Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸುಸ್ಥಿರ ನಾಳೆಗಾಗಿ ಜಲ ಮತ್ತು ವಿದ್ಯುತ್ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ
ವಿಶೇಷ ಲೇಖನ

ಸುಸ್ಥಿರ ನಾಳೆಗಾಗಿ ಜಲ ಮತ್ತು ವಿದ್ಯುತ್ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ. ಶಾಲಿನಿ ರಜನೀಶ್
ಸರ್ಕಾರದ ಮುಖ್ಯ ಕಾರ್ಯದರ್ಶಿ

ಉದಯರಶ್ಮಿ ದಿನಪತ್ರಿಕೆ

ಭೂಮಿ ಮತ್ತು ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಡಲು ಜಲ ಹಾಗೂ ವಿದ್ಯುತ್ನ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ದೈನಂದಿನ ಜೀವನದಲ್ಲಿ ನಾವು ಮಾಡಿಕೊಳ್ಳುವ ಸಣ್ಣ ಬದಲಾವಣೆಗಳೂ ಪರಿಸರದ ಮೇಲೆ ದೊಡ್ಡ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಲ್ಲವು. ನೀರನ್ನು ಉಳಿಸುವುದು ಎಂದರೆ ವಿದ್ಯುತ್ ಅನ್ನು ಸಹ ಉಳಿಸುವುದೇ ಆಗಿದೆ; ಏಕೆಂದರೆ ನೀರನ್ನು ಶುದ್ಧೀಕರಿಸಿ ಮನೆಗಳಿಗೆ ಪೂರೈಸಲು ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಸಲಾಗುತ್ತದೆ. ಆದುದರಿಂದ, ಈ ಎರಡೂ ಅಮೂಲ್ಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಜಲ ಸಂರಕ್ಷಣೆ
ಪ್ರತಿ ಹನಿಯೂ ಅಮೂಲ್ಯ: ಪ್ರತಿಯೊಬ್ಬ ಜೀವಿಯ ಬದುಕಿಗೆ ನೀರು ಅತ್ಯಗತ್ಯ. ಭೂಮಿಯ ಶೇಕಡಾ ೭೦ ರಷ್ಟು ಭಾಗ ನೀರಿನಿಂದ ಕೂಡಿದ್ದರೂ, ಕುಡಿಯಲು ಯೋಗ್ಯವಾದ ಸಿಹಿ ನೀರು ಇರುವುದು ಕೇವಲ ಶೇಕಡಾ ೨ ರಷ್ಟು ಮಾತ್ರ. ಜಲ ಸಂರಕ್ಷಣೆ ಎಂದರೆ ಲಭ್ಯವಿರುವ ಈ ಶುದ್ಧ ನೀರನ್ನು ಸಮರ್ಥವಾಗಿ ಬಳಸುವುದು.
ಇಂದು ಹೆಚ್ಚುತ್ತಿರುವ ಜನಸಂಖ್ಯೆ, ಮಾಲಿನ್ಯ ಮತ್ತು ನಿರ್ಲಕ್ಷ್ಯದ ಬಳಕೆಯಿಂದಾಗಿ ಜಲಕ್ಷಾಮವು ಜಾಗತಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈಗಾಗಲೇ ಎಲ್‌ನಿನೊ ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ವಿಶ್ವದಾದ್ಯಂತ ಸಾಮಾನ್ಯ ಹವಾಮಾನ ಮಾದರಿಗಳು ವ್ಯತ್ಯಯಗೊಳ್ಳುತ್ತಿದ್ದು, ದೇಶದಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಬರಗಾಲದಂತಹ ತೀವ್ರ ಪರಿಸ್ಥಿತಿಗಳು ತಲೆದೋರುತ್ತಿವೆ. ಮಳೆಯ ಕೊರತೆಯಿಂದಾಗಿ ನಮ್ಮ ರೈತರ ಕೃಷಿ ಉತ್ಪಾದನೆಯ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ. ವೇಗವಾದ ನಗರೀಕರಣ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯು ಜಲ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತಿರುವುದರಿಂದ, ಭವಿಷ್ಯದ ಪೀಳಿಗೆಗೆ ನೀರನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ನೀರನ್ನು ಉಳಿಸುವ ಮಾರ್ಗೋಪಾಯಗಳು
ಸೋರಿಕೆ ತಡೆಯಿರಿ: ಸೋರಿಕೆಯಾಗುತ್ತಿರುವ ಕೊಳವೆಗಳು. ಪೈಡ್ಗಳು ಮತ್ತು ನೀರು ಸಂಗ್ರಹ ವ್ಯವಸ್ಥೆಗಳನ್ನು ತಕ್ಷಣ ದುರಸ್ತಿ ಮಾಡಿ.
ಮಿತ ಬಳಕೆ: ಮುಖ ತೊಳೆಯುವಾಗ ಹಾಗೂ ಪಾತ್ರೆ ತೊಳೆಯುವಾಗ ನಳಗಳನ್ನು (ಟ್ಯಾಪ್) ಅನಗತ್ಯವಾಗಿ ತೆರೆದಿಡಬೇಡಿ. ಸ್ನಾನಕ್ಕೆ ಶವರ್ ಬದಲಾಗಿ ಬಕೆಟ್ ಬಳಸಿ.


ಮಳೆನೀರು ಕೊಯ್ದು: ಮನೆ, ಶಾಲೆ, ಕಚೇರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹಣೆಯನ್ನು ಕಡ್ಡಾಯವಾಗಿ ಅನುಸರಿಸಿ.
ಮರುಬಳಕೆ: ಕುಡಿಯುವ ನೀರನ್ನು ತೋಟಗಾರಿಕೆ ಅಥವಾ ವಾಹನ ತೊಳೆಯಲು ಬಳಸಬೇಡಿ: ಬದಲಿಗೆ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಬಳಸಿ. ಸಾಧ್ಯವಾದಷ್ಟು ೩ಖ ಸೂತ್ರಗಳಾದ ಕಡಿಮೆ ಬಳಕೆ ಖeಜuಛಿe), ಮರುಬಳಕೆ (ಖeuse) ಮತ್ತು ಮರು ಸಂಸ್ಕರಣೆ (ಖeಛಿಥಿಛಿಟe) ಮಾದರಿಗಳನ್ನು ಅಳವಡಿಸಿಕೊಳ್ಳಿ.
ಆಧುನಿಕ ಕೃಷಿ: ಕೃಷಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವಿಧಾನಗಳನ್ನು ಅಳವಡಿಸಿ.
ಮೂಲಗಳ ರಕ್ಷಣೆ: ಕೆರೆ, ನದಿ ಹಾಗೂ ಭೂಗರ್ಭ ಜಲಮೂಲಗಳನ್ನು ಮಾಲಿನ್ಯ ಮತ್ತು ಅತಿಕ್ರಮಣದಿಂದ ರಕ್ಷಿಸಿ, ಅಂತರ್ಜಲ ವೃದ್ಧಿಗಾಗಿ ಗಿಡಗಳನ್ನು ನೆಟ್ಟು ಪೋಷಿಸಿ.
ವಿದ್ಯುತ್ ಸಂರಕ್ಷಣೆ: ನಾಳೆಯ ಭವಿಷ್ಯದ ಆಧಾರ: ಆಧುನಿಕ ಜಗತ್ತಿನಲ್ಲಿ ಬೆಳಕು, ಫ್ಯಾನ್, ಮೊಬೈಲ್ ಚಾರ್ಜನಿರ್‌ಂದ ಹಿಡಿದು ದೊಡ್ಡ ಕೈಗಾರಿಕೆಗಳವರೆಗೆ ಎಲ್ಲದಕ್ಕೂ ವಿದ್ಯುತ್ ಅತ್ಯಗತ್ಯ ಆದರೆ, ನಮ್ಮ ದೇಶದ ವಿದ್ಯುತ್ ಅನ್ನು ಹೆಚ್ಚಾಗಿ ಕಲ್ಲಿದ್ದಲು ಸುಡುವ ಮೂಲಕ ಉತ್ಪಾದಿಸಲಾಗುತ್ತಿದೆ. ಇದರಿಂದಾಗಿ ವಾಯು ಮಾಲಿನ್ಯ ಉಂಟಾಗುತ್ತಿರುವುದಲ್ಲದೆ, ಭೂಮಿಯ ತಾಪಮಾನವೂ ಹೆಚ್ಚುತ್ತಿದೆ. ಜವಾಬ್ದಾರಿಯುತ ವಿದ್ಯುತ್ ಬಳಕೆಯಿಂದ ವೆಚ್ಚ ಕಡಿಮೆಯಾಗುವುದಲ್ಲದೆ, ಪರಿಸರ ಮಾಲಿನ್ಯ ತಗ್ಗಿ ಶಕ್ತಿ ಭದ್ರತೆ ಹೆಚ್ಚುತ್ತದೆ.
ರಾಜ್ಯದ ಶೇಕಡಾ ೧೫-೨೦ ರಷ್ಟು ವಿದ್ಯುತ್ ಉತ್ಪಾದನೆಗೆ ನೀರನ್ನೇ ಪ್ರಮುಖವಾಗಿ ಬಳಸಲಾಗುತ್ತಿದೆ. ಒಂದು ವೇಳೆ ನೀರಿನ ಕೊರತೆಯಾದರೆ, ಜಲವಿದ್ಯುತ್ ಉತ್ಪಾದನೆಯೂ ಕುಂಠಿತಗೊಂಡು ನಮ್ಮ ದೈನಂದಿನ ಬಳಕೆಗೆ ಸಿಗುವ ವಿದ್ಯುತ್ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಜಲ ಸಂರಕ್ಷಣೆಯು ವಿದ್ಯುತ್ ಸಂರಕ್ಷಣೆಯೊಂದಿಗೆ ನೇರ ಸಂಪರ್ಕ ಹೊಂದಿದೆ.
ವಿದ್ಯುತ್ ಉಳಿಸುವ ಸರಳ ವಿಧಾನಗಳು
ಅನಗತ್ಯ ಬಳಕೆ ನಿಲ್ಲಿಸಿ: ಬಳಕೆಯಿಲ್ಲದಾಗ ದೀಪಗಳು, ಫ್ಯಾನ್ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆರಿಸಿ. ಚಾರ್ಜಗ್ರಳು ಮತ್ತು ಸಾಧನಗಳನ್ನು ಬಳಕೆಯ ನಂತರ ಸಾಕೆಟ್ಟಿಂದ ಬೇರ್ಪಡಿಸಿ.
ಐಇಆ ಬಳಸಿ: ಸಾಮಾನ್ಯ ಬಲ್ಬುಗಳ ಬದಲಿಗೆ ಶಕ್ತಿ ದಕ್ಷತೆಯುಳ್ಳ ಎಲ್‌ಇಡಿ (ಐಇಆ) ದೀಪಗಳನ್ನು
ನೈಸರ್ಗಿಕ ಬೆಳಕು: ಹಗಲಿನಲ್ಲಿ ಸಾಧ್ಯವಾದಷ್ಟು ನೈಸರ್ಗಿಕ ಬೆಳಕು ಮತ್ತು ಗಾಳಿಯನ್ನು ಮುಕ್ತವಾಗಿ
ಸೌರಶಕ್ತಿ ಆಳವಡಿಕೆ: ಮೇಲ್ಪಾವಣಿ ಸೌರ (Soಟಚಿಡಿ) ವ್ಯವಸ್ಥೆಗಳು ಮತ್ತು ನವೀಕರಿಸಬಹುದಾದ ಶಕ್ತಿ ಮೂಲಗಳನ್ನು ಉತ್ತೇಜಿಸಿ.
ಎಸಿ ತಾಪಮಾನ ನಿಯಂತ್ರಣ: ಏರ್ ಕಂಡೀಷನರ್ಗಳನ್ನು (ಂಅ) ೨೪-೨೬”ಅ ತಾಪಮಾನದಲ್ಲಿ ನಿರ್ವಹಿಸಿ.
ವಿದ್ಯುತ್ ಲೆಕ್ಕಪರಿಶೋಧನೆ: ಶಾಲೆ, ಕಾಲೇಜುಗಳು ಮತ್ತು ಕಚೇರಿಗಳಲ್ಲಿ ನಿಯಮಿತವಾಗಿ ವಿದ್ಯುತ್ ಲೆಕ್ಕಪರಿಶೋಧನೆ (Energy Audit) ನಡೆಸಿ.
ಸಾಮೂಹಿಕ ಜಾಗೃತಿ ಮತ್ತು ಚಟುವಟಿಕೆಗಳು: ಈ ಬದಲಾವಣೆಗಳು ಕೇವಲ ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗಬಾರದು. ಶಾಲೆ, ಕಾಲೇಜು ಮತ್ತು ಕಚೇರಿಗಳಲ್ಲಿ ಜಲ ಮತ್ತು ವಿದ್ಯುತ್ ಸಂರಕ್ಷಣಾ ಪ್ರತಿಜ್ಞಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೆರವಣಿಗೆಗಳು, ಬೀದಿ ನಾಟಕಗಳು, ಪೋಸ್ಟರ್ಗಳು ಹಾಗೂ ಬ್ಯಾನರ್ಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕಿದೆ. ಸಮುದಾಯದ ಭಾಗವಹಿಸುವಿಕೆಯೊಂದಿಗೆ ‘ಜಲ ಸಂರಕ್ಷಣಾ ವಾರ’ ಮತ್ತು ‘ವಿದ್ಯುತ್ ಸಂರಕ್ಷಣಾ ದಿನ’ಗಳನ್ನು ಆಚರಿಸಿ, ಪ್ರತಿಯೊಬ್ಬರಲ್ಲೂ ಜವಾಬ್ದಾರಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.
ನೀರನ್ನು ಮಿತವಾಗಿ ಬಳಸಿ, ಪ್ರಕೃತಿಯನ್ನು ರಕ್ಷಿಸಿ. ಇಂದಿನ ವಿದ್ಯುತ್ ಉಳಿತಾಯವೇ, ನಾಳೆಯ ಭವಿಷ್ಯದ ಆಧಾರ
ಸಾರ್ವಜನಿಕರು ಇಂತಹ ಮಿತವ್ಯಯದ ಅಭ್ಯಾಸಗಳನ್ನು ಸ್ವಯಂಪ್ರೇರಿತರಾಗಿ ರೂಢಿಸಿಕೊಳ್ಳುವುದರಿಂದ ನಮ್ಮ ನಾಡಿಗೆ, ದೇಶಕ್ಕೆ ಮತ್ತು ಈ ಒಟ್ಟಾರೆ ಭೂಮಿಗೆ ಒಳಿತಾಗುತ್ತದೆ. ಬನ್ನಿ ಇಂದೇ ಜಲ ಮತ್ತು ವಿದ್ಯುತ್ ಅನ್ನು ಸಂರಕ್ಷಿಸೋಣ. ಆ ಮೂಲಕ ಸುಸ್ಥಿರತೆ, ಸಮೃದ್ಧಿ ಜೀವನಮಟ್ಟವನ್ನು ಖಚಿತಪಡಿಸೋಣ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಯುಪಿಎಸ್‌ಸಿ ಪರೀಕ್ಷೆಯ ತರಬೇತಿಗಾಗಿ ಅರ್ಜಿ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ
    In (ರಾಜ್ಯ ) ಜಿಲ್ಲೆ
  • ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ
    In (ರಾಜ್ಯ ) ಜಿಲ್ಲೆ
  • ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಯುಪಿಎಸ್‌ಸಿ ಪರೀಕ್ಷೆಯ ತರಬೇತಿಗಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಿವೃತ್ತ ಸೈನಿಕ ಕಾಶೀರಾಯ ಸನ್ಮಾನ ಇಂದು
    In (ರಾಜ್ಯ ) ಜಿಲ್ಲೆ
  • ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುವವರೇ ಶಿಕ್ಷಕರು
    In (ರಾಜ್ಯ ) ಜಿಲ್ಲೆ
  • ಯಾಳವಾರ: ಪ್ರೌಢಶಾಲೆ ಸುವರ್ಣ ಮಹೋತ್ಸವ ಇಂದು
    In (ರಾಜ್ಯ ) ಜಿಲ್ಲೆ
  • ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ದಂತ ಮುರಿತ!
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆ ಪುರಸಭೆಯಿಂದ ಭೀಮನಭಾವಿ ಸ್ವಚ್ಚತೆ
    In (ರಾಜ್ಯ ) ಜಿಲ್ಲೆ
  • ಕಾಶ್ಮೀರ ಸೇಬು ಬೆಳೆದು ಮಾದರಿಯಾದ ಆರಕ್ಷಕ ಭೀಮು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.