ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೫-೨೬ ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಲೇಜು ನ್ಯಾಕ್ ಕಮೀಟಿಯಿಂದ ಬಿ ಶ್ರೇಣಿ ಪಡೆದುಕೊಂಡಿದೆ. ಕಾಲೇಜು ಅನುಭವಿ ಅಧ್ಯಾಪಕರನ್ನು ಹೊಂದಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಕಾಲೇಜು ಹೊಂದಿದೆ. ಕಾಲೇಜು ಕಲಾ ವಿಭಾಗದಲ್ಲಿ ಇತಿಹಾಸ ಭೂಗೋಳಶಾಸ್ತ್ರ, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಉರ್ದು, ಐಚ್ಛಿಕ ಇಂಗ್ಲೀಷ್, ಐಚ್ಛಿಕ ಕನ್ನಡ ಮುಂತಾದ ವಿಷಯ ಸಂಯೋಜನೆಗಳೊಂದಿಗೆ ಬಿಎ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಅವಕಾಶವಿದೆ. ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳೊಂದಿಗೆ ಬಿ.ಎಸ್ಸಿ. ಕೋರ್ಸ್ಗಳು ಲಭ್ಯವಿದೆ. ಬಿಕಾಂ ಮತ್ತು ಬಿಬಿಎ ಕೋರ್ಸ್ ಸಹ ಲಭ್ಯವಿದೆ. ಕಾಲೇಜು ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಕಾಲೇಜಿನ ಪ್ರವೇಶ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಬಿ.ಹೊಸಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
