ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸಾಂಪ್ರದಾಯಿಕವಾಗಿ ಗಾಣದಿಂದ ಎಣ್ಣೆ ತೆಗೆಯುವ ಬೆಂಗಳೂರು ದಕ್ಷಿಣ ಜಿಲ್ಲೆಯ ವಾಸಿಗಳಾದ ಶಿವನಗೌಡ ಜಿ ಪಾಟೀಲ್ ರವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ದೊಡ್ಡಬಳ್ಳಾಪುರ ವತಿಯಿಂದ ಪ್ರತಿ ವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾಗಿರುವ ಡಾ ಹುಲಿಕಲ್ ನಟರಾಜ್ ತಿಳಿಸಿದರು.
ಮೇ 1 ಗುರುವಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಮೀಪದ ರಬಕವಿಯ ಶ್ರೀ ಶಿವದಾಶಿವಯ್ಯ ಸಮುದಾಯ ಭವನದಲ್ಲಿ ನಡೆದ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ-2025. ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಜಿ ಜಗದೀಶ್, ಜಿಲ್ಲಾ ಕಾರ್ಯದರ್ಶಿ ಡಾ. ಕೆ ಜಿ ರಾವ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಇದ್ದರು.
ಶಿವನಗೌಡ ಜಿ ಪಾಟೀಲ್ ಸತತವಾಗಿ 25 ವರ್ಷಗಳಿಂದ ಉತ್ತಮ ಆರೋಗ್ಯಕ್ಕಾಗಿ ಕಲ್ಲಿನ ಎತ್ತಿನಗಾಣದಿಂದ ಸಾಂಪ್ರದಾಯಿಕವಾಗಿ ಶ್ರೇಷ್ಠ ಗುಣಮಟ್ಟದ ಕಡಲೆ ಕಾಯಿ’; ಕೊಬ್ಬರಿ; ಎಳ್ಳು ಸೂರ್ಯಕಾಂತಿ ಇತ್ಯಾದಿ ಒಟ್ಟು ಎಂಟು ಅಡುಗೆ ಎಣ್ಣೆಗಳನ್ನು ತಮ್ಮ ನಿರಂತರ ಕಾಯಕದೊಂದಿಗೆ ಗಾಣದ ಎಣ್ಣೆಯನ್ನು ಮನೆಯ ಬಾಗಿಲಿಗೆ ತಲುಪಿಸಿ ಲಕ್ಷಾಂತರ ಕುಟುಂಬಗಳ ಆರೋಗ್ಯ ಆಪ್ತರಕ್ಷಕರಾಗಿದ್ದಾರೆ ಎಂದು ಕೋಶಾಧ್ಯಕ್ಷ ಎಸ್ ಆರ್ ಅರುಣ್ ರವರು ತಿಳಿಸಿದರು.

