ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಭಾನುವಾರ ರಾಮನವಮಿ ಹಬ್ಬದ ಆರಾಧನೆ ನಿಮಿತ್ಯ ರಾಮನ ಜಪತಪ ಶ್ರದ್ಧಾ ಭಕ್ತಿ ಭಾವದಿಂದ ಇಲ್ಲಿ ನೆರವೇರಿತು. ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಗುರುಮಾತೆ ಸಹನಾ ಹತ್ತಳ್ಳಿ (ಕಲ್ಯಾಣಿ) ಅವರ ಕರುಳಿನ ಕುಡಿ, ಮುದ್ದಿನ ಮಗಳು ಶ್ರೀಶಾ ರಾಮನ ವೇಷಭೂಷಣದಲ್ಲಿ ಮಿನುಗಿ ಗಮನ ಸೆಳೆದಳು. ಶ್ರೀರಾಮಚಂದ್ರನ ರೂಪದಲ್ಲಿ ಕಣ್ಮನ, ಹೃನ್ಮನ ಸೆಳೆದ ಆ ಪುಟ್ಟ ಬಾಲೆ ಶ್ರೀಶಾ ಹತ್ತಳ್ಳಿ ಖುಷಿ,ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆ ಭಕ್ತಿ,ಭಾವದ ವಿಶೇಷ ರಾಮ ನಯನದ ಮಧುರ ನೋಟ ಹಂಚಿಕೊಂಡು ಶ್ರೀಶಾ ಕಂಡಿದ್ದು ಹೀಗೆ !

