Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

೪ ವರ್ಷಗಳಿಂದ ನೆನೆಗುದಿಗೆ ಬಿದ್ದ ಬಡ್ತಿ ಭಾಗ್ಯಕ್ಕೆ ಮೋಕ್ಷ

ಅಭಿವೃದ್ಧಿಯೇ ನನ್ನ ಮೂಲ ಮಂತ್ರ :ಶಾಸಕ ಮನಗೂಳಿ

ವಿಜೃಂಭಣೆಯ ಶ್ರೀ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಸಂಪನ್ನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆದರ್ಶ ಶಿಕ್ಷಕ ಬಲಿಷ್ಠ ರಾಷ್ಟ್ರದ ನಿರ್ಮಾತೃ :ಪ್ರೊ.ಬಗಲಿ
(ರಾಜ್ಯ ) ಜಿಲ್ಲೆ

ಆದರ್ಶ ಶಿಕ್ಷಕ ಬಲಿಷ್ಠ ರಾಷ್ಟ್ರದ ನಿರ್ಮಾತೃ :ಪ್ರೊ.ಬಗಲಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ತಿಕೋಟಾ ನೂತನ ಕಲಾ ಮಹಾವಿದ್ಯಾಲಯದಲ್ಲಿ ಸೇವಾ ವಯೋನಿವೃತ್ತಿ ಸಮಾರಂಭ

ಉದಯರಶ್ಮಿ ದಿನಪತ್ರಿಕೆ

ತಿಕೋಟಾ: ಮನುಷ್ಯನಾದವನು ತನ್ನ ಕೆಲಸ ಕಾರ್ಯದಲ್ಲಿ ಸಹಕಾರ, ಸಹಬಾಳ್ವೆ, ಸಮನ್ವಯತೆ ಹಾಗೂ ಎಲ್ಲರ ಜೊತೆ ಉತ್ತಮ ಸಂಬಂಧ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ವಿಲಾಸ ಬಗಲಿ ಅವರು ಹೇಳಿದರು.
ಬಿ ಎಲ್ ಡಿ ಇ ಸಂಸ್ಥೆಯ ತಿಕೋಟಾ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಆರ್. ಬಿ. ಸಿರಸಂಗಿ ಹಾಗೂ ಕಚೇರಿಯ ಸಹಾಯಕಿ ಮಲ್ಲಮ್ಮ ವಿಭೂತಿಯವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರಿಗೆ ಬೋಧನಾ ವೃತ್ತಿಯಲ್ಲಿ ಅಳವಡಿಸಿಕೊಂಡ ಅತ್ಯುತ್ತಮ ಕಲಿಕಾ ವಿಧಾನವೇ ಅವರನ್ನು ಜನಪ್ರಿಯಗೊಳಿಸುತ್ತದೆ. ಅಂತವರ ಸಾಲಿನಲ್ಲಿ ಶಿರಸಂಗಿಯವರು ಒಬ್ಬರಾಗಿದ್ದಾರೆ. ಉತ್ತಮ ಶಿಕ್ಷಕರ ಶ್ರೇಷ್ಠ ಗುಣಗಳನ್ನು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಹೀಗಾಗಿ ಶಿಕ್ಷಕರಲ್ಲಿ ಪ್ರಾಮಾಣಿಕತೆ, ಆದರ್ಶ, ನಿಷ್ಠೆ, ಹಾಗೂ ದಕ್ಷತೆ ಬಹಳ ಮಹತ್ವದ್ದಾಗಿವೆ. ಒಬ್ಬ ಸಾಮಾನ್ಯ ಶಿಕ್ಷಕ ಜಗತ್ತಿನಲ್ಲಿ ಏನೆಲ್ಲಾ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ನವರು. ಈ ಮಹಾತ್ಮರ ಆದರ್ಶಗಳು ಯಾವತ್ತೂ ಪ್ರಸ್ತುತವೆನಿಸುತ್ತವೆ. ವ್ಯಕ್ತಿ ಜವಾಬ್ದಾರಿಯ ಕೆಲಸ ನಿರ್ವಹಿಸುತ್ತಿರುವಾಗ ಧೈರ್ಯ, ಸ್ಥೈರ್ಯ , ಆತ್ಮವಿಶ್ವಾಸ ಬಹಳ ಮುಖ್ಯವನಿಸುತ್ತದೆ ಎಂದರು. ಪ್ರೊಫೆಸರ್ ಆರ್ ಬಿ ಸಿರಸಂಗಿ ಹಾಗೂ ಮಲ್ಲಮ್ಮ ವಿಭೂತಿಯವರ ವಯೋನಿವೃತ್ತಿ ಜೀವನ ಸುಖವಾಗಿರಲೆಂದು ಶುಭ ಹಾರೈಸಿದರು.
ಇದಕ್ಕೂ ಮುನ್ನ ಬಿ. ಎಲ್. ಡಿ. ಸಂಸ್ಥೆಯ ವತಿಯಿಂದ ಆಡಳಿತಾಧಿಕಾರಿ ಪ್ರೊ .ವಿಲಾಸ ಬಗಲಿ ಅವರು ಸಿರಸಂಗಿ ದಂಪತಿಗಳನ್ನು ಹಾಗೂ ಮಲ್ಲಮ್ಮ ವಿಭೂತಿಯವರನ್ನು ಸತ್ಕರಿಸಿ ಅಭಿನಂದಿಸಲಾಯಿತು.
ನಂತರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಎ.ಬಿ ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಮಾಧ್ಯಮಿಕ ಶಾಲೆಯ ಕನ್ನಡ ಮತ್ತು ಆಂಗ್ಲ ವಿಭಾಗಗಳ ಮುಖ್ಯಸ್ಥರು ಸತ್ಕರಿಸಿದರು.
ಶ್ರೀ ಗಜಾನನ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಎಸ್. ಪಿ. ಪಾಟೀಲ್ ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಚಾರ್ಯರಾದ ಎಂ.ಬಿ. ಭಿರಡಿ, ನಿವೃತ್ತ ಪ್ರಾಧ್ಯಾಪಕ ಎಮ್. ಆರ್. ಹೂಗಾರ್ ಅವರು ಮಾತನಾಡಿದರು.
ಸಹ ಪಾಧ್ಯಾಪಕರಾದ ಡಾ. ಎಸ್.ಎನ್. ವಾಘ್ಮೋರೆ, ಡಾ. ರವಿಚಂದ್ರ ವಾಲೀಕಾರ, ಉಪನ್ಯಾಸಕ ಮಂಜುನಾಥ ಕಾಸೆ, ಹಾಗೂ ಹಳೆಯ ವಿದ್ಯಾರ್ಥಿಳಾದ ಮಹಮ್ಮದ್ ಮಕಂದಾರ್, ವೃಷಭನಾಥ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಎ ಬಿ ಜತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ. ಬಿ. ಪಾಟೀಲ, ನೂತನ ಕಲಾ ಮಹಾವಿದ್ಯಾಲಯದ ಸಂಯೋಜಕ ಎಸ್. ಪಿ. ಪಾಟೀಲ, ನಿವೃತ್ತ ಪ್ರಾಂಶುಪಾಲ ಎಸ್. ಪಿ. ಮದರೇಕರ್, ಪ್ರಾಧ್ಯಾಪಕ ತಮ್ಮಣ್ಣ ವೈ, ಎ. ಎಸ್. ಪಿ ಕಾಲೇಜಿನ ಪ್ರಾಂಶುಪಾಲ ಬಿ. ಎಸ್. ಬೆಳಗಲಿ, ಪ್ರೊ ಆರ್. ಎಸ್. ಕೋಟ್ಯಾಳ್, ಶ್ರೀ ಎ. ಬಿ. ಜತ್ತಿ ಪ್ರೌಢಶಾಲೆಯ ಉಪಪ್ರಾಚಾರ್ಯ ಡಿ.ಪಿ. ಬೆಳ್ಳಗಿ, ದೈಹಿಕ ಶಿಕ್ಷಕ ರವಿ ಗೋಖಲೆ, ಕಾಲೇಜಿನ ಸಹ ಪಾಧ್ಯಾಪಕರು, ಉಪನ್ಯಾಸಕರು, ಕಾಲೇಜಿನ ಹಳೆಯ ವಿದ್ಯಾರ್ಥಿ ಬಳಗ, ಬೋಧಕೇತರ ಸಿಬ್ಬಂದಿ, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿ ಕು.ಭಾಗ್ಯಶ್ರೀ ಜಾದವ್ ಪ್ರಾರ್ಥಿಸಿದರು. ಸಂತೋಷ್ ಹೆಗಡೆ ಸ್ವಾಗತಿಸಿದರು. ನಾಗರಾಜ್ ನರಳೆ ಪ್ರಾಚಾರ್ಯರ ಸೇವಾ ಮಾಹಿತಿಯನ್ನು ಪರಿಚಯಿಸಿದರು. ಡಾ. ಸಂತೋಷ ನವಲಗುಂದ ನಿರೂಪಿಸಿದರು. ಪ್ರೊ ಶಿವಮೂರ್ತಿ ಅವರು ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

೪ ವರ್ಷಗಳಿಂದ ನೆನೆಗುದಿಗೆ ಬಿದ್ದ ಬಡ್ತಿ ಭಾಗ್ಯಕ್ಕೆ ಮೋಕ್ಷ

ಅಭಿವೃದ್ಧಿಯೇ ನನ್ನ ಮೂಲ ಮಂತ್ರ :ಶಾಸಕ ಮನಗೂಳಿ

ವಿಜೃಂಭಣೆಯ ಶ್ರೀ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಸಂಪನ್ನ

ಗರತಿಯ ಹಾಡುಗಳು ಮಾಯವಾಗುತ್ತಿರುವುದು ಕಳವಳಕಾರಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ೪ ವರ್ಷಗಳಿಂದ ನೆನೆಗುದಿಗೆ ಬಿದ್ದ ಬಡ್ತಿ ಭಾಗ್ಯಕ್ಕೆ ಮೋಕ್ಷ
    In (ರಾಜ್ಯ ) ಜಿಲ್ಲೆ
  • ಅಭಿವೃದ್ಧಿಯೇ ನನ್ನ ಮೂಲ ಮಂತ್ರ :ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ವಿಜೃಂಭಣೆಯ ಶ್ರೀ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಗರತಿಯ ಹಾಡುಗಳು ಮಾಯವಾಗುತ್ತಿರುವುದು ಕಳವಳಕಾರಿ
    In (ರಾಜ್ಯ ) ಜಿಲ್ಲೆ
  • ಎಕ್ಸಲಂಟ್ ಸಂಸ್ಥೆಯಿಂದ ೨೯ ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಸಾಂಸ್ಕೃತಿಕ ಕಲರವ, ಚಿಣ್ಣರ ಕುಣಿತ ಸಭಿಕರ ನಲಿತ
    In (ರಾಜ್ಯ ) ಜಿಲ್ಲೆ
  • ಜಾಹೀರಾತು ನೀತಿ–೨೦೨೬ ವಿರುದ್ಧ ಸ್ಥಳಿಯ ಪತ್ರಿಕೆಗಳ ಆಕ್ರೋಶ!
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ ಮಾ.೧೮ ರ ಇಂಗ್ಲೀಷ ಪರೀಕ್ಷೆಪ್ರಶ್ನೆಯ ಉತ್ತರದಲ್ಲಿ ಗೊಂದಲ
    In (ರಾಜ್ಯ ) ಜಿಲ್ಲೆ
  • ವಿದ್ಯುತ್ ವ್ಯತ್ಯಯತುರ್ತು ಸೇವಾ ಕೇಂದ್ರ ಸಂಪರ್ಕಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಮಾ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.