ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಸಮಿಪದ ತಿಳಗೂಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ೧೧ ಅಡಿ ಎತ್ತರದ ಅಶ್ವಾರೂಡ ಬಸವಣ್ಣನವರ ಮೂರ್ತಿ ಪ್ರತಿಸ್ಥಾಪನೆ,ಧರ್ಮ ಸಭೆ,ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೇ.೪ ರಂದು ರವಿವಾರ ಸಂಜೆ ೪ ಘಂಟೆಗೆ ನಡೆಯಲಿದೆ.
ಕಾರ್ಯಕ್ರಮದ ನಿಮಿತ್ಯವಾಗಿ ಮೇ.೪ ರಂದು ಬೆಳಿಗ್ಗೆ ೮ ಘಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಗಜ್ಯೋತಿ ಬಸವೆಶ್ವರರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಸಂಜೆ ೪ ಘಂಟೆಗೆ ನೂತನವಾಗಿ ನಿರ್ಮಿಸಿದ ಅಶ್ವಾರೂಡ ಮೂರ್ತಿಯ ಪ್ರತಿಸ್ಥಾಪನೆ ಹಾಗೂ ಲೋಕಾರ್ಪಣೆ, ಹಾಗೂ ಧರ್ಮ ಸಭೆ ಕಾರ್ಯಕ್ರಮ ನಡೆಯಲಿದ್ದು, ಚಿಗರಹಳ್ಳಿಯ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಸಿದ್ದಬಸವ ಕಭೀರ ಮಹಾಸ್ವಾಮಿಗಳು ಹಾಗೂ ತಿಳಗೂಳದ ಭ್ರಹ್ಮ ವಿಧ್ಯಾಶ್ರಮದ ಮಹೇಶ್ವರಾನಂದ ಸ್ವಾಮಿಗಳು ಸಾನಿಧ್ಯವನ್ನು ವಹಿಸುವರು, ಮಹಾಂತಯ್ಯ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದು, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಕಾರ್ಯಕ್ರಮವನ್ನು ಉದ್ಘಾಟಿಸುವರು,
ವಿಶೇಷ ಭಾಷಣಕಾರರಾಗಿ ಬೆಂಗಳೂರಿನ ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಭಾಗಿಯಾಗುವರು.
ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಶರಣಪ್ಪ ಸುಣಗಾರ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಚಭನೂರ, ಸಿದ್ದು ಬುಳ್ಳಾ, ಮುನ್ನಾ ಸಿರಸಗಿ, ಸಾಯಿನಾಥ ವಾಲಿಕಾರ, ಕಲಕೇರಿ ಪಿಎಸ್‌ಐ ಸುರೇಶ ಮಂಟೂರ ಸೇರಿದಂತೆ ಇತರರು ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

