Author: editor.udayarashmi@gmail.com

ವಚನಗಳು ಮತ್ತು ಬಸವ ತತ್ವಗಳನ್ನು ವಿಶ್ವದ ಐದಾರು ಪ್ರಮುಖ ಭಾಷೆಗಳಿಗೆ ಭಾಷಾಂತರಿಸಲು ರೂ.5 ಕೋ. ಆರ್ಥಿಕ ನೆರವು ಘೋಷಿಸಿದ ಸಚಿವ ಎಂ.ಬಿ.ಪಾಟೀಲ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಚನಗಳು ಮತ್ತು ಬಸವ ತತ್ವಗಳನ್ನು ಜಗತ್ತಿನ ಪ್ರಮುಖ ಐದಾರು ಭಾಷೆಗಳಿಗೆ ಭಾಷಾಂತರಿಸಲು ರೂ.5 ಕೋ. ಆರ್ಥಿಕ ನೆರವು ನೀಡುವುದಾಗಿ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆರವಿವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ My Me is Thee (ನನ್ನೊಳಗಿನ ನಾನು ನೀನೇ) ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಡಿವೈಎಸ್ಪಿ ಬಸವರಾಜ ಯಲಿಗಾರ ಅವರ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.ಬಸವಾದಿ ಶರಣರು ಜಗತ್ತಿನಲ್ಲಿ ಮೊದಲ ಸಂಸತನ್ನು ಸ್ಥಾಪಿಸಿ ಎಲ್ಲ ಕಾಯಕ ವರ್ಗದವರಿಗೆ ಪ್ರಾತಿನಿಧ್ಯ ನೀಡಿ ಸಮ ಮತ್ತು ಸುಂದರ ಸಮಾಜ ನಿರ್ಮಿಸುವ ಕನಸು ಕಂಡಿದ್ದರು. ಲಿಂಗಾಯಿತ ಜಾತಿಯಲ್ಲ. ಅದು ಜಾತಿ ರಹಿತ ಧರ್ಮ. ಅಂದು ಕಲ್ಯಾಣ ಕ್ರಾಂತಿ ನಡೆಯದಿದ್ದರೆ ಇಂದು ಇಂದು ಇಡೀ ದೇಶವೇ ಬಸವ…

Read More

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ ತಂದು ನೀರು, ರಸ್ತೆ, ವಿದ್ಯುತ್, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ರಾತ್ರಿ ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ ನವೀಕರಣ ಯೋಜನೆಯಡಿ ರೂ. 980 ಲಕ್ಷ ವೆಚ್ಚದ ಯರಗಟ್ಟಿ- ಬಬಲೇಶ್ವರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 15ರಲ್ಲಿ ಬರುವ 88.90 ಕಿ. ಮೀ. ಯಿಂದ 11.82 ಕಿ. ಮೀ. ವರೆಗೆ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಬಬಲೇಶ್ವರ ಮತಕ್ಷೇತ್ರದಲ್ಲಿ ಅಂದಾಜು ಪ್ರತಿ ಒಂಬತ್ತು ಕಿ. ಮೀ. ಒಂದರಂತೆ 110 ಕೆ. ವಿ. ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಬಬಲೇಶ್ವರ ಮತ್ತು ತಿಕೋಟಾ ಎರಡೂ ತಾಲೂಕುಗಳಲ್ಲಿ ತಲಾ ಒಂಬತ್ತರಂತೆ ಒಟ್ಟು 18…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲ್ಲೂಕಿನ ಮರೇಗುದ್ದಿ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ 1997-98 ಸಾಲಿನ 7 ನೇ ತರಗತಿಯ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನದ ಕಾರ್ಯಕ್ರಮದಲ್ಲಿ ವಿದ್ಯೆಯನ್ನು ಕಲಿಸಿದ ಗುರುವಿಗೆ ಹೂವಿನ ಸುರಿಮಳೆಗೈದು ತೆರೆದ ವಾಹನದಲ್ಲಿ ವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಿದರು.70 ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುವಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಸನ್ಮಾನಿಸಿ ಗೌರವಿಸಿದರು.ನಿವೃತ್ತ ಶಿಕ್ಷಕ ಎಸ್.ಪಿ.ಮಠಪತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಶಾಲಾ ಮುಖ್ಯ ಶಿಕ್ಷಕಿ ಆರ್.ಬಿ. ಪಾಟೀಲ ಮಾತನಾಡಿ, ಶಿಕ್ಷಕರ ಕಣ್ಣಿನಲ್ಲಿ ತಾವುಗಳು ಕಲಿಸಿದ ಮಕ್ಕಳ ಚಿತ್ರಣ ಕಾಣಿಸುತ್ತದೆ. ಇಂತಹ ಕಾರ್ಯಕ್ರಮ ಮಾಡುವದರಿಂದ ಮುಂದಿನ ಮಕ್ಕಳಿಗೆ ಮಾರ್ಗದರ್ಶನವಾಗುತ್ತದೆ. ನಮ್ಮ ಶಾಲೆಯಲ್ಲಿ 72 ಮಕ್ಕಳು 7 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು. ಎಲ್ಲ ಮಕ್ಕಳಿಗೋಸ್ಕರ ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಿಗಾಗಿ, ನಮ್ಮ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಧನ ಸಹಾಯ ಹಾಗೂ ಸಹಕಾರವನ್ನು ನೀಡಿದರೆ ಮಾತ್ರ ಶಾಲೆಯು ಅಭಿವೃದ್ಧಿಯಾಗಲು ಸಾಧ್ಯ…

Read More

ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಬ್ಯಾಂಕ್ ಪಡೆದ ನಿಖಿಲ ಸೊನ್ನದ ಸಲಹೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅಂಕಗಳ ಬೆನ್ನತ್ತಿ ಹೋಗದೇ ನಿಮ್ಮ ಹಿಂದೆಯೇ ಓಡೋಡಿ ಬರುವ ರೀತಿಯಲ್ಲಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ‌ರ್ಯಾಂಕ್ ಪಡೆದ ವಿದ್ಯಾರ್ಥಿ ನಿಖಿಲ ಸೊನ್ನದ ಹೇಳಿದರು.ನಗರದ ರಾಯಲ್ ಪ್ಯಾಲೇಸ್ ಲೇಸ್ ಕಾಲೇಜಿನ ಸಭಾಭವನದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಧ್ಯಯನದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಕಾರ್ಯಾಗಾರದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ವಿಷಯಗಳು ಅರ್ಥವಾಗದೇ ಇದ್ದಲ್ಲಿ ಹುಡುಕಿ ಅಧ್ಯಯನ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಡಾ.ಸಿದ್ದು ಸೊನ್ನದ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಕೊಂಡರೆ ಮಾತ್ರ ಯಶಸ್ವಿ ಪಡೆಯಲು ಸಾಧ್ಯ. ಮಕ್ಕಳ ಸಾಧನೆಗಾಗಿ ತಂದೆ-ತಾಯಿ ಪೂರ್ಣಾವಧಿ ಶಿಕ್ಷಕರಾಗಬೇಕು. ಮಕ್ಕಳ ಬೆಳವಣಿಗೆ ಕೂಡ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಮಕ್ಕಳ ಶಿಕ್ಷಣ ಕೆಳಮಟ್ಟದಲ್ಲಿಯೇ ಗಟ್ಟಿಯಾಗಿರಬೇಕು. ವಿದ್ಯೆ ಅರಿತುಕೊಂಡ ವಿದ್ಯಾರ್ಥಿಗಳ ಜೀವನಮಟ್ಟ ಸುಧಾರಣೆಯಾಗಲಿದೆ. ఎల్ల ಗಿಡಮರಗಳು ಹೂವುಗಳನ್ನು ಬಿಡುತ್ತದೆ. ಕೆಲವೊಂದು ಅರಳದೇ ಧರೆಗೆ ಬೀಳುತ್ತವೆ. ಕೆಲವೊಂದು ಅರಳುವ ಮೂಲಕ…

Read More

ಲೇಖನ- ಸುಧಾ ಪಾಟೀಲ್ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಕೇರಳ ರಾಜ್ಯಕ್ಕೆ ಸೇರಿದ ಪಿ. ಟಿ. ಉಷಾ ಅವರು ಭಾರತದ ಪ್ರಖ್ಯಾತ ಕ್ರೀಡಾಪಟು ಎಂದು ಎಲ್ಲರಿಗೂ ಚಿರಪರಿಚಿತರು.ಪಿ. ಟಿ ಉಷಾ ಅವರು 1979 ರಿಂದಲೂ ಭಾರತದ ಕ್ರೀಡಾ ವಲಯದೊಂದಿಗೆ ತಮ್ಮ ಒಡನಾಟ ಹೊಂದಿದ್ದಾರೆ. ಭಾರತದಲ್ಲಿ ಹುಟ್ಟಿದ ಅದ್ವಿತೀಯ ಕ್ರೀಡಾಪಟುವೆಂದು ಅವರನ್ನು ಪರಿಗಣಿಸಲಾಗುತ್ತದೆ. ಅವರನ್ನು ಭಾರತದ ಓಟದ ರಾಣಿ ಮತ್ತು ಪಯ್ಯೋಲಿ ಎಕ್ಸ್ಪ್ರೆಸ್ ಎಂದು ವರ್ಣಿಸಲಾಗುತ್ತದೆ.ಸಧ್ಯ ಅವರು ಕೊಯಿಲ್ಯಾಂಡ್ ನಲ್ಲಿ ಉಷಾ ಸ್ಕೂಲ್ ಆಫ್ ಅಥ್ಲೆ ಟಿಕ್ಸ್ ಎಂಬ ಸಂಸ್ಥೆ ನಡೆಸುತ್ತಿದ್ದಾರೆ.ಪಿ. ಟಿ. ಉಷಾ ಕೇರಳದ ಉತ್ತರ ಮಲಬಾರ ನ ಕರಾವಳಿ ಕೊಚ್ಚಿಕೋಡ ಜಿಲ್ಲೆಯ ಪಯ್ಯೋಲಿ ಹಳ್ಳಿಯಲ್ಲಿ ಜನಿಸಿದರು. ಆಗ 1976 ರಲ್ಲಿ ಕೇರಳ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಕ್ರೀಡಾ ಶಾಲೆ ಒಂದನ್ನು ತೆರೆಯಿತು. ಆಗ ಉಷಾ ಅವರನ್ನು ತಮ್ಮ ಜಿಲ್ಲೆಯನ್ನು ಪ್ರತಿನಿಧಿಸುವಂತೆ ಕ್ರೀಡೆಗಳಿಗಾಗಿ ಆಯ್ಕೆಗೊಳಿಸಿದರು.ನಂತರ ಅವರು 1979 ರಲ್ಲಿ ನಡೆದ ನ್ಯಾಷನಲ್ ಸ್ಕೂಲ್ ಗೇಮ್ಸ್ ನಲ್ಲಿ ಭಾಗವಹಿಸಿದರು ಆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಅವರು ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.ಆಯ್ಕೆ ಕುರಿತು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಭೆಯಲ್ಲಿ ಪಿಂಜಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಂ.ಡಿ.ಮಾಗಿ, ಪ್ರ.ಕಾರ್ಯದರ್ಶಿಯಾಗಿ ಬಿ.ಎಂ.ಕಡಿ, ಉಪಾರ್ಧಯಕ್ಷರಾಗಿ ಎಚ್.ಬಿ.ಕೊಣ್ಣೂರ, ರಾಜ್ಯ ಪರಿಷತ್ ಸದಸ್ಯರಾಗಿ ಬಸಯ್ಯ ಹಿರೇಮಠ, ಖಜಾಂಚಿಯಾಗಿ ಎಸ್.ಎಸ್. ಸುಧಾಕರ, ಸಹ ಕಾರ್ಯದರ್ಶಿಯಾಗಿ ಆರ್.ಜಿ.ಗುಣಕಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಬಿ.ಜಿ.ಬಿರಾದಾರ ಆಯ್ಕೆಯಾಗಿದ್ದಾರೆ.ಈ ವೇಳೆ ಶಾಲೆಯ ಮುಖ್ಯೋಪಾದ್ಯಾಯ ಎಂ.ಎಸ್.ಕವಡಿಮಟ್ಟಿ, ಸಂಘದ ಸದಸ್ಯರಾದ ದಯಾನಂದ ಪಾಟೀಲ, ಶಿವಾನಂದ ಮುತ್ತಗಿ, ಸಂಗಣ್ಣ ಹೂಗಾರ, ಜಿ.ಟಿ.ಮಂಗಳೂರ, ಎಸ್.ಎಸ್.ಪಾಟೀಲ, ಎಂ.ಎನ್.ಮೆರೆಖೋರ, ವಿ.ಪಿ.ಮಠ, ಮಹಾಂತೇಶ ತುರಡಗಿ, ಬಿ.ಜಿ.ಬೇನಾಳ, ಪಿ.ಬಿ.ಕುಂಟರೆಡ್ಡಿ, ಪ್ರಭುಗೌಡ ರಾರಡ್ಡಿ, ಸುಧಾರಾಣಿ, ಆರ್.ವೈ.ಸಜ್ಜನ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಯಾವುದೆ ಧರ್ಮದ ಹಬ್ಬ ಹರಿದಿನಗಳಾಗಲಿ ಅದಕ್ಕೆ ಸಂಬಂದಪಟ್ಟಂತ ಕಾರ್ಯಕ್ರಮಗಳು ಮಾಡಬೇಕು ಅದರಿಂದ ಸಮಾಜ ಸುದಾರಣೆಯಾಗುವಂತ ಉತ್ತಮ ಸಂದೇಶ ನೀಡುವಂತಿರಬೇಕು ಎಂದು ಪ.ಪಂ ಅಧ್ಯಕ್ಷ ಸಾಧಿಕ ಸುಂಬಡ ಹೇಳಿದರು.ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಮ್ ಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ಪೂರ್ವಬಾವಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಹಬ್ಬ ಹರಿದಿನ, ಉತ್ಸವಗಳೆಂದರೆ ಕುಡಿದು ಅಸಭ್ಯ ವರ್ತನೆ ಮಾಡುವುದು ಹಬ್ಬಗಳಿಗೆ ಅಗೌರವಿಸಿದಂತೆ. ಯಾವುದೆ ಧರ್ಮದ ಹಬ್ಬಗಳಾಗಲಿ ಎಲ್ಲರು ಒಂದಾಗಿ ಶ್ರದ್ದಾ ಭಕ್ತಿಯಿಂದ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.ಪಿಎಸ್‌ಐ ಅರವಿಂದ ಅಂಗಡಿ ಮಾತನಾಡಿ ಕಳೆದ ವರ್ಷ ಮೋರಮ್ಮ ಹಬ್ಬದಂದು ಬೇರೆ ಗ್ರಾಮಗಳಿಂದ ಸ್ನೇಹಿತರನ್ನು ಕರಿಸಿ ಸಣ್ಣ ಪುಟ್ಟ ಗಲಾಟೆಗಳಾಗಿದ್ದು ಈ ವರ್ಷ ಅದು ಮರುಕಳಿಸದೆ ಶಾಂತಿಯುತವಾಗಿ ಆಚರಿಸಿ. ಎಲ್ಲರು ಕಾನೂನಿ ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು ಒಂದು ವೇಳೆ ಕಾನೂನು ಮೀರಿ ಶಾಂತಿ ಭಂಗ ತರುವಂತ ಕೆಲಸ ಮಾಡಿದರೆ ಹಂತವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವದು. ಮಸಿದಿ ಮಂದಿರಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿಸಿ…

Read More

ಬಿಜೆಪಿಗರಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ಅವಮಾನ | ವಿರೋಧಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ತುರ್ತು ಪರಿಸ್ಥಿತಿಯನ್ನು ಖಂಡಿಸುವ ನೆಪದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಅವಮಾನಿಸುತ್ತಿರುವುದನ್ನು ವಿರೋಧಿಸಿ ಶನಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ ತಕ್ಷಣ, ಅವರನ್ನು ಸ್ಥಳದಿಂದ ಚದುರಿಸಲಾಯಿತು ಮತ್ತು ಪೊಲೀಸ್ ವ್ಯಾನ್‌ಗಳಲ್ಲಿ ಕರೆದೊಯ್ಯಲಾಯಿತು.ಕನಿಷ್ಠ 20 ಕಾಂಗ್ರೆಸ್ ಕಾರ್ಯಕರ್ತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇಂದಿರಾ ಗಾಂಧಿಯನ್ನು ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಕರ್ನಾಟಕ ಬಿಜೆಪಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಲವೇ ದಿನಗಳಲ್ಲಿ ಈ ಪ್ರತಿಭಟನೆ ನಡೆದಿದೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಅವರು ಜೂನ್ 25 ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನೀಡಿದ…

Read More

ವಿಜಯಪುರದಲ್ಲಿ ಅಹಿಂದ ಮುಖಂಡ ಫಯಾಜ ಕಲಾದಗಿ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಹಲವಾರು ಪ್ರತಿಭಾನ್ವಿತ ಬಡ ಕ್ರಿಕೆಟ್ ಕ್ರೀಡಾಪಟುಗಳು ಇದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಕ್ರಿಕೆಟ್‌ಗೆ ಒಂದು ಪ್ರತ್ಯೇಕ ಕ್ರೀಡಾಂಗಣ ಇಲ್ಲ. ಇದರಿಂದ ಕ್ರಿಕೆಟ್ ಕ್ರೀಡಾ ಪಟುಗಳಿಗೆ ನಿರಾಸೆ ಉಂಟಾಗಿದೆ ಎಂದು ಅಹಿಂದ ಮುಖಂಡರಾದ ಫಯಾಜ ಕಲಾದಗಿ ಕಳವಳ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿದ ಅವರು, ಕೂಡಲೇ ವಿಜಯಪುರ ಜಿಲ್ಲೆಯಲ್ಲಿ ಒಂದು ಪ್ರತ್ಯೇಕ ಕ್ರಿಕೇಟ್ ಕ್ರೀಡಾಂಗಣ ಮಾಡಲು ಜಾಗವನ್ನು ಗುರುತಿಸಿ ಕ್ರೀಡಾಪಟುಗಳಿಗೆ ಕ್ರೀಡಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕೆಂದು ವಿಜಯಪುರ ಜಿಲ್ಲಾಡಳಿತಕ್ಕೆ ಕಲಾದಗಿ ಒತ್ತಾಯಿಸಿದ್ದಾರೆ.

Read More

ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಯತ್ನಾಳ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ವಾರ್ಡ್ ನಂ.2ರ ದರ್ಗಾ ಹತ್ತಿರದ ಆಶ್ರಯ ಕಾಲೊನಿಯ ನಿವಾಸಿಗಳಿಗೆ ಆದಷ್ಟು ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಿ, ಅನುಕೂಲ ಮಾಡಿಕೊಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಭರವಸೆ ನೀಡಿದರು.ನಗರದ ಆಶ್ರಯ ಕಾಲೊನಿ ಶಂಕರಲಿಂಗ ಗುಡಿ ರಸ್ತೆಯಲ್ಲಿರುವ ಶ್ರೀ ವಾರಿ ಮಾರುತಿ ದೇವಸ್ಥಾನ ಹತ್ತಿರ ಶನಿವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರಿಸಲಾದ ರೂ.10 ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಪ್ರಸ್ತುತ ಕಾಲೊನಿಯ ಜಾಗವು ಕಂದಾಯ ಇಲಾಖೆ ಒಡೆತನದಲ್ಲಿದ್ದು, ಸ್ಲಂ ಬೋರ್ಡ್ ಗೆ ಹಸ್ತಾಂತರಿಸಿದ ಬಳಿಕ ತಮಗೆ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರೊಂದಿಗೆ ಸಭೆ ಕೂಡ ಮಾಡಿರುವುದಾಗಿ ತಿಳಿಸಿದರು.ಸದರಿ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಈಗಾಗಲೇ ಸ್ವಂತ ಹಣದಲ್ಲಿ ಸಂಗೋಳ್ಳಿ ರಾಯಣ್ಣ…

Read More