ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಿಕೋಟಾ ನೂತನ ಕಲಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಸಂತೋಷ ಬಿ.ನವಲಗುಂದ ಅವರು ರಚಿಸಿದ “ಮುಂಜಾನೆಗೊಂದು ಚೈತನ್ಯ ಬಿಂದು'(ಚಿಂತನಗಳ ವಿಚಾರ ಲಹರಿ) ಎಂಬ ಕಿರು ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ, ಸಮ್ಮೇಳನದ ಸರ್ವಾಧ್ಯಕ್ಷ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ವಿರಕ್ತಮಠ ತಿಕೋಟಾ, ಹಿರೇಮಠದ ಶಿವಬಸವ ಶಿವಾಚಾರ್ಯ ಮಹಾಸ್ವಾಮಿಗಳು ತಿಕೋಟಾ, ಹೊನವಾಡದ ಬಾಬುರಾವ ಮಹಾರಾಜರು, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ, ತಹಸೀಲ್ದಾರ್ ಸುರೇಶ ಚವಲರ, ಮುಖಂಡರಾದ ಬಸಯ್ಯ ವಿಭೂತಿ, ಆರ್.ಬಿ.ದೇಸಾಯಿ, ಸೋಮಶೇಖರ ಜತ್ತಿ, ಅಡಿವೆಪ್ಪ ಸಾಲಗಲ್, ಕೆಪಿಸಿಸಿ ಸದಸ್ಯ ಪೀರ್ ಪಟೇಲ್, ಮಾಜಿ ಜಿಪಂ ಸದಸ್ಯೆ ಶೋಭಾ ಹುಲ್ಯಾಳ, ಮಾಜಿ ಪಿಕೆಪಿಎಸ್ ಅಧ್ಯಕ್ಷೆ ಭಾಗೀರಥಿ ತೇಲಿ, ಆರ್.ಜಿ.ಯರನಾಳ, ವಿಜುಗೌಡ ಪಾಟೀಲ, ಎಸ್.ಪಿ.ಪಾಟೀಲ, ಗ್ರಾಮದ ಮುಖಂಡರು, ಕಸಾಪದ ಪದಾಧಿಕಾರಿಗಳು ಇದ್ದರು. ಕನ್ನಡಾಭಿಮಾನಿಗಳು, ಶಾಲಾ ಕಾಲೇಜು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

