Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭಾರತದ ಓಟದ ರಾಣಿ ಪಿ.ಟಿ.ಉಷಾ
ವಿಶೇಷ ಲೇಖನ

ಭಾರತದ ಓಟದ ರಾಣಿ ಪಿ.ಟಿ.ಉಷಾ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸುಧಾ ಪಾಟೀಲ್
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

ಕೇರಳ ರಾಜ್ಯಕ್ಕೆ ಸೇರಿದ ಪಿ. ಟಿ. ಉಷಾ ಅವರು ಭಾರತದ ಪ್ರಖ್ಯಾತ ಕ್ರೀಡಾಪಟು ಎಂದು ಎಲ್ಲರಿಗೂ ಚಿರಪರಿಚಿತರು.
ಪಿ. ಟಿ ಉಷಾ ಅವರು 1979 ರಿಂದಲೂ ಭಾರತದ ಕ್ರೀಡಾ ವಲಯದೊಂದಿಗೆ ತಮ್ಮ ಒಡನಾಟ ಹೊಂದಿದ್ದಾರೆ. ಭಾರತದಲ್ಲಿ ಹುಟ್ಟಿದ ಅದ್ವಿತೀಯ ಕ್ರೀಡಾಪಟುವೆಂದು ಅವರನ್ನು ಪರಿಗಣಿಸಲಾಗುತ್ತದೆ. ಅವರನ್ನು ಭಾರತದ ಓಟದ ರಾಣಿ ಮತ್ತು ಪಯ್ಯೋಲಿ ಎಕ್ಸ್ಪ್ರೆಸ್ ಎಂದು ವರ್ಣಿಸಲಾಗುತ್ತದೆ.ಸಧ್ಯ ಅವರು ಕೊಯಿಲ್ಯಾಂಡ್ ನಲ್ಲಿ ಉಷಾ ಸ್ಕೂಲ್ ಆಫ್ ಅಥ್ಲೆ ಟಿಕ್ಸ್ ಎಂಬ ಸಂಸ್ಥೆ ನಡೆಸುತ್ತಿದ್ದಾರೆ.
ಪಿ. ಟಿ. ಉಷಾ ಕೇರಳದ ಉತ್ತರ ಮಲಬಾರ ನ ಕರಾವಳಿ ಕೊಚ್ಚಿಕೋಡ ಜಿಲ್ಲೆಯ ಪಯ್ಯೋಲಿ ಹಳ್ಳಿಯಲ್ಲಿ ಜನಿಸಿದರು. ಆಗ 1976 ರಲ್ಲಿ ಕೇರಳ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಕ್ರೀಡಾ ಶಾಲೆ ಒಂದನ್ನು ತೆರೆಯಿತು. ಆಗ ಉಷಾ ಅವರನ್ನು ತಮ್ಮ ಜಿಲ್ಲೆಯನ್ನು ಪ್ರತಿನಿಧಿಸುವಂತೆ ಕ್ರೀಡೆಗಳಿಗಾಗಿ ಆಯ್ಕೆಗೊಳಿಸಿದರು.
ನಂತರ ಅವರು 1979 ರಲ್ಲಿ ನಡೆದ ನ್ಯಾಷನಲ್ ಸ್ಕೂಲ್ ಗೇಮ್ಸ್ ನಲ್ಲಿ ಭಾಗವಹಿಸಿದರು ಆ ರಾಷ್ಟ್ರೀಯ ಶಾಲಾ ಕ್ರೀಡೆಗಳಲ್ಲಿ ಒ. ಎಂ. ನಂಬಿಯಾರ್ ಅವರು ಉಷಾ ಅವರ ಪ್ರತಿಭೆ ಗುರುತಿಸಿದರು. ನಂತರ ಅವರ ಕ್ರೀಡಾ ಜೀವನ ದುದ್ದಕ್ಕೂ ಅವರೇ ಉಷಾ ಅವರ ತರಬೇತುದಾರರಾದರು. ಅವರ ಮೊದಲ ಕ್ರೀಡಾ ಸ್ಪರ್ಧೆ 1980 ಮಾಸ್ಕೋ ಒಲಿಫಿಕ್ಸ್ ನಲ್ಲಿ ನಡೆಯಿತು. ಅಲ್ಲಿ ಅವರು ಅಷ್ಟಾಗಿ ತಮ್ಮ ಪ್ರತಿಭೆ ತೋರಲಿಲ್ಲ.
ನಂತರ 1982 ರಲ್ಲಿ ನವದೆಹಲಿ ಏಷ್ಯಾಡ ನ 100 ಮೀಟರ್ ಮತ್ತು ಎರಡುನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದರು. ಒಂದು ವರ್ಷದ ಬಳಿಕ ಕುವೈಟ್ ನಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ಶಿಪ್ ನಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ನೂತನ ಏಶಿಯನ್ ದಾಖಲೆ ನಿರ್ಮಿಸಿದರು. ಉಷಾ ಅವರು 1983- 89ರ ಅವಧಿಯಲ್ಲಿ ಎಟಿಎಫ್ ನಲ್ಲಿ 13 ಚಿನ್ನದ ಪದಕಗಳನ್ನು ಗಳಿಸಿದರು. ಲಾಸ್ ಎಂಜಲಿಸ್ ನಲ್ಲಿ 1984ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ 400 ಮೀಟರ್ಸ್ ನ ಹರ್ಡಲ್ಸ್ ನ ಸೆಮಿ ಫೈನಲ್ಸ್ ನಲ್ಲಿ ಮೊದಲಿಗರಾದರೆ ಅಂತಿಮ ಸ್ಪರ್ಧೆಯಲ್ಲಿ ಮುಗ್ಗರಿಸಿದರು.
ಉಷಾ ಕೇವಲ ಒಂದು 1/ 100 ಸೆಕೆಂಡುಗಳ ಅವಧಿಯಲ್ಲಿ ಕಂಚು ಪಡೆಯುವಲ್ಲಿ ವಿಫಲಗೊಂಡರು. ಒಲಿoಪಿಕ್ ಕ್ರೀಡೆಗಳಲ್ಲಿ 400 ಮೀಟರ್ ಹರ್ಡಲ್ಸ ನ ಸೆಮಿ ಫೈನಲ್ ಗೆ ತಲುಪುವ ಮೂಲಕ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
ಪಿ.ಟಿ ಉಷಾ ಅವರು 1986ರಲ್ಲಿ ಸಿಯೊಲ್ ನಲ್ಲಿ ನಡೆದ ಹತ್ತನೆಯ ಏಷ್ಯನ್ ಗೇಮ್ಸ್ ನಲ್ಲಿನ ಟ್ರ್ಯಾಕ್ ಅಂಡ್ ಫೀಲ್ಸ್ ಸ್ಪರ್ಧೆಗಳಲ್ಲಿ ನಾಲ್ಕು ಚಿನ್ನ ಒಂದು ರಜತ ಪದಕಗಳನ್ನು ಪಡೆದರು. ಇಲ್ಲಿ ಅವರು ಭಾಗವಹಿಸಿದ ಎಲ್ಲಾ ಏಷ್ಯನ್ ಗೇಮ್ಸ್ ನಲ್ಲಿ ದಾಖಲೆ ಮಾಡಿದರು. ಜಕಾರ್ತದಲ್ಲಿ 1985 ರಲ್ಲಿ ನಡೆದ ಆರನೆಯ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ಶಿಪ್ ನಲ್ಲಿ ಐದು ಚಿನ್ನದ ಪದಕ ಗಳಿಸಿದರು. ಅವರು ಅದೇ ಸ್ಪರ್ಧಿಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಏಕಾಂಗಿಯಾಗಿ ಆರು ಪದಕ ಗೆದ್ದ ಏಕೈಕ ಕ್ರೀಡಾಳು ಎನಿಸಿದ್ದಾರೆ.
ಉಷಾ ಇಲ್ಲಿಯವರೆಗೆ ಅಂತರಾಷ್ಟ್ರೀಯ ಮಟ್ಟದ ನೂರಾಒಂದು ಪದಕಗಳಿಗೆ ಭಾಜನರಾಗಿದ್ದಾರೆ. ಸದ್ಯ ಅವರು ದಕ್ಷಿಣ ರೈಲ್ವೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅವರನ್ನು 1985ರಲ್ಲಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಉಷಾ ಅವರು ಅಗಣಿತ ಸಾಧನೆಗಳನ್ನು ಮಾಡಿದ್ದಾರೆ. ಆದರಿಲ್ಲಿ ನಾನು ವಿಶ್ವದಾಖಲೆಗಳನ್ನಷ್ಟೇ ಉಲ್ಲೇಖಿಸುತ್ತಿದ್ದೇನೆ. ಇಂಡೋನೇಷ್ಯಾದ ಜಕಾರ್ತದಲ್ಲಿ 1985 ರಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಮೀಟ್ ಉಷಾ ಅವರು 100, 200 ಮತ್ತು 400 ಮೀಟರ್ ವೇಗದ ಓಟದ ಸ್ಪರ್ಧೆಯಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದರು. ಅದರ ಜೊತೆಯಲ್ಲಿಯೇ 400 ಮೀಟರ್ ಹರ್ಡಲ್ಸ್ ಮತ್ತು 4×400 ಮೀಟರ್ ರಿಲೇಯಲ್ಲಿ ಈ ಸಾಧನೆ ಮಾಡಿದರು. ಅವರು 4×100 ಮೀಟರ್ ರಿಲೆಯಲ್ಲಿ ಸಹ ಕಂಚಿನ ಪದಕಕ್ಕೆ ಭಾಜನರಾದರು. ಬಹುಶಃ ಸಿಂಗಲ್ ಟ್ರ್ಯಾಕ್ ಮೀಟ್ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದು ದಾಖಲೆ ಮಾಡಿದ ಏಕೈಕ ಮಹಿಳೆಯಾಗಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು

  • ಅರ್ಜುನ ಪ್ರಶಸ್ತಿ 1984ರಲ್ಲಿ ಪಡೆದದ್ದು
  • ಅತ್ಯುತ್ತಮ ಮಹಿಳಾ ಅಥ್ಲೆಟ್ 1985ರಲ್ಲಿ ಜಕಾರ್ತದಲ್ಲಿನ ಏಶಿಯನ್ ಅಥ್ಲೇಟಿಕ್ ಮೀಟ್ ಸ್ಪರ್ಧೆ
  • 1984ರಲ್ಲಿ ಪದ್ಮಶ್ರೀ
  • ಬೆಸ್ಟ್ ಅಥ್ಲೇಟ್ ಏಷ್ಯನ್ ಅವಾರ್ಡ್ಗಳು – 1984 1985 1986 1987 1989 ರಲ್ಲಿ
  • ಅತ್ಯುತ್ತಮ ರೈಲ್ವೇ ಕ್ರೀಡಾಳು ಮಾರ್ಷಲ್ ಟಿಟೋ ಪ್ರಶಸ್ತಿ 1984 1985 1989 1990ರಲ್ಲಿ
  • 1986 ರಲ್ಲಿ ಏಷಿಯನ್ ಏಷ್ಯನ್ ಗೇಮ್ಸ್ ನಲ್ಲಿ ಅತ್ಯುತ್ತಮ ಅಥ್ಲೆಟ್ ಆಗಿ ಆದಿದಾಸ್ ಗೋಲ್ಡನ್ ಶೂ ಅವಾರ್ಡ್ ಪಡೆದದ್ದು
  • ಅಥೆಟಿಕ್ಸ್ ನಲ್ಲಿ ಅತ್ಯುತ್ತಮ ಸಾಧನೆಗಾಗಿ 30 ಇಂಟರ್ನ್ಯಾಷನಲ್ ಅವಾರ್ಡ್ಸ್
  • ಕೇರಳ ಸ್ಪೋರ್ಟ್ಸ್ ಜರ್ನಲಿಸ್ಟ್ ಅವಾರ್ಡ್ 1999ರ ವರ್ಷದ ಪ್ರಶಸ್ತಿ
  • ಅತ್ಯುತ್ತಮ ಅಥ್ಲೇಟ್ ಗಾಗಿ ವರ್ಲ್ಡ್ ಟ್ರೋಫಿ 1985 1986 ರಲ್ಲಿನ ಪ್ರಶಸ್ತಿಗಳು
BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.