ವಿಜಯಪುರದಲ್ಲಿ ಅಹಿಂದ ಮುಖಂಡ ಫಯಾಜ ಕಲಾದಗಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಹಲವಾರು ಪ್ರತಿಭಾನ್ವಿತ ಬಡ ಕ್ರಿಕೆಟ್ ಕ್ರೀಡಾಪಟುಗಳು ಇದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಕ್ರಿಕೆಟ್‌ಗೆ ಒಂದು ಪ್ರತ್ಯೇಕ ಕ್ರೀಡಾಂಗಣ ಇಲ್ಲ. ಇದರಿಂದ ಕ್ರಿಕೆಟ್ ಕ್ರೀಡಾ ಪಟುಗಳಿಗೆ ನಿರಾಸೆ ಉಂಟಾಗಿದೆ ಎಂದು ಅಹಿಂದ ಮುಖಂಡರಾದ ಫಯಾಜ ಕಲಾದಗಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಕೂಡಲೇ ವಿಜಯಪುರ ಜಿಲ್ಲೆಯಲ್ಲಿ ಒಂದು ಪ್ರತ್ಯೇಕ ಕ್ರಿಕೇಟ್ ಕ್ರೀಡಾಂಗಣ ಮಾಡಲು ಜಾಗವನ್ನು ಗುರುತಿಸಿ ಕ್ರೀಡಾಪಟುಗಳಿಗೆ ಕ್ರೀಡಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕೆಂದು ವಿಜಯಪುರ ಜಿಲ್ಲಾಡಳಿತಕ್ಕೆ ಕಲಾದಗಿ ಒತ್ತಾಯಿಸಿದ್ದಾರೆ.