ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ಇಲಾಖೆಯ ಉಸ್ತುವಾರಿಯಾದ ಎಚ್.ಎಂ ಶಕೀಲ್ ನವಾಜ್ ಇವರಿಗೆ ಬೆಂಗಳೂರಿನ ವಸತಿ ಸಚಿವ ಜಮೀರ್ ಅಹಮದ್ ಖಾನ್ ರವರ ಸರ್ಕಾರಿ ನಿವಾಸದಲ್ಲಿ 65 ನೇ ಹುಟ್ಟು ಹಬ್ಬದ ಪ್ರಯುಕ್ತ ನಬಿರೋಷನ್ ಪ್ರಕಾಶನ, ಬೋರಗಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಬರಹಗಾರ ಮೌಲಾಲಿ ಆಲಗೂರ, ಕಾಂಗ್ರೆಸ್ ಮುಖಂಡ ಸದ್ದಾಮ್ ಆಲಗೂರ, ಹೀನಾ, ಸಾನಿಯಾ ಸೇರಿದಂತೆ ಇತರರು ಇದ್ದರು.

