ಉದಯರಶ್ಮಿ ದಿನಪತ್ರಿಕೆ
ಇಂಡಿ: ಶ್ರೀ ಷಣ್ಮುಖ ಶಿವಯೋಗಿಗಳು ಮತ್ತು ಈರಯ್ಯ ಶರಣರು ನುಡಿದಂತೆ ನಡೆಯುವ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ್ದಾರೆ ಎಂದು ಸಾನಿದ್ಯ ವಹಿಸಿದ ವಿರಕ್ತಮಠದ ತಿಕೋಟಾದ ಚೆನ್ನಮಲ್ಲಿಕಾರ್ಜುನ ಶ್ರೀಗಳು
ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಶ್ರೀ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದಲ್ಲಿ ನಡೆದ ಷಣ್ಮುಖ ಶಿವಯೋಗಿಗಳು ಮತ್ತು ಈರಯ್ಯ ಶ್ರೀಗಳ ಪುಣ್ಯಾರಾಧನೆ ಗುರು ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೇತೃತ್ವ ವಹಿಸಿದ ಗುರುದೇವಾಶ್ರಮ ಅಥರ್ಗಾದ ಈಶ ಪ್ರಸಾದ ಶ್ರೀಗಳು ಮಾತನಾಡಿ, ಮನುಷ್ಯ ಜೀವನ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ಬದುಕಿನ ಸಾರ್ಥಕತೆ ಪರೋಪಕಾರ ಮತ್ತು ಸಹಬಾಳ್ವೆ ಯಿಂದ ಸಾದ್ಯ ಎಂದರು.
ಷಣ್ಮುಖ ಶಿವಯೋಗಿಗಳು ಮತ್ತು ಈರಯ್ಯ ಶರಣರು ಸಮಾಜದಲ್ಲಿನ ಜಾತಿ ಮತಗಳ ಅಂತರ ತೊಡೆದುಹಾಕಿ ಸಮಾನತೆಯನ್ನು ಪ್ರತಿಪಾದಿಸಿದರು. ಪ್ರತಿಯೊಂದು ವೃತ್ತಿಗೂ ಗೌರವ ಬರುವಂತೆ ಬಾಳಿ ತೋರಿಸಿದರು ಎಂದರು.
ಚಡಚಣ ಗುರುದೇವಾಶ್ರಮದ ಯೋಗಾನಂದ ಶ್ರೀಗಳು ಮಾತನಾಡಿ, ವಚನಗಳ ಮೂಲಕ ಶಿವಶರಣರು ಜೀವನ ಮೌಲ್ಯವನ್ನು ಜನರಲ್ಲಿ ಬಿತ್ತಿದ್ದಾರೆ. ಈ ಮೌಲ್ಯಗಳು ಇಂದಿಗೂ ಉಳಿಯಲು ಅದರ ನೈಜತೆಯೇ ಕಾರಣವಾಗಿದೆ. ಇಂದಿನ ದಿನಗಳಲ್ಲಿ ವಚನಗಳಲ್ಲಿನ ಸಂದೇಶದ ಪಾಲನೆ ಅಗತ್ಯವಿದೆ ಎಂದರು.
ಶಿವಣಗಿಯ ಗುರುದೇವಾಶ್ರಮದ ಶ್ರೀ ಶಿವಲಿಂಗ ಶ್ರೀಗಳು, ನಾಗಠಾಣದ ಶ್ರೀ ಪ್ರಜ್ಞಾನಂದ ಶ್ರೀಗಳು, ಹಿರೇಪಡಸಲಗಿಯ ಶ್ರೀ ಶಿವಪ್ರಸಾದ ಶ್ರೀಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಕ್ತ ಸಮೂಹ ಪಾಲ್ಗೊಂಡಿದ್ದರು.

