ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಹನುಮ ಜಯಂತಿಯ ನಿಮಿತ್ತ ತಾಲೂಕಿನ ಕುಂಬಾರಹಳ್ಳ ಗ್ರಾಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಂಡಗಿ ಸ್ವಯಂ ಸೇವಾ ಸಂಕಲ್ಪ ಸಮೀತಿ ಇವರ ಸಹಯೋಗದಲ್ಲಿ ಸಾಧಕರಿಗೆ ಸನ್ಮಾನ. ದೈಹಿಕ ಶಿಕ್ಷಕ ಸದಾಶಿವ ಪಕಾಲಿˌ ಹಾಗೂ ಮಂಜುನಾಥ ಹಾರೂಗೇರಿ ರಾಜ್ಯ ನೌಕರರ ಕ್ರೀಡಾಕೂಟದಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕುಸ್ತಿ ಮತ್ತು ಕಬಡ್ಡಿ ಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರಿಂದ ಅದರ ಜೊತೆಗೆ ಕುಮಾರಿ ಕಾವೇರಿ ವಿಠ್ಠಲ ಗಡ್ಡಿಕಾರ, ವಿದ್ಯಾರ್ಥಿನಿ ಖೋ ಖೋ ಕ್ರೀಡೆಯಲ್ಲಿ ಯೂನಿವರ್ಸಿಟಿ ಬ್ಲೂ ಆದ ಕಾರಣ ಗೌರವಿಸಿ ಸನ್ಮಾನಿಸಲಾಯಿತು.
ಅಮೋಘಸಿದ್ದ ತೇರದಾಳ ಸ್ವಾಗತಿಸಿದರು, ಮುತ್ತು ಸೊನ್ನದ ನಿರೂಪಿಸಿ ಸಾಧಕರಿಗೆ ಸತ್ಕರಿಸಿದರುˌ ನಿಂಗಪ್ಪ ಮರನೂರ ವಂದಿಸಿದರು,
ಕುಂಬಾರಹಳ್ಳ ಗ್ರಾಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಂಡಗಿ ಸ್ವಯಂ ಸೇವಾ ಸಂಕಲ್ಪ ಸಮೀತಿ ಅಧ್ಯಕ್ಷರಾದ ಬಿ.ಎನ್ ಪಡೆನ್ನವರ ಹಾಗೂ ಸದಾಶಿವ ಸೊನ್ನದ ಜೊತೆಗೆ ರಾಜು ಮಾಳಿ, ಗ್ರಾಮದ ಸರ್ವ ಗುರುಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.

