Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಸಮಿಪದ ಆಲಗೂರ ಗ್ರಾಮದಲ್ಲಿ ಸಾಯಂಕಾಲ ಬಿರುಗಾಳಿ ಸಹಿತ ಮಳೆ ಸುರಿದ ವೇಳೆ ಪರಿಣಾಮ ಅವಘಡ ಸಂಭವಿಸಿದ್ದು, ಕುರಿ ಕಾಯಲು ಹೊಗಿದ್ದ ದೇವರಹಿಪ್ಪರಗಿ ತಾಲೂಕಿನ ಆಲಗೂರ ಗ್ರಾಮದ ಆಕಾಶ ಹೈಯಾಳದಪ್ಪ ಯಂಕಂಚಿ (೧೮) ಕುರಿ ಕಾಯುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಸಮೀಪದ ಹುಣಶ್ಯಾಳ ಗ್ರಾಮದಲ್ಲಿ ಸಾಯಂಕಾಲ ಮಳೆ ಗಾಳಿ ಆರ್ಭಟದ ಮದ್ಯೆ ಹೊಲದಲ್ಲಿ ಕಟ್ಟಲಾಗಿದ್ದ ಪ್ರಭುಗೌಡ ನಂದಪ್ಪ ದೇವರಗುಡಿ ಇವರ ಸುಮಾರು ಒಂದು ಲಕ್ಷ ಕಿಮ್ಮತ್ತಿನ ಎತ್ತು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೈಯದ ಮೊಹಮ್ಮದ ತನ್ವೀರ ಹಾಶ್ಮಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತದ ಮುಸ್ಲಿಮರು ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಭಾರತ ಸರ್ಕಾರದ ಜೊತೆಯಲ್ಲಿ ಇದ್ದೇವೆ. ತಾಯ್ನಾಡಿನ ಸಮಗ್ರತೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಯಾವಾಗಲೂ ಸಿದ್ದ, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ಧರ್ಮಾಧಿಕಾರಿಗಳು, ಹಜರತ್ ಹಾಶಿಂಪೀರ ದರ್ಗಾ ಹಾಗೂ ರಾಜ್ಯಾದ್ಯಕ್ಷರು ಜಮಾತೆ ಅಹಲೆಸುನ್ನತ್ ಸೈಯದ ಮೊಹಮ್ಮದ ತನ್ವೀರ ಹಾಶ್ಮಿ ತಮ್ಮ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.ಕಾಶ್ಮೀರದ ಪಹಲಗಾಮದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿದ್ದು, ಇದರಲ್ಲಿ ೨೮ ಅಮಾಯಕ ಪ್ರವಾಸಿಗರು ಅನ್ಯಾಯವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಅತ್ಯಂತ ಕ್ರೂರ ಮತ್ತು ದುಃಖಕರ. ನಾವು ಭಾರತೀಯ ಮುಸ್ಲಿಮರು, ಈ ಅಮಾನವೀಯ ಮತ್ತು ಅನಾಗರಿಕ ಭಯೋತ್ಪಾದನಾ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಮೃತರ ಕುಟುಂಬಗಳ ದುಃಖವನ್ನು ಹಂಚಿಕೊಳ್ಳುತ್ತೇವೆ ಮತ್ತು ಅವರ ಜೊತೆಯಲ್ಲಿ ಇದ್ದೇವೆ. ಭಾರತ ಸರ್ಕಾರವು ಈ ದುರಂತ ಘಟನೆಯ ತನಿಖೆ ನಡೆಸಬೇಕು, ಭಯೋತ್ಪಾದಕರನ್ನು ತಕ್ಷಣ ಹುಡುಕಿ ಮತ್ತು ಭಯೋತ್ಪಾದಕರಿಗೆ ಪಾಠವಾಗುವಂತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾಶ್ಮೀರ ಪ್ರವಾಸ ವೇಳೆ ದುಷ್ಟ ಉಗ್ರಗಾಮಿಗಳ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡು ಹುತಾತ್ಮರಾದ ಜೀವಗಳಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೇತೃತ್ವದಲ್ಲಿ ನೂರಾರು ಮುಖಂಡರು ಗಾಂಧಿ ವೃತ್ತದಲ್ಲಿ ಜಮಾಯಿಸಿ ಮೇಣದ ಬತ್ತಿ ಬೆಳಗಿದರು.ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಮಾತನಾಡಿ, ಉಗ್ರಗಾಮಿಗಳು ನಡೆಸಿದ ದಾಳಿ ಇಡೀ ಮನುಕುಲದ ಮೇಲೆ ಆಗಿದೆ, ಅವರು ನಡೆಸಿದ ದಾಳಿಯಿಂದ ಪ್ರತಿ ಭಾರತೀಯನಿಗೂ ಗಾಯವಾಗಿದೆ, ಇಂತಹ ದುಷ್ಟ ಉಗ್ರಗಾಮಿಗಳು ಎಲ್ಲೇ ಅಡಗಿರಲಿ ಅವರನ್ನು ಕೊಚ್ಚಿ ಹಾಕಬೇಕು, ದುಷ್ಟ ಉಗ್ರಗಾಮಿಗಳಿಗೆ ಹೃದಯವೇ ಇಲ್ಲ ಅವರು ಮಾನವರೇ ಅಲ್ಲ ಎಂದರು.ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಉಗ್ರಗಾಮಿಗಳು ಬಿಲದಲ್ಲಿ ಅಡಗಿದರೂ ಮೋದಿ ಅವರು ಬಿಡಬಾರದು, ಉಗ್ರಗಾಮಿಗಳು ರಾಕ್ಷಸರು, ಅವರನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು, ಈ ವಿಷಯದಲ್ಲಿ ನಾವು ಪ್ರಧಾನಿ ಅವರೊಂದಿಗೆ ಇದ್ದೇವೆ ಎಂದರು.ಅಲ್ಪಸಂಖ್ಯಾತ ಮುಖಂಡ ಮೊಹ್ಮದ್ ರಫೀಕ್ ಟಪಾಲ್ ಮಾತನಾಡಿ, ಈ ರೀತಿ ಪೈಶಾಚಿಕ ಕೃತ್ಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿಯನ್ನು ನಾಗರೀಕ ಸಮಾಜ ತೀವ್ರವಾಗಿ ಖಂಡಿಸಿದ್ದು, ಹೇಯ ಕೃತ್ಯ ಮಾಡಿದವರ ಮೇಲೆ ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ ಆಗ್ರಹಿಸಿದ್ದಾರೆ.ದೇಶದ ನಾಗರಿಕರ ಮೇಲೆ ನಡೆದ ಈ ದಾಳಿ ದುಃಖಕರ ಹಾಗೂ ಅಮಾನವೀಯವಾದುದು. ಇಸ್ಲಾಂ ಧರ್ಮದ ಮೇಲೆ ನಂಬಿಕೆ ಇಟ್ಟು ಬದುಕುವ ಯಾರೊಬ್ಬರೂ ಭಯೋತ್ಪಾದನೆ ಬೆಂಬಲಿಸುವುದಿಲ್ಲ. ಭಗವಂತನೂ (ಅಲ್ಲಾಹು) ಅಮಾಯಕರ ಹತ್ಯೆ ಸಹಿಸುವುದಿಲ್ಲ.. ಭಯೋತ್ಪಾದನೆ ನಮ್ಮ ನೆಲದಿಂದ ಮಟ್ಟ ಹಾಕಬೇಕಾಗಿದೆ. ಕೇಂದ್ರ ಸರಕಾರ ದಿಟ್ಟ ನಿರ್ಧಾರ ಕೈಕೊಳ್ಳಬೇಕು. ಧರ್ಮಾಧಾರಿತ ಭಯೋತ್ಪಾದನೆ ಸಲ್ಲದು. ದೇಶದ ಪ್ರತಿಯೊಬ್ಬರೂ ಇದನ್ನು ಖಂಡಿಸಬೇಕಾಗಿದೆ. ಜಮ್ಮು ಕಾಶ್ಮೀರದಲ್ಲಿಯೇ ಭಯೋತ್ಪದನಾ ದಾಳಿ ಖಂಡಿಸಿ ಪ್ರತಿಭಟನೆ ನಡೆಯುತ್ತಿರುವುದು ಸಾಕ್ಷಿಯಾಗಿದೆ. ಯಾವ ಧರ್ಮವೂ ಅಮಾಯಕರನ್ನು ಕೊಲ್ಲಬೇಕೆಂದು ಹೇಳುವುದಿಲ್ಲ. ಕೊಲ್ಲುವವರು ಮನುಷ್ಯರೆ ಅಲ್ಲ ಎಂಬುದನ್ನು ನಾವಿಂದು ಅರಿಯಬೇಕಿದೆ. ನಾವೆಲ್ಲ ಸರಕಾರದೊಂದಿಗೆ ನಿಲ್ಲೋಣ ಭಯೋತ್ಪಾದನೆ ತಡೆಗಟ್ಟಲು ಸೂಕ್ತ ಕ್ರಮ ಕೈಕೊಳ್ಳಲು ಸಹಕರಿಸೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಬರದ ಬಿಸಿಲು ನಾಡಿಗೆ ಒಕ್ಕರಿಸಿದ ಅಕಾಲಿಕ ಮಳೆ, ಗಾಳಿ, ಸಿಡಿಲಿನ ಹೊಡೆತಕ್ಕೆ ಸಾವು ನೋವುಗಳು ಮತ್ತು ಅಪಾರ ನಷ್ಟಗಳು ಸಂಭವಿಸಿದ್ದು, ಗಿಡ ಮರಗಳು ನೆಲಕ್ಕುರುಳಿದ ಪರಿಣಾಮ ಜನ ಜಾನುವಾರಳಿಗೆ ತೊಂದರೆಯುಂಟಾಗಿ ಜನಜೀವನ ಅಸ್ತವ್ಯಸ್ತವಾದ ಘಟನೆ ಕಲಕೇರಿ ಸಮೀಪದ ಹುಣಶ್ಯಾಳ, ಆಲಗೂರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿ.೨೪ ರ ಸಾಯಂಕಾಲ ಜೋರಾದ ಬಿರುಗಾಳಿ ಸಮೇತ ಸುರಿದ ಮಳೆಗೆ ಸಾಕಷ್ಟು ಗಿಡಮರಗಳು ನೆಲಕ್ಕುರುಳಿದ್ದು, ಜೀವಹಾನಿಯೂ ಸಂಭವಿಸಿದ ಘಟನೆಗಳು ನಡೆದಿವೆ.ಸಾಯಂಕಾಲ ಒಮ್ಮಿಂದೊಮ್ಮೆಲೆ ಬಿರುಗಾಳಿ ಸಮೇತ ಗುಡುಗು, ಮಿಂಚಿನೊಡನೆ ಪ್ರಾರಂಭವಾದ ಮಳೆಯಿಂದ ಸಾಕಷ್ಟು ಅವಘಡಗಳು ಸಂಭವಿಸಿದ್ದು, ಕಲಕೇರಿ ಸಮೀಪದ ಆಲಗೂರ ಗ್ರಾಮದಲ್ಲಿ ಇದೇ ವೇಳೆ ಕುರಿ ಕಾಯಲು ಹೋಗಿದ್ದ ಸುಮಾರು ೧೮ ವರ್ಷದ ಆಕಾಶ ಹೈಯಾಳದಪ್ಪ ಯಂಕಂಚಿ ಎಂಬ ಯುವಕ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ. ಈ ಕುರಿತು ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ವೇಳೆ ಪಕ್ಕದ ಗ್ರಾಮವಾದ ಹುಣಶ್ಯಾಳದಲ್ಲಿ ಮಳೆ ಮತ್ತು ಸಿಡಿಲಿನ ಅವಘಡಕ್ಕೆ ಪ್ರಭುಗೌಡ ನಂದಪ್ಪ ದೇವರಗುಡಿ ಅವರ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಬಾಕಿ ಉಳಿದ ವಿತರಣಾ ಕಾಲುವೆಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಆದೇಶ ಆಹೋರಾತ್ರಿ ಧರಣಿ ಹಿಂಪಡೆದ ರೈತರು.ಸಂಕನಾಳ ಶಾಖಾ ಕಾಲುವೆ ಮುಖಾಂತರ ನಿರ್ಮಾಣಗೊಂಡ ವಿತರಣಾ ಕಾಲುವೆ ಕಾಮಗಾರಿ ೨ ಕಿ.ಮೀ ಬಾಕಿ ಉಳಿದ ಕಾರಣ ಕಳೆದ ಮೂರು ದಿನಗಳಿಂದ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯನ್ನು ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಆದೇಶವಾದ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಛೇರಿಯ ಮುಂಬಾಗದಲ್ಲಿ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯನ್ನು ಹಿಂಪಡೆಯಲಾಗಿದೆಎAದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದ್ದಾರೆ ಧರಣಿ ಸ್ಥಳಕ್ಕೆ ಕೆ.ಬಿ.ಜೆ.ಎನ್.ಎಲ್ ಉಪ ಮುಖ್ಯ ಅಭಿಯಂತರರಾದ ಆಯ್.ಎಲ್.ಕಳಸದ ಇವರು ಆಗಮಿಸಿ ಸರ್ಕಾರದ ಆದೇಶದ ಪ್ರತಿಯನ್ನು ಧರಣಿ ನಿರತ ರೈತರಿಗೆ ಹಸ್ಥಾಂತರಿಸಿದರು ಈ ಸಂದರ್ಭದಲ್ಲಿ ಆಯ್.ಎಲ್.ಕಳಸದ ಮಾತನಾಡಿ ಬಾಕಿ ಉಳಿದ ಕಾಮಗಾರಿ ಹತ್ತು ದಿನಗಳಲ್ಲಿ ಪ್ರಾರಂಬಿಸಲಾಗುವದೆAದು ಭರವಸೆ ನೀಡಿದರು ಆದ್ದರಿಂದ ಧರಣಿಯನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ನಿಧನಕ್ಕೆ ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸಂತಾಪ ಸಂದೇಶ ನೀಡಿರುವ ಸಚಿವ ಶಿವಾನಂದ ಪಾಟೀಲ ಅವರು, ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಸಮಯದಲ್ಲಿ ಸಚಿವರಾಗಿದ್ದ ರಾಮಯ್ಯ ಅವರು, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದಾಗ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದ್ದರು. ಇದೇ ಕಾರಣಕ್ಕೆ ಜನತೆ ರಾಮಯ್ಯ ಅವರನ್ನು ನೀರಿನ ರಾಮಯ್ಯ ಎಂದು ಅಭಿಮಾನದಿಂದ ಕರೆಯುತ್ತಿದ್ದರು.ರಾಮಯ್ಯ ಪ್ರಸ್ತುತ ಸಂದರ್ಭದಲ್ಲಿ ಅವರೊಬ್ಬ ಮಾದರಿ ರಾಜಕಾರಣಿ ಯಾಗಿದ್ದರು ಎಂದು ಸ್ಮರಿಸಿರುವ ಸಚಿವ ಶಿವಾನಂದ ಪಾಟೀಲ ಅವರು, ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ದಯಪಾಲಿಸಲಿ ಹಾಗೂ ಕುಟುಂಬ ವರ್ಗದವರ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪುಸ್ತಕಗಳು ವಿದ್ಯಾರ್ಥಿ ಜೀವನಕ್ಕೆ ಮುಖ್ಯ ಪಾತ್ರವನ್ನು ವಹಿಸುತ್ತವೆ. ವರ್ಗಗಳ ಜೊತೆ ಜೊತೆಗೆ ಗ್ರಂಥಾಲಯಕ್ಕೆ ಭೇಟಿ ನೀಡಿ ಓದುವ ಹವ್ಯಾಸ ಆಸಕ್ತಿ ರೂಡಿಸಿಕೊಳ್ಳಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಬಿ.ಹೊಸಮನಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಂತರ ಓದುವಿಕೆ ವಿದ್ಯಾರ್ಥಿ ಜೀವನಕ್ಕೆ ವಿಕಾಸಕ್ಕೆ ದಾರಿ ದೀಪವಾಗುತ್ತದೆ. ಇಂದಿನ ಹೊಸ ಯುಗಕ್ಕೆ ಉತ್ತಮ ರೀತಿಯ ಕೌಶಲ್ಯ ವೃದ್ಧಿಯಾಗುತ್ತದೆ ಎಂದರು.ಗ್ರಂಥಾಲಯದ ಮುಖ್ಯಸ್ಥ ರೇಣುಕಾ ಅಂಬಲಿ ಅವರು ಮಾತನಾಡಿ, ಪುಸ್ತಕಗಳು ಓದುವುದರಿಂದ ನಮ್ಮ ಸಂಸ್ಕೃತಿಯು ಬೆಳವಣಿಗೆಯ ಸಹಾಯಕಾರಿಯಾಗುತ್ತದೆ ಎಂದು ವಿವರಿಸಿದರು.ಗ್ರಂಥಪಾಲಕ ಪಿ.ಎಮ್. ಮಠ ಅವರು, ಪುಸ್ತಕದ ದಿನಾಚರಣೆಯನ್ನು ಯುನೆಸ್ಕೊ 1995 ಏಪ್ರಿಲ್ 23 ರ0ದು ಅಂತಾರಾಷ್ಟ್ರೀಯ ಪುಸ್ತಕ ದಿನಾಚರಣೆಯನ್ನು ಪ್ರಸಿದ್ಧ ಲೇಖಕರಾದ ಅಂಟಿಗೋವಾ, ಷೇಕ್ಸಪಿಯರ್ ಜನ್ಮ ದಿನದ ಮರಣದ ದಿನದ ನೆನಪಿಗಾಗಿ ಆಚರಣೆ ಮಾಡಿ ಪ್ರತಿ ವರ್ಷ ಒಂದು ಪುಸ್ತಕದ ನಗರವೆಂದು ಘೋಷಣೆ ಮಾಡುತ್ತಾರೆ ಎಂದು ಈ…
ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಸ್ವಾಮೀಜಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಜೀಣೋದ್ಧಾರದಲ್ಲಿ ಲಿಂ. ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಸದಾ ಸ್ಮರಣೀಯವಾಗಿದೆ. ಬಸವನಬಾಗೇವಾಡಿಗೆ ಕೊಡುಗೆ ನೀಡಿದ ಮಹನೀಯರನ್ನು ಸದಾ ಸ್ಮರಣೆ ಮಾಡುವದು ಅಗತ್ಯವಿದೆ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಬಾಲಕಿಯರ ಪದವಿ ಪೂರ್ವ ವಿದ್ಯಾಲಯದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಗುರುವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ, ಜೀಣೋದ್ಧಾರಕ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಲಿಂ.ಸಿಂಹಾಸನರ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಅಗತ್ಯ ಸಿದ್ಧತೆ ಕೈಗೊಂಡಾಗ ಮಾತ್ರ ಇದನ್ನು ಔಚಿತ್ಯಪೂರ್ವವಾಗಿ ಮಾಡಬಹುದು. ಈ ಕಾರ್ಯಕ್ರಮದಲ್ಲಿ ಹೆಚ್ಚು ಜನತೆ ಭಾಗವಹಿಸುವಂತಾಗಬೇಕು. ಅಭಿವೃದ್ಧಿ ಪ್ರಾಧಿಕಾರವು ಮುಂಬರುವ ದಿನಗಳಲ್ಲಿ ಶ್ರಮಿ ಜೀವಿಗಳನ್ನು ಗುರುತಿಸಿ ಲಿಂ.ಸಿಂಹಾಸನ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವಂತಾಗಬೇಕು. ಮುಂಬರುವ ದಿನಗಳಲ್ಲಿ ಲಿಂ.ಸಿಂಹಾಸನ ಅವರ ಪ್ರತಿಮೆ ಇರುವ ಜಾಗೆಯನ್ನು ಇನ್ನಷ್ಟು ಮೆರಗು…
