Author: editor.udayarashmi@gmail.com

ಬಿಎಲ್ಡಿಇ ಸಂಸ್ಥೆ ಪ್ರ.ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರ ಆಯುರ್ವೇದ ಮಹಾವಿದ್ಯಾಲಯಕ್ಕೆ ಕೋಟೆಗೋಡೆ ಪಕ್ಕದಲ್ಲಿ ಲೀಸ್ ಆಧಾರದ ಮೇಲೆ 17ಎಕರೆ 20ಗುಂಟೆ ಜಮೀನನ್ನು ಮಂಜೂರು ಮಾಡಿದ್ದು, ಈ ಜಮೀನಿನಲ್ಲಿ ಅಂದಾಜು 1ಎಕರೆ 10ಗುಂಟೆ ಜಾಗೆಯಲ್ಲಿ ಈಗಾಗಲೇ ಕೆಲವರು ಕಾನೂನು ಬಾಹಿರವಾಗಿ ಅತೀಕ್ರಮಣ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಬಾಕಿ ಉಳಿದಿರುವ 16ಎಕರೆ 10ಗುಂಟೆ ಸರ್ಕಾರಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ಲೀಸ್ ಪಡೆದ ಬಿ.ಎಲ್.ಡಿ.ಇ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಬುಧವಾರ ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಕೆಲವು ವ್ಯಕ್ತಿಗಳು “ಈ ಕೋಟೆಗೋಡೆಯಲ್ಲಿ ಚಾಲುಕ್ಯರ ಕಾಲದ ಸ್ವಯಂಭು ದೇವಸ್ಥಾನ ಇದೆ. ಬಿ.ಎಲ್.ಡಿ.ಇ ಸಂಸ್ಥೆಯವರು ಹಿಂದು ದೇವಸ್ಥಾನದ ಮೇಲೆ ದಾಳಿ ಮಾಡಿ, ದೇವಸ್ಥಾನದ ಜಾಗವನ್ನು ಅತೀಕ್ರಮಿಸಿ, ಅಕ್ರಮ ಕಟ್ಟಡ ಕಟ್ಟಿ, ಷಡ್ಯಂತ್ರ ಮಾಡಿದ್ದಾರೆ” ಎಂದು ಅಪಪ್ರಚಾರ ಮಾಡುತ್ತಿದ್ದು, ಇದು ವಾಸ್ತವಕ್ಕೆ ದೂರ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಶಿಖರಪುರ ಪಟ್ಟಣದಲ್ಲಿ ಜೋನಾರ್ಸ್ ಎಂಬ ಹೆಸರಿನ ಹೆಸರಾಂತ ಪಾದರಕ್ಷೆ ತಯಾರಿಸುವ ಕಂಪನಿಯು ಬಹಳ ವರ್ಷಗಳ ಕಾಲದಿಂದ ಮಹಿಳೆಯರು ಪುರುಷರು ಮತ್ತು ಮಕ್ಕಳ ಪಾದರಕ್ಷೆಗಳನ್ನು ತಯಾರಿಸುತ್ತಿತ್ತು. ತನ್ನ ಅತ್ಯಾಕರ್ಷಕ ವಿನ್ಯಾಸದ ಪಾದರಕ್ಷೆಗಳು ಮತ್ತು ಶೂಗಳ ಕಾರಣದಿಂದಾಗಿ ಅದು ಪ್ರಪಂಚದಾದ್ಯಂತ ತನ್ನದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿತ್ತು. ಹಾಗಾಗಿ ಜೋನಾರ್ಸ್ ಸಂಸ್ಥೆಯ ಮಾಲೀಕನಾದ ದೇವೇಂದ್ರನಿಗೆ ತನ್ನ ಕಂಪನಿಯು ತಯಾರಿಸಿದ ಪಾದರಕ್ಷೆಗಳನ್ನು ಮಾರಾಟ ಮಾಡಲು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ತನ್ನ ಕಂಪನಿಯು ವಾರ್ಷಿಕವಾಗಿ ತಯಾರಿಸುವ ಒಟ್ಟು ಪಾದರಕ್ಷೆಗಳ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಪಾದರಕ್ಷೆಗಳ ಬೇಡಿಕೆಯು ಜಾಗತಿಕ ಮಾರುಕಟ್ಟೆಯಿಂದ ನಿರಂತರವಾಗಿ ಬರುತ್ತಾ ಇದ್ದುದರಿಂದ ವ್ಯವಹಾರವು ಅತ್ಯುನ್ನತವಾಗಿ ನಡೆಯುತ್ತಿತ್ತು.ವರ್ಷಗಳು ಉರುಳಿದಂತೆ ಜೋನಾರ್ಸ್ ಕಂಪನಿಯ ಪಾದರಕ್ಷೆಗಳ ಗುಣಮಟ್ಟಕ್ಕಿಂತ ಉನ್ನತ ದರ್ಜೆಯ ಹಾಗೂ ಕಡಿಮೆ ದರದ ಪಾದರಕ್ಷೆಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭಿಸುತ್ತಿದ್ದುದರಿಂದ ಜೋನಾರ್ಸ್ ಸಂಸ್ಥೆಯ ಪಾದರಕ್ಷೆಗಳಿಗೆ ಬೇಡಿಕೆಯು ಗಣನೀಯವಾಗಿ ಕುಸಿದು ವ್ಯವಹಾರವು ನಷ್ಟದ ಸ್ಥಿತಿಗೆ…

Read More

ಚಿಂತನೆ-ಡಾ. ತಾರಾ ಬಿ ಏನ್ಧಾರವಾಡ ಉದಯರಶ್ಮಿ ದಿನಪತ್ರಿಕೆ ಸಿದ್ಧರಾಮೇಶ್ವರರು ಒಬ್ಬ ಶ್ರೇಷ್ಠ ಅನುಭವಿಗಳಾಗಿದ್ದರು ಅಲ್ಲಮಪ್ರಭು ಬಸವೇಶ್ವರರು ಚನ್ನಬಸವ ಮುಂತಾದ ಶರಣ ಶ್ರೇಷ್ಠ ಸಾಲಿನಲ್ಲಿ ನಿಲ್ಲುವ ಸಮಕಾಲಿನ ಶಿವಶರಣರು..ಯೋಗಿಗಳ ಯೋಗಿ ಶಿವಯೋಗಿ ಸೊಡ್ದಳ ಸಿದ್ದರಾಮಯ್ಯ ಎಂದು ಸೊಡ್ದಳ ಬಾಚರಿಸರಿಂದಹೊಗಳಿಸಿಕೊಂಡ ಮಹಾನ್ ಚೇತನ, ಮಹಾನ್ ಯೋಗಿ ಸಿದ್ಧರಾಮೇಶ್ವರರು.ಅನೌತಿಕ ಶಕ್ತಿಯನ್ನು ಪಡೆದ ಅನುಪಮಾ ಸಾಧನೆಗಳ ಸಿದ್ಧಾಪುರುಷ ಆಗಿದ್ದರು ಅವರ 68000 ವಚನಂಗಳ ಹಾಡಿ ಹಾಡಿ ಸೋತಿದ್ದನ್ನ ಮನ ಎಂದು ಅವರೇ ತಮ್ಮ( ವಚನ ಸಂಖ್ಯೆ 909 )ವಚನ ಒಂದರಲ್ಲಿ ಹೇಳಿಕೊಂಡಿದ್ದಾರೆ .ಇವರ ವಚನಗಳಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ ಅಥವಾ ಕಬಲಿಸಿದ್ದಮಲ್ಲ ಕಪಿಲಸಿದ್ಧ ಮಲ್ಲಿನಾಥ ಕಪಿಲಸಿದ್ಧ ಮಲ್ಲೇಂದ್ರ ಕಪಿಲಸಿದ್ಧ ಮಲ್ಲೇಶ್ವರ ಕಪಿಲಸಿದ್ಧ ಮಲ್ಲೇಶ್ವರ ದೇವರು ಕಪಿಲಸಿದ್ಧ ಮಲ್ಲ ಎಂಬ ಅಂಕಿತಗಳು ಕಂಡುಬರುತ್ತದೆ ಚಿತ್ರದುರ್ಗದ ಬ್ರಹನ್ಮಠದಲ್ಲಿ ಇತ್ತೀಚೆಗೆ ದೊರೆತ ಓಲೆ ಪ್ರತಿಗಳಲ್ಲಿ ಕವಿಲಸಿದ್ಧ ಮಲ್ಲಿಕಾರ್ಜುನ, ಕವಿಲಸಿದ್ಧಮಲ್ಲಿಕಾರ್ಜುನ ಲಿಂಗ . ಕವಿಲಸಿದ್ಧಮಲ್ಲೇಶ್ವರ. ಕವಿಲಸಿದ್ಧಮಲ್ಲಿನಾಥಯ್ಯ ಎಂಬ ಅಂಕಿತಗಳು ಕೂಡ ಬಳಕೆಯಾಗಿದೆ.ಇನ್ನು ಕೆಲವೊಂದು ವಚನಗಳಲ್ಲಿ ವಿರಳವಾಗಿ ಕಪಿಲಸಿದ್ಧ ಮಲ್ಲಿಕಾರ್ಜುನ ಯೋಗಿನಾಥ ಎಂಬ ಅಂಕಿತವನ್ನು ಕೂಡ ಕಾಣಬಹುದಾಗಿದೆ.ಸೊನ್ನಲಿಗಿಯ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೫-೨೬ ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಲೇಜು ನ್ಯಾಕ್ ಕಮೀಟಿಯಿಂದ ಬಿ ಶ್ರೇಣಿ ಪಡೆದುಕೊಂಡಿದೆ. ಕಾಲೇಜು ಅನುಭವಿ ಅಧ್ಯಾಪಕರನ್ನು ಹೊಂದಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಕಾಲೇಜು ಹೊಂದಿದೆ. ಕಾಲೇಜು ಕಲಾ ವಿಭಾಗದಲ್ಲಿ ಇತಿಹಾಸ ಭೂಗೋಳಶಾಸ್ತ್ರ, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಉರ್ದು, ಐಚ್ಛಿಕ ಇಂಗ್ಲೀಷ್, ಐಚ್ಛಿಕ ಕನ್ನಡ ಮುಂತಾದ ವಿಷಯ ಸಂಯೋಜನೆಗಳೊಂದಿಗೆ ಬಿಎ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಅವಕಾಶವಿದೆ. ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳೊಂದಿಗೆ ಬಿ.ಎಸ್ಸಿ. ಕೋರ್ಸ್ಗಳು ಲಭ್ಯವಿದೆ. ಬಿಕಾಂ ಮತ್ತು ಬಿಬಿಎ ಕೋರ್ಸ್ ಸಹ ಲಭ್ಯವಿದೆ. ಕಾಲೇಜು ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಕಾಲೇಜಿನ ಪ್ರವೇಶ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಬಿ.ಹೊಸಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮ ಕಲಾವಿದ ಡಿಜಿಟಲ್ ಸ್ಟುಡಿಯೋದ ಉಮೇಶ ಶಾಖಾಪುರ ಅವರಿಗೆ ಈಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಛಾಯಾ ಗ್ರಾಹಕರ ಸಂಘವು ಹಮ್ಮಿಕೊಂಡಿದ್ದ ೭೦ನೇ ವರ್ಷದ ಡಿಜೆ ಇಮೇಜ್ ನಮ್ಮ ಇಮೇಜ್-ಛಾಯಾಗ್ರಾಹಕರ ಸಂಭ್ರಮದಲ್ಲಿ ಸಂಘದ ಅಧ್ಯಕ್ಷ, ಕೆಪಿಎ ನಿರ್ದೇಶಕ ರಮೇಶ ಚವ್ಹಾಣ ಅವರು ಛಾಯಾಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಇವರನ್ನು ಸಂಘದ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು. ಇವರು ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ತಾಲೂಕಿನ ಛಾಯಾವೃತ್ತಿ ಬಾಂಧವರಿಗೆ ಹರ್ಷಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರು ಮತ್ತು ಭಾರತೀಯ ವಕೀಲರ ಪರಿಷತ್ ಸಹ ಅಧ್ಯಕ್ಷರು, ಹಿರಿಯ ನ್ಯಾಯವಾದಿ ಸದಾಶಿವರೆಡ್ಡಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕರೆ ನೀಡಿದ ಪ್ರತಿಭಟನೆ ಬೆಂಬಲಿಸಿ ಸೋಮವಾರ ಬೆಳಗ್ಗೆ ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ಬಿರಾದಾರ ಅವರ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ವಕೀಲರು ಮೌನ ಪ್ರತಿಭಟನೆ ನಡೆಸಿ ನಂತರ ತಹಸಿಲ್ದಾರ ಕಚೇರಿಗೆ ತೆರಳಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಪತ್ರವನ್ನುಕಚೇರಿಯ ಸಿಬ್ಬಂದಿ ಬಸವರಾಜ ದಾನಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿ ಮಲ್ಲಿಕಾರ್ಜುನ ದೇವರಮನಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಅಂಗಗಳಲ್ಲಿ ಒಂದಾದ ನ್ಯಾಯಾಂಗ ಅಂಗವು ನಾಡಿನ ಹಿರಿಮೆ ಪ್ರತೀಕವಾಗಿದೆ.. ಇಂತಹ ನ್ಯಾಯಾಂಗ ಅಂಗದಲ್ಲಿ ನ್ಯಾಯ ವಿಲೇವಾರಿ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರ ದೊಡ್ಡದಾಗಿದೆ. ವಕೀಲರ ಮೇಲೆ ಅವ್ಯಾಹತವಾಗಿ ಹಲ್ಲೆ-ದೌರ್ಜನ್ಯಗಳು ನಡೆದಿರುವದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ತನ್ನ ಕಕ್ಷಿದಾರರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಮೇ.೧೨ರಂದು ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಭಗವಾನ ಬುದ್ಧ ಜಯಂತಿ ಅಂಗವಾಗಿ ಮೇ.೧೨ರಂದು ಬೆಳಿಗ್ಗೆ ೮-೩೦ ಗಂಟೆಗೆ ನಗರದ ಜಲನಗರದಲ್ಲಿರುವ ಬುದ್ಧವಿಹಾರದಿಂದ ಭಾವಚಿತ್ರ ಮೆರವಣಿಗೆಗೆ ಚಾಲನೆ ಹಾಗೂ ಬೆಳಿಗ್ಗೆ ೧೦ ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.ಭಗವಾನ ಬುದ್ಧ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಓರ್ವ ನುರಿತ ಉಪನ್ಯಾಸಕರನ್ನು ಆಹ್ವಾನಿಸಿ, ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುವುದು, ಶಿಷ್ಠಾಚಾರದಂತೆ ಆಹ್ವಾನ ಪತ್ರಿಕೆ, ವಿವಿಧ ಗಣ್ಯರಿಗೆ ಆಹ್ವಾನ, ವೇದಿಕೆ ಅಲಂಕಾರ, ವಿವಿಧ ಕಲಾ ತಂಡಗಳೊಂದಿಗೆ ಭಾವಚಿತ್ರ ಮೆರವಣಿಗೆಗೆ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಚ್ಛತೆ, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕುಡಿಯುವ ನೀರಿಗೆ ವ್ಯವಸ್ಥೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಇದೇ ಮೇ.೦೨ರಂದು ಆದಿ ಶಂಕರಾಚಾರ್ಯ, ಮೇ.೦೪ರಂದು ಭಗೀರಥ ಮಹರ್ಷಿ ಹಾಗೂ ಮೇ.೧೦ರಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಆದಿ ಶಂಕರಾಚಾರ್ಯ ಜಯಂತಿ ಅಂಗವಾಗಿ ಮೇ.೨ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಲಕ್ಷ್ಮಿ ದೇವಸ್ಥಾನದಿಂದ ಭಾವಚಿತ್ರ ಮೆರವಣಿಗೆಗೆ ಚಾಲನೆ ಹಾಗೂ ಬೆಳಿಗ್ಗೆ ೧೦ ಗಂಟೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.ಮೇ.೦೪ ರಂದು ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೯ ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಭಾವಚಿತ್ರ ಮೆರವಣಿಗೆ ಹಾಗೂ ಬೆಳಿಗ್ಗೆ ೧೦ ಗಂಟೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಅರ್ಜಿಗಳನ್ನು ಪರಿಶೀಲಿಸಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿದ್ದು, ಈ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳಿದ್ದರೆ ದಿನಾಂಕ:೨೧-೦೪-೨೦೨೫ ರಿಂದ ೦೨-೦೫-೨೦೨೫ ರೊಳಗಾಗಿ ಕಚೇರಿ ಸಮಯದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಮುದ್ದೇಬಿಹಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಮುದ್ದೇಬಿಹಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ಇಲಾಖೆಯ ಉಸ್ತುವಾರಿಯಾದ ಎಚ್.ಎಂ ಶಕೀಲ್ ನವಾಜ್ ಇವರಿಗೆ ಬೆಂಗಳೂರಿನ ವಸತಿ ಸಚಿವ ಜಮೀರ್ ಅಹಮದ್ ಖಾನ್ ರವರ ಸರ್ಕಾರಿ ನಿವಾಸದಲ್ಲಿ 65 ನೇ ಹುಟ್ಟು ಹಬ್ಬದ ಪ್ರಯುಕ್ತ ನಬಿರೋಷನ್ ಪ್ರಕಾಶನ, ಬೋರಗಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಬರಹಗಾರ ಮೌಲಾಲಿ ಆಲಗೂರ, ಕಾಂಗ್ರೆಸ್ ಮುಖಂಡ ಸದ್ದಾಮ್ ಆಲಗೂರ, ಹೀನಾ, ಸಾನಿಯಾ ಸೇರಿದಂತೆ ಇತರರು ಇದ್ದರು.

Read More