Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಭಾನುವಾರ ರಾಮನವಮಿ ಹಬ್ಬದ ಆರಾಧನೆ ನಿಮಿತ್ಯ ರಾಮನ ಜಪತಪ ಶ್ರದ್ಧಾ ಭಕ್ತಿ ಭಾವದಿಂದ ಇಲ್ಲಿ ನೆರವೇರಿತು. ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಗುರುಮಾತೆ ಸಹನಾ ಹತ್ತಳ್ಳಿ (ಕಲ್ಯಾಣಿ) ಅವರ ಕರುಳಿನ ಕುಡಿ, ಮುದ್ದಿನ ಮಗಳು ಶ್ರೀಶಾ ರಾಮನ ವೇಷಭೂಷಣದಲ್ಲಿ ಮಿನುಗಿ ಗಮನ ಸೆಳೆದಳು. ಶ್ರೀರಾಮಚಂದ್ರನ ರೂಪದಲ್ಲಿ ಕಣ್ಮನ, ಹೃನ್ಮನ ಸೆಳೆದ ಆ ಪುಟ್ಟ ಬಾಲೆ ಶ್ರೀಶಾ ಹತ್ತಳ್ಳಿ ಖುಷಿ,ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆ ಭಕ್ತಿ,ಭಾವದ ವಿಶೇಷ ರಾಮ ನಯನದ ಮಧುರ ನೋಟ ಹಂಚಿಕೊಂಡು ಶ್ರೀಶಾ ಕಂಡಿದ್ದು ಹೀಗೆ !
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಕಡಕೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಅಪ್ಪಾಶಿ ದೇವರವರ, ಉಪಾದ್ಯಕ್ಷರಾಗಿ ಮಲ್ಲಯ್ಯಾ ಮಠಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಾಜಿ ಶಾಸಕ ಸಂಘದ ನಿರ್ದೇಶಕ ಆನಂದ ನ್ಯಾಮಗೌಡ ಮಾತನಾಡಿ, ಗ್ರಾಮಗಳಲ್ಲಿರುವ ಸೊಸಾಯಿಟಿಗಳಲ್ಲಿ ರೈತರು ವ್ಯವಹಾರ ನಡೆಸಬೇಕು, ಸಂಘಗಳು ಬೆಳೆದಂತೆ ರೈತರ ಆರ್ಥಿಕ ಬೆಳವಣಿಗೆಯೂ ಆಗಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿನ ಯಾವುದೇ ಸೊಸೈಟಿಯಲ್ಲಿಯೂ ಕಡಕೋಳ ಸೊಸೈಟಿಯಲ್ಲಿ ನೀಡುವ ಹಾಗೆ ಗೊಬ್ಬರ ವ್ಯವಹಾರ ನಡೆಯುವದಿಲ್ಲ. ಇದಕ್ಕೆ ಇಲ್ಲಿನ ಸಿಬ್ಬಂದಿ ಪ್ರಮಾಣಿಕತೆಯೇ ಎಂದರು.ಈ ಸಂದರ್ಭದಲ್ಲಿ ನ್ಯಾಯವಾದಿ ಎನ್.ಎಸ್.ದೇವರವರ, ಬಿಡಿಸಿಸಿ ನಿರ್ದೇಶಕ ಏಗಪ್ಪ ಸವದಿ, ನಾಗಪ್ಪಾ ಮುತ್ತಕ್ಕನವರ, ಜಿ.ಕೆ. ಮಠದ, ಅಣ್ಣಾಸಾಬ ದೇವರವರ, ಸಂಗಪ್ಪ ದೇವರವರ, ಆನಂದ ಪಾಟೀಲ, ಕಾಡಪ್ಪಾ ದೇಸಾಯಿ, ಹಣಮಂತ ನ್ಯಾಮಗೌಡ, ಯಲ್ಲವ್ವ ಜಾಬಗೌಡ, ಸಾವಿತ್ರಿ ಕುಂಬಾರ, ಮಲ್ಲಪ್ಪಾ ಟಕ್ಕೊಡ, ಪಿ.ಎಸ್.ಮಹಾಂತ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿವಿಧ ಹಿಂದು ಸಂಘಟನೆಗಳ ವತಿಯಿಂದ ಅದ್ದೂರಿಯಾಗಿ ರಾಮ ನವಮಿ ಆಚರಣೆ ಮಾಡಲಾಯಿತು.ಶ್ರೀರಾಮ ಮೂರ್ತಿಯ ಭವ್ಯ ಶೋಭ ಯಾತ್ರೆಯನ್ನು ಬಸ್ ನಿಲ್ದಾಣಬಳಿ ಇರುವ ಬಸವಣ್ಣನವರ ವೃತ್ತದಲ್ಲಿ ಆಲಮೇಲ ಶ್ರೀ ಗುರು ಸಂಸ್ಥಾನ ಹೀರೇಮಠದ ಚಂದ್ರಶೇಖರ ಶಿವಚಾರ್ಯರು ಶಾಸಕ ಅಶೋಕ ಮನಗೂಳಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಜಾರದಲ್ಲಿ ಇರುವ ದೇವಿಗುಡಿಯ ವರಗೆ ಶೋಭಯಾತ್ರೆ ನಡೆಯಿತು.ದೇವಿ ಮಂದಿರದಲ್ಲಿ ಶೋಭಯಾತ್ರೆಯನ್ನು ಉದ್ದೇಶಿ ಅರ್ಜುಣಗಿ ಮಠದ ಷ ಬ್ರ ಸಂಗನಬಸವ ಶಿವಾಚಾರ್ಯರು ಮಾತನಾಡಿ, ನಮ್ಮ ಯುವಕರಲ್ಲಿ ಈಗ ಧರ್ಮರಕ್ಷಣೆ ಮಾಡುವ ಆಸಕ್ತಿ ಹೆಚ್ಚಾಗುತ್ತಿದೆ. ಎಂತಹ ಕಷ್ಟಕಾಲ ಬಂದರೂ ನಾವು ನೀವು ಎಲ್ಲರೂ ಕೂಡಿ ದರ್ಮ ರಕ್ಷಣೆಗೆ ಹೋರಾಡೋಣ ಎಂದರು.ಪಟ್ಟಣ ಪಂಚಾಯತ ಅಧ್ಯಕ್ಷ ಸಾಧಿಕ ಸುಂಬಡ, ಹಿಂದು ಮುಖಂಡ ಶ್ರೀಮಂತ ದುದ್ದಗಿ ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಹಣಮಂತ ಸಿಂಗ ರಜಪೂತ, ಪ್ರಶಾಂತ ನಾಶಿ ವಿಶ್ವನಾಥ ಅಮರಗೊಂಡ, ಅಲೋಕ ಬಡದಾಳ, ಕಮಲಾಕರ ಪತ್ತಾರ ಈರಣ್ಣ ಕಲ್ಲೂರ, ರತನಟಾಟ ಒಣಕುದರಿ, ರಾಹುಲ ಬಗಲಿ, ಅಭಿಷೇಕ…
ಯಡ್ರಾಮಿ ಪ್ರೌಢ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ | ಶಿಕ್ಷಕರಿಗೆ ಸನ್ಮಾನ ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ಆಚಾರ, ವಿಚಾರಗಳನ್ನು ಹೋಂದಿರುವ ಶಿಕ್ಷಕರು ಸಂಸ್ಕಾರಯುತ ಶಿಕ್ಷಣ ನೀಡಿದ್ದರಿಂದಲೇ ಇಂತಹ ಗುರುವಂದನಾ ಕಾರ್ಯಕ್ರಮಗಳನ್ನು ನೋಡುವಂತಾಗಿದೆ ಎಂದು ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದರು.ಯಡ್ರಾಮಿ ಪಟ್ಟಣದ ಸರಕಾರಿ ಪ್ರೌಡ ಶಾಲೆಯಲ್ಲಿ ೨೦೦೪-೦೫ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಾಠ ಹೇಳಿ, ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಗುರುಗಳ ಸೇವೆಯನ್ನು ಸ್ಮರಿಸಿ ಅವರಿಗೆ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯವಾಗಿದೆ. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಗೂ ಆಗಿನ ಶಿಕ್ಷಣ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ಶಿಕ್ಷಕರಾದವರು ಆಧುನಿಕತೆಯ ಜೊತೆಗೆ ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂದರು.ಇದಕ್ಕೂ ಪೂರ್ವದಲ್ಲಿ ಶಿಕ್ಷಕಿ ಸಾವಿತ್ರಿ ಪಾಟೀಲ ಮಾತನಾಡಿ, ಯಡ್ರಾಮಿ ಪಟ್ಟಣದಲ್ಲಿ ಸಂಸ್ಕಾರಕ್ಕೆ ಕೊರತೆಯಿಲ್ಲ. ಇಲ್ಲಿ ಶಿಕ್ಷಕರಿಗೆ ಒಳ್ಳೆಯ ಸ್ಥಾನಮಾನವಿದ್ದು, ಎಲ್ಲರನ್ನು ಮನೆ ಮಕ್ಕಳಂತೆ ನೋಡಿಕೊಂಡಿದ್ದಾರೆ. ಅನಿವಾರ್ಯ ಕಾರಣದಿಂದ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸ್ವಾತಂತ್ರ್ಯ ಜ್ಯೋತಿಯನ್ನು ಮನೆ ಮನೆಗಳಲ್ಲಿ ಹಚ್ಚಿ ರಾಷ್ಟ್ರ ಭಕ್ತಿಯನ್ನು ಬೆಳೆಸುವಲ್ಲಿ ವೀರ ಸಾವರ್ಕರ ಅಂತಹ ನೂರಾರು ರಾಷ್ಟ್ರಭಕ್ತರ ತ್ಯಾಗ ಬಲಿದಾನ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಫಲ ಅನುಭವಿಸುತ್ತಿರುವ ನಾವು ರಾಷ್ಟ್ರಭಕ್ತರ ಸಾಧನೆ ತಿಳಿದು ಆ ದಾರಿಯಲ್ಲಿ ಸಾಗೋಣ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಆವರಣದಲ್ಲಿ ರವಿವಾರ ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ದಿನ ಹಾಗೂ ಶ್ರೀರಾಮ ನವಮಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಚಿಂತನೆಗಳ ಮೂಲಕ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ಪಕ್ಷದ ಹಿರಿಯರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಿದೆ. ತಳಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮವನ್ನು ಗೌರವಿಸಬೇಕು ಎಂದರು.ಪಕ್ಷದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ದೀನದಯಾಳ ಉಪಾಧ್ಯಾಯ ಮತ್ತು ಶ್ರೀ ರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಕಾರ್ಯಕ್ರಮದ ಸಾನಿಧ್ಯವನ್ನು ಮಹಾಂತಯ್ಯ ಸ್ವಾಮಿಗಳು, ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಅತಿಥಿಗಳಾಗಿ ಅಖೀಲಗೌಡ ಪಾಟೀಲ, ವಿಜಯಕುಮಾರ್ ಪೂಜಾರಿ, ಬಂದೇನವಾಜ್…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಏಪ್ರಿಲ್ 2, ಪೊಲೀಸ್ ಧ್ವಜ ದಿನಾಚರಣೆಯಂದು ರಾಜ್ಯ ಸಶಸ್ತ್ರ ಮೀಸಲು (KSRP) ಪಡೆಯ, ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀದೇವಿ ಕಟಕಧೋಂಡ ಇವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಂದ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ ಮಾಡಲಾಯಿತು.ಮೂಲತಃ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದವರಾದ ಶ್ರೀದೇವಿ ಕಟಕಧೋಂಡ, 2015 ರಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿ, ಪ್ರಸ್ತುತ ಬೆಂಗಳೂರಿನ ಕೆ.ಎಸ್.ಆರ್.ಪಿ 4ನೇ ಪಡೆಯ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೆರೆ ಸಂತ್ರಸ್ತರ ರಕ್ಷಣಾ ಕಾರ್ಯ, ಚುನಾವಣೆಗಳ ಕರ್ತವ್ಯ, ಚಿತ್ರದುರ್ಗ ಒನಕೆ ಚಳುವಳಿ, ಮಂಗಳೂರು ಕೋಮು ಗಲಭೆ, ಕೋರೊನಾ ಬಂದೋಬಸ್ತಗಳಲ್ಲಿ ಮಹತ್ತರ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನಡೆಯುವ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿವಿಧ ಕವಾಯಿತನ ತುಕಡಿಯ ನಾಯಕಿಯಾಗಿ ಯಶಸ್ವಿಯಾಗಿದ್ದಾರೆ.ಇವರ ಈ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 2023ರ ಮುಖ್ಯ ಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದೆ.ಚಿನ್ನದ ಪದಕ ಪಡೆದ ಶ್ರೀದೇವಿ ಕಟಕಧೋಂಡ ಇವರಿಗೆ ಪೊಲೀಸ್ ಇಲಾಖೆಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲಾ ಆಸ್ಪತ್ರೆಯ ಆರ್.ಎಮ್.ಓ. ವೈದ್ಯ ಚಂದು ರಾಠೋಡ ಇವರು ಇಂಡಿ ತಾಲೂಕು ತಡವಲಗಾ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಹೋರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಡಲಿತ ವೈದ್ಯಾಧಿಕಾರಿ ಕಾರ್ಯನಿರ್ವಹಿಸಿತ್ತಿದ್ದು, ಈತನ ಆಡಳಿತದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ. ಕಳ್ಳತನ. ಅಧಿಕಾರ ದುರುಪಯೋಗವಾಗಿದ್ದು ಇವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕೆ.ಆರ್.ಎಸ್ ಪಕ್ಷದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಮುಖಂಡರು, ವೈದ್ಯ ಚಂದು ರಾಠೋಡ ಇವರು ಮಹಿಳಾ ಸಿಬ್ಬಂದಿಗೆ ಕಿರುಕುಳ. ಸಿಬ್ಬಂದಿ ಸಾವಿಗೆ ಕಾರಣ ಆಗಿದ್ದು, ಬಾಣಂತಿಯರ ವಾರ್ಡ್ ನಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಮೊಬೈಲ್‌ಗೆ ಸಂಪರ್ಕ ಪಡೆದು ತಾಯಂದಿರು ಶಿಶುವಿಗೆ ಹಾಲು ಉಣಿಸುವುದನ್ನು ಕದ್ದು ನೋಡುತ್ತಿದ್ದು, ಈತನ ನೀಚ ಕೃತ್ಯವನ್ನು ಪ್ರಶ್ನೆ ಮಾಡಿದ್ದಕ್ಕೆ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ನೀಡಿದ್ದಕ್ಕೆ ಬಾಡಿಗೆ ಗೂಂಡಾಗಳಿಂದ ಕೊಲೆ ಬೆದರಿಕೆ ಹಾಕಿರುವುದು ಸೇರಿದಂತೆ ಹಲವು ಅಕ್ರಮಗಳನ್ನು ಎಸಗಿರುತ್ತಾನೆ. ಈ ಬಗ್ಗೆ ಇಂಡಿ ತಾಲೂಕು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೈತರ ಪಹಣಿಯಲ್ಲಿ ವಕ್ಫ್ ನಮೂದಾಗಿರುವ ವಿಷಯವನ್ನು ಮೊಟ್ಟಮೊದಲು ಹೊನವಾಡ ರೈತರು ಧ್ವನಿ ಎತ್ತಿ ಈ ಬಗ್ಗೆ ಆಂತಕ ನಿವಾರಣೆ ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿದ ರೈತ ತಂಡವನ್ನು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.ವಕ್ಫ್ ಕಾಯ್ದೆ ರದ್ದುಗೊಳ್ಳಲು ಹೊನವಾಡ ರೈತರ ಈ ನಿಯೋಗವೇ ಮುನ್ನುಡಿ ಬರೆಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಾವಯವ ಬೀಜ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಡಾ.ಸುರೇಶ ಬಿರಾದಾರ ಮೊದಲಾದ ಮುಖಂಡರು ರೈತರಿಗೆ ಶಾಲು ಹೊದಿಸಿ, ಸಿಹಿ ತಿನಿಸಿ ಆತ್ಮೀಯವಾಗಿ ಸನ್ಮಾನಿಸಿದರು.ಕೇಂದ್ರ ಗೃಹ ಸಚಿವ ಅಮೀತ ಷಹಾ ಅವರ ಭಾವಚಿತ್ರದ ಕಟೌಟ್ ಪ್ರದರ್ಶಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.ನಿಯೋಗದಲ್ಲಿದ್ದ ರೈತರಾದಶಿವಾಜಿ ಜಾಧವ, ಮಾಳಪ್ಪ ಗುಗ್ಗರಿ, ಗೋವಿಂದ ರಜಪೂತ, ಚೆನ್ನಪ್ಪ ಕೋಟಿ, ತುಕಾರಾಮ ನಲವಡೆ, ಲಕ್ಕಪ್ಪ ಕಾತ್ರಾಳಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ,ವಕ್ಫ್ ಹೋರಾಟ ಆರಂಭವಾಗಿದ್ದೇ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶನಿವಾರದಂದು ಜಗದ್ಗುರು ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ಜರುಗಿತು.ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದಲ್ಲಿ ಮೌನೇಶ್ವರರ ಪಲ್ಲಕ್ಕಿ ಮೆರವಣಿಗೆಯು ಸಕಲ ವಾದ್ಯ ಮೇಳದೊಂದಿಗೆ ಭಕ್ತಿ, ಶ್ರದ್ಧೆಯೊಂದಿಗೆ ನಡೆಯಿತು. ಭಕ್ತರ ಮನೆಗಳಿಗೆ ಭೇಟಿ ನೀಡುತ್ತಾ, ಅಲ್ಲಿ ಕಾಯಿ ನೈವೇದ್ಯ ಮಾಡಿಕೊಂಡು, ಮರಳಿ ದೇವಸ್ಥಾನಕ್ಕೆ ಅಪಾರ ಭಕ್ತ ಸಮೂಹ ಹಾಗೂ ಆರತಿ ಹಿಡಿದ ಮಹಿಳೆಯರೊಂದಿಗೆ ದೇವರ ಫಲ್ಲಕ್ಕಿಯು ಆಗಮಿಸಿತು. ನಂತರ ಅಲ್ಲಿ ದೇವರ ಫಲ್ಲಕ್ಕಿಯ ಮುಂದೆ ತಾಂಬಾ, ಹೊನ್ನಳ್ಳಿ, ಜಂಬಗಿ ಮುಂತಾದ ಗ್ರಾಮಗಳಿಂದ ಆಗಮಿಸಿದ ಪುರವಂತರು ತಮ್ಮ ವಿಶೇಷ ಪ್ರದರ್ಶನ ಮಾಡಿದರು. ತದನಂತರ ಮೌನೇಶ್ವರ ಫಲ್ಲಕ್ಕಿ ಹಾಗೂ ಅನೇಕ ಭಕ್ತರು ಅಗ್ನಿ ಪ್ರವೇಶ ಮಾಡಿದರು. ಜಾತ್ರೆಯಲ್ಲಿ ನೆರೆದ ಭಕ್ತರಿಗೆಲ್ಲ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಹಾಬಲೇಶ್ವರ ಆಚಾರ್ಯರು ಹಾಗೂ ಶರಣಬಸು ಪೂಜೇರಿ ಅವರು ರಥೋತ್ಸವದ ಸಾನ್ನಿಧ್ಯ ವಹಿಸಿದ್ದರು.ಸಾವಿರಾರು ಸಂಖ್ಯೆಯ ಭಕ್ತರು ರಥದ ಮೇಲೆ ಹೂ, ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ಭಕ್ತಿ ಮೆರೆದರು. ಸ್ವತಃ ಭಕ್ತರು ಜಯಘೋಷಗಳೊಂದಿಗೆ ರಥವನ್ನು…
ಸರ್ಕಾರದ ವಿರುದ್ಧ ಹರಿಹಾಯ್ದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದ್ದು ಫಸಲ ಬೀಮಾ ಯೋಜನೆಯಲ್ಲಿ ವಿಮಾ ಕಂತು ತುಂಬಿದರು ಕೂಡಾ ಬಿಡಿಗಾಸು ಪರಿಹಾರ ಹಣ ಬಿಡುಗಡೆ ಮಾಡಿಲ್ಲವೆಂದು ಸರ್ಕಾರದ ವಿರುದ್ಧ ಇಂಗಳೇಶ್ವರ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿ ವಿಮಾ ಕಂಪನಿ ವಿರುದ್ಧ ಧಿಕ್ಕಾರ ಕೂಗಿ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಶನಿವಾರದಂದು ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಇಂಗಳೇಶ್ವರ ಗ್ರಾಮದ ರೈತರು ಪಸಲ್ ಬೀಮಾ ಯೋಜನೆಯಡಿಯಲ್ಲಿ ಪ್ರತಿ ಎಕರೆಯಂತೆ ಸಾವಿರಾರು ರೂಪಾಯಿ ವಿಮಾ ಕಂಪನಿಗೆ ವಿಮಾ ಕಂತು ಕಟ್ಟಿದರು ಕೂಡಾ ಕಳೆದ ೫ ವರ್ಷಗಳಿಂದ ನಯಾ ಪೈಸೆ ಪರಿಹಾರ ಬರದ ಕಾರಣ ಇಂಗಳೇಶ್ವರ ಗ್ರಾಮದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಿಮಾ ಕಂಪನಿ ಒಂದು…
