Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲಿಸಿದ ಶಿಕ್ಷಕರನ್ನು ಗೌರವಿಸಿದ ರ‍್ಯಾಂಕ್ ವಿದ್ಯಾರ್ಥಿ ಪ್ರಜ್ವಲ್ | ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ಸಾಧನೆಯ ಹಿಂದೆ ಶಿಕ್ಷಕರ ಶ್ರಮ ಇರುತ್ತದೆ ಎನ್ನುವುದನ್ನು ಅರಿತುಕೊಂಡು ಅವರನ್ನು ಅಭಿಮಾನ ಗೌರವದಿಂದ ಸತ್ಕರಿಸುವ ಜನಗಳು ಬಹಳ ವಿರಳ. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನನ್ನ ಮಗ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ ಎಂದರೆ ಅದರ ಹಿಂದಿರುವ ಪ್ರೇರಕ ಶಕ್ತಿ ಕಲಿಸಿದ ಗುರುಗಳು. ಅವರನ್ನು ಸತ್ಕರಿಸುವುದು ನಮ್ಮ ಆಧ್ಯ ಕರ್ತವ್ಯ ಎಂದು ಶಾಲೆಗೆ ಬಂದು ಶಿಕ್ಷಕರಿಗೆ ಸನ್ಮಾಸಿನಿಸಿದ್ದು ನಿಜಕ್ಕೂ ಹೃದಯ ಸ್ಪರ್ಷಿಯಾಗಿದೆ. ಈ ಸಂಸ್ಕಾರವನ್ನು ಭಾರತೀಯ ಪರಂಪರೆ ನಮಗೆ ಬಳುವಳಿಯಾಗಿ ನೀಡಿದೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹೇಳಿದರು.ಆದರ್ಶನಗರದ ಎಕ್ಸಲಂಟ್ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ೨೦೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ, ಪ್ರಜ್ವಲ್ ಪತ್ತಾರ ನ ಪಾಲಕರು ಆಯೋಜನೆ ಮಾಡಿದ್ದ…
ರೂ.10 ಕೋಟಿ ಕಾಮಗಾರಿಗೆ ಭೂಮಿಪೂಜೆ | ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಕಳೆದ ಏಳು ವರ್ಷಗಳಲ್ಲಿ ಗುಣಮಟ್ಟದ ರಸ್ತೆಗಳು, ಚರಂಡಿ ನಿರ್ಮಾಣ, ಕಸ ವಿಲೇವಾರಿ ಹೀಗೆ ಪ್ರತಿಯೊಂದರಲ್ಲಿಯೂ ಆಗಿರುವ ಅಭಿವೃದ್ಧಿ ಕಾರ್ಯಗಳಿಂದ ನಗರದ ಸೌಂದರ್ಯಕರಣದ ಜೊತೆಗೆ ಆಸ್ತಿಗಳ ಮೌಲ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಏಕತಾ ನಗರದ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ ಹತ್ತಿರ ಭಾನುವಾರ ನಗರ ಮತಕ್ಷೇತ್ರದ ವ್ಯಾಪ್ತಿಯ ತೊರವಿ ಗ್ರಾಮ ಪಂಚಾಯಿತಿಯಲ್ಲಿ ಬರುವ ನವರಸಪುರದ ವಿವಿಧ ಕಾಲೊನಿಗಳಲ್ಲಿ ಆರ್.ಡಿ.ಪಿ.ಆರ್ ಇಲಾಖೆಯಿಂದ ಮಂಜೂರಿಸಿದ ರೂ.10 ಕೋಟಿ ಅನುದಾನದಲ್ಲಿ ಆಂತರಿಕ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ನಗರದಲ್ಲಿ ಅಮಾಯಕರ ಆಸ್ತಿಗಳನ್ನು ಕಬಳಿಸುವ ಲಪುಟರಿದ್ದಾರೆ. ತಮ್ಮ ಉತಾರೆಗಳನ್ನು ಆಗಾಗ ಪರಿಶೀಲಿಸಿ, ಆನಲೈನ್ ದಲ್ಲೂ ನೋಡಲು ಅವಕಾಶವಿದೆ. ಅಲ್ಲದೆ, ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟ ಜಾಗೆಗಳನ್ನು ಸಹ ಪುಡಾರಿಗಳು ಕಬಳಿಸಲು ಯತ್ನಿಸುತ್ತಿದ್ದು, ತಮ್ಮ ಗಮನಕ್ಕೆ ಬಂದ ತಕ್ಷಣ…
ತಿಕೋಟಾ ನೂತನ ಕಲಾ ಮಹಾವಿದ್ಯಾಲಯದಲ್ಲಿ ಸೇವಾ ವಯೋನಿವೃತ್ತಿ ಸಮಾರಂಭ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಮನುಷ್ಯನಾದವನು ತನ್ನ ಕೆಲಸ ಕಾರ್ಯದಲ್ಲಿ ಸಹಕಾರ, ಸಹಬಾಳ್ವೆ, ಸಮನ್ವಯತೆ ಹಾಗೂ ಎಲ್ಲರ ಜೊತೆ ಉತ್ತಮ ಸಂಬಂಧ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ವಿಲಾಸ ಬಗಲಿ ಅವರು ಹೇಳಿದರು.ಬಿ ಎಲ್ ಡಿ ಇ ಸಂಸ್ಥೆಯ ತಿಕೋಟಾ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಆರ್. ಬಿ. ಸಿರಸಂಗಿ ಹಾಗೂ ಕಚೇರಿಯ ಸಹಾಯಕಿ ಮಲ್ಲಮ್ಮ ವಿಭೂತಿಯವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಿಕ್ಷಕರಿಗೆ ಬೋಧನಾ ವೃತ್ತಿಯಲ್ಲಿ ಅಳವಡಿಸಿಕೊಂಡ ಅತ್ಯುತ್ತಮ ಕಲಿಕಾ ವಿಧಾನವೇ ಅವರನ್ನು ಜನಪ್ರಿಯಗೊಳಿಸುತ್ತದೆ. ಅಂತವರ ಸಾಲಿನಲ್ಲಿ ಶಿರಸಂಗಿಯವರು ಒಬ್ಬರಾಗಿದ್ದಾರೆ. ಉತ್ತಮ ಶಿಕ್ಷಕರ ಶ್ರೇಷ್ಠ ಗುಣಗಳನ್ನು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಹೀಗಾಗಿ ಶಿಕ್ಷಕರಲ್ಲಿ ಪ್ರಾಮಾಣಿಕತೆ, ಆದರ್ಶ, ನಿಷ್ಠೆ, ಹಾಗೂ ದಕ್ಷತೆ ಬಹಳ ಮಹತ್ವದ್ದಾಗಿವೆ. ಒಬ್ಬ ಸಾಮಾನ್ಯ ಶಿಕ್ಷಕ ಜಗತ್ತಿನಲ್ಲಿ ಏನೆಲ್ಲಾ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಪುಸ್ತಕ ಜ್ಞಾನವಷ್ಟೇ ಸಾಲದು, ಮಸ್ತಕ ಜ್ಞಾನವೂ ಬೇಕು. ತರಗತಿಯಲ್ಲಿ ಪಡೆದ ಜ್ಞಾನದೊಂದಿಗೆ ಲೋಕ ಜ್ಞಾನವೂ ಬೇಕು. ವಿಷಯ ಜ್ಞಾನದೊಂದಿಗೆ ವ್ಯವಹಾರ ಜ್ಞಾನವಿದ್ದರೆ ಮಾತ್ರ ಯಶಸ್ಸು ಗಳಿಸಬಹುದು ಎಂದು ಅಧ್ಯಾತ್ಮಿಕ ಚಿಂತಕರು ಹಾಗೂ ವಿಶ್ರಾಂತ ಮುಖ್ಯ ಅಭಿಯಂತರರು ಆದ ಶಂಕರ ದೇವನೂರ ಹೇಳಿದರು.ಹೋರ್ತಿ ಗ್ರಾಮದ ಸರ್ವೋದಯ ಪದವಿ ಪೂರ್ವ ಮಹಾವಿದ್ಯಾಲಯ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ 2025 ಉದ್ಘಾಟಿಸಿ ಮಾತನಾಡಿ, ಅವರು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಿಕ್ಷಕರ ವೃತ್ತಿ ಶ್ರೇಷ್ಠ ವೃತ್ತಿ. ಶಿಕ್ಷಕರು ಶರಣರ ವಚನಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಬೆಳೆಸಬೇಕು ಈ ನಿಟ್ಟಿನಲ್ಲಿ ಹೋರ್ತಿ ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಶಿಕ್ಷಕರು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆ ಸಂಸ್ಕಾರ ನೀಡುವ ಮಾಹಾನ ಕಾಯ೯ ಮಾಡುತ್ತಿದೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಂದೆ ತಾಯಿ ಸಮಾಜದ ಹಾಗೂ ದೇಶದ ಋಣ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯ ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಶಕುಂತಲಾ ಶಾರದಳ್ಳಿ ಮತ್ತು ವಿಕ್ರಾಂತ ಶಾರದಳ್ಳಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿ ಸಾಧನೆಗೈದಿದ್ದಾರೆ.ಕೊಪ್ಪಳ ಜಿಲ್ಲೆಯ ಹನುಮಸಾಗರದ ಅಭಿನವ ತಿರುಪತಿ ಕಲ್ಯಾಣ ಮಂಟಪದಲ್ಲಿ ನಡೆದ 11 ನೇ ರಾಜ್ಯ ಪೆಂಕಾಕ್ ಸಿಲಾಸ್ಕ್ರೀಡಾಕೂಟದಲ್ಲಿ ಶಕುಂತಲಾ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ )25 ರಿಂದ 30 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ವಿಕ್ರಾಂತ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ ) 20 ರಿಂದ 25 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿ ಶಾಲೆಯ ಹಾಗೂ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತರಬೇತಿದಾರ ಶಿವಕುಮಾರ ಶಾರದಳ್ಳಿ ತಿಳಿಸಿದರು.ಇದೇ ಸಂದರ್ಭದಲ್ಲಿ ಟೂರ್ನಿಯ ಆಯೋಜಕರು ಐಪಿಎಸ್ ಎಫ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ , ಐಪಿಎಸ್ ಎಫ್ ಉಪಾಧ್ಯಕ್ಷ ವಿಜಯ ಹಂಚನಾಳ ಸೇರಿ ಟೂರ್ನಿಯಲ್ಲಿ ಉಪಸ್ಥಿತರಿದ್ದ ಮುಖಂಡರ ಸಮ್ಮುಖದಲ್ಲಿ ವಿಜೇತ ಕ್ರೀಡಾ ಪಟುಗಳಿಗೆ ಮೆಡಲ್ ಹಾಗೂ ಪ್ರಮಾಣ ಪತ್ರ ವಿತರಿಸಿ ಶುಭಹಾರೈಸಿದರು.ಟೂರ್ನಿಯಲ್ಲಿ ಪದಕ ವಿಜೇತರಾಗಿರುವ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿಯ ಸರ್ಕಾರಿ ಆದರ್ಶ ವಿದ್ಯಾಲಯದ 2025 -26 ನೇ ಸಾಲಿನ 7,8, 9ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.ತರಗತಿವಾರು ಮತ್ತು ಮೀಸಲಾತಿವಾರು ಅರ್ಜಿಯನ್ನು ದಿನಾಂಕ 03.07.2025 ರಿಂದ ಶಾಲೆಯಲ್ಲಿ ವಿತರಿಸಲಾಗುವುದು. ಆಸಕ್ತ ವಿದ್ಯಾರ್ಥಿಗಳು, ಪಾಲಕರು, ಖುದ್ದಾಗಿ ಶಾಲೆಗೆ ಭೇಟಿ ನೀಡಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಜು10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಮೊ: 9945614301 ಗೆ ಸಂಪರ್ಕಿಸಬಹುದು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಂದಾಯ ಇಲಾಖೆಯ ಆಯುಕ್ತಾಲಯ ತನ್ನ ಇಲಾಖೆಯಲ್ಲಿ ಡಿಜಿಟಲ್ ಆಡಳಿತಕ್ಕಾಗಿ ನೀಡಿರುವ ಕ್ರೋಮ್ ಬುಕ್ ಗಳನ್ನು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಅವರು ಗ್ರಾಮ ಆಡಳಿತಾಧಿಕಾರಿಗಳಿಗೆ ವಿತರಿಸಿದರು.ತಾವು ಪ್ರತಿನಿಧಿಸುವ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಡಗುಂದಿ ಹಾಗೂ ಕೊಲ್ಹಾರ ತಾಲೂಕಗಳ ಗ್ರಾಮ ಆಡಳಿತಾಧಿಕಾರಿಗಳಿಗೆ ನಗರದಲ್ಲಿರುವ ಗೃಹ ಕಛೇರಿಯಲ್ಲಿ ಕ್ರೋಬ್ ಬುಕ್ ವಿತರಿಸಿದರು. ಬಸವನಬಾಗೇವಾಡಿ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಈಗಾಗಲೇ ಕ್ರೋಮ್ ಬುಕ್ ವಿತರಿಸಲಾಗಿದೆ.ಕಿರು ಲ್ಯಾಪ್‍ಟ್ಯಾಪ್ ಸದರಿ ಕ್ರೋಮ್ ಬುಕ್‍ಗಳಲ್ಲಿ ಕಂದಾಯ ಇಲಾಖೆಯಿಂಧ ನಡೆಸುವ ಬಗರ ಹುಕುಂ, ಬೆಳೆ ಸಮೀಕ್ಷೆ, ಕೆ-ಜೆಐಸಿ, ಡಿಬಿಟಿ ಆ್ಯಪ್ ಹಾಗೂ ಭೂಮಿ, ಅಟಲ್ ಜೀ ಜನಸ್ನೇಹಿ, ಇ-ಆಫೀಸ್ ಸೇರಿದಂತೆ ಇತರೆ ತಂತ್ರಜ್ಞಾನ ಅಳವಡಿಸಲಾಗಿದೆ.ಈ ಸಂದರ್ಭದಲ್ಲಿ ನಿಡಗುಂದಿ ತಹಸೀಲ್ದಾರ ಅಮರವಾಡಗಿ, ಕೊಲ್ಹಾರ ತಹಸೀಲ್ದಾರ ನಾಯ್ಕಲಮಠ ಸೇರಿದಂತೆ ಉಭಯ ತಾಲೂಕಗಳ ಗ್ರಾಮ ಆಡಳಿತಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಬರುವ ಅಗಸ್ಟ೧ ಹಾಗೂ ೨ ರಂದು ಎರಡು ದಿನಗಳ ಕಾಲ ಪ್ರಸ್ತುತ ೨೦೨೫-೨೬ ನೇ ಸಾಲಿನ ನಿಡಗುಂದಿ ಎ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲಾ ಮೈದಾನದಲ್ಲಿ ಜರುಗಲಿವೆ.ಅತಿಥೇಯ ಶಾಲೆಯಲ್ಲಿ ಕ್ರೀಡಾಕೂಟದ ರೂಪರೇಷೆಗಳನ್ನು ಚರ್ಚಿಸಿ ಸಿದ್ದತೆ ಕೈಗೊಳ್ಳಲು ಕರೆಯಲಾಗಿದ್ದ ನಿಡಗುಂದಿ ವ್ಯಾಪ್ತಿಯಲ್ಲಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಕ್ರೀಡಾಕೂಟದ ದಿನಾಂಕ ನಿಗದಿಪಡಿಸಲಾಗಿದೆ.ಕ್ರೀಡಾಕೂಟದ ಸಂಘಟನಾ ಅಧ್ಯಕ್ಷರಾದ ಹಳಕಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಪೂರ್ವ ತಯಾರಿ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ದೈಹಿಕ ಶಿಕ್ಷಕರ ಸೂಕ್ತ ಸಲಹೆ,ಸೂಚನೆಗಳನ್ನು ಆಲಿಸಿ ಕ್ರೀಡಾಕೂಟದ ದಿನಾಂಕ ನಿಗದಿ ಸೇರಿದಂತೆ ಹಲವಾರು ವಿಷಂಯಗಳನ್ನು ಚರ್ಚಿಸಿ ಕ್ರೀಡಾಕೂಟ ಯಶಸ್ಸಿಯಾಗಿ ಜರುಗಿಸಲು ನಿರ್ಣಯ ಕೈಗೊಳ್ಳಲಾಯಿತು.ಈ ವೇಳೆ ಮಾತನಾಡಿದ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ದೈಹಿಕ ಶಿಕ್ಷಕರ ಬಳಗದ ಸಹಕಾರ ಕ್ರೀಡಾಕೂಟ ಯಶಸ್ಸಿಗೆ ಅತ್ಯಗತ್ಯ. ಅಚ್ಚುಕಟ್ಟಾಗಿ, ಯಾವುದೇ ಸಮಸ್ಯೆಗಳಾಗದಂತೆ ಕೂಟ ನೆರವೇರಿಸಿಕೊಡಲು ಮನವಿ ಮಾಡಿದರು. ಸ್ವಾಗತ ಸಮಿತಿ, ನ್ಯಾಯದಾನ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಶ್ರೀ ಷಣ್ಮುಖ ಶಿವಯೋಗಿಗಳು ಮತ್ತು ಈರಯ್ಯ ಶರಣರು ನುಡಿದಂತೆ ನಡೆಯುವ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ್ದಾರೆ ಎಂದು ಸಾನಿದ್ಯ ವಹಿಸಿದ ವಿರಕ್ತಮಠದ ತಿಕೋಟಾದ ಚೆನ್ನಮಲ್ಲಿಕಾರ್ಜುನ ಶ್ರೀಗಳುಹೇಳಿದರು.ತಾಲೂಕಿನ ಅಥರ್ಗಾ ಗ್ರಾಮದ ಶ್ರೀ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದಲ್ಲಿ ನಡೆದ ಷಣ್ಮುಖ ಶಿವಯೋಗಿಗಳು ಮತ್ತು ಈರಯ್ಯ ಶ್ರೀಗಳ ಪುಣ್ಯಾರಾಧನೆ ಗುರು ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ನೇತೃತ್ವ ವಹಿಸಿದ ಗುರುದೇವಾಶ್ರಮ ಅಥರ್ಗಾದ ಈಶ ಪ್ರಸಾದ ಶ್ರೀಗಳು ಮಾತನಾಡಿ, ಮನುಷ್ಯ ಜೀವನ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ಬದುಕಿನ ಸಾರ್ಥಕತೆ ಪರೋಪಕಾರ ಮತ್ತು ಸಹಬಾಳ್ವೆ ಯಿಂದ ಸಾದ್ಯ ಎಂದರು.ಷಣ್ಮುಖ ಶಿವಯೋಗಿಗಳು ಮತ್ತು ಈರಯ್ಯ ಶರಣರು ಸಮಾಜದಲ್ಲಿನ ಜಾತಿ ಮತಗಳ ಅಂತರ ತೊಡೆದುಹಾಕಿ ಸಮಾನತೆಯನ್ನು ಪ್ರತಿಪಾದಿಸಿದರು. ಪ್ರತಿಯೊಂದು ವೃತ್ತಿಗೂ ಗೌರವ ಬರುವಂತೆ ಬಾಳಿ ತೋರಿಸಿದರು ಎಂದರು.ಚಡಚಣ ಗುರುದೇವಾಶ್ರಮದ ಯೋಗಾನಂದ ಶ್ರೀಗಳು ಮಾತನಾಡಿ, ವಚನಗಳ ಮೂಲಕ ಶಿವಶರಣರು ಜೀವನ ಮೌಲ್ಯವನ್ನು ಜನರಲ್ಲಿ ಬಿತ್ತಿದ್ದಾರೆ. ಈ ಮೌಲ್ಯಗಳು ಇಂದಿಗೂ ಉಳಿಯಲು ಅದರ ನೈಜತೆಯೇ ಕಾರಣವಾಗಿದೆ. ಇಂದಿನ ದಿನಗಳಲ್ಲಿ ವಚನಗಳಲ್ಲಿನ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತ ಸಂಘದ ಸಂಘಟನೆ ಬಲಪಡಿಸಿರಿ ಉತ್ತಮ ರೈತಪರ ಸಂಘಟನೆಯಾಗಿ ಬೆಳೆಯುತ್ತಿರುವುದು ಅದ್ಭುತ ಬೆಳವಣಿಗೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಹೇಳಿದರು.ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದ ಹನುಮಾನ ಮಂದಿರ ಆವರಣದಲ್ಲಿ ಶನಿವಾರ ನಡೆದ ರಾಜ್ಯ ರೈತ ಸಂಘದ ಘಟಕವನ್ನು ಉಧ್ಘಾಟಿಸಿ ಮಾತನಾಡಿದ ಅವರು, ರೈತರ ಬಗ್ಗೆ ಯಾರಿಗೂ ಯಾವ ಪಕ್ಷಗಳಿಗೂ ಕಾಳಜಿ ಇರುವುದಿಲ್ಲ. ರೈತನನ್ನು ಯಾವ ಸರ್ಕಾರವೂ ಇಲ್ಲಿಯವರೆಗೆ ಉಧ್ಧಾರ ಮಾಡಿಲ್ಲ ಮತ್ತು ಮಾಡುವುದಿಲ್ಲ. ಸರ್ಕಾರ ರೈತರಿಗೆ ನಿರಂತರವಾಗಿ ವಿದ್ಯುತ್, ನೀರು ನೀಡುವಲ್ಲಿ ವಿಫಲವಾಗಿದೆ. ರೈತರು ಬ್ಯಾಂಕ್‌ನವರ ಮುಂದೆ ಭೀಕ್ಷುಕನಂತೆ ನಿಲ್ಲುವದು ತಪ್ಪಿಲ್ಲ. ರೈತರಿಗೆ ಯಾವುದೇ ಸರ್ಕಾರವಿರಲಿ ರೈತರಿಗೆ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಬೇಕು. ಈ ಭಾಗದ ಎಲ್ಲಾ ರೈತರು ಸಂಘಟಿತರಾಗಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿವಪ್ಪಗೌಡ ಮಳಗೊಂಡ, ಸಿದ್ದನಗೌಡ ಬಿರಾದಾರ, ಪ್ರಕಾಶ ಆಲಕುಂಟಿ, ಶಂಕರೇಪ್ಪ ನಾವಿ, ಗುಡುಸಾಬ ಬರಡೋಲ, ಧರೇಪ್ಪ ಕೋಳಿ, ಶರಣಪ್ಪ ಹಡಪದ, ಶಿವಪ್ಪ ಕೋಟಿ,…
