ಸೈಯದ ಮೊಹಮ್ಮದ ತನ್ವೀರ ಹಾಶ್ಮಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತದ ಮುಸ್ಲಿಮರು ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಭಾರತ ಸರ್ಕಾರದ ಜೊತೆಯಲ್ಲಿ ಇದ್ದೇವೆ. ತಾಯ್ನಾಡಿನ ಸಮಗ್ರತೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಯಾವಾಗಲೂ ಸಿದ್ದ, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ಧರ್ಮಾಧಿಕಾರಿಗಳು, ಹಜರತ್ ಹಾಶಿಂಪೀರ ದರ್ಗಾ ಹಾಗೂ ರಾಜ್ಯಾದ್ಯಕ್ಷರು ಜಮಾತೆ ಅಹಲೆಸುನ್ನತ್ ಸೈಯದ ಮೊಹಮ್ಮದ ತನ್ವೀರ ಹಾಶ್ಮಿ ತಮ್ಮ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕಾಶ್ಮೀರದ ಪಹಲಗಾಮದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿದ್ದು, ಇದರಲ್ಲಿ ೨೮ ಅಮಾಯಕ ಪ್ರವಾಸಿಗರು ಅನ್ಯಾಯವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಅತ್ಯಂತ ಕ್ರೂರ ಮತ್ತು ದುಃಖಕರ. ನಾವು ಭಾರತೀಯ ಮುಸ್ಲಿಮರು, ಈ ಅಮಾನವೀಯ ಮತ್ತು ಅನಾಗರಿಕ ಭಯೋತ್ಪಾದನಾ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಮೃತರ ಕುಟುಂಬಗಳ ದುಃಖವನ್ನು ಹಂಚಿಕೊಳ್ಳುತ್ತೇವೆ ಮತ್ತು ಅವರ ಜೊತೆಯಲ್ಲಿ ಇದ್ದೇವೆ. ಭಾರತ ಸರ್ಕಾರವು ಈ ದುರಂತ ಘಟನೆಯ ತನಿಖೆ ನಡೆಸಬೇಕು, ಭಯೋತ್ಪಾದಕರನ್ನು ತಕ್ಷಣ ಹುಡುಕಿ ಮತ್ತು ಭಯೋತ್ಪಾದಕರಿಗೆ ಪಾಠವಾಗುವಂತೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸುತ್ತೇವೆ.
ಭಯೋತ್ಪಾದನೆಗೆ ಯಾವುದೇ ಧರ್ಮ ಅಥವಾ ಪಂಥವಿಲ್ಲ ಯಾವುದೇ ಭಯೋತ್ಪಾದನಾ ಘಟನೆಯನ್ನು ಧರ್ಮಕ್ಕೆ ತಳುಕು ಹಾಕಬಾರದು ಮತ್ತು ಹಿಂದೂಗಳು, ಮುಸ್ಲಿಮರು, ಸಿಖ್ಯರು, ಕ್ರಿಶ್ಚಿಯನ್ನರ ದೃಷ್ಟಿಯಿಂದ ನೋಡಬಾರದು. ಇಂತಹ ನಿರ್ಣಾಯಕ ಮತ್ತು ಕಷ್ಟದ ಸಮಯದಲ್ಲಿ ನಾವು ಭಾರತೀಯರು ಏಕತೆಯನ್ನು ಪ್ರದರ್ಶಿಸಬೇಕು.
ನಾವು ಈ ಕ್ರೂರ ಘಟನೇಯ ಕುರಿತು ಯಾವುದೇ ರಾಜಕೀಯ ಮಾಡಬಾರದು ಸಮಸ್ತ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಒಂದಾಗಿ ಭಯೋತ್ಪಾದನೇಯ ವಿರುದ್ಧ ಭಾರತ ಸರ್ಕಾರದ ಜೊತೆಯಲ್ಲಿ ಭಯೋತ್ಪಾದನೆ ವಿರುದ್ಧ ಸಮರ ಸಾರಬೇಕು ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು. ಭಾರತದ ಮುಸ್ಲಿಮರು ಸದಾ ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಭಾರತ ಸರ್ಕಾರದ ಜೊತೆ ನಿಲ್ಲುತ್ತಾರೆ ಮತ್ತು ಪ್ರೀತಿಯ ತಾಯ್ನಾಡಿನ ಸಮಗ್ರತೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ. ಸರ್ವಶಕ್ತನಾದ ಅಲ್ಲಾಹನು ನಮ್ಮ ಪ್ರೀತಿಯ ತಾಯ್ತಾಡು ಭಾರತವನ್ನು ಆಶೀರ್ವದಿಸಲಿ ಎಂದು
ಸೈಯದ ಮೊಹಮ್ಮದ ತನ್ವೀರ್ ಹಾಶ್ಮಿ ಹಾರೈಸಿದ್ದಾರೆ.

