Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ನಾಟಕಗಳು ಸಾಮಾಜಿಕ ಮೌಲ್ಯ ಕಾಪಾಡುವ ಸಾಧನಗಳು. ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಗುಣಮಟ್ಟದ ನಾಟಕಗಳಿಗೆ ಪ್ರೇಕ್ಷಕರ ಬೆಂಬಲ ದೊರಕುತ್ತದೆ ಎಂದು ಪೋಲಿಸ ವೃತ್ತ ನಿರೀಕ್ಷಕ ಜ್ಯೋತಿಲಿಂಗ ಹೊನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಶುಕ್ರವಾರ ರಾತ್ರಿ ತಾಲ್ಲೂಕಿನ ತಾಂಬಾ ಗ್ರಾಮದ ಸಮೀಪದ ಹರಳಯ್ಯನಹಟ್ಟಿ ಗ್ರಾಮದ ಏಳುಮಕ್ಕಳ ತಾಯಿ ಜಾತ್ರೆಯ ನಿಮಿತ್ತ ರೆಬಿನಾಳ ಗ್ರಾಮದ ಶ್ರೀ ಬಸವೇಶ್ವರ ಕಲಾ ಸಂಘ ಅಭಿನಯಿಸಿದ ಶಿವಶರಣೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ನಾಟಕ ಉದ್ಘಾಟಿಸಿ ಮಾತನಾಡುತ್ತ ಇತ್ತಿಚಿಗೆ ನಾಟಕಗಳ ಪ್ರದರ್ಶನ ಕುಂಠಿತಗೊಳ್ಳುತ್ತಿವೆ. ಇಂದು ನಾಟಕಗಳಿಗೆ ಸಾವ೯ಜನಿಕರು ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ರಂಗಭೂಮಿ ಕಲಾವಿದರು ಉತ್ತಮ ನಾಟಕಗಳ ಪ್ರದರ್ಶನ ನೀಡಬೇಕು.ಚಿತ್ರ ನಟರೆಲ್ಲರೂ ನಾಟಕ ಪ್ರದರ್ಶನ ಮಾಡಿ ಸಿನೆಮಾ ಕ್ಷೇತ್ರಕ್ಕೆ ಬಂದವರು. ಇಂದು ನೀನಾಸಂ. ರಂಗಾಯಣ. ಜಮೂರಾ ಮುಂತಾದ ನಾಟಕ ಸಂಸ್ಥೆಗಳು ಗುಣಮಟ್ಟದ ನಾಟಕಗಳನ್ಣು ನೀಡಿ ಅತ್ಯುತ್ತಮ ಹೆಸರು ಮಾಡಿಕೊಂಡಿದ್ದಾರೆ. ಇಂದಿಗೂ ಗ್ರಾಮೀಣರ ಮನರಂಜನೆ ನಾಟಕಗಳಾಗಿವೆ. ಸರ್ಕಾರ ನಾಟಕ ಕಂಪನಿಗಳಿಗೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನೇಮಕಾತಿ ವಿಚಾರದಲ್ಲಿ ಸರ್ಕಾರ ಮೌನ ವಹಿಸುವ ಮೂಲಕ ಪೌರಕಾರ್ಮಿಕರನ್ನು ಕಡೆಗಣಿಸಿದೆ.ಪೌರಕಾರ್ಮಿಕರನ್ನು ನೌಕರರಂದು ಪರಿಗಣಿಸಿ ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೇರಿದಂತೆ ಸರಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿ ‘ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘ’ದ ನೇತೃತ್ವದಲ್ಲಿ ಪುರಸಭೆಯ ಹೊರಗುತ್ತಿಗೆ ಪೌರಕಾರ್ಮಿಕರುಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದರು.ಪಟ್ಟಣದ ಪುರಸಭೆ ಎದುರು ಏ.೧೨ ರಿಂದ ಮೇ. ೨೬ರವರೆಗೆ ಇಂಡಿ ಪೌರಕಾರ್ಮಿಕ ಸಂಘದ ಅಧ್ಯಕ್ಷ ಶ ಲಕ್ಷ್ಮೀಬಾಯಿ ಕಾಲೇಭಾಗ ಅವರ ನೇತ್ರತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೆವೆ.ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೀರು ಸರಬರಾಜು ಸಹಾಯಕ, ವಾಹನಚಾಲಕ, ಬೀದಿ ದೀಪ ಸಹಾಯಕರು, ಲೋಡರ್ಸ, ಪಾರ್ಕ, ಗಾರ್ಡನರ್, ಕಾವಲುಗಾರ, ಸ್ಯಾನಿಟರಿ, ಸೂಪರ್ ವೈಜರ್ ಸೇರಿದಂತೆ ವಿವಿಧ ವೃಂದಗಳಲ್ಲಿಕೆಲಸ ಮಡುತ್ತಿರುವ ಪೌರಕಾರ್ಮಿಕರನ್ನು ನೇರಪಾವತಿಗೆ ಒಳಪಡಿಸಬೇಕೆಂದು ಇಲ್ಲಿನ ಪುರಸಭೆ ಆವರಣದಲ್ಲಿ ಧರಣಿ ಆರಂಭಿಸಿದ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸದ ಸರಕಾರದ ವಿರುದ್ಧ ಘೋಷಣೆಕೂಗಿದರು.ಹಲವಾರು ಬಾರಿ ಮುಖ್ಯಮಂತ್ರಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಸರ್ಕಾರ ಈಗ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಏ.೧೭ ರಂದು ವಿಜಯಪುರದಲ್ಲಿ ಜನಾಕ್ರೋಷ ಯಾತ್ರೆಯ ಅಂಗವಾಗಿ ನಡೆಯಲಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಕಾರ್ಯಕರ್ತರು ಭಾಗಿಯಾಗಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕರೆ ನೀಡಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹೋರಾಟದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಹತ್ತಾರು ಸುಳ್ಳುಗಳನ್ನು, ಅನೇಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಜನರ ಆಕ್ರೋಷಕ್ಕೆ ಕಾರಣವಾಗಿದೆ. ಪ್ರತಿಯೊಂದರಲ್ಲೂ ದರ ಏರಿಕೆ, ತೆರಿಗೆ ಅಂತಾ ಬಡವರ ಮೇಲೆ ಬರೆ ಎಳಿದಿದೆ. ಜನಸಾಮಾನ್ಯರ ಬದುಕನ್ನು ನಾಶ ಮಾಡಲು ಹೊರಟಿದೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಇದು ೪೦% ಸರ್ಕಾರ, ಎಟಿಎಂ, ಪೇಟಿಎಂ ಸರ್ಕಾರ ಅಂತಾ ಸುಳ್ಳು ಆರೋಪ ಮಾಡಿ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ರು. ಈ ಬಗ್ಗೆ ಲೋಕಾಯುಕ್ತರು ತನಿಖೆ ಮಾಡಿ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಅಂತಾ ಬಿ ರಿಪೋರ್ಟ ನೀಡಿದ್ದಾರೆ. ನಮ್ಮ ಸರ್ಕಾರ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಕ್ಫ್ ಮಸೂದೆ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಭಾನುವಾರ ಬೆಳಿಗ್ಗೆ ಅಂಜುಮನ್ ಇಸ್ಲಾಂ ಕಮಿಟಿಯಿಂದ ಶಾಂತಿಯುತ ಪ್ರತಿಭಟನೆ ಹಾಗೂ ಬೃಹತ್ ರ‍್ಯಾಲಿ ಜರುಗಿತು.ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಸಭೆ ಸೇರಿದ ಮುಸ್ಲಿಮ ಸಮುದಾಯದವರು ಬೆಳಿಗ್ಗೆ ೧೦ ಗಂಟೆಗೆ ಅಂಬೇಡ್ಕರ್ , ಟಿಪ್ಪು ಸುಲ್ತಾನ ಭಾವಚಿತ್ರಗಳು, ತ್ರಿವರ್ಣ ಹಾಗೂ ಜೈಭೀಮ ಧ್ವಜಗಳೊಂದಿಗೆ ಮೆರವಣಿಗೆ ಹೊರಟು ಹೊಸನಗರ, ಬಸ್ ನಿಲ್ದಾಣದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಸಭೆ ಸೇರಿದರು.ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿಯ ಉಪಾಧ್ಯಕ್ಷ ರಫೀಕ್ ಪಾನಪರೋಷ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆ ಅಲ್ಪಸಂಖ್ಯಾತರಿಗೆ ಸಂವಿಧಾನವು ನೀಡಿರುವ ವಿಶೇಷ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ಲೋಕಸಭೆಯಲ್ಲಿ ಅಂಗೀಕರಿಸಿದ ಅಸಂವಿಧಾನಿಕವಾದ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಿ ಈ ಹಿಂದೆ ಇದ್ದ ವಕ್ಪ್ ಕಾಯ್ದೆಯನ್ನು ಮರುಸ್ಥಾಪಿಸಲು ಆಗ್ರಹಿಸಿದರು.ಜಾಮೀಯಾ ಮಸೀದೆ ಧರ್ಮಗುರು ಮೌಲಾನಾಅಹ್ಮದ್ ಅಲಿ ಖಾಜಿ, ದಲಿತ ಸಂಘರ್ಷ ಸಮಿತಿಯ ಪ್ರಕಾಶ ಗುಡಿಮನಿ, ಶರಣು ಜಮಖಂಡಿ, ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯ ರಾಜು ಮೆಟಗಾರ, ದಸ್ತಗೀರ್ ಮುಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಗೋ ರಕ್ಷಾ ಕೇಂದ್ರದಲ್ಲಿ ಹಿಂದೂಗಳು ಪೂಜ್ಯ ಭಾವನೆಯಿಂದ ಕಾಣುವ ಸಾವಿರಾರು ಗೋವುಗಳನ್ನು ಭಕ್ತಿಯಿಂದ ಸಾಕಿ ಸಲುವುತ್ತಿದ್ದು, ಕಾಂಗ್ರೆಸ್‌ನ ಹಮೀದ್ ಮುಶ್ರೀಪ್ ಮಾಡಿರುವ ಆರೋಪ ಸುದ್ದ ಸುಳ್ಳಾಗಿದ್ದು, ಶ್ರೀ ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿ, ಇದೊಂದು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಯಾಗಿದ್ದು, ನಗರ ಶಾಸಕರು ಸೇರಿದಂತೆ ಅನೇಕರು ದಾನ ಮಾಡಿದ ಜಾಗದಲ್ಲಿ ಗೋವುಗಳ ರಕ್ಷಣೆಯ ಪವಿತ್ರ ಕಾರ್ಯಕ್ಕಾಗಿ ಗೋ ರಕ್ಷಾ ಕೇಂದ್ರ ಆರಂಭಿಸಲಾಗಿದೆ. ಮೇವು, ಹಿಂಡಿ ಸೇರಿದಂತೆ ನಿರ್ವಹಣೆಗಾಗಿ ನಿರಂತರವಾಗಿ ಹಲವಾರು ದಾನಿಗಳು ದಾನ ಮಾಡುತ್ತಿದ್ದಾರೆ. ಇದರಿಂದ ವ್ಯವಸ್ಥಿತವಾಗಿ ಸಾವಿರಾರು ಗೋವುಗಳ ಪೋಷಣೆ ಕಾರ್ಯ ಸಾಗಿದೆ.ಕಟುಕರಿಗೆ ಹೋಗುವ ಗೋವುಗಳನ್ನು ರಕ್ಷಿಸಿ, ಅಲ್ಲಿಗೆ ತಂದು ಬಿಡುತ್ತಾರೆ. ವಯಸ್ಸಾದ ಗೋವುಗಳನ್ನು ನಿರ್ವಹಣೆ ಮಾಡಲಾಗದವರು ಕೂಡ ಅಲ್ಲಿಗೆ ತಂದು ಬಿಟ್ಟು…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಹನುಮ ಜಯಂತಿಯ ನಿಮಿತ್ತ ತಾಲೂಕಿನ ಕುಂಬಾರಹಳ್ಳ ಗ್ರಾಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಂಡಗಿ ಸ್ವಯಂ ಸೇವಾ ಸಂಕಲ್ಪ ಸಮೀತಿ ಇವರ ಸಹಯೋಗದಲ್ಲಿ ಸಾಧಕರಿಗೆ ಸನ್ಮಾನ. ದೈಹಿಕ ಶಿಕ್ಷಕ ಸದಾಶಿವ ಪಕಾಲಿˌ ಹಾಗೂ ಮಂಜುನಾಥ ಹಾರೂಗೇರಿ ರಾಜ್ಯ ನೌಕರರ ಕ್ರೀಡಾಕೂಟದಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕುಸ್ತಿ ಮತ್ತು ಕಬಡ್ಡಿ ಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರಿಂದ ಅದರ ಜೊತೆಗೆ ಕುಮಾರಿ ಕಾವೇರಿ ವಿಠ್ಠಲ ಗಡ್ಡಿಕಾರ, ವಿದ್ಯಾರ್ಥಿನಿ ಖೋ ಖೋ ಕ್ರೀಡೆಯಲ್ಲಿ ಯೂನಿವರ್ಸಿಟಿ ಬ್ಲೂ ಆದ ಕಾರಣ ಗೌರವಿಸಿ ಸನ್ಮಾನಿಸಲಾಯಿತು.ಅಮೋಘಸಿದ್ದ ತೇರದಾಳ ಸ್ವಾಗತಿಸಿದರು, ಮುತ್ತು ಸೊನ್ನದ ನಿರೂಪಿಸಿ ಸಾಧಕರಿಗೆ ಸತ್ಕರಿಸಿದರುˌ ನಿಂಗಪ್ಪ ಮರನೂರ ವಂದಿಸಿದರು,ಕುಂಬಾರಹಳ್ಳ ಗ್ರಾಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಂಡಗಿ ಸ್ವಯಂ ಸೇವಾ ಸಂಕಲ್ಪ ಸಮೀತಿ ಅಧ್ಯಕ್ಷರಾದ ಬಿ.ಎನ್ ಪಡೆನ್ನವರ ಹಾಗೂ ಸದಾಶಿವ ಸೊನ್ನದ ಜೊತೆಗೆ ರಾಜು ಮಾಳಿ, ಗ್ರಾಮದ ಸರ್ವ ಗುರುಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಜಮಖಂಡಿ ನಗರದ ದಾನಮ್ಮ ದೇವಿ ದೇವಸ್ಥಾನ ಆವರಣದಲ್ಲಿ ವಿ.ಬಿ.ಹೆಲ್ತ್ ಕೇರ್ ಉಚಿತ ಆಯುರ್ವೇದಿಕ ಆರೋಗ್ಯ ತಪಾಸಣೆ ಹಾಗೂ ಎಮ್.ಎಮ್. ಜೋಶಿ ಉಚಿತ ಸಮಗ್ರ ಕಣ್ಣಿನ ತಪಾಸಣಾ ಶಿಬಿರವು ನಡೆಯಿತು.ನಗರಸಭೆ ಸದಸ್ಯ ಕುಶಾಲ ವಾಘ್ಮೊರೆ ಅವರು ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಎಲ್.ಬಿ. ಪಾಟೀಲ, ಅಪ್ಪಸಾಬ ಮನಗೂಳಿ, ಅಜಯ ಕಡಪಟ್ಟಿ, ಜ್ಞಾನೇಶ್ವರ ಸೂರ್ಯವಂಶಿ, ಬಾಲಚಂದ್ರ ನಾಗೋನಿ, ಗಣೇಶ ಸಿರಗನ್ನವರ, ಚಂದ್ರಕಾಂತ ಮೋದಿ, ಮಹಾದೇವ ತೇಲಿ, ಕಾಶಿಬಾಯಿ ಹೂಗಾರ, ರಾಜೇಶ್ವರಿ ಹಿರೇಮಠ, ಪ್ರಿಯಾ ಚಿಮ್ಮಡ, ಶಿವಲಿಂಗ ಕಡಕೋಳ, ನಿತಿರಾಜ ವಾಘಮೋರೆ, ಸಂಜು ಕಾಳೆ, ಪ್ರದೀಪ ಸಿಂಗಾರಿ, ಕುಮಾರ ಕಂಬಾರ, ಮನೀಶ್ ಮಸ್ಕಿ, ಯುವರಾಜ ಮನೆ, ಕಿರಣ ಲಗಳಿ, ಡಾಕ್ಟರ್ ಗಳಾದ ವಿಜಯ್ ಜಗದಾಳಿ, ಭಾಗ್ಯ ಕವಟಗಿ, ರವಿ ಸೇರಿದಂತೆ ಮಹಿಳೆಯರು, ಯುವಕರು, ವಯೋವೃದ್ಧರು ಉಚಿತ ಶಿಬಿರದಲ್ಲಿ ಭಾಗಿಯಾಗಿದರು.ನಗರದ ದಾನಮ್ಮ ದೇವಿ ದೇವಸ್ಥಾನ ಆವರಣದಲ್ಲಿ ವಿ.ಬಿ. ಹೆಲ್ತ್ ಕೇರ್ ಉಚಿತ ಆಯುರ್ವೇದಿಕ…

Read More

ಹೊತ್ತಿಗೆ ಹೂರಣ(ಡಾ.ಶ್ರೀನಿವಾಸ ದೊಡ್ಡಮನಿ ಅವರ ಕೃತಿ ಅವಲೋಕನ) ಲೇಖನ- ಮಲಿಕ್ ಎಲ್ ಜಮಾದಾರಉಪನ್ಯಾಸಕರುವಿಜಯಪುರ ಉದಯರಶ್ಮಿ ದಿನಪತ್ರಿಕೆ ಪಾತ್ರವರ್ಗ ಪರಿಚಯ:ಶಿವಪಾರ್ವತಿನಾರದವಾಯುರಾಜವೃಕ್ಷರಾಜಭೂತಾತಿಗಣ ಸಮೂಹಭೂತಾಯಿ ನಾಟಕದಲ್ಲಿ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಅಲ್ಲದೆ ನಾಟಕದ ಪಾತ್ರಗಳು ಪುರಾಣದ ಪಾತ್ರಗಳಂತೆ ಚಿತ್ರಿತವಾಗಿದ್ದು, ದೇವರುಗಳ ಕಲ್ಪನೆಯ ಮೂಲಕ, ಭೂಲೋಕದ ಪರಿಸರ ವ್ಯವಸ್ಥೆಯನ್ನು ಶಿವನ ಪಾತ್ರದ ಮೂಲಕ ತುಲನಾತ್ಮಕವಾಗಿ ವಿಮರ್ಶಿಸಿ ಮಾನವನ ದುರ್ವತ್ರನೆಯಿಂದ ಪರಿಸರದ ಮೇಲಾಗುವ ಅನಾಹುತಗಳ ಕುರಿತು ಮಾರ್ಮಿಕವಾಗಿ ತಿಳಿಸಲು ಯತ್ನಿಸಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ನಾಡಕವು ವಾಸ್ತವಿಕತೆಗೆ ಅನುಗುಣವಾಗಿ ರಚನೆಯಾಗಿದ್ದು ಇಂದಿನ ಆಧುನಿಕ ಯುಗದಲ್ಲಿ ಪರಿಸರದ ವಿನಾಶ ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ಮುಂದಿನ ದಿನಮಾನಗಳಲ್ಲಿ ಕುಡಿಯುವ ನೀರಿಗೂ ಪರಿತಪಿಸಬೇಕಾದ ದುಃಸ್ಥಿತಿಯು ಒದಗಬಹುದು ಎಂದು ಎಚ್ಚರಿಸಿದ್ದಾರೆ.ಪ್ರಾಚೀನ ಕಾಲದಿಂದಲೂ ಮಾನವ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧವಿರುವುದು ಐತಿಹಾಸಿಕವಾಗಿ ತಿಳಿದು ಬರುತ್ತದೆ. ಮಾನವನು ಪಕೃತಿಯಾರಾಧಕನಾಗಿದ್ದ ಎಂಬುದಕ್ಕೆ ಅನೇಕ ನಾಗರಿಕತೆಗಳ ಬೆಳವಣಿಗೆಯಿಂದ ತಿಳಿದುಬರುತ್ತದೆ. ಗಂಗೆಯನ್ನು, ವೃಕ್ಷವನ್ನು ದೇವರಂತೆ ಆರಾಧಿಸುತ್ತಿದ್ದ ಮಾನವನು ತನ್ನ ಸ್ವಾರ್ಥ ಬದುಕಿಗಾಗಿ ಇಡೀ ಪರಿಸರವನ್ನೇ…

Read More

ಚಿಂತನೆ- ಸೌ.ಶಾಂತಾದೇವಿ ದುಲಂಗೆಸೋಲಾಪುರ ಉದಯರಶ್ಮಿ ದಿನಪತ್ರಿಕೆ 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಧಾರ್ಮಿಕ, ಆದ್ಯಾತ್ಮಿಕ ಚಳುವಳಿ ಕೇವಲ ಕರ್ನಾಟಕದಲ್ಲಿ ಅಲ್ಲ ಇಡೀ ವಿಶ್ವದ ಇತಿಹಾಸದ ದೃಷ್ಟಿಯಿಂದಲೂ ಮಹತ್ವಪೂರ್ಣವಾದದು. ಈ ಚಳುವಳಿ ಕೆಳಸಮುದಾಯದಿಂದ ಹಿಡಿದು ಎಲ್ಲಾ ವರ್ಗಗಳ ಹಿತವನ್ನು ಕಾಯುವಂತಹ, ಅಭಿವೃದ್ಧಿ ಬಯಸುವಂತಹ,ಸಮಾನತೆಯ ತಳಹದೆಯ ಮೇಲೆ ಬಹುಜನ ಹಿತಕ್ಕಾಗಿ ಒಗ್ಗೂಡಿಸುವ ಚಳುವಳಿಯಾಗಿತ್ತು ಅರಿವಿನ ಜ್ಯೋತಿಯನ್ನು ಬೆಳಗಿಸುವುದು ಆಗಿತ್ತು. ಯಾವುದೇ ವರ್ಗದಿಂದ ಬಂದವರಾಗಲಿ ಶಿವ ದೀಕ್ಷೆಯನ್ನು ಪಡೆದ ಮೇಲೆ ಎಲ್ಲರೂ ಸಮಾನರು ಎಂಬ ಹೃದಯ ವೈಶಾಲತೆ ಎಲ್ಲ ಸ್ಥಳದ ಜನರನ್ನು ಒಗ್ಗೂಡಿಸುವಂಥ ಮಹತ್ಕಾರ್ಯ ಮಾಡಿದ್ದು ದೊಡ್ಡ ಇತಿಹಾಸವೇ ಎನ್ನಬಹುದುಸಿದ್ದರಾಮೇಶ್ವರರ ಜನನ ಸೊನ್ನಲಿಗೆಯಲ್ಲಿ ಸುಮಾರು 11:30. ಇವರ ತಂದೆ ತಾಯಿಯವರು ಕಡು ಒಕ್ಕಲಿಗರ ಕುಲದವರು ಮೊರಡಿ ಮುದ್ದೇಗೌಡ ಹಾಗೂ ಸುಗ್ಗವ್ವೆ ಇವರಿಗೆ ವಯಸ್ಸಿನಲ್ಲಿ ಗುರು ರೇವಣಸಿದ್ದೇಶ್ವರರ ಕೃಪೆಯಿಂದ ಸಿದ್ದರಾಮೇಶ್ವರರು ಜನಿಸುತ್ತಾರೆ ಗುರುಗಳು ಹೇಳಿದ ಹೆಸರು ಸಿದ್ದರಾಮ ಬಿಟ್ಟು ತಮ್ಮ ಮನೆ ದೇವರಾದ ಧೂಳಿ ಮಹಾಂಕಾಳ ವೆಂದು ಕರೆಯುತ್ತಾರೆ ಸಿದ್ದರಾಮ ಎಂದಾಗ ಮಾತ್ರ ಸ್ಪಂದಿಸುತ್ತಾರೆ…

Read More

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತುಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಯಶೋಧರ ದಾಸಪ್ಪ ಅವರು ಮೇ 28 1905ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಮುಖಂಡರಾಗಿ ಬೆಳೆದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ರಾಜ್ಯದಲ್ಲಿದ್ದ ದೀನ ದುರ್ಬಲರಿಗೆ ಸಹಾಯ ಮಾಡಲು ನಿಂತರು. ಅವರ ತಂದೆ ಕೆಎಚ್ ರಾಮಯ್ಯ ಅವರು ಇಂಗ್ಲೆಂಡ್ನಲ್ಲಿ ನ್ಯಾಯಶಾಸ್ತ್ರ ಓದಿ ಭಾರತಕ್ಕೆ ಹಿಂದಿರುಗಿದ ನಂತರ ಮೈಸೂರಿನ ಮಹಾರಾಜರ ಬಳಿ ಕೆಲಸ ಮಾಡುತ್ತಿದ್ದರು. ನಂತರ ಮೈಸೂರಿನ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಅನುಕೂಲಗಳನ್ನು ಒದಗಿಸಲು ಮತ್ತು ಸಮಾಜ ಸುಧಾರಣೆಗಳನ್ನು ಕೈಗೊಳ್ಳುತ್ತಿದ್ದರು.ಯಶೋಧರ ದಾಸಪ್ಪ ಅವರು ಬೆಂಗಳೂರಿನ 1842 ರಲ್ಲಿ ಪ್ರಾರಂಭವಾದ ಲಂಡನ್ ಮಿಷನ್ ಸ್ಕೂಲ್ ನಲ್ಲಿ ಓದಿದರು. ಈಗ ಅದರ ಹೆಸರು “ಮಿತ್ರಾಲಯ ಬಾಲಕಿಯರ ಶಾಲೆ”. ಆಗಿನ ಶಾಲೆಯ ಪ್ರಾಂಶುಪಾಲರಾದ ಮಿಸ್ ಬಟ್ಲರ್ ಯಶೋಧರ ಅವರಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿದರು. ತರುವಾಯ ಯಶೋಧರ ಅವರು ತಮ್ಮ ಉನ್ನತ ವ್ಯಾಸಂಗವನ್ನು ಮದ್ರಾಸಿನ ಪ್ರತಿಷ್ಠಿತ ಕ್ವೀನ್ ಮೇಲೀಸ ಕಾಲೇಜಿನಲ್ಲಿ ಮುಂದುವರೆಸಿದರು. ಇವರ ಪತಿ ದಾಸಪ್ಪ ಎಚ್, ಮೈಸೂರು ಪ್ರಜಾಪಕ್ಷದ ಸದಸ್ಯರಾಗಿದ್ದು,…

Read More