ಉದಯರಶ್ಮಿ ದಿನಪತ್ರಿಕೆ
ಚಡಚಣ: ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಪುಸ್ತಕ ಜ್ಞಾನವಷ್ಟೇ ಸಾಲದು, ಮಸ್ತಕ ಜ್ಞಾನವೂ ಬೇಕು. ತರಗತಿಯಲ್ಲಿ ಪಡೆದ ಜ್ಞಾನದೊಂದಿಗೆ ಲೋಕ ಜ್ಞಾನವೂ ಬೇಕು. ವಿಷಯ ಜ್ಞಾನದೊಂದಿಗೆ ವ್ಯವಹಾರ ಜ್ಞಾನವಿದ್ದರೆ ಮಾತ್ರ ಯಶಸ್ಸು ಗಳಿಸಬಹುದು ಎಂದು ಅಧ್ಯಾತ್ಮಿಕ ಚಿಂತಕರು ಹಾಗೂ ವಿಶ್ರಾಂತ ಮುಖ್ಯ ಅಭಿಯಂತರರು ಆದ ಶಂಕರ ದೇವನೂರ ಹೇಳಿದರು.
ಹೋರ್ತಿ ಗ್ರಾಮದ ಸರ್ವೋದಯ ಪದವಿ ಪೂರ್ವ ಮಹಾವಿದ್ಯಾಲಯ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ 2025 ಉದ್ಘಾಟಿಸಿ ಮಾತನಾಡಿ, ಅವರು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಿಕ್ಷಕರ ವೃತ್ತಿ ಶ್ರೇಷ್ಠ ವೃತ್ತಿ. ಶಿಕ್ಷಕರು ಶರಣರ ವಚನಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಬೆಳೆಸಬೇಕು ಈ ನಿಟ್ಟಿನಲ್ಲಿ ಹೋರ್ತಿ ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಶಿಕ್ಷಕರು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆ ಸಂಸ್ಕಾರ ನೀಡುವ ಮಾಹಾನ ಕಾಯ೯ ಮಾಡುತ್ತಿದೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಂದೆ ತಾಯಿ ಸಮಾಜದ ಹಾಗೂ ದೇಶದ ಋಣ ತೀರಿಸುವ ಜವಾಬ್ದಾರಿ ಇದೆ ಎಂದರು.
ಮುಖ್ಯ ಅತಿಥಿ ಅಶೋಕ ಹಂಚಲಿ ಮಾತನಾಡಿ, ಜೀವನದಲ್ಲಿ ದೊಡ್ಡದಾದ ಗುರಿಗಳನ್ನು ಹಾಕಿಕೊಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಪೋಷಕರು ಹೆಮ್ಮೆಪಡುವಂತಹ ಸಾಧನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸವೋದಯ ಶಿಕ್ಷಣ ಸಂಸ್ಥೆಯ ವತಿಯಿಂದ ನಿವೃತ್ತ ನೌಕರರಿಗೆ ಸನ್ಮಾನ ಮಾಡಲಾಯಿತು.
ಈ ಕ್ರಾರ್ಯಕ್ರಮದ ಸಾನಿಧ್ಯವನ್ನು ಶಿವಯೋಗಿಗಳು ಮತ್ತು ಆಧ್ಯಾತ್ಮಿಕ ಚಿಂತಕರಾದ ಶ್ರೀಧರ ಮುರಾಳೆ ವಹಿಸಿದರು. ಕ್ರಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ. ಶಿ. ಪೂಜಾರಿ ವಹಿಸಿದರು.
ಕ್ರಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಮತ್ತು ಪತ್ರಕರ್ತ
ಅನಿಲ ಹೊಸಮನಿ, ಸಂಸ್ಥೆಯ ನಿರ್ದೇಶಕರಾದ ರಮೇಶ ಬಲ್ಲಿದ, ಸರ್ವೋದಯ ಶಿಕ್ಷಣ ಸಂಸ್ಥೆಯ ಪಿ.ಯು ವಿಭಾಗದ ಪ್ರಾಂಶುಪಾಲರಾದ ಪರಶುರಾಮ ಬಿ. ಭಾವಿಕಟ್ಟಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿಭಾಗದ ಮುಖ್ಯೋಪಾಧ್ಯಾಯರದ ಲಕ್ಷ್ಮಣ ಚೌಧರಿ,ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ರಾಜಶೇಖರ ವಿಮ.ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ಭಾಗವಹಿಸಿದ್ದರು.
ಶಿಕ್ಷಕ ನಬಿಲಾಲ್ ಬಾಗವಾನ ಸ್ವಾಗತ ಕೋರಿದರು , ಶಿಕ್ಷಕರಾದ ಬಸವರಾಜ ಕೋತ ಕಾರ್ಯಕ್ರಮ ನಿರೂಪಿಸಿದರು.

