಮಾಡಿದ್ದಾರೆಂದು ಹೇಳಲಾಗುತ್ತದೆ. ಮೈಸೂರು ಮಹಾರಾಜರ ರೋಗ ವಾಸಿ ಮಾಡಿದ್ದು, ಭಕ್ತನೊಬ್ಬನಿಗೆ ಪ್ರಸಾದದ ತಟ್ಟೆ ತುಂಬಿಸಿದ್ದು, ಮತ್ತು ಮಹಿಳೆಯೊಬ್ಬರಿಗೆ ಸಂತಾನ ಪ್ರಾಪ್ತಿಯಾಗುವಂತೆ ಆಶೀರ್ವಾದ ಮಾಡಿದ್ದು ಇವು ಕೆಲವು ಉದಾಹರಣೆಗಳು.ಮುಳಗುಂದದಲ್ಲಿ ನೆಲೆಅವರು ಮುಳಗುಂದ…

Read More

ಲೇಖನ- ಅರವಿಂದ ಜಿ. ಜೋಷಿಮೈಸೂರು”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಹುಟ್ಟುವಾಗಲೇ ಅಂಗವಿಕಲತೆ ಯಾಗಿದ್ದ ಅರುಣಾ,ಹೆತ್ತ ತಾಯಿ ಹೊರತುಪಡಿಸಿಉಳಿದವರ ದೃಷ್ಟಿಯಲ್ಲಿ ಬೇಡದ ವಸ್ತುವಿನಂತಾಗಿದ್ದಳು. ಸಾಮಾನ್ಯವಾಗಿ ಸೃಷ್ಟಿಕರ್ತ ತಾನೇನಾದರೂ ಕೊಡುವ ಸಮಯದಲ್ಲಿ ಮರೆತಿದ್ದರೆ ಪುನಃ ಯೋಚಿಸಿ ಅಂತಹವರಿಗೆ ಬೇರೆ ರೂಪದಲ್ಲಿ ಎರಡರಷ್ಟನ್ನು ಕರುಣಿಸುತ್ತಾನೆ ಎಂಬ ಮಾತಿಗೆ ಪೂರಕವಾಗುವಂತೆ ಅರುಣಾಳಿಗೆ ಅಸಾಧ್ಯ ಚುರುಕು ಬುದ್ಧಿ ನೀಡಿದ್ದ.ಅರುಣಾ ಬೆಳೆಯುತ್ತಿದ್ದಂತೆ ಗಣೀತ ವಿಷಯದಲ್ಲಿ ಅಪಾರ ಆಸಕ್ತಿ ತೋರಿಸುತ್ತ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿ,ಜನ ಯಾವುದನ್ನು ಕಬ್ಬಿಣದ ಕಡಲೆ ಎನ್ನುತ್ತಿದ್ದರೋ ಆ ವಿಷಯವನ್ನು ನೀರು ಕುಡಿದಷ್ಟು ಸಲೀಸಾಗಿ ತಿಳಿದುಕೊಂಡಿದ್ದಳಲ್ಲದೇ ಅಷ್ಟೇ ಸರಳವಾಗಿ ಇತರರಿಗೂ ಅರ್ಥೈಸಿ ಹೇಳಿ ಕೊಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದಳು. ಹೀಗಾಗಿ ಆಕೆ ತನ್ನ ಹದಿನೆಂಟನೇಯ ವಯಸ್ಸಿನಲ್ಲಿಮನೆಯಲ್ಲಿಯೇ”ಗಣೀತ”ವಿಷಯದ ಟ್ಯೂಷನ್ ಆರಂಭಿಸಿ ವಿದ್ಯಾರ್ಥಿಗಳ ಮನ ಮೆಚ್ಚುವ ಶಿಕ್ಷಕಿಯಾಗಿದ್ದಳು. ದಿನ ಕಳೆದಂತೆ ಇವಳ ಪಾಠ ಮಾಡುವ ಕೌಶಲ್ಯತೆಯ ಕೀರ್ತಿ ಸುತ್ತೆಲ್ಲ ಹರಡಿದಾಗ ಸಾಕಷ್ಟು ವಿದ್ಯಾರ್ಥಿಗಳು ಇವಳ ಪಾಠಕ್ಕೆ ಸೇರತೊಡಗಿದರು. ಅದರಿಂದ ಸಹಜವಾಗಿ ಲಕ್ಷ್ಮೀ ಅನುಗ್ರಹ ವೂ ಆಗತೊಡಗಿತು.ಈ ನಡುವೆ ಪುಟ್ಟ ಸಂಸಾರ…

Read More

ರಚನೆ- ಅನಸೂಯಾ ಕಾರಂತ್”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಚೈತ್ರ ಮಾಸದಿ ಮತ್ತೆ ವಸಂತನ ಆಗಮನಭೂದೇವಿಯ ಒಡಲಲ್ಲೊಂದು ನವಚೇತನಮಾಮರದಿ ಕೋಗಿಲೆಗಳ ಇಂಪಾದ ಕೂಜನಗರಿಬಿಚ್ಚಿದ ನವಿಲುಗಳ ಸಂತಸದ ನರ್ತನ ವೃಕ್ಷರಾಶಿಯು ಹಣ್ಣುಕಾಯಿಗಳ ಹೊತ್ತಿದೆದುಂಬಿಯೊಂದು ಮಕರಂದವ ಹೀರುತಿದೆಕುಳಿರ್ಗಾಳಿಯು ಬೀಸಿ ತಂಪನ್ನೆರೆಯುತಿದೆಪ್ರಕೃತಿಯಲಿ ಎಲ್ಲೆಲ್ಲೂ ಹಚ್ಚ ಹಸಿರು ತುಂಬಿದೆ ತರುಲತೆಗಳಲಿ ಹೊಸ ಚಿಗುರಿನ ಸಂಚಲನಪ್ರೇಮಿಗಳಿಗಿದು ಮಧುರ ಭಾವದ ಬಂಧನನವ ವರುಷದ ಯುಗಾದಿಯಾಚರಣೆಯ ದಿನಸಕಲರಿಗೂ ಒಳಿತಾಗಲೆಂದು ಹಾರೈಸಿದೆ ಮನ

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಮಕ್ಕಳೇ ಇಂದಿನ ನಾಯಕರು.ಮಕ್ಕಳು ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜತೆಗೆ ಮಕ್ಕಳ ಸಂಸತ್ತಿನ ಮೂಲಕ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿ, ದೇಶಕ್ಕೆಉತ್ತಮ ನಾಗರಿಕರನ್ನು ಕಾಣಿಕೆಯಾಗಿ ನೀಡಲು ಸಾಧ್ಯ ಎಂದು ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಹೇಳಿದರು.ಶುಕ್ರವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ‘ಮಕ್ಕಳ ಶಾಲಾ ಸಂಸತ್ತು-ಪ್ರತಿಜ್ಞಾ ವಿಧಿ ಬೋಧನೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ಸಂಸತ್-ಮಕ್ಕಳ ಪ್ರಾತಿನಿಧಿಕ ರಚನೆಯಾಗಿದ್ದು, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರರನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಮಕ್ಕಳಲ್ಲಿ ರಾಷ್ಟ್ರೀಯ ಮೌಲ್ಯ ಬೆಳೆಸಲು ಇಂತಹ ಚಟುವಟಿಕೆಗಳು ಅಗತ್ಯವಾಗಿವೆ ಎಂದು ಹೇಳಿದರು.ಮುಖ್ಯ ಅತಿಥಿ ಸಂತೋಷ ಬಂಡೆ ಮಾತನಾಡಿ, ಮಕ್ಕಳ ಸಂಸತ್ತಿನಿಂದ ಶಾಲಾ ದಾಖಲಾತಿ ಮತ್ತು ಹಾಜರಾತಿಯಲ್ಲಿ ಸುಧಾರಣೆ ಮಾಡಿ, ಶಾಲೆಯಲ್ಲಿ ಶಿಸ್ತಿನ ಪರಿಸರ ನಿರ್ಮಾಣ ಮಾಡಲು ಸಾಧ್ಯ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ ಎಂದು ಹೇಳಿದರು.ಶಾಲಾ ಶಿಕ್ಷಕರೇ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದು…

Read More