Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರಕ್ಕೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಮಂಜೂರು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರಕ್ಕೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಂ.ಬಿ.ಬಿ.ಎಸ್ ಕೋರ್ಸಿಗೆ 50 ಹೆಚ್ಚುವರಿ ಸೀಟುಗಳು ಮಂಜೂರಾಗಿವೆ.ಇದರಿಂದಾಗಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನಲ್ಲಿ ಈ ಬಾರಿ ಒಟ್ಟು 250 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಸಿಗಲಿದೆ.ಕಾಲೇಜು ಈ ವರ್ಷದ ಜನೇವರಿಯಲ್ಲಿ ಹೆಚ್ಚುವರಿ ಸೀಟು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಅದರಂತೆ ಜೂನ್ 2025ರಲ್ಲಿ ನ್ಯಾಶನಲ್ ಮೆಡಿಕಲ್ ಕಮಿಷನ್(National Medical Commission) ಅಧಿಕಾರಿಗಳು ಕಾಲೇಜು ಮತ್ತು ಆಸ್ಪತ್ರೆಗೆ ಆಗಮಿಸಿ ಇಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯಗಳು, ವೈದ್ಯಕೀಯ ಸಲಕರಣೆಗಳು, ಅರ್ಹ ತಜ್ಞವೈದ್ಯರು, ನರ್ಸಿಂಗ್ ಸಿಬ್ಬಂದಿ, ರೋಗಿಗಳ ದಾಖಲಾತಿ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ಮೌಲ್ಯಮಾಪನ ನಡೆಸಿ ವರದಿ…
ಚಡಚಣದ ಸೋಮಶೇಖರ ಪಟ್ಟಣಶೆಟ್ಟಿಯಿಂದ ತಹಶೀಲ್ದಾರಗೆ ಮನವಿ ಉದಯರಶ್ಮಿ ದಿನಪತ್ರಿಕೆ ಚಡಚಣ: ಇತ್ತೀಚಿಗೆ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಡೈಮಂಡ ಪಾರ್ಕ್ ಸಂಪೂರ್ಣ ಕಾನೂನ ಬಾಹೀರವಾಗಿ ನಿರ್ಮಿಸಲಾಗಿದೆ. ಇದು ಸಿಟಿ ಸರ್ವೆಯಲ್ಲಿ ಬರುವದಿಲ್ಲ. ಆದರೂ ಚಡಚಣ ಪ.ಪಂ.ನವರು ಈಗಾಗಲೇ ಸುಮಾರು ೪೦% ಉತಾರೆಗಳನ್ನು ನೀಡಿದ್ದಾರೆ ಎಂದು ಸೋಮಶೇಖರ ಪಟ್ಟಣಶೆಟ್ಟಿ ಆರೋಪಿಸಿ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಅವರು, ಪಟ್ಟಣವು ೨೦೧೬ರಲ್ಲಿ ಗ್ರಾ.ಪಂ.ನಿಂದ ಪ.ಪಂ.ಗೆ ಮೇಲ್ದರ್ಜೆಗೇರಿದ್ದು, ಪಟ್ಟಣವು ಪ.ಪಂ.ಗೆ ಮೇಲ್ದರ್ಜೆಗೇರುವ ಸಮಯದಲ್ಲಿ ಹೊರಡಿಸಿದ ರಾಜ್ಯಪತ್ರದನ್ವಯ ಘೋಷಿತ ಪ.ಪಂ. ವ್ಯಾಪ್ತಿಯಲ್ಲಿರುವ ಸ.ನಂ.ಗಳು ಚಡಚಣ ಗ್ರಾಮ ಠಾಣಾ ೧ ರಿಂದ ೬ರ ವರೆಗೆ, ೪೮ ರಿಂದ ೮೧ರ ವರೆಗೆ, ೯೯ ರಿಂದ ೧೦೭ರ ವರೆಗೆ, ೧೨೨, ೧೨೪ ರಿಂದ ೧೩೫ರ ವರೆಗೆ, ೧೬೩ ರಿಂದ ೧೮೬ರ ವರೆಗೆ, ೧೯೧ ರಿಂದ ೨೧೬ರ ವರೆಗೆ, ೨೧೮ ರಿಂದ ೨೨೩ರ ವರೆಗೆ, ೨೪೨, ೩೪೨ ರಿಂದ ೩೫೯ರ ವರೆಗೆ, ೪೪೪ ರಿಂದ ೪೪೬ರ…
ವೃಕ್ಷಥಾನ್ ಹೆರಿಟೇಜ್ ರನ್- 2025 ಕೋರ್ ಕಮಿಟಿ ಸದಸ್ಯರಿಂದ ಸಂಭ್ರಮಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವನಾಡಿನಲ್ಲಿ ಪ್ರಾರಂಭವಾದ ಕೋಟಿ ವೃಕ್ಷ ಅಭಿಯಾನದ ಯಶೋಗಾಥೆ ವಿಶ್ವಾದ್ಯಂತ ಸದ್ದು ಮಾಡಿದ್ದು, ಅಮೇರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ಕುರಿತು ವಿಶೇಷ ವರದಿ ಪ್ರಕಟಿಸಿದೆ. ಈ ಸಂತಸವನ್ನು ವೃಕ್ಷಥಾನ್ ಹೆರಿಟೇಜ್ ರನ್- 2025 ಕೋರ್ ಕಮಿಟಿ ಸದಸ್ಯರು ಸಸಿ ನೆಡುವ ಮೂಲಕ ಸಂಭ್ರಮಿಸಿದರು.ಶುಕ್ರವಾರ ಬಿ.ಎಲ್.ಡಿ.ಇ ಸಂಸ್ಥೆಯ ಆವರಣದಲ್ಲಿರುವ ವೃಕ್ಷಥಾನ್ ಹೆರಿಟೇಜ್ ರನ್ ಕಚೇರಿಯ ಬಳಿ ನಡೆದ ಕಾರ್ಯಕ್ರಮದಲ್ಲಿ ಇಂಗ್ಲೆಂಡ್ ನಲ್ಲಿ ನೆಲೆಸಿರುವ ವಿಜಯಪುರ ಮೂಲದ ಸಾಫ್ಟವೇರ್ ಎಂಜಿನಿಯರ್ ಸದಾನಂದ ಬಿರಾದಾರ ಅವರು ಸಸಿ ನೆಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಭಗೀರಥ ಎಂ. ಬಿ. ಪಾಟೀಲ ಅವರ ಕನಸಿನ ಕೂಸಾದ ಕೋಟಿ ವೃಕ್ಷ ಅಭಿಯಾನ ಇಂದು ಯಶಸ್ವಿಯಾಗಿ ಇಡೀ ಪ್ರಪಂಚವನ್ನು ತಲುಪಿದೆ. ಅದೇ ರೀತಿ ಜಲ, ನೀರು, ಶಿಕ್ಷಣ ಹಾಗೂ ಆರೋಗ್ಯ ಧ್ಯೇಯವನ್ನೊಳಗೊಂಡಿರುವ ವೃಕ್ಷಥಾನ್ ಹೆರಿಟೇಜ್ ರನ್ ಕೂಡ ಶೀಘ್ರದಲ್ಲಿ ಜಗತ್ತಿನಾದ್ಯಂತ ಖ್ಯಾತಿ ಪಡೆಯಲಿದೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಲ್ಯತಂತ್ರ ವಿಭಾಗದ ವತಿಯಿಂದ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 13ರ ವರೆಗೆ ಆರು ದಿನಗಳ ಕಾಲ ಉರುಪು ಮೂಲವ್ಯಾಧಿ ಮತ್ತು ಸೊಂಟ ನೋವು(ಸಿಯಾಟಿಕಾ) ಉಚಿತ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದೆ.ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 7019656245 ಮತ್ತು 8147740460ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಸಿದ್ದಾಪುರ ಗ್ರಾಮದ ಮುಧೋಳ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸಿಮೆಂಟ್ ಲಾರಿ ಟ್ಯಾಂಕರ್ ಟೈರಗಳು ಕಾಯ್ದು ಆಕಸ್ಮಿಕವಾಗಿ ಬೆಂಕಿ ಹತ್ತಿ ಲಾರಿಯ ಮುಂದಿನ ಭಾಗ ಸುಟ್ಟು ಕರಕಲಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮಾಹಿತಿ ತಿಳಿದು ಬಂದಿದೆ.ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ತಾಲೂಕಿನ ಚಾಲಕ ಜಗದೀಶ ಗುರಪ್ಪ ಪಾಟೀಲ ಸಿಮೆಂಟ್ ಟ್ಯಾಂಕರ್ ಲಾರಿಯನ್ನು ಲೋಕಾಪೂರ ಕಡೆಯಿಂದ ಮುಧೋಳ ಹಾಗೂ ಜಮಖಂಡಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೋಗುವ ಸಂಧರ್ಭದಲ್ಲಿ ಸಿದ್ದಾಪೂರ ಗ್ರಾಮದ ರಸ್ತೆ ಮೇಲೆ ಅಕಸ್ಮಿಕವಾಗಿ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಶಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಶಿಕ್ಷಕರ ದಿನಾಚರಣೆ ಆಚರಿಸಿದ ಈ ಸಂದರ್ಭದಲ್ಲಿ ಗುರುವಿನ ಮಹತ್ವ ಕುರಿತ ಈ ಲೇಖನ ನಿಮಗಾಗಿ.. ಲೇಖನ- ಡಾ ಎಂ.ಎಸ್.ಆಲಮೇಲಯಡ್ರಾಮಿಜಿಲ್ಲಾ ಕಲಬುರ್ಗಿಮೋ. 9740499814 ಉದಯರಶ್ಮಿ ದಿನಪತ್ರಿಕೆ ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ.ಅನಾದಿ ಕಾಲದಿಂದಲೂ ನಾವು, ಗುರುವರ್ಯರನ್ನು ದೇವರ ಸ್ಥಾನದಲ್ಲಿ ಆರಾಧಿಸುತ್ತ ಬಂದಿದ್ದೇವೆ.ಗುರುಬ್ರಹ್ಮಇಲ್ಲಿ ಗುರುವನ್ನು ಬ್ರಹ್ಮದೇವನಿಗೆ ಹೋಲಿಸಲಾಗಿದೆ. ಕಾರಣ, ಬ್ರಹ್ಮದೇವ ಹೇಗೆ ಜಗದ ಸೃಷ್ಠಿಕರ್ತನೋ ಹಾಗೆ ಗುರುವು, ಜ್ಞಾನದ ಸೃಷ್ಟಿಕರ್ತ, ಅಂದರೆ ಹೊಸತನ್ನು ಕಲಿಸಿಕೊಡುವವನು.ಗುರುವಿಷ್ಣುಇಲ್ಲಿ ಗುರುವಿಷ್ಣು ಕಲಿತ ವಿದ್ಯೆಯನ್ನುಪಾಲಿಸುವಂತೆಅಂದ್ರೆ ಸಮರ್ಪಕವಾಗಿ ಉಪಯೋಗಿಸಲು ದಾರಿ ತೋರುವನು.ಗುರುದೇವೋ ಮಹೇಶ್ವರಃಮಹಾದೇವ ಶಿವನು ಅಧರ್ಮ, ಅಂಧಕಾರ,ಅಜ್ಞಾನದ ಸಂಹಾರಕ ಲಯಕಾರನು, ಅಲ್ಪಮತಿಯನು ಅಳಿಸಿಹಾಕಿ ಜ್ಞಾನದ ಜ್ಯೋತಿ ಬೆಳಗಿಸುವ ಮಹಾಜ್ಞಾನಿ.ಗುರುಸಾಕ್ಷಾತ್ ಪರಬ್ರಹ್ಮಗುರುವೇ ಪರಬ್ರಹ್ಮನಿಗೆ ಸಮಾನವಾಗಿ ದೈವಸ್ಥಾನದಲ್ಲಿ ನಿಲ್ಲುವರೆಂದು ಹೇಳಲಾಗುತ್ತದೆ.ಅಂದ್ರೆ ನಮಗೆ ವಿದ್ಯೆ, ಬುದ್ಧಿ, ಸಿದ್ದಿ ಕಲಿಸಿಕೊಟ್ಟು ಅಜ್ಞಾನದಿಂದ ಸುಜ್ಞಾನದ ಕಡೆಗೆ ನಡೆಸುವ ಮಹಾಶಕ್ತಿ.ಗುರುವೆಂದರೆ ಥಟ್ಟಂತ ನೆನಪಿಗೆ ಬರುವವರು, ಆದಿಜಗದ್ಗುರು ಶ್ರೀ ಶಂಕರಾಚಾರ್ಯರು, ರಾಮಕೃಷ್ಣ ಪರಮಹಂಸರು ವೀರಸಂತ ಸ್ವಾಮಿ ವಿವೇಕಾನಂದರು, ಕರುನಾಡ ಮಹಾಜ್ಯೋತಿ, ಸಿದ್ದಗಂಗೆಯ ಡಾ.…
ಲೇಖನ- ಡಾ.ರಾಜಶೇಖರ ನಾಗೂರ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಈ ಜೀವನ ಎನ್ನುವುದು ನಾವು ಹೆಜ್ಜೆ ಇಟ್ಟ ತಕ್ಷಣ ತೆರೆದುಕೊಳ್ಳುವ ಕೆಂಪು ಹಾಸಿಗೆ ( Red carpet) ಖಂಡಿತ ಅಲ್ಲಾ. ಇಲ್ಲಿ ಪ್ರತಿಯೊಂದು ಕ್ರಿಯೆಗೂ, ಪ್ರಕ್ರಿಯೆಗೂ, ಕಾರ್ಯಕ್ಕೂ ಸಮಯ ಬೇಕು. ಆ ಸಮಯ ಬರುವವರೆಗೆ ಕಾಯುವ ತಾಳ್ಮೆ ನಮಗಿರಬೇಕು. ಯಾರು ಈ ತಾಳ್ಮೆಯನ್ನು ಮೈಗೂಡಿಸಿಕೊಂಡು ಸಾಗುತ್ತಾರೋ ಅವರು ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಲ್ಲರು. ಏನನ್ನಾದರೂ ಪಡೆಯಬಲ್ಲರು.ತಾಯಿಯ ಗರ್ಭದಿಂದ ಮಗು ಜನಿಸಲು 9 ತಿಂಗಳು ತಾಳ್ಮೆಯಿಂದ ಕಾಯಬೇಕು. ಒಂದು ರಾತ್ರಿ, ಹಗಲಾಗಿ ಪರಿವರ್ತನೆ ಹೊಂದಲು 12 ಗಂಟೆಗಳು ಕಳೆಯಲೇ ಬೇಕು. ಒಂದು ಮತ ಚಲಾಯಿಸುವ ಹಕ್ಕು ಪಡೆಯಲು 18 ವರ್ಷದವನಾಗಲೇ ಬೇಕು. ಹೀಗೆ ಬದುಕಿನಲ್ಲಿ ತಾಳ್ಮೆಯೇ ಅಮೂಲ್ಯ ಸಂಪತ್ತು.ಈ ಬದುಕನ್ನು ಒಲಿಸಿ ಕೊಳ್ಳುವುದು ಎಂದರೆ ದೇವರನ್ನು ತಾಳ್ಮೆಯಿಂದ ಒಲಿಸಿಕೊಂಡಂತೆ. ತಾಳ್ಮೆ ಇಲ್ಲದ ವರ್ತನೆ ನಮ್ಮನ್ನು ಎಲ್ಲಿಯೂ ಕೊಂಡೊಯುವುದಿಲ್ಲ. ಈ ತಾಳ್ಮೆಯ ಮಹತ್ವವನ್ನು ಒಂದು ಘಟನೆಯ ಮೂಲಕ ಪ್ರಸ್ತುತಪಡಿಸುತ್ತೇನೆ. ಮಹಾಭಾರತದ ಅನುಷಾಸನ ಪರ್ವದಲ್ಲಿ ಭೀಷ್ಮ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಚಡಚಣ ತಾಲೂಕಿನ ಲೋಣಿ ಗ್ರಾಮದ ಯುವಕ ಗುರುಬಾಳಯ್ಯ ತಂ.ಶ್ರೀಶೈಲ ಹಿರೇಮಠ ವ.೩೨. ಲೋಣಿ ಕ್ರಾಸ್ ಹತ್ತಿರ ಇರುವ ಚನ್ನಪ್ಪ ದಾಭಾ ದಿಂದ ಮರಳಿ ತನ್ನ ಊರಾದ ಲೋಣಿ ಬಿ.ಕೆ.ಗ್ರಾಮಕ್ಕೆ ಬುಧವಾರ ರಾತ್ರಿ ಸುಮಾರು ೧೨.೩೦ ರ ಸಮಯದಲ್ಲಿ ದ್ವೀಚಕ್ರ ವಾಹನದ ಮೇಲೆ ಹೋಗುತ್ತಿರುವ ಸಮಯಲ್ಲಿ ದ್ವೀಚಕ್ರ ವಾಹನದ ಟೈಯರ್‌ಗಳು ಸ್ಕಿಡ್ ಆಗಿ ಬಿದ್ದು ತಲೆಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದು ಚಡಚಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಚಡಚಣ ಪಿಎಸ್‌ಐ ಪ್ರವೀಣಕುಮಾರ ಗರೇಬಾಳ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ರಾಂಪೂರ ರಸ್ತೆಯಲ್ಲಿರುವ ಸಮರ್ಥ ವಿದ್ಯಾವಿಕಾಸ ವಿವಿದೋದ್ಧೇಶಗಳ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಶಾಲಾ ಮಕ್ಕಳ ಸಹಯೋಗದಲ್ಲಿ ಸೆ.೦೫ ಶುಕ್ರವಾರದಂದು ಮದ್ಯಾಹ್ನ ೩:೩೦ಗಂಟೆಗೆ ಶಾಲಾ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ತಿಳಸಿದ್ದಾರೆ.ಕಾರ್ಯಕ್ರಮವನ್ನು ಮಾಜಿ ವಿಪ ಸದಸ್ಯ ಅರುಣ ಶಹಾಪೂರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ, ಸೋಮನಾಳ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಆರ್.ಎಸ್.ನೀರಲಗಿ ಆಗಮಿಸಲಿದ್ದಾರೆ. ಗೌರವ ಉಪಸ್ಥಿತಿಯನ್ನು ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಶಾಲಾ ಮುಖ್ಯಗುರುಮಾತೆ ಎಸ್.ಆಯ್.ಅಸ್ಕಿ ಹಾಗೂ ಎಂ.ಪಿ.ಬುಕ್ಕಾ ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ವಹಿಸುವರು ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಾನವನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು ಎಂದು ವಾರದ ಕಣ್ಣಿನ ಆಸ್ಪತ್ರೆಯ ಡಾ.ಸುಷ್ಮಾ ವಾರದ ಹೇಳಿದರು.ಸಿಂದಗಿ ಪಟ್ಟಣದ ಜಿ.ಪಿಪೋರವಾಲ ಕಲಾ ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್, ಎನ್.ಸಿಸಿ. ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ಅಡಿಯಲ್ಲಿ ವಾರದ್ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಅಂತರಾಷ್ಟ್ರೀಯ ನೇತ್ರದಾನ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೇತ್ರದಾನ ಮಹಾದಾನ. ಮಾನವನ ದೇಹದ ಜೊತೆಗೆ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಬೇಕು. ಮಾನವನ ದೇಹಕ್ಕೆ ಸಾವು ಬರುತ್ತದೆ. ಆದರೆ ಕಣ್ಣಿಗೆ ಸಾವಿಲ್ಲ. ಕಣ್ಣುಗಳು ಅಮೂಲ್ಯ ಅಂಗಗಳು. ಕಣ್ಣುಗಳ ಆರೈಕೆಯಷ್ಟೇ ರಕ್ಷಣೆಯೂ ಮುಖ್ಯ.ಇತ್ತೀಚಿನ ದಿನಮಾನಗಳಲ್ಲಿ ಮೊಬೈಲ್‌ನ ಅತಿಯಾದ ಬಳಕೆಯಿಂದ ಮಕ್ಕಳು ಮತ್ತು ವಯೋವೃದ್ಧರಲ್ಲಿ ದೃಷ್ಟಿ ದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ ಎಂದು ಕಳವಳ ವ್ಯಕ್ತಪಡಿಸಿದರು.ಈ ವೇಳೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣೆ…
