Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಇಟಿ ಪರೀಕ್ಷೆ ವೇಳೆ ರಾಜ್ಯದ ಶಿವಮೊಗ್ಗ, ಬೀದರ್ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದನ್ನು ನೋಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಕಿಡಿಕಾರಿದ್ದಾರೆ.ಮುಸ್ಲಿಂ ಓಲೈಕೆಗಾಗಿ ಒಂದು ಧರ್ಮದ ತುಷ್ಟಿಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ಆಚರಣೆಗಳು, ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತರುವ ಕೆಲಸದಲ್ಲಿ ತೊಡಗಿದೆ. ಹಿಂದೂ ಸಮುದಾಯವನ್ನು ಒಡೆಯುವ ದೃಷ್ಟಿಯಿಂದ ಜಾತಿ ಗಣತಿ ಮಾಡಿರುವ ಈ ಕಾಂಗ್ರೆಸ್ ಸರ್ಕಾರ, ಇದೀಗ ವಿದ್ಯಾರ್ಥಿಗಳ ಜನಿವಾರ ತೆಗೆಸುವ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ. ಜನಿವಾರ ಧರಿಸುವ ಬ್ರಾಹ್ಮಣ, ಕ್ಷತ್ರೀಯ ಸಮಾಜದ ರಜಪೂತ, ಕಲಾಲ, ಮರಾಠಾ, ವಿಶ್ವಕರ್ಮ ಸೇರಿದಂತೆ ಮತ್ತಿತರೆ ಸಮಾಜಗಳಿಗೆ ಅವಮಾನ ಮಾಡಿರುವದನ್ನು ಉಗ್ರವಾಗಿ ಖಂಡಿಸಿದ್ದಾರೆ.ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಯುವ ಮೂಲಕ ಹಿಂದೂ ಭಾವನೆಗಳಿಗೆ ಘಾಸಿ ಗೊಳಿಸಿದವರ ವಿರುದ್ಧ ಸರ್ಕಾರ ತಕ್ಷಣ ಕಾನೂನು ಕ್ರಮ ಜರುಗಿಸಿ, ಸೇವೆಯಿಂದ ವಜಾ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಹಿಂದೂ ವಿರೋಧಿ ಕೃತ್ಯಗಳು, ಹಿಂದೂ ಧಾರ್ಮಿಕತೆಗೆ ಚ್ಯುತಿ ನಿಂದನೆ ಹಾಗೂ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕಾರ್ಯ ರಾಜ್ಯದಲ್ಲಿ ಮೇಲಿಂದಮೇಲೆ ನಡೆಯುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೆವೆ ಎಂದು ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಸರಕಾರದ ವಿರುದ್ಧ ಕಿಡಿಕಾರಿದರು.ರವಿವಾರ ಪಟ್ಟಣದ ಖಾಸಗಿ ಹೊಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಿವಾರ ಸಂಸ್ಕಾರಕ್ಕೆ ತನ್ನದೆಯಾದ ಗೌರವವಿದೆ. ಅದನ್ನು ಅರಿಯದೆ ಜನಿವಾರ ಕಟ್ ಮಾಡಿ ಕಸದ ಬುಟ್ಟಿಗೆ ಎಸೆದಿರುವುದು ನಮ್ಮ ಹಿಂದೂ ಜನಿವಾರ ಸಮಾಜಗಳ ಹಿಂದೂ ಸಂಸ್ಕೃತಿ ಭಾವನೆಗಳಿಗೆ ಬಹುದೊಡ್ಡ ಧಕ್ಕೆಯಾಗಿದೆ. ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದ ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇತ್ತಿಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ಏರ್ಪಡಿಸಿದ ಸಿ.ಇ.ಟಿ ಪರೀಕ್ಷೆಯಲ್ಲಿ ಶಿವಮೊಗ್ಗ ಮತ್ತು ಬೀದರನಲ್ಲಿ ವಿಪ್ರ ಸಮಾಜದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರು ಧರಿಸಿದ ಜನಿವಾರವನ್ನು ಕತ್ತರಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ ಕೃತ್ಯವನ್ನು…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಸಾವಳಗಿ ಹೋಬಳಿಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಮಲ್ಲಯ್ಯನ ಐದೇಶಿ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.ಐದೇಶಿ ಉತ್ಸವ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಬ್ಯಾಂಜೋ, ಕರಡಿ ಮಜಲು ಸೇರಿದಂತೆ ಹಲವು ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ಉತ್ಸವ ಸಾಗಿತು.ಕಂಬಿ ಮಲ್ಲಯ್ಯ ದೇವರನ್ನು ಹೆಗಲ ಮೇಲೆ ಹೊತ್ತು ಸಾಗಿದ್ದು ಒಂದೆಡೆಯಾದರೆ ಅದರ ಮುಂಭಾಗದಲ್ಲಿ ಕನ್ನಡಿ, ಬಾಸಿಂಗ , ಮುತ್ತೈದೆಯರು ಆರತಿ, ದಿವಟಗಿ, ವಿವಿಧ ವಾದ್ಯ ಮೇಳದೊಂದಿಗೆ ಪ್ರತೀ ವರ್ಷದ ಪದ್ಧತಿಯಂತೆ ಕಂಬಿ ಮಲ್ಲಯ್ಯನನ್ನು ಕೂಡಿಸಿ ಮಂಗಳಾರತಿ ಮಾಡಿ ಕಂಬಿ ಐದೇಶಿ ಕಾರ್ಯಕ್ರಮ ನಡೆಯಿತು.ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿಯಿಂದ ನಮಿಸಿದರು. ಶ್ರೀಶೈಲ ಪಾದಯಾತ್ರೆ ಮುಗಿಸಿಕೊಂಡ ಬಂದವರಿಗೆ ಅವರ ಬೀಗರು, ಅಕ್ಕ ತಂಗಿಯರು (ಆಹೇರಿ) ಸಮವಸ್ತ್ರಗಳನ್ನು ನೀಡಿದರು.ಶುಕ್ರವಾರ ಐದೇಶಿ ದಿನವಾಗಿದ್ದರಿಂದ ಇಡೀ ಊರಲ್ಲಿ ಒಂದು ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಭಕ್ತರು ಭಕ್ತಿ ಪರವಶರಾಗಿ ಐದೇಶಿ ಬ್ಯಾಂಜೋ ಮುಂಭಾಗದಲ್ಲಿ ಕುಣಿದು ಕುಪ್ಪಳಿಸಿದರು ಒಟ್ಟಾರೆಯಾಗಿ ಐದೇಶಿ ಉತ್ಸವವನ್ನು ವಿಜೃಂಭಣೆಯಿಂದ…
ಇಂದು (ಏಪ್ರೀಲ್-೨೨, ಮಂಗಳವಾರ) “ವಿಶ್ವ ಭೂ ದಿನ”ದ ನಿಮಿತ್ಯ ಈ ವಿಶೇಷ ಲೇಖನ) ಲೇಖನ-ಮಲ್ಲಪ್ಪ. ಸಿ. ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ವಿಜ್ಞಾನ-ತಂತ್ರಜ್ಞಾನದ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಮಾನವ ಇಡೀ ಮಾನವ, ಪಶು, ಪಕ್ಷಿ, ಜೀವಜಂತು, ಸಸ್ಯರಾಶಿಗಳಿಗೆ ಆಶ್ರಯ ತಾಣವಾಗಿರುವ ಪೃಥ್ವಿ ಮತ್ತು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಖಾಸಗೀಕರಣ. ಜಾಗತೀಕರಣ ಮತ್ತು ಉದಾರೀಕರಣಗಳಿಂದ ಅಭಿವೃದ್ಧಿ ಸಾಧಿಸಬೇಕೆಂಬ ಮರೀಚಿಕೆಗೆ ಬೆನ್ನು ಹತ್ತಿರುವ ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ಅರಣ್ಯ ಸಂಪತ್ತನ್ನು ನಾಶಗೊಳಿಸಿ ತನ್ನ ಬದುಕಿಗೆ ತಾನೇ ಕೈಯಾರೆ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾನೆ. ಹಣ ಗಳಿಕೆ, ನಗರೀಕರಣ, ಕೈಗಾರಿಕೆ, ಸಂಶೋಧನೆ, ಹೊಸ ಅವಿಷ್ಕಾರ, ಅಣ್ವಸ್ತ್ರ ಪ್ರಯೋಗ, ಐಷಾರಾಮಿ ವಸ್ತುಗಳ ಬಳಕೆ ಮತ್ತು ವಿಜ್ಞಾನ-ತಂತ್ರಜ್ಞಾನದ ಮಿತಿಮೀರಿದ ಉಪಯೋಗದಿಂದ ಭೂಮಿಯ ಮೇಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.ಇರುವುದೊಂದೆ ಭೂಮಿ, ಉಸಿರಾಡುವುದೋಂದೇ ಗಾಳಿ, ಕುಡಿಯುವುದೊಂದೇ ನೀರು ಹೀಗಿರುವಾಗ ಅವುಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಉಳಿಸಬೇಕಾದ ಅಗತ್ಯವಾಗಿದೆ. ಈ ಭೂಮಿಯಲ್ಲಿ ಮನುಷ್ಯ ಮತ್ರವಲ್ಲ ಅದೇಷ್ಟೋ ಜೀವ ಸಂಕುಲಗಳು, ಸೂಕ್ಷ್ಮಾಣುಗಳು & ಸಸ್ಯಗಳು ಹೀಗೆ ಭೂಮಿ…
ಚಿಂತನೆ- ಸುಧಾ ಪಾಟೀಲ್ವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಲಿಂಗವನ್ನು ನೆನೆ ನೆನೆದು ಲಿಂಗವೇ ತಾನಾದಂತೆ ಗುರುವನ್ನೇ ನೆನೆದು ಗುರುವೇ ತಾನಾದಂತೆ ಬಸವ ಬಸವ ಎಂದು ಅನುದಿನ ಬಸವಣ್ಣನವರನ್ನು ನೆನೆದು ವಚನ ರಚನೆಯಲ್ಲಿ ಮಾತ್ರ ಪ್ರತಿಬಸವಣ್ಣನಾದವರು ಷಣ್ಮುಖ ಶಿವಯೋಗಿಗಳು. ಅವರ ವಚನದ ಶಿಲ್ಪ, ಸ್ವರೂಪ, ಶೈಲಿ,ತಂತ್ರ, ಶಬ್ದ, ಅರ್ಥ, ಅಲಂಕಾರಗಳೆಲ್ಲವೂ ನಮ್ಮನ್ನು 12ನೇ ಶತಮಾನಕ್ಕೆ ಕೊಂಡೊಯುತ್ತವೆ.ಷಣ್ಮುಖ ಶಿವಯೋಗಿಗಳು ಬಾಲ್ಯದಿಂದಲೇ ನಿವೃತ್ತಿ ಮಾರ್ಗದಲ್ಲಿದ್ದರು. ಭಕ್ತಿ,ಜ್ಞಾನ, ವೈರಾಗ್ಯ ಅವರ ತ್ರಿವಿಧ ಧ್ಯೇಯಗಳಾದವು. ಗುರುವ ಹಿಡಿದು ಕುರುಹನ್ನು ಕಂಡರು, ಕುರುಹಿನಿಂದ ಅರುಹನ್ನು ಕಂಡರು. ಅರುಹಿನಿಂದ ಆಚಾರವ ಕಂಡರು. ಆಚಾರದಿಂದ ನಿಜವ ಕಂಡರು. ನಿಜದಿಂದ ಅಖoಡೇಶ್ವರನ ಕೂಡಿದರು. ಕೂಡಿದರಷ್ಟೇ ಅಲ್ಲ ಅಖಂಡೇಶ್ವರನೇ ತಾವಾದರು. ಅಂತೆಯೇ ತಮ್ಮ ವಚನಾoಕಿತ ವಾಗಿ ಅಖಂಡೇಶ್ವರ ಎಂಬ ಅಂಕಿತನಾಮವನ್ನು ಇಟ್ಟುಕೊಂಡರು. ಅಖoಡೇಶ್ವರರ ವಚನಗಳ ಒಂದು ವೈಶಿಷ್ಟ್ಯವೆಂದರೆ ಅವು ಬಸವಣ್ಣನವರ ಷಟಸ್ಥಲ ವಚನಗಳು ಪ್ರಕಟವಾಗುವ ಪೂರ್ವದಲ್ಲಿಯೇ ಪ್ರಕಟವಾಗಿ ಜನರ ಕೈ ಸೇರಿತ್ತು.ಲಿಂಗಾಯತ ಧರ್ಮದ ಧರ್ಮ ಗ್ರಂಥವೆಂದರೆ ಅಖoಡೇಶ್ವರ ವಚನಗಳು ಎಂಬಷ್ಟು ಅವು…
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಕೈಯಲ್ಲಿರುವ ಈ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆಂಬ ಅರಿವಿಲ್ಲದೆ ಹಳೆಯ ಸಂಗತಿಗಳ ನೆನಪಿನ ರಾಶಿ ಕೆದುಕುತ್ತ ಕಾಲ ಕಳೆಯುತ್ತೇವೆ. ಅದರಿಂದ ಏನೂ ಪ್ರಯೋಜನವಿಲ್ಲ ಎಂಬುದು ಗೊತ್ತಿದ್ದೂ ಅದರಲ್ಲಿ ಮುಳುಗುತ್ತೇವೆ. ಇಷ್ಟು ಸಾಲದೆಂಬಂತೆ ಹಳೆಯ ನೋವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅದರ ಬಗ್ಗೆ ಯೋಚಿಸುತ್ತ ಕೊರಗುತ್ತೇವೆ. ಒಟ್ಟಿನಲ್ಲಿ ಈ ದಿನ ಈ ಕ್ಷಣ ಏನು ಮಾಡಬಲ್ಲೆವು. ಏನು ಮಾಡಿದರೆ ನೆಮ್ಮದಿಯ ಬದುಕು ಸೃಷ್ಟಿಸಬಲ್ಲೆವು ಎಂದು ಯೋಚಿಸುವುದರ ಗೊಡವೆಗೆ ಹೋಗುವುದೇ ಇಲ್ಲ. ಅವೇ ನೆನಪುಗಳನ್ನು ಮತ್ತು ಅವೇ ನೋವುಗಳನ್ನು ಮೆಲಕು ಹಾಕುತ್ತ ಜೀವನವನ್ನು ಸರ್ವನಾಶ ಮಾಡಲು ಅಡಿಪಾಯ ಹಾಕುತ್ತೇವೆ. ನೋವುಗಳ ನೆನಪುಗಳು ನಮ್ಮ ಬೆಳವಣಿಗೆಗೆ ಪೂರಕವಾಗುವುದಿಲ್ಲ ಎಂಬುದು ಗೊತ್ತಿದ್ದರೂ ಅದೇಕೆ ಜೀವನವನ್ನು ನಾವೇ ನಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತೇವೆ. ನಾವು ಸಾಮಾನ್ಯ ಮಾಹಿತಿಯನ್ನು ಮರೆತುಬಿಡುತ್ತೇವೆ, ಆದರೆ ನಮ್ಮ ಮೆದುಳು ಬಲವಾದ ಭಾವನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆ ಹೆಚ್ಚು. ಎಕ್‌ಹಾರ್ಟ್ ಟೋಲೆಯವರು ಹೇಳುವಂತೆ ’ಭೂತಕಾಲಕ್ಕೆ ವರ್ತಮಾನದ ಮೇಲೆ ಯಾವುದೇ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾ ಮಂಡಳಿಯ ನಿಯಮವನ್ನು ದುರುಪಯೋಗ ಮಾಡಿಕೊಂಡು ಜನಿವಾರ ತೆಗೆಯಿಸಿ ಧಾರ್ಮಿಕ ಭಾವನೆಗೆ ಚ್ಯುತಿ ತಂದ ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜನಿವಾರ ಸಮಾಜ ಬಾಂಧವರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಶಿಕ್ಷಣ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಿಂದ ಶುರುವಾದ ಪ್ರತಿಭಟನೆ ವಾಲ್ಮೀಕಿ ವೃತ್ತ, ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ದ್ಯಾಮವ್ವ ದೇವಿ ದೇವಸ್ಥಾನ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಸೀಲ್ದಾರ ಕಚೇರಿಯ ವರೆಗೆ ಸಾಗಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಮಾಜದ ಪ್ರಮುಖರಾದ ವಾಸುದೇವ ಶಾಸ್ತಿç, ಬಿ.ಪಿ.ಕುಲಕರ್ಣಿ, ಉದಯಸಿಂಗ ರಾಯಚೂರ, ಈರಣ್ಣ ಬಡಿಗೇರ, ವಿಜು ಬಡಿಗೇರ ಮತ್ತೀತರರು ಮಾತನಾಡಿ, ಈ ಘಟನೆ ಮಾನವ ಕುಲ ತಲೆ ತಗ್ಗಿಸುವಂಥದ್ದು. ಜನಿವಾರವನ್ನು ಗಾಯತ್ರಿ ಮಂತ್ರ ಪಠಿಸಿ ದೊಡ್ಡ ಸಮಾರಂಭ ಮಾಡಿ ಧರಿಸುತ್ತೇವೆ.…
ಪೆಟ್ರೋಲಿಯಂ ರೂಲ್ಸ್ ಪ್ರಕಾರ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಡಿಸಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಪೆಟ್ರೋಲ್ ಪಂಪ್‌ಗಳು ಪೆಟ್ರೋಲಿಯಂ ರೂಲ್ಸ್ ಪ್ರಕಾರ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.ನಿಯಮದಂತೆ ಪೆಟ್ರೋಲ್ ಪಂಪ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತವಾದ ಶೌಚಾಲಯ, ಸ್ನಾನದ ಕೋಣೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಅಗ್ನಿ ನಂದಿಸುವ ವಸ್ತುಗಳು, ವಾಹನಗಳಿಗೆ ಏರ ಮಷಿನ್ ಮತ್ತು ನೈಟ್ರೋಜನ್ ಸೇವೆ, ವಾಹನಗಳಿಗೆ ಅಡೆತಡೆಯಾಗದಂತೆ ಒಳಗೆ-ಹೊರಗೆ ಹೋಗಲು ರಸ್ತೆ ಸಂಪರ್ಕ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಗ್ರಾಹಕರಿಗೆ ಸರಿಯಾಗಿ ಅಳತೆ ಮಾಡಿ ಪೆಟ್ರೋಲ್ ಒದಗಿಸುವ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮೊಬೈಲ್‌ನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಸಿಡಿಲು ಬಡಿದು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕೋರವಾರ ಗ್ರಾಮದಲ್ಲಿ ಸಂಭವಿಸಿದೆ.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ಜರುಗಿದ್ದು, ಗ್ರಾಮದ ನಿವಾಸಿ ಸಂಗಯ್ಯ ಶಾಂತವೀರಯ್ಯ ಚಿಕ್ಕಯ್ಯನಮಠ(೧೭) ಎಂಬುವ ವಿದ್ಯಾರ್ಥಿಯೇ ಸಿಡಿಲಿಗೆ ಬಲಿಯಾದ ದುರ್ದೈವಿಯಾಗಿದ್ದಾನೆ. ಇವನು ಕಲಕೇರಿ ಗ್ರಾಮದ ಐಟಿಐ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು.ಗ್ರಾಮದ ಶ್ರೀಹನುಮಾನ ದೇವಸ್ಥಾನದ ಮೇಲೆ ನಿಂತು ಮೊಬೈಲ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಪ್ರಕರಣ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಜನಿವಾರ ತಗೆಯುವಂತೆ ಒತ್ತಾಯ ಮಾಡಿದ ಅಧಿಕಾರಿಗೆ ಅಮಾನತ್ತು ಮಾಡಲು ಆಗ್ರಹ | ಜಿಲ್ಲಾಧಿಕಾರಿ ಮೂಲಕ ರಾಜ್ಯ ಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಅಖಿಲ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಭಾರತೀಯ ಬ್ರಾಹ್ಮಣ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಹಾಗೂ ಶ್ರೀ ಚಿದಂಬರ ಸೇವಾ ಸಮಿತಿ ನೇತೃತ್ವದಲ್ಲಿ ಕೆ. ಇ. ಎಯಿಂದ ನಡೆಸುತ್ತಿರುವ ವಿವಿಧ ವೃತ್ತಿಪರ ಪದವಿಗಳ ಪ್ರವೇಶ ಪರೀಕ್ಷೆಯಲ್ಲಿ ಶಿವಮೊಗ್ಗ ಮತ್ತು ಬೀದರ ಜಿಲ್ಲೆಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಒತ್ತಾಯ ಮಾಡಿ ಅವಮಾನಿಸಿರುವ ಘಟನೆ ಖಂಡಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆನಂದ ಕುಲಕರ್ಣಿ ಅವರು ಮಾತನಾಡಿ ಕೆ. ಇ. ಎಯಿಂದ ನಡೆಸುತ್ತಿರುವ ಸಿ ಇ ಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆಗಿರುವ ಅವಮಾನಕ್ಕೆ ರಾಜ್ಯ ಸರಕಾರ ನೇರ ಹೊಣೆ ಹೊರಬೇಕು…
