Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»“ಕರ್ನಾಟಕದ ಕಸ್ತೂರಬಾ” ಯಶೋಧರ ದಾಸಪ್ಪ
ವಿಶೇಷ ಲೇಖನ

“ಕರ್ನಾಟಕದ ಕಸ್ತೂರಬಾ” ಯಶೋಧರ ದಾಸಪ್ಪ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು
ಸಂಶೋಧನ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

ಯಶೋಧರ ದಾಸಪ್ಪ ಅವರು ಮೇ 28 1905ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಮುಖಂಡರಾಗಿ ಬೆಳೆದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ರಾಜ್ಯದಲ್ಲಿದ್ದ ದೀನ ದುರ್ಬಲರಿಗೆ ಸಹಾಯ ಮಾಡಲು ನಿಂತರು. ಅವರ ತಂದೆ ಕೆಎಚ್ ರಾಮಯ್ಯ ಅವರು ಇಂಗ್ಲೆಂಡ್ನಲ್ಲಿ ನ್ಯಾಯಶಾಸ್ತ್ರ ಓದಿ ಭಾರತಕ್ಕೆ ಹಿಂದಿರುಗಿದ ನಂತರ ಮೈಸೂರಿನ ಮಹಾರಾಜರ ಬಳಿ ಕೆಲಸ ಮಾಡುತ್ತಿದ್ದರು. ನಂತರ ಮೈಸೂರಿನ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಅನುಕೂಲಗಳನ್ನು ಒದಗಿಸಲು ಮತ್ತು ಸಮಾಜ ಸುಧಾರಣೆಗಳನ್ನು ಕೈಗೊಳ್ಳುತ್ತಿದ್ದರು.
ಯಶೋಧರ ದಾಸಪ್ಪ ಅವರು ಬೆಂಗಳೂರಿನ 1842 ರಲ್ಲಿ ಪ್ರಾರಂಭವಾದ ಲಂಡನ್ ಮಿಷನ್ ಸ್ಕೂಲ್ ನಲ್ಲಿ ಓದಿದರು. ಈಗ ಅದರ ಹೆಸರು “ಮಿತ್ರಾಲಯ ಬಾಲಕಿಯರ ಶಾಲೆ”. ಆಗಿನ ಶಾಲೆಯ ಪ್ರಾಂಶುಪಾಲರಾದ ಮಿಸ್ ಬಟ್ಲರ್ ಯಶೋಧರ ಅವರಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿದರು. ತರುವಾಯ ಯಶೋಧರ ಅವರು ತಮ್ಮ ಉನ್ನತ ವ್ಯಾಸಂಗವನ್ನು ಮದ್ರಾಸಿನ ಪ್ರತಿಷ್ಠಿತ ಕ್ವೀನ್ ಮೇಲೀಸ ಕಾಲೇಜಿನಲ್ಲಿ ಮುಂದುವರೆಸಿದರು. ಇವರ ಪತಿ ದಾಸಪ್ಪ ಎಚ್, ಮೈಸೂರು ಪ್ರಜಾಪಕ್ಷದ ಸದಸ್ಯರಾಗಿದ್ದು, 1930 ರಿಂದ ಎಲ್ಲಾ ಪ್ರತಿಭಟನಾ ಚಳುವಳಿಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದರು. ಅಲ್ಲದೇ ಆಗಿದ್ದ ಮಹಿಳಾ ಮಂಡಳಿಗಳಿಂದಲೂ ಸ್ಪೂರ್ತಿ ಸಿಕ್ಕಿತ್ತು. ಗಾಂಧಿಯವರ ಕರೆಗೆ ಓಗೊಟ್ಟು ಮಹಿಳಾ ಮಂಡಳಿಗಳು, ಉಮಾಬಾಯಿ ಕುಂದಾಪುರ,ಯಶೋಧರಾ ದಾಸಪ್ಪ ಮತ್ತು ಬಳ್ಳಾರಿ ಸಿದ್ದಮ್ಮರವರನ್ನು ಸ್ವದೇಶಿ ಚಳುವಳಿಯನ್ನು ಮುನ್ನಡೆಸಲು ಕಳಿಸಿಕೊಟ್ಟವು. ಈ ಚಳುವಳಿಯಲ್ಲಿ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲಾಯಿತು.


ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹಕ್ಕೆ 1930ರಲ್ಲಿ ಓಗೊಟ್ಟು ಉತ್ತರ ಕನ್ನಡದಲ್ಲಿ ಕಾಡಿನ ಸತ್ಯಾಗ್ರಹದ ಮುಖಂಡತ್ವವನ್ನು ವಹಿಸಿಕೊಂಡರು. ನಿರ್ಭಂಧವಿದ್ದ ಕಾಡುಗಳಲ್ಲಿ ಜನರು ಸರ್ಕಾರದ ಆದೇಶವನ್ನು ಧಿಕ್ಕರಿಸಿ ಕಾಡುಗಳಿಗೆ ದನಗಳನ್ನು ಅಟ್ಟಿದರು. ಹರಾಜು ಹಾಕಿ ಮಾರಲಾಗುತ್ತಿದ್ದ ಅರಣ್ಯ ಉತ್ಪನ್ನಗಳನ್ನು ತಡೆದರು. ಈ ಅರಣ್ಯ ಸತ್ಯಾಗ್ರಹಗಳಲ್ಲಿ 1200 ಕ್ಕಿಂತಲೂ ಹೆಚ್ಚು ಜನ ಬಂದನಕ್ಕೊಳಗಾದರು. ಅರಣ್ಯ ಉತ್ಪನ್ನಗಳಾದ ಮರಮುಟ್ಟುಗಳನ್ನು, ರೈಲ್ವೆ ಮತ್ತು ಕೈಗಾರಿಕೆಗಳಿಗೆ ಮುಡುಪಾಗಿಟ್ಟಿದ್ದರೂ, ಅಸಹಕಾರ ಚಳುವಳಿಯ ಮೂಲಕ ಮರ ಮತ್ತು ಗಂಧದ ಮರಗಳನ್ನು ಕಡಿಯ ತೊಡಗಿದರು.
ಗಾಂಧೀಜಿಯವರು ಅಸ್ಪೃಶ್ಯತೆಯನ್ನು ತೊಡೆದು ಹಾಕಲು 1932 ರಲ್ಲಿ ಹರಿಜನ ಸೇವಾ ಸಂಘವನ್ನು ಸ್ಥಾಪಿಸಿದಾಗ ಯಶೋಧರ ಅವರು ಮೈಸೂರಿನಲ್ಲಿ ಮುಂದಾಳತ್ವ ವಹಿಸಿದರು. ಮೈಸೂರು ರಾಜ್ಯದಲ್ಲಿ ಬಿಜಾಪುರ,ಕಾರವಾರ, ಕೊಡಗು ಮತ್ತು ಬಳ್ಳಾರಿಗಳಲ್ಲಿ ಅಂತಹ ಶಾಖೆಗಳನ್ನು ತೆರೆಯಲಾಯಿತು. ದಾಸಪ್ಪನವರು ಶಿಕ್ಷಣ ನಿಧಿಯನ್ನು ಪ್ರಾರಂಭಿಸಿ ಕೆಳ ಜಾತಿಯ ಮಕ್ಕಳಿಗೆ ವಸತಿ ನಿಲಯಗಳನ್ನು ತೆರೆದರು. ಅವರು ಸರ್ಕಾರಕ್ಕೆ ನೆರವಾಗಿ ಕೆಳಜಾತಿ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಸಾಲಗಳನ್ನು ಕೊಟ್ಟರು.
ಫೆಬ್ರುವರಿ15, 1939 ರಂದು ಬೆಂಗಳೂರು ನಗರ ಪ್ರಾಧಿಕಾರವು ಪೊಲೀಸ್ ಠಾಣೆಯ ಹೆಸರನ್ನು ಕ್ರೂರ ಬ್ರಿಟಿಷ್ ಅಧಿಕಾರಿ ಮಿಲ್ಟನ್ ಹೆಸರಿನಲ್ಲಿ ಮರುನಾಮಕರಣ ಮಾಡಲು ಹೊರಟಾಗ ದಾಸಪ್ಪ ಮತ್ತು ಸುನಂದಮ್ಮನವರ ಮುಖಂಡತ್ವದಲ್ಲಿ ಪ್ರತಿಭಟನೆಗಳು ನಡೆದವು. ಈ ಕುಪ್ರಸಿದ್ಧ ಅಧಿಕಾರಿಯು ಸ್ವಾತಂತ್ರ್ಯ ಚಳುವಳಿಗಳನ್ನು ಹತ್ತಿಕ್ಕಲು ಯಶೋಧರ ಅವರನ್ನು ಬಂಧಿಸಿದರು. ಗಾಂಧಿಯವರು 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯ ಕರೆ ನೀಡಿದಾಗ ಮೈಸೂರು ರಾಜ್ಯದ ಚಳುವಳಿಗಾರರು ಸರ್ಕಾರದ ಕೇಂದ್ರ ಸ್ಥಾನಕ್ಕೆ ಮೈಸೂರು ಚಲೋ ಎಂಬ ನಡಿಗೆಯ ಚಳುವಳಿ ಮಾಡಿ ಹೆಚ್ಚು ರಾಜಕೀಯ ಬೇಡಿಕೆಗಳನ್ನು ಮುಂದಿಟ್ಟರು. ಅನೇಕ ಸತ್ಯಾಗ್ರಹಗಳಿಗೆ ಯಶೋಧರ ಅವರ ಮನೆಯು ಆಶ್ರಯ ವಾಗಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದರು.ಆದ ಕಾರಣ ಇವರ ಬಂಧನವಾಯಿತು. ಇವರ ಹೆಚ್ಚಿನ ಚಟುವಟಿಕೆಗಳಿಂದಾಗಿ ಸ್ವಾತಂತ್ರ್ಯ ನಂತರದಲ್ಲಿ ಮೈಸೂರು ರಾಜ್ಯದ ವಿಧಾನಸಭೆಗೆ ಆಯ್ಕೆಯಾಗಿ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ಆಗಿಯೂ ಸೇವೆ ಸಲ್ಲಿಸಿದರು.
ಇವರು ತಮ್ಮ ಜೀವನವನ್ನು ಸಮಾಜ ಸೇವೆಗೆ ಮುಡುಪಾಗಿ ಇಟ್ಟಿದ್ದರು.ಈಗಿನ ಕರ್ನಾಟಕ ರಾಜ್ಯದ ದಕ್ಷಿಣ ಕೇಂದ್ರೀಯ ಭಾಗದ ಅರಸೀಕೆರೆಯಲ್ಲಿ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಟ್ರಸ್ಟ್ ಅನ್ನು ಸ್ಥಾಪಿಸಿ ಮಹಿಳಾ ಸಮಾಜ ಸೇವಕಿಯರನ್ನು ತರಬೇತಿಗೊಳಿಸಲು ಕಾರಣರಾದರು. ಈ ಕೇಂದ್ರಗಳನ್ನು ಸ್ವಾವಲಂಬನೆ ಗೊಳಿಸಲು ಸರ್ಕಾರದಿಂದ ಜಮೀನಿನ ಮಂಜೂರಾತಿ ದೊರಕಿಸಿಕೊಟ್ಟರು. ಆದುದರಿಂದ ಇವರನ್ನು “ಕರ್ನಾಟಕದ ಕಸ್ತೂರಬಾ ” ಎಂದು ಕರೆಯುತ್ತಾರೆ.
ಯಶೋಧರ ದಾಸಪ್ಪನವರು ಗೀತಾ ಕೈಗಾರಿಕಾ ಸಂಘ ಸ್ಥಾಪಿಸಿ ಬಡ ಮಹಿಳೆಯರಿಗೆ ಕೆಲಸ ಕೊಟ್ಟು ಪರ್ಯಾಯ ಕುಶಲತೆಯನ್ನು ಕಲಿಸಿ ಅವರು ತಯಾರಿಸಿದ ವಸ್ತುಗಳಿಗೆ ಹಣ ಸಿಗುವಂತೆ ಮಾಡಿದರು. ಬೆಂಗಳೂರಿನಲ್ಲಿರುವ ಅವರ ಮನೆಯ ಭಾಗವನ್ನು ಹಿಂದುಸ್ತಾನ್ ಮೆಷಿನ್ ಟೂಲ್ಸ್ ಅವರಿಗೆ ( ಎಚ್ಎಂಟಿ ) ಕೊಟ್ಟು ಮಹಿಳೆಯರು ಗಡಿಯಾರದ ಬಿಡಿ ಭಾಗಗಳನ್ನು ತಯಾರಿಸಿಕೊಡಲು ಅನುವು ಮಾಡಿಕೊಟ್ಟರು.

ಅವರು ವಿವಿಧ ಮಂಡಳಿಗಳು ಪರಿಷತ್ತುಗಳು ಟ್ರಸ್ಟ್ ಗಳು ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ಅನೇಕ ಸ್ಥರಗಳಲ್ಲಿ ಕೆಲಸ ಮಾಡಿದರು. ಭಾರತ ಸರ್ಕಾರ ಇವರ ಸೇವೆಯನ್ನು ಗುರುತಿಸಿ 1973ರಲ್ಲಿ ” ಪದ್ಮವಿಭೂಷಣ” ಪ್ರಶಸ್ತಿ ನೀಡಿತು. 1980 ರಲ್ಲಿ ಇವರು ನಿಧನರಾದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026
    In ದಿನಪತ್ರಿಕೆ
  • ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ
    In (ರಾಜ್ಯ ) ಜಿಲ್ಲೆ
  • ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ
    In (ರಾಜ್ಯ ) ಜಿಲ್ಲೆ
  • ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಯುಪಿಎಸ್‌ಸಿ ಪರೀಕ್ಷೆಯ ತರಬೇತಿಗಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಿವೃತ್ತ ಸೈನಿಕ ಕಾಶೀರಾಯ ಸನ್ಮಾನ ಇಂದು
    In (ರಾಜ್ಯ ) ಜಿಲ್ಲೆ
  • ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುವವರೇ ಶಿಕ್ಷಕರು
    In (ರಾಜ್ಯ ) ಜಿಲ್ಲೆ
  • ಯಾಳವಾರ: ಪ್ರೌಢಶಾಲೆ ಸುವರ್ಣ ಮಹೋತ್ಸವ ಇಂದು
    In (ರಾಜ್ಯ ) ಜಿಲ್ಲೆ
  • ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ದಂತ ಮುರಿತ!
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆ ಪುರಸಭೆಯಿಂದ ಭೀಮನಭಾವಿ ಸ್ವಚ್ಚತೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.