Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 06, 2026

ಕೊಪ್ಪಳ ಹನುಮಂತ ಹಳ್ಳಿಕೇರಿಗೆ ರೂ.4ಲಕ್ಷ ಪರಿಹಾರ ಮಂಜೂರು

2028ಕ್ಕೆ ರಾಜ್ಯದಲ್ಲಿ ಎನ್.ಡಿ.ಎ ಕೈಗೆ ಅಧಿಕಾರದ ಚುಕ್ಕಾಣಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಸವಣ್ಣ ನಾಗರಿಕ ಸಮಾಜದ ಬೆಳಕು :ಜಾಲೋಜಿ
(ರಾಜ್ಯ ) ಜಿಲ್ಲೆ

ಬಸವಣ್ಣ ನಾಗರಿಕ ಸಮಾಜದ ಬೆಳಕು :ಜಾಲೋಜಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಚಿಕ್ಕಪಡಸಲಗಿ: ಬಸವಣ್ಣನವರು ನಾಗರಿಕ ಸಮಾಜದ ಬೆಳಕಾಗಿದ್ದಾರೆ.ಅವರ ಆದರ್ಶತನದ ಕಾಯಕ ತತ್ವಾದರ್ಶಗಳು ನಮಗೆಲ್ಲ ಪ್ರೇರಣಾದಾಯಕವಾಗಿವೆ. ಅಣ್ಣ ಬಸವೇಶ್ವರ ಕಾಯಕ ವಿಚಾರ,ಮಂಥನಗಳು ಸರಳತೆಯ ಶ್ರೇಷ್ಠತೆ ಕಂಡಿವೆ.ಬಸವ ಕಾಯಕ ಮಿಡಿತ ಜನಮನದಲ್ಲಿ ಪೂಜ್ಯತೆ ಭಾವ ತೋರಿವೆ. ನೈಜತೆಯ ಹೊಳಪಿನಲ್ಲಿ ಮಿನುಗಿವೆ.ಅವು ಜಗದಗಲಕ್ಕೆ ಸಂದಿವೆ ಎಂದು ಪ್ರಭಾರಿ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಅಭಿಪ್ರಾಯಿಸಿದರು.
ಜಗದ್ಗುರು ತೋಂಟದಾರ್ಯ ವಿದ್ಯಾಪೀಠ, ಗದಗ ಸಂಸ್ಥೆಯ ವತಿಯಿಂದ ಚಿಕ್ಕಪಡಸಲಗಿ ಗ್ರಾಮದಲ್ಲಿ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಬಸವಣ್ಣನವರ 892 ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವೇಶ್ವರರ ಮಾನವೀಯ ಮೌಲ್ಯಗಳು ಆದರ್ಶಪ್ರಾಯಗಳಾಗಿವೆ. ಕಾಯಕ ನಿಷ್ಟೆಗೆ ಆದ್ಯತೆ ನೀಡಿ ಸಾಮಾಜಿಕ ಕಳಕಳಿ ಮೆರೆದಿರುವ ಬಸವಣ್ಣನವರು ತಮ್ಮ ಜ್ಞಾನಯೋಗದಿಂದ ಜಗಕ್ಕೆ ಸದಾ ಒಳಿತು ಬಯಸಿ ಮಹಾತ್ಮರಾಗಿದ್ದಾರೆ ಎಂದರು.
ಒಳಿತು ಭಾವಗಳ ಸಾಂಸ್ಕೃತಿಕ ನಾಯಕ, ಕಾಯಕಯೋಗಿ ಬಸವ ಶರಣರ ತತ್ವ, ಸಂದೇಶಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವರ ಅಪ್ರತಿಮ ಆಚಾರ,ವಿಚಾರ ಪವಿತ್ರವಾಗಿವೆ.ಸಮಸಮಾಜದ ಕನಸುಗಾರ ಬಸವಣ್ಣನವರ ಜೀವನ ಚರಿತ್ರೆಯ ಯಶೋಗಾಥೆ ಅರ್ಥವತ್ತಾಗಿದೆ. ಮೈಮನ ಪುಳುಕುವಂತೆ ತುಂಬಾ ವೀರೋಚಿತವಾಗಿದೆ. ಕರುನಾಡಿನ ಬಸವ ಮನುಕುಲದ ಜೀವ ಚೈತ್ರವಾಗಿದ್ದಾರೆ.ಅವರ ವೈಚಾರಿಕ ಭಾವ,ಸಮಾನತೆ ಪರಿಕಲ್ಪನೆ ಅನನ್ಯತೆ ರೂಪದಲ್ಲಿವೆ ಎಂದು ಬಣ್ಣಿಸಿದರು.
ಮಹಾನ್ ಮಾನವತಾವಾದಿ ಬಸವಣ್ಣ ಸಮಾಜ ಸುಧಾರಣೆಯ ಒಳಿತಿಗಾಗಿ ಹಗಲಿರುಳು ತಡಕಾಡಿದ್ದಾರೆ.12 ನೇ ಶತಮಾನದಲ್ಲಿ ಹವಣಿಸಿ ಸಕಲರ ಕಣ್ಣು ತೆರೆಸಿದ್ದಾರೆ.ಅವರ ಪ್ರಾಂಜಲ್ಯ ಮನಸ್ಸಿಗೆ, ದೂರದೃಷ್ಟಿಯ ತತ್ವ ನೀತಿಗಳಿಗೆ ಜನಸ್ತೋಮ ಅಪ್ಪಿಕೊಂಡು,ಒಪ್ಪಿಕೊಂಡು ಹೃದಯದಿಂದ ಮನ್ನಣೆ ನೀಡಿದ್ದಾರೆ. ಈ ಸಾಮಾಜಿಕ ಸುಧಾರಣಾ ಪರ್ವತದ ಜೀವಕೋಶ ಬಸವ ತರಂಗ ಮೌಲ್ಯಯುತ ಬದುಕಿನ ತಿಳಿ ಸಾರ ಮಾಮಿ೯ಕವಾಗಿ ಹೇಳಿಕೊಟ್ಟಿದ್ದಾರೆ. ಮಾನವೀಯ ಗುಣ ವಚನ ಭಂಡಾರದಿಂದ ಉತ್ಕರ್ಷಣಗೊಳಿಸಿದ್ದಾರೆ.ಬಸವ ಕವಿಯ ಕಲ್ಯಾಣೋತ್ತರದ ಚಿಂತನೆಗಳು, ಸಿದ್ಧಾಂತಗಳು ನಿಷ್ಟೆ ಭಕ್ತಿ ಹೂರಣದ ನಿಷ್ಕಲ್ಮಶತೆ ಪರಿಧಿಯಲ್ಲಿ ಈ ಪ್ರಜಾಪ್ರಭುತ್ವದ ನಾಡಿ,ಮಿಡಿತಗಳಲ್ಲಿ ಮೆರೆದಿವೆ. ಬಸವಣ್ಣನವರ ವಿಶಾಲ ಮನೋ ಸ್ಮೃತಿಯ ಆವಣೀ೯ಯ ಕಾಯಕ ಚರಿತ್ರೆ ಕೊಡುಗೆ ಸಮಾಜಕ್ಕೆ ಧಕ್ಕಿದರಿಂದ ಇಂದು ಅವರು ಅಮರಾಗಿ ಜನರ ಮನದಲ್ಲಿ ನೆಲೆಸಿದ್ದಾರೆ ಎಂದರು.
ಶಾಲಾ ಮಕ್ಕಳು ಇಂಥ ಮಹಾನ ಪುರುಷರ ಚರಿತೆಗಳ ಕುರಿತು ಓದಿ ತಿಳಿದುಕೊಳ್ಳಬೇಕು.ಬಸವಣ್ಣನವರ ಸಂದೇಶ, ಬೋಧನೆ ತತ್ವಾದರ್ಶಗಳು ಸ್ಪೂತಿ೯ಯಿಂದ ಸ್ವೀಕರಿಸಿ ಒಳ್ಳೆಯತನ ಕಾಣಬೇಕು. ಯಾವುದೇ ರೀತಿಯ ಕೆಟ್ಟತನ,ದುಷ್ಟತನ,ದುಶ್ಚಟಗಳಿಗೆ ಒಲವು ತೋರಿ ಜೀವನ ಹಾಳು ಮಾಡಿಕೊಳ್ಳಬಾರದು.ಬದುಕು ಸಂಕೀಣಾ೯ವಸ್ಥೆಯಲ್ಲಿ ಸಿಲುಕುದಂತೆ ಎಚ್ಚರಿಕೆ ವಹಿಸಿ ಸುಂದರ ಜೀವನ ರೂಪಿಸಿಕೊಳ್ಳಬೇಕು. ಮೌಲ್ಯಗಳ ತೋರಣದಲ್ಲಿ ಉತ್ತಮ ಉದಾತ್ತ ಜೀವನ ನಿಮ್ಮದಾಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಮುಖ್ಯಗುರು ಬಸವರಾಜ ಜಾಲೋಜಿ ಸಲಹೆ ನೀಡಿದರು.
ಬಸವ ಜಯಂತಿ ನಿಮಿತ್ಯ ಗುರು ಬಳಗ ಹಾಗೂ ಶಾಲಾ ಮಕ್ಕಳ ಸಮೂಹ ವಿಶ್ವಗುರು ಬಸವಣ್ಣನವರ, ವೈಚಾರಿಕ ಜಗದ್ಗುರು ಲಿಂ,ತೋಂಟದ ಸಿದ್ದಲಿಂಗ ಪೂಜ್ಯರ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರಗಳಿಗೆ ಭಕ್ತಿಪುಷ್ಪ ನಮನ ಸಲ್ಲಿಸಿ ಪೂಜಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 06, 2026

ಕೊಪ್ಪಳ ಹನುಮಂತ ಹಳ್ಳಿಕೇರಿಗೆ ರೂ.4ಲಕ್ಷ ಪರಿಹಾರ ಮಂಜೂರು

2028ಕ್ಕೆ ರಾಜ್ಯದಲ್ಲಿ ಎನ್.ಡಿ.ಎ ಕೈಗೆ ಅಧಿಕಾರದ ಚುಕ್ಕಾಣಿ

ಕೆಬಿಜೆಎನ್‌ಎಲ್ ಅಧಿಕಾರಿ ಹಾದಿಮನಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 06, 2026
    In ದಿನಪತ್ರಿಕೆ
  • ಕೊಪ್ಪಳ ಹನುಮಂತ ಹಳ್ಳಿಕೇರಿಗೆ ರೂ.4ಲಕ್ಷ ಪರಿಹಾರ ಮಂಜೂರು
    In (ರಾಜ್ಯ ) ಜಿಲ್ಲೆ
  • 2028ಕ್ಕೆ ರಾಜ್ಯದಲ್ಲಿ ಎನ್.ಡಿ.ಎ ಕೈಗೆ ಅಧಿಕಾರದ ಚುಕ್ಕಾಣಿ
    In (ರಾಜ್ಯ ) ಜಿಲ್ಲೆ
  • ಕೆಬಿಜೆಎನ್‌ಎಲ್ ಅಧಿಕಾರಿ ಹಾದಿಮನಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ: ಸಂಕನಾಳ ರೈತರಿಂದ ಎಸ್‌ಎಲ್‌ಒ ಕಚೇರಿಗೆ ಮುತ್ತಿಗೆ
    In (ರಾಜ್ಯ ) ಜಿಲ್ಲೆ
  • ಕನ್ನಡದ ಉಳಿವಿಗಾಗಿ ಹೋರಾಟ ಅಗತ್ಯ :ಸಂಗೀತಾ ರಾಠೋಡ
    In (ರಾಜ್ಯ ) ಜಿಲ್ಲೆ
  • ಕನ್ನಡವೆಂದರೆ ನಮ್ಮ ಸಂಸ್ಕೃತಿಯ ಹಿರಿಮೆ :ಹೈಯ್ಯಾಳಕರ
    In (ರಾಜ್ಯ ) ಜಿಲ್ಲೆ
  • ಮುಂಬಯಿ ರೈಲ್ವೆಯನ್ನು ಇಂಡಿ ನಿಲ್ದಾಣದಲ್ಲಿ ನಿಲ್ಲಿಸಲು ಒತ್ತಾಯ
    In (ರಾಜ್ಯ ) ಜಿಲ್ಲೆ
  • ಗರ್ಭಿಣಿಯರ ಆರೈಕೆ, ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡಿ
    In (ರಾಜ್ಯ ) ಜಿಲ್ಲೆ
  • ಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ತನ್ನಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.