ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮ ಕಲಾವಿದ ಡಿಜಿಟಲ್ ಸ್ಟುಡಿಯೋದ ಉಮೇಶ ಶಾಖಾಪುರ ಅವರಿಗೆ ಈಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಛಾಯಾ ಗ್ರಾಹಕರ ಸಂಘವು ಹಮ್ಮಿಕೊಂಡಿದ್ದ ೭೦ನೇ ವರ್ಷದ ಡಿಜೆ ಇಮೇಜ್ ನಮ್ಮ ಇಮೇಜ್-ಛಾಯಾಗ್ರಾಹಕರ ಸಂಭ್ರಮದಲ್ಲಿ ಸಂಘದ ಅಧ್ಯಕ್ಷ, ಕೆಪಿಎ ನಿರ್ದೇಶಕ ರಮೇಶ ಚವ್ಹಾಣ ಅವರು ಛಾಯಾಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಇವರನ್ನು ಸಂಘದ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು. ಇವರು ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ತಾಲೂಕಿನ ಛಾಯಾವೃತ್ತಿ ಬಾಂಧವರಿಗೆ ಹರ್ಷಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

