ಉದಯರಶ್ಮಿ ದಿನಪತ್ರಿಕೆ
ಇಂಡಿ: ಹಿಂದೂ ವಿರೋಧಿ ಕೃತ್ಯಗಳು, ಹಿಂದೂ ಧಾರ್ಮಿಕತೆಗೆ ಚ್ಯುತಿ ನಿಂದನೆ ಹಾಗೂ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕಾರ್ಯ ರಾಜ್ಯದಲ್ಲಿ ಮೇಲಿಂದಮೇಲೆ ನಡೆಯುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೆವೆ ಎಂದು ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಸರಕಾರದ ವಿರುದ್ಧ ಕಿಡಿಕಾರಿದರು.
ರವಿವಾರ ಪಟ್ಟಣದ ಖಾಸಗಿ ಹೊಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಿವಾರ ಸಂಸ್ಕಾರಕ್ಕೆ ತನ್ನದೆಯಾದ ಗೌರವವಿದೆ. ಅದನ್ನು ಅರಿಯದೆ ಜನಿವಾರ ಕಟ್ ಮಾಡಿ ಕಸದ ಬುಟ್ಟಿಗೆ ಎಸೆದಿರುವುದು ನಮ್ಮ ಹಿಂದೂ ಜನಿವಾರ ಸಮಾಜಗಳ ಹಿಂದೂ ಸಂಸ್ಕೃತಿ ಭಾವನೆಗಳಿಗೆ ಬಹುದೊಡ್ಡ ಧಕ್ಕೆಯಾಗಿದೆ. ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದ ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇತ್ತಿಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ಏರ್ಪಡಿಸಿದ ಸಿ.ಇ.ಟಿ ಪರೀಕ್ಷೆಯಲ್ಲಿ ಶಿವಮೊಗ್ಗ ಮತ್ತು ಬೀದರನಲ್ಲಿ ವಿಪ್ರ ಸಮಾಜದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರು ಧರಿಸಿದ ಜನಿವಾರವನ್ನು ಕತ್ತರಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ ಕೃತ್ಯವನ್ನು ಹಿಂದೂ ಸಮಾಜದ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ನ್ಯಾಯವಾದಿ ಜಿ ಎಸ್ ಜೋಶಿ ಮಾತನಾಡಿ, ಅಭಿವೃದ್ಧಿಗಾಗಿ ಶ್ರಮಿಸುವ ಸಾತ್ವಿಕ ಸಮುದಾಯವಾಗಿದ್ದು, ಸಮಾಜದ ಮೇಲೆ ಬ್ರಾಹ್ಮಣ ಸಾರ್ವಜನಿಕವಾಗಿ ಅವಹೇಳನಕಾರಿಯಾಗುವಂತ ಅನೇಕ ಘಟನೆಗಳು ಆಗಾಗ ನಡೆಯುತ್ತಿದ್ದು ಇದಕ್ಕೆ ವಿಪ್ರ ಸಮಾಜನ್ನು ಕಡೆಗಣಿಸುವಂತ ಕೆಲಸವನ್ನು ಇಂದಿನ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು. ಜನಿವಾರವು ಒಂದು ದೀಕ್ಷೆ ಪಡೆದ ಪವಿತ್ರ ದಾರ ಇದು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಿಲ್ಲ. ಹಿಂದುಗಳಲ್ಲಿ ಅನೇಕ ಜಾತಿಯವರು ಈ ಯಜ್ಯೋಪವಿತವನ್ನು ಧರಿಸುತ್ತಾರೆ ಅವರೆಲ್ಲರ ಭಾವನೆಗಳಿಗೆ ಘಾಸಿಗೊಳಿಸುವಂತ ಕೆಲಸವನ್ನು ಸರ್ಕಾರದ ಅಧಿಕಾರಿಗಳು ಮಾಡಿದ್ದಾರೆ. ಈ ಕುಕೃತ್ಯವೆಸಗಿದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಈ ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಕಾನೂನು ಕ್ರಮ ಜರುಗಿಸಬೇಕು.
ಈ ಸಂದರ್ಭದಲ್ಲಿ ಎಸ್ ಪಿ ಕುಲಕರ್ಣಿ, ಗೋಪಾಲರಾವ್ ಕುಲಕರ್ಣಿ, ರಂಗನಾಥ ಚವ್ಹಾಣ, ರಾಮಚಂದ್ರ ಕಾವಿ, ಕ್ರಿಷ್ಣ ಕುಲಕರ್ಣಿ ಉಪಸ್ಥಿತರಿದ್ದರು.

