ಉದಯರಶ್ಮಿ ದಿನಪತ್ರಿಕೆ
ಇಂಡಿ: ನೇಮಕಾತಿ ವಿಚಾರದಲ್ಲಿ ಸರ್ಕಾರ ಮೌನ ವಹಿಸುವ ಮೂಲಕ ಪೌರಕಾರ್ಮಿಕರನ್ನು ಕಡೆಗಣಿಸಿದೆ.
ಪೌರಕಾರ್ಮಿಕರನ್ನು ನೌಕರರಂದು ಪರಿಗಣಿಸಿ ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೇರಿದಂತೆ ಸರಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿ ‘ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘ’ದ ನೇತೃತ್ವದಲ್ಲಿ ಪುರಸಭೆಯ ಹೊರಗುತ್ತಿಗೆ ಪೌರಕಾರ್ಮಿಕರು
ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದರು.
ಪಟ್ಟಣದ ಪುರಸಭೆ ಎದುರು ಏ.೧೨ ರಿಂದ ಮೇ. ೨೬ರವರೆಗೆ ಇಂಡಿ ಪೌರಕಾರ್ಮಿಕ ಸಂಘದ ಅಧ್ಯಕ್ಷ ಶ ಲಕ್ಷ್ಮೀಬಾಯಿ ಕಾಲೇಭಾಗ ಅವರ ನೇತ್ರತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೆವೆ.
ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೀರು ಸರಬರಾಜು ಸಹಾಯಕ, ವಾಹನಚಾಲಕ, ಬೀದಿ ದೀಪ ಸಹಾಯಕರು, ಲೋಡರ್ಸ, ಪಾರ್ಕ, ಗಾರ್ಡನರ್, ಕಾವಲುಗಾರ, ಸ್ಯಾನಿಟರಿ, ಸೂಪರ್ ವೈಜರ್ ಸೇರಿದಂತೆ ವಿವಿಧ ವೃಂದಗಳಲ್ಲಿಕೆಲಸ ಮಡುತ್ತಿರುವ ಪೌರಕಾರ್ಮಿಕರನ್ನು ನೇರಪಾವತಿಗೆ ಒಳಪಡಿಸಬೇಕೆಂದು ಇಲ್ಲಿನ ಪುರಸಭೆ ಆವರಣದಲ್ಲಿ ಧರಣಿ ಆರಂಭಿಸಿದ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸದ ಸರಕಾರದ ವಿರುದ್ಧ ಘೋಷಣೆಕೂಗಿದರು.
ಹಲವಾರು ಬಾರಿ ಮುಖ್ಯಮಂತ್ರಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಸರ್ಕಾರ ಈಗ ನೀಡುತ್ತಿರುವ ವೇತನ, ಸೌಲಭ್ಯ ಸಾಕಾಗುತ್ತಿಲ್ಲ. ಕಡಿಮೆ ವೇತನದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ನೇರ ಪಾವತಿ ಕಾರ್ಮಿಕರನ್ನು ಕಾಯಂಗೊಳಿಸಬೇಕು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಚ್ಚಪ್ಪ ಶಿವಶರಣ, ಜಿಲ್ಲಾ ಖಜಾಂಚಿ ಮುತ್ತು ಮುರಾಳ, ಜಿಲ್ಲಾ ಕಾರ್ಯದರ್ಶಿ ಚಂದು ಕಾಲೇಭಾಗ, ಮಲ್ಲಪ್ಪ ನಡಗಡಿ, ಮರೇಪ್ಪ ಗುಡಮಿ, ಶ್ರೀಶೈಲ ಹಾದಿಮನಿ, ಹುಸನವ್ವ ಬಳಗಾನೂರ, ಕಿರಣ ಶಿಂದೆ, ಮಲ್ಲಿಕಾರ್ಜುನ ಶಿವಶರಣ, ಯಲ್ಲಪ್ಪ ಕಂಟಿಕರ, ಅಶೋಕ ಸಲಗರ, ಸಂಜು ಬಿರಾದಾರ, ಬಸವರಾಜ ವಾಲಿ ಸೇರಿದಂತೆ ಅನೇಕ ಹೊರಗುತ್ತಿಗೆ ನೌಕರರು ಇದ್ದರು.

