ಪೆಟ್ರೋಲಿಯಂ ರೂಲ್ಸ್ ಪ್ರಕಾರ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಡಿಸಿ ಟಿ.ಭೂಬಾಲನ್ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಪೆಟ್ರೋಲ್ ಪಂಪ್‌ಗಳು ಪೆಟ್ರೋಲಿಯಂ ರೂಲ್ಸ್ ಪ್ರಕಾರ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.
ನಿಯಮದಂತೆ ಪೆಟ್ರೋಲ್ ಪಂಪ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತವಾದ ಶೌಚಾಲಯ, ಸ್ನಾನದ ಕೋಣೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಅಗ್ನಿ ನಂದಿಸುವ ವಸ್ತುಗಳು, ವಾಹನಗಳಿಗೆ ಏರ ಮಷಿನ್ ಮತ್ತು ನೈಟ್ರೋಜನ್ ಸೇವೆ, ವಾಹನಗಳಿಗೆ ಅಡೆತಡೆಯಾಗದಂತೆ ಒಳಗೆ-ಹೊರಗೆ ಹೋಗಲು ರಸ್ತೆ ಸಂಪರ್ಕ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಗ್ರಾಹಕರಿಗೆ ಸರಿಯಾಗಿ ಅಳತೆ ಮಾಡಿ ಪೆಟ್ರೋಲ್ ಒದಗಿಸುವ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಸೂಚನೆ ನೀಡಿದ್ದಾರೆ.

