ಉದಯರಶ್ಮಿ ದಿನಪತ್ರಿಕೆ
ಇಂಡಿ: ಅಭಿವೃದ್ದಿ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ವ್ಯಕ್ತಿಯ ವೈಯಕ್ತಿಕ, ಕೌಟುಂಬಿಕ, ಮತ್ತು ಸಾಮಾಜಿಕ ಜೀವನ ಸಾಧಾರಣದಿಂದ ಅಸಾಧಾರಣ ಮಟ್ಟಕ್ಕೆ ಕೊಂಡೆೊಯುತ್ತಿದೆ. ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಹಳಗುಣಕಿ ಗ್ರಾಮದ ಸರಕಾರಿ ಕರ್ನಾಟಕ ಪಬ್ಲಿಕ ಶಾಲೆ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಶಾಲೆಯಲ್ಲಿ ಒಂದನೆಯ ತರಗತಿಯಿಂದ ಹನ್ನೆರಡನೆಯ ತರಗತಿ ವರೆಗೆ ಇಂಗ್ಲೀಷ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವದು ಎಂದರು.
ಶೈಕ್ಷಣಿಕ ಅಭಿವೃದ್ದಿ ಮಾಡುವ ಉದ್ದೇಶದಿಂದ ಹಳಗುಣಕಿ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆ ಹಾಗೂ ವಸತಿ ನಿಲಯ ಅತ್ಯಂತ ಗುಣಮಟ್ಟದಾಗಿದೆ. ಈ ಹಿಂದೆ ಡಾ.ಬಿ.ಆರ್ ಅಂಬೇಡ್ಕರವರ ಪ್ರತಿಮೆ ಆನಾವರಣಗೊಳಿಸಿ ಅನೇಕ ಸಚಿವರನ್ನು ಕರೆಯಿಸಿ ಈ ಭಾಗದ ಜ್ವಲಂತ ಸಮಸ್ಯಗಳನ್ನು ಮನವರಿಕೆ ಮಾಡಲಾಗಿದೆ. ಇಂಡಿ ಪಟ್ಟಣದಲ್ಲಿ ಶೈಕ್ಷಣಿಕ ಕಾಶಿ ಮಾಡಿ ಈ ಭಾಗದ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಸುಂಗಟ್ಯಾಳ ಗುರುಗಳು ಮಾತನಾಡಿದರು.
ಶಾಲೆ ಮುಖ್ಯಗುರು ಆರ್.ಆರ್ ಬಗಲಿ, ಗ್ರಾ.ಪಂ ಅಧ್ಯಕ್ಷ ಸಿದರಾಯಗೌಡ ಬಿರಾದಾರ, ಉಪಾಧ್ಯಕ್ಷೆ ಮಹಾನಂದಾ ಮಾದರ, ಸಿದ್ದನಗೌಡ ಪಾಟೀಲ, ಗುರಣ್ಣಾಗೌಡ ಪಾಟೀಲ ಪಿಡಿಒ ಸಿದರಾಯ ಬಿರಾದಾರ ಸೇರಿದಂತೆ ಗ್ರಾಮದ ಮುಖಂಡರು ಹಿರಿಯರು ಶಾಲಾ ಆಡಳಿತ ಮಂಡಳಿ ಸರ್ವಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಮತ್ತಿತರಿದ್ದರು.