Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸಿದ್ದರಾಮೇಶ್ವರರು
ವಿಶೇಷ ಲೇಖನ

ಸಿದ್ದರಾಮೇಶ್ವರರು

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಚಿಂತನೆ
– ಸೌ.ಶಾಂತಾದೇವಿ ದುಲಂಗೆ
ಸೋಲಾಪುರ

ಉದಯರಶ್ಮಿ ದಿನಪತ್ರಿಕೆ

12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಧಾರ್ಮಿಕ, ಆದ್ಯಾತ್ಮಿಕ ಚಳುವಳಿ ಕೇವಲ ಕರ್ನಾಟಕದಲ್ಲಿ ಅಲ್ಲ ಇಡೀ ವಿಶ್ವದ ಇತಿಹಾಸದ ದೃಷ್ಟಿಯಿಂದಲೂ ಮಹತ್ವಪೂರ್ಣವಾದದು. ಈ ಚಳುವಳಿ ಕೆಳಸಮುದಾಯದಿಂದ ಹಿಡಿದು ಎಲ್ಲಾ ವರ್ಗಗಳ ಹಿತವನ್ನು ಕಾಯುವಂತಹ, ಅಭಿವೃದ್ಧಿ ಬಯಸುವಂತಹ,ಸಮಾನತೆಯ ತಳಹದೆಯ ಮೇಲೆ ಬಹುಜನ ಹಿತಕ್ಕಾಗಿ ಒಗ್ಗೂಡಿಸುವ ಚಳುವಳಿಯಾಗಿತ್ತು ಅರಿವಿನ ಜ್ಯೋತಿಯನ್ನು ಬೆಳಗಿಸುವುದು ಆಗಿತ್ತು. ಯಾವುದೇ ವರ್ಗದಿಂದ ಬಂದವರಾಗಲಿ ಶಿವ ದೀಕ್ಷೆಯನ್ನು ಪಡೆದ ಮೇಲೆ ಎಲ್ಲರೂ ಸಮಾನರು ಎಂಬ ಹೃದಯ ವೈಶಾಲತೆ ಎಲ್ಲ ಸ್ಥಳದ ಜನರನ್ನು ಒಗ್ಗೂಡಿಸುವಂಥ ಮಹತ್ಕಾರ್ಯ ಮಾಡಿದ್ದು ದೊಡ್ಡ ಇತಿಹಾಸವೇ ಎನ್ನಬಹುದು
ಸಿದ್ದರಾಮೇಶ್ವರರ ಜನನ ಸೊನ್ನಲಿಗೆಯಲ್ಲಿ ಸುಮಾರು 11:30. ಇವರ ತಂದೆ ತಾಯಿಯವರು ಕಡು ಒಕ್ಕಲಿಗರ ಕುಲದವರು ಮೊರಡಿ ಮುದ್ದೇಗೌಡ ಹಾಗೂ ಸುಗ್ಗವ್ವೆ ಇವರಿಗೆ ವಯಸ್ಸಿನಲ್ಲಿ ಗುರು ರೇವಣಸಿದ್ದೇಶ್ವರರ ಕೃಪೆಯಿಂದ ಸಿದ್ದರಾಮೇಶ್ವರರು ಜನಿಸುತ್ತಾರೆ ಗುರುಗಳು ಹೇಳಿದ ಹೆಸರು ಸಿದ್ದರಾಮ ಬಿಟ್ಟು ತಮ್ಮ ಮನೆ ದೇವರಾದ ಧೂಳಿ ಮಹಾಂಕಾಳ ವೆಂದು ಕರೆಯುತ್ತಾರೆ ಸಿದ್ದರಾಮ ಎಂದಾಗ ಮಾತ್ರ ಸ್ಪಂದಿಸುತ್ತಾರೆ ಯಾವತ್ತೂ ಅಂತರ್ಮುಖಿಯಾಗಿ ಮಂದಮತಿಯಾಗಿ ಕಾಣಿಸುತ್ತಾರೆ ಇವರ ಜೀವನದಲ್ಲಿಯ ಎರಡು ಪ್ರಮುಖ ಘಟ್ಟಗಳು ಒಂದು ಕಲ್ಯಾಣಕ್ಕೆ ಬರುವ ಮುಂಚಿನಘ ಟ್ಟ ಅಂದರೆ ಕರ್ಮ ಯೋಗಿಯಾಗಿದ್ದರು ಎರಡನೆಯದು ಕಲ್ಯಾಣಕ್ಕೆ ಬಂದ ನಂತರ ಸಿದ್ದರಾಮೇಶ್ವರ ರಾದುದು ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಪ್ರತ್ಯಕ್ಷ ಕಪಿಲಿಸಿದ್ದ ಮಲ್ಲಿಕಾರ್ಜುನ ಎಂದು ಸ್ತ್ರೀಯರಿಗೆ ವಿಶೇಷ ಸ್ಥಾನಮಾನ ಕೊಟ್ಟರು ಇವರು ಒಟ್ಟು 1992 ವಚನಗಳನ್ನು ರಚಿಸಿದ್ದಾರೆ ವಚನದ ಅಂಕಿತನಾಮ “ಕಪಿಲಸಿದ್ಧ ಮಲ್ಲಿಕಾರ್ಜುನ “ಕಪಿಲಸಿದ್ಧಮಲ್ಲಿನಾಥ “ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗ್. ವಚನಗಳ ಲ್ಲದೆ ಅನೇಕ ಹಾಡುಗಳನ್ನು ಬಸವ ಸ್ತೋತ್ರ ತ್ರಿವಿಧಿ,ಮಿಶ್ರ ತ್ರಿವಿಧಿ ಹಾಗೂ ಅಷ್ಟಾವರಣ ಸ್ತೋತ್ರ ತ್ರಿವಿಧಿಗಳನ್ನು ರಚಿಸಿದ್ದಾರೆ ಇವುಗಳ ಅಂಕಿತನಾಮ ಯೋಗಿನಾಥ ಎಂದಿರುವುದು 68 ಸಾವಿರ ವಚನಗಳನ್ನು ಹಾಡಿ ಹಾಡಿ ಸೋತಿತ್ತೆನ್ನ ಮನ ನೋಡಯ್ಯ ಎಂದು ಉದ್ಗಾರ ತೆಗದಿರುವರು ಇವರು ಅನುಭವ ಮಂಟಪದ ಮೂರನೇ ಶೂನ್ಯ ಪೀಠಾಧೀಶರು ಆಗಿದ್ದರು ಕಲ್ಯಾಣದ ಕ್ರಾಂತಿಯಲ್ಲಿ ಇವರ ಪಾತ್ರ ಬಹುಮುಖ್ಯವಾಗಿರುವುದು ವಚನ ಕಟ್ಟುಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ತುಂಬಾ ಮುಖ್ಯ ಪಾತ್ರ ವಹಿಸಿದವರು ಸಿದ್ದರಾಮೇಶ್ವರರು ತಮ್ಮ ಕಾರ್ಯಕಲಾಪ ಮುಗಿಸಿದ ನಂತರ ಸೋಲಾಪುರದಲ್ಲಿ ಕೆರೆಯ ಮಧ್ಯದಲ್ಲಿ ಜೀವಂತ ಸಂಜೀವಿನಿ ಸಮಾಧಿ ತೆಗೆದುಕೊಳ್ಳುತ್ತಾರೆ.

ವಚನ ಹಾಗೂ ವಿಶ್ಲೇಷಣೆ

ಅಂಗೈಯೊಳಗಣ ಲಿಂಗಮೂರ್ತಿಯ
ಕಂಗಳಲ್ಲಿಂಗ ಗೊಟ್ಟಡೆ
ತಿಂಗಳ ಸೂಡನಾದೆ ನೋಡಾ ಅಯ್ಯಾ
ಮಂಗಳಮೂರ್ತಿ ಗಂಗಾಜೂಟಾಂಗಮಯ
ಕಪಿಲಸಿದ್ದ ಮಲ್ಲಿಕಾರ್ಜುನoಗ
ಬೇರೆoದರಿಯಲ್ಲ ನೋಡಾ ನಿಜದ ನಿರ್ವಯಲಲ್ಲಯನೆ

ಇಲ್ಲಿ ಜೀವಾತ್ಮ ಗುರು ಕಾರುಣ್ಯಕ್ಕಾಗಿ ಹಂಬಲಿಸುತ್ತಿರುವಾಗ ನಿರಾಕಾರ ಆ ಪರವಸ್ತುವೆ ಸಾಕಾರ ರೂಪದಿಂದ ಗುರುವಾಗಿ ಬಂದು ತನ್ನ ಹಸ್ತ ಮಸ್ತಕ ಸಂಯೋಗದಿಂದ ಅಂಗೈಯೊಳಗೆ ಸಹಸ್ರದಲ್ಲಿರುವ ಅವ್ಯಕ್ತ ಕಲೆಯನ್ನು ಜಾಗೃತಗೊಳಿಸಿ ನಮ್ಮ ಭಾವದಲ್ಲಿ ಭಾವಲಿಂಗವಾಗಿ ಪ್ರಾಣದಲ್ಲಿ ಪ್ರಾಣ ಲಿಂಗವಾಗಿ ಕರದಲ್ಲಿ ಇಷ್ಟ ಲಿಂಗವಾಗಿ ದಯಪಾಲಿಸುತ್ತಾನೆ ಮಂತ್ರ ದೀಕ್ಷೆಯಿಂದ ಲಿಂಗ ರಹಸ್ಯವನ್ನು ತಿಳಿಸುವನು ಈ ಇಷ್ಟಲಿಂಗ ಸಾಧಕ ನಿಗೆ ಇದು ಅರಿವಿನ ಕುರುಹು ಕರದೊಳಗಿನ ಇಷ್ಟಲಿಂಗದಲ್ಲಿ ದೃಷ್ಟಿ ನಟ್ಟು ಲಿಂಗಮೂರ್ತಿಯ ಕಂಗಳಲ್ಲಿಂಗ್ ಗೊಟ್ಟಡೆ ತಿಂಗಳ ಸೂಡನಾದೆ ನೋಡಯ್ಯ ನಾವು ಇಷ್ಟಲಿಂಗದಲ್ಲಿ ತದೇಕ ಚಿತ್ತದಿಂದ ದೃಷ್ಟಿಯೋಗದಿಂದ ಅಂಗೈಯ ನೋಟದಲ್ಲಿ ಕಂಗಳು ಕಣ್ಣುಗಳ ನೆಟ್ಟು ಅಂಗಮನ ಭಾವದಲ್ಲಿ ಇಷ್ಟ ಪ್ರಾಣ ಭಾವ ಲಿಂಗವನ್ನು ನೆನೆಯುತ್ತಾ ಅವುಗಳ ಮೇಲೆ ದೃಷ್ಟಿ ಬೀರುವುದರಿಂದ ದೃಷ್ಟಿ ಸ್ಥಿರಗೊಳ್ಳುವುದು ದೃಷ್ಟಿ ನಿಂತೊಡನೆ ಮನದ ಚಂಚಲತೆ ಅಳಿದು ಆತ್ಮ ಶಕ್ತಿಯು ಜಾಗೃತ ವಾಗುವುದು ಇದಕ್ಕೆ ಪೂರಕ ವಚನ

ಅರೆದೆರೆದೆವೆ ದೃಷ್ಟಿಯ ನಾಸಿಕಾಗ್ರ ದಲ್ಲಿರಿಸಿ ನೋಡುತ್ತಾ
ಹೃದಯ ಕಮಲದಲ್ಲಿದ್ದ ಅಚಲ ಲಿಂಗದೊಳಗೆ
ಜ್ಞಾನಲೋಚನಧಿಂ ನೋಡುತ್ತಾ
ತನು ಮನೆಂದ್ರಿಯ ತರಹರವಾಗಿ ಮನ ನಿವಾಂತ ಜ್ಯೋತಿ ಯಂತೆ ನಿಂತು
ನಿಜವ ಕೂಡ ಬಲ್ಲಾತನೇ ನಿಜ ಗುರು ಸ್ವತಂತ್ರ ಸಿದ್ಧಲಿಂಗೇಶ್ವರನಲ್ಲಿ ಸಹಜ ಯೋಗಿ

ಈ ರೀತಿ ದೃಷ್ಟಿಯನ್ನು ಕಂಗಳಲಿ ನಟ್ಟು ಗಟ್ಟಿಗೊಳ್ಳಬೇಕಾದರೆ ಮೂರು ತನು ಸ್ತೂಲ ಸೂಕ್ಷ್ಮ ಕಾರಣ ಹಾಗೂ ಮೂರು ಆಣವ ಮಲ ಮಾಯಾಮಲ ಕಾರ್ಮಿಕ ಮಲಗಳನ್ನು ತೊರೆದು ಎಲ್ಲಾ ಅಂಗೇಂದ್ರಿಯಗಳನ್ನು ಲಿಂಗೇದ್ರಿ ಗಳನ್ನಾಗಿ ಮಾಡಿ ಸದಾ ಅವನ ಧ್ಯಾನದಲ್ಲಿ ಮುಳುಗಿದರೆ ಮಾತ್ರ ಲಭ್ಯ ಇದನ್ನು ಸಾಧಿಸಿದ್ದೇನೆ ಎಂದು ಮಂಗಳಮೂರ್ತಿ ಗಂಗಾ ಜೂ ಟಾಂಗಮಯ ಕಪಿಲಿಸಿದ್ದ ಮಲ್ಲಿಕಾರ್ಜುನoಗ ನೋಡ ನಿಜದ
ನಿರ್ವಯಲಲ್ಲಯ್ಯನೇ ಅಂದರೆ ಗಂಗಾಮಯ ಜೂಟಾಂಗಮಯ ಕಪಿಲಸಿದ್ದ ಮಲ್ಲಿಕಾರ್ಜುನನ ಅಂಗ ಮತ್ತು ಆ ಮೂಲ ಪರ ವಸ್ತು ಬೇರೆಯಲ್ಲ ಬೇರೆ ಬೇರೆ ಅಲ್ಲ ನೋಡ ಎನ್ನುತ್ತಾರೆ . ಸಿದ್ದರಾಮೇಶ್ವರರು ಪ್ರಭುದೇವರಿಗೆ ನಿಜದ ನಿರ್ವಯಲು ಎಂದು ಹೇಳುತ್ತಾರೆ
ಅದಕ್ಕೆ ಜಕ್ಕಣ್ಣನವರು ಒಂದು ವಚನ

ಬಯಲೆ ಅಂಗವಾಗಿ
ನಿರ್ವಯಲೇ ಲಿಂಗವಾಗಿ ಭಾವಕ್ಕೆ
ಸಂಬಂಧವಾಯಿತ್ತು ನೋಡಾ
ಬಯಲಿಂದ ಅಂಗವಿ
ಲ್ಲದೆ
ನಿರ್ವಯಲೆಂಬಲಿಂಗವು ನಿಶಬ್ದವಾಗಿ
ಭಾವಕ್ಕೆ ಬೆರಗಾಯಿತ್ತು ನೋಡಾ
ಝೇಂಕಾರ ನಿಜಲಿಂಗ ಪ್ರಭುವೇ
ಈ ರೀತಿ ಶಿವಯೋಗ ಸಾಧನೆ ಮಾರ್ಗವನ್ನು ತಿಳಿಸಿ ತಾನು ಯಾರು ಎಲ್ಲಿಂದ ಬಂದೆ ಎಲ್ಲಿ ಹೋಗುವುದು ಇದರ ಅರ್ಥವನ್ನು ತಿಳಿದುಕೊಂಡು ಶಿವಯೋಗ ಸಾಧನೆ ಮಾಡಬೇಕು ಈ ರೀತಿ ಸಾಧನೆ ಮಾಡಿ ಲಿಂಗಾಂಗ ಸಾಮರ ಸ್ಯ ಪಡೆಯುವ ಮಾರ್ಗ ತಿಳಿದು ನಿಜದ ನಿಲವನ್ನು ಹೊಂದಬೇಕು ಶಿವಯೋಗ ಸಾಧಿಸಬೇಕಾದರೆ ಅಷ್ಟಾವರಣ ಗಳನ್ನು ಅಳವಡಿಸಿಕೊಂಡು ಪಂಚಾಚಾರಗಳಂತೆ ನಡೆದು ಷ ಟಸ್ಥಲ ಮಾರ್ಗ ಅಂದರೆ ಭಕ್ತ ಸ್ಥಳದ ಕಿಂಕರತೆಯಿಂದ ಎಲ್ಲವೂ ನಿನ್ನದೇ ನಿನಗೆ ಎಲ್ಲ ಅರ್ಪಿಸಿ ಶ್ರದ್ಧೆ ನಿಷ್ಠೆ ಹೀಗೆ ಹಂತಹಂತವಾಗಿ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗ ಶರಣ ಐಕ್ಯಸ್ಥಲ ತಲುಪಬೇಕು ಉ ರಿ ಕರ್ಪೂರದಂತೆ ನಾನು ಬೇರೆಯಲ್ಲ ನೀನು ಬೇರೆ ಅಲ್ಲ ಅನ್ನುವ ನಿಜವಾದ ನಿಲವ ಕಾಣಬೇಕು ಇದನ್ನು ಕಂಡುಕೊಂಡಂತ ಬಯಲು ಸ್ವರೂಪರಾಗಿರುವ ಅಲ್ಲಯ್ಯನವರಿಗೆ ತಿಳಿಸುತ್ತಾರೆ ಸಿದ್ದರಾಮೇಶ್ವರರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.