ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಕ್ಫ್ ಮಸೂದೆ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಭಾನುವಾರ ಬೆಳಿಗ್ಗೆ ಅಂಜುಮನ್ ಇಸ್ಲಾಂ ಕಮಿಟಿಯಿಂದ ಶಾಂತಿಯುತ ಪ್ರತಿಭಟನೆ ಹಾಗೂ ಬೃಹತ್ ರ‍್ಯಾಲಿ ಜರುಗಿತು.
ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಸಭೆ ಸೇರಿದ ಮುಸ್ಲಿಮ ಸಮುದಾಯದವರು ಬೆಳಿಗ್ಗೆ ೧೦ ಗಂಟೆಗೆ ಅಂಬೇಡ್ಕರ್ , ಟಿಪ್ಪು ಸುಲ್ತಾನ ಭಾವಚಿತ್ರಗಳು, ತ್ರಿವರ್ಣ ಹಾಗೂ ಜೈಭೀಮ ಧ್ವಜಗಳೊಂದಿಗೆ ಮೆರವಣಿಗೆ ಹೊರಟು ಹೊಸನಗರ, ಬಸ್ ನಿಲ್ದಾಣದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಸಭೆ ಸೇರಿದರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿಯ ಉಪಾಧ್ಯಕ್ಷ ರಫೀಕ್ ಪಾನಪರೋಷ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆ ಅಲ್ಪಸಂಖ್ಯಾತರಿಗೆ ಸಂವಿಧಾನವು ನೀಡಿರುವ ವಿಶೇಷ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ಲೋಕಸಭೆಯಲ್ಲಿ ಅಂಗೀಕರಿಸಿದ ಅಸಂವಿಧಾನಿಕವಾದ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಿ ಈ ಹಿಂದೆ ಇದ್ದ ವಕ್ಪ್ ಕಾಯ್ದೆಯನ್ನು ಮರುಸ್ಥಾಪಿಸಲು ಆಗ್ರಹಿಸಿದರು.
ಜಾಮೀಯಾ ಮಸೀದೆ ಧರ್ಮಗುರು ಮೌಲಾನಾಅಹ್ಮದ್ ಅಲಿ ಖಾಜಿ, ದಲಿತ ಸಂಘರ್ಷ ಸಮಿತಿಯ ಪ್ರಕಾಶ ಗುಡಿಮನಿ, ಶರಣು ಜಮಖಂಡಿ, ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯ ರಾಜು ಮೆಟಗಾರ, ದಸ್ತಗೀರ್ ಮುಲ್ಲಾ ಮಾತನಾಡಿದರು.
ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ಅಂಜುಮನ್ ಕಮಿಟಿ ಅಧ್ಯಕ್ಷ ಮಹಿಬೂಬ್ ಹುಂಡೇಕಾರ, ಪಟ್ಟಣ ಪಂಚಾಯಿತಿ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ, ಕಮಿಟಿಯ ಕಾರ್ಯದರ್ಶಿ ಅಬ್ದುಲ್ ಸತ್ತಾರ ಉಪರಘರ, ಹೈದರಸಾಬ್ ಮುಲ್ಲಾ, ಮುನೀರ್‌ಅಹ್ಮದ್ ಮಳಖೇಡ, ಎ.ಡಿ.ಮುಲ್ಲಾ, ಜಬ್ಬಾರ್ ಮೋಮಿನ್, ಬಾಬು ದೇವಣಗಾಂವ, ಹಾಜೀಲಾಲ್ ಮಸಳಿ, ಇಕ್ಬಾಲ್ ವಿಜಯಪುರ, ರಜಾಕ್ ಆಹೇರಿ, ಅಜೀಜ್ ಮರೋಳ, ಇಮ್ತಿಯಾಜ್ ಮುಲ್ಲಾ ಸೇರಿದಂತೆ ಸಮುದಾಯದವರು ಇದ್ದರು.

