ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ವಿವಿಧ ಹಿಂದು ಸಂಘಟನೆಗಳ ವತಿಯಿಂದ ಅದ್ದೂರಿಯಾಗಿ ರಾಮ ನವಮಿ ಆಚರಣೆ ಮಾಡಲಾಯಿತು.
ಶ್ರೀರಾಮ ಮೂರ್ತಿಯ ಭವ್ಯ ಶೋಭ ಯಾತ್ರೆಯನ್ನು ಬಸ್ ನಿಲ್ದಾಣಬಳಿ ಇರುವ ಬಸವಣ್ಣನವರ ವೃತ್ತದಲ್ಲಿ ಆಲಮೇಲ ಶ್ರೀ ಗುರು ಸಂಸ್ಥಾನ ಹೀರೇಮಠದ ಚಂದ್ರಶೇಖರ ಶಿವಚಾರ್ಯರು ಶಾಸಕ ಅಶೋಕ ಮನಗೂಳಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಜಾರದಲ್ಲಿ ಇರುವ ದೇವಿಗುಡಿಯ ವರಗೆ ಶೋಭಯಾತ್ರೆ ನಡೆಯಿತು.
ದೇವಿ ಮಂದಿರದಲ್ಲಿ ಶೋಭಯಾತ್ರೆಯನ್ನು ಉದ್ದೇಶಿ ಅರ್ಜುಣಗಿ ಮಠದ ಷ ಬ್ರ ಸಂಗನಬಸವ ಶಿವಾಚಾರ್ಯರು ಮಾತನಾಡಿ, ನಮ್ಮ ಯುವಕರಲ್ಲಿ ಈಗ ಧರ್ಮರಕ್ಷಣೆ ಮಾಡುವ ಆಸಕ್ತಿ ಹೆಚ್ಚಾಗುತ್ತಿದೆ. ಎಂತಹ ಕಷ್ಟಕಾಲ ಬಂದರೂ ನಾವು ನೀವು ಎಲ್ಲರೂ ಕೂಡಿ ದರ್ಮ ರಕ್ಷಣೆಗೆ ಹೋರಾಡೋಣ ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷ ಸಾಧಿಕ ಸುಂಬಡ, ಹಿಂದು ಮುಖಂಡ ಶ್ರೀಮಂತ ದುದ್ದಗಿ ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಹಣಮಂತ ಸಿಂಗ ರಜಪೂತ, ಪ್ರಶಾಂತ ನಾಶಿ ವಿಶ್ವನಾಥ ಅಮರಗೊಂಡ, ಅಲೋಕ ಬಡದಾಳ, ಕಮಲಾಕರ ಪತ್ತಾರ ಈರಣ್ಣ ಕಲ್ಲೂರ, ರತನಟಾಟ ಒಣಕುದರಿ, ರಾಹುಲ ಬಗಲಿ, ಅಭಿಷೇಕ ಚಿಂದೆ, ಅಭಿಷೇಕ ಅಲೋಣ ಅನೇಕ ಹಿಂದು ಯುವಕರು ಇದ್ದರು
ಯತ್ನಾಳ ಅಭಿಮಾನಿಗಳಿಂದ ವಿಶೇಷ ಪೂಜೆ
ಈ ಮೆರವಣಿಗೆಯಲ್ಲಿ ಶಾಸಕ ಬಸವನಗೌಡ ಪಾಟೀಲರ ಪೋಟೋಗಳನ್ನು ಹಿಡಿದುಕೊಂಡು ಬಸವನಗೌಡ್ರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕು ಎಂದು ಘೋಷಣೆ ಕೂಗುತ್ತಾ ಹಿಂದೂ ಹುಲಿ ಮತ್ತೆ ಮಾತೃಪಕ್ಷಕೆ ಬರಲಿ ಎಂದು ಆಲಮೇಲದ ಅವರ ಅಭಿಮಾನಿಗಳು ವಿಶೇಷ ಪೂಜೆ ಮಾಡಿದರು

