Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಧಾರವಾಡದ ಉತ್ತರ ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಹೊರ ರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳು ಸಂಚರಿಸುತ್ತಿದ್ದು, ಅಂತಹ ವಾಹನಗಳು ಕರ್ನಾಟಕದಲ್ಲಿ ನೋಂದಣಿಯಾಗದೆ ಇದ್ದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಧಾರವಾಡದ ಉತ್ತರ ಅಪರ ಸಾರಿಗೆ ಆಯುಕ್ತರಾದ ಕೆ.ಟಿ. ಹಾಲಸ್ವಾಮಿ ತಿಳಿಸಿದರು.ಬುಧವಾರ ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಹೊರ ರಾಜ್ಯ ವಾಹನಗಳ ತಪಾಸಣೆಗಾಗಿ ವಿಶೇಷ ತಪಾಸಣಾ ಕಾರ್ಯಕ್ರಮದ ಕುರಿತು ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ರಾಜ್ಯದಲ್ಲಿ ಪಾಂಡಿಚೇರಿ ಹಾಗೂ ಇತರ ರಾಜ್ಯಗಳಲ್ಲಿ ತೆರಿಗೆ ಕಡಿಮೆ ಇದ್ದು ಅಲ್ಲಿಂದ ವಾಹನಗಳನ್ನು ಖರೀದಿಸಿ ನೋಂದಣಿ ಮಾಡಿಕೊಂಡು ನಮ್ಮ ರಾಜ್ಯಗಳಲ್ಲಿ ವಾಹನಗಳು ಓಡಾಡುತ್ತಿವೆ. ಮೋಟಾರ ವಾಹನ ಕಾಯಿದೆಯಂತೆ ಬೇರೆ ರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳು ನಮ್ಮ ರಾಜ್ಯಗಳಲ್ಲಿ ಬಳಸಬೇಕಾದರ ವಾಹನ ನೋಂದಣಿಯಾದ ೧೧ ತಿಂಗಳಲ್ಲಿ ನಮ್ಮ ರಾಜ್ಯದ ನೋಂದಣಿ ಮಾಡಿಕೊಳ್ಳಬೇಕು. ಈಗ ಬಳಸುತ್ತಿರುವ ಹೆಚ್ಚಿನ ವಾಹನಗಳು ನಮ್ಮ ರಾಜ್ಯದ ನೋಂದಣಿ ಮಾಡಿಕೊಳ್ಳದೇ ಬರುವಂತಹ ರಾಜಸ್ವ ಸೋರಿಕೆಯಾಗುತ್ತಿದೆ ಆದುದರಿಂದ, ಬೆಳಗಾವಿ…
ಮಹಿಳಾ ವಿವಿಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ತರಬೇತಿ ಕಾರ್ಯಾಗಾರ | ಡಾ.ಜಿ.ವೆಂಕಟೇಶ ಕುಮಾರ್ ಕಿವಿಮಾತು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳೆಯರು ಸಿದ್ಧ ಮಾದರಿಯಿಂದ ಹೊರಬನ್ನಿ. ನಿಮ್ಮನ್ನು ನೀವು ಅರಿತುಕೊಂಡು ವೃತ್ತಿಯಲ್ಲಿ ತೊಡಗಿ ಉನ್ನತ ಸ್ಥಾನ ಅಲಂಕರಿಸಿ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ವೆಂಕಟೇಶ ಕುಮಾರ್ ಉದ್ಯೋಗಸ್ಥ ಮಹಿಳೆಯರಿಗೆ ಕಿವಿಮಾತು ಹೇಳಿದರು.ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ, ರಾಜ್ಯ ಉನ್ನತ ಶಿಕ್ಷಣ ಪರಿಷತ್, ಮಹಿಳಾ ವಿವಿಯ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.ಮಹಿಳೆಯರು ಸಿದ್ಧಮಾದರಿ ಪಾತ್ರಗಳಿಂದ ಹೊರಬರುತ್ತಿದ್ದಾರೆ. ದುಡಿಮೆ ವಲಯಕ್ಕೆ ಹೆಜ್ಜೆ ಇರಿಸಿ ವೃತ್ತಿಪರ ಮಹಿಳೆಯರು ಆಗುತ್ತಿರುವುದು ಸಂತೋಷ. ಆದರೆ ಕೇವಲ ದುಡಿಮೆಯ ವಲಯದಲ್ಲಿ ಗೋಚರಿಸಿದರೆ ಸಾಲದು. ವೃತ್ತಿಯಲ್ಲಿ ಉನ್ನತ ಸ್ಥಾನಗಳನ್ನು ಹೊಂದಬೇಕು. ವೃತಿ ಮತ್ತು ವೈಯಕ್ತಿಕ ಜೀವನದ ನಡುವೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸಕ್ತ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ-ಕಾಲೇಜು ವಿದ್ಯಾರ್ಥಿನಿಯರಿಗೆ ೬ ತಿಂಗಳ ಕರಾಟೆ- ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ ನೀಡಲು ಅರ್ಹ ಮಹಿಳಾ ತರಬೇತಿದಾರರಿಂದ ಅರ್ಜಿ ಆಹ್ವಾನಿಸಲಾಗಿದೆಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ-ಕಾಲೇಜು, ಅಲ್ಪಸಂಕ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ-ಕಾಲೇಜು ಹಾಗೂ ಸರ್ಕಾರಿ ಮುಸ್ಲಿಂ ವಸತಿ ಶಾಲೆ-ಕಾಲೇಜುಗಳಲ್ಲಿ ೬ ರಿಂದ ೯ನೇ ತರಗತಿ ಹಾಗೂ ೧೧ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ೬ ತಿಂಗಳ ಕರಾಟೆ ತರಬೇತಿ ನೀಡಲು ಅರ್ಹ ಮಹಿಳಾ ತರಬೇತಿದಾರರಿಂದ ಅಕ್ಟೋಬರ್ ೩ರೊಳಗಾಗಿ ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸುವವರು ನುರಿತ ತರಬೇತಿದಾರರಾಗಿರಬೇಕು. ಸಾಮಾನ್ಯ ಪದವಿ ಪಡೆದಿರಬೇಕು. ಅಂಗೀಕೃತ ಸಂಸ್ಥೆಯಿಂದ ಬ್ಲ್ಯಾಕ್ ಬೆಲ್ಟ್ ಪಡೆದಿದ್ದು, ಮಾಸ್ಟರ್ ಕಾರ್ಡ್ ಅಥವಾ ಗುರುತಿನ ಚೀಟಿಯನ್ನು ಪಡೆದಿರಬೇಕು ಹಾಗೂ ಕರಾಟೆ ತರಬೇತಿಯಲ್ಲಿ ಸೇವಾನುಭವ ಪ್ರಮಾಣ ಪತ್ರ ಪಡೆದಿರಬೇಕು.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ೨೦೨೫-೨೬ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಮುಸ್ಲಿಂ, ಜೈನರು, ಬೌದ್ಧರು, ಸಿಖ್ ಹಾಗೂ ಪಾರ್ಸಿ ಜನಾಂಗದವರು ಸ್ವಾವಲಂಬಿ ಸಾರಥಿ ಯೋಜನೆ, ವೃತ್ತಿ ಪ್ರೋತ್ಸಾಹ ಸಾಲ ಯೋಜನೆ, ನೇರ ಸಾಲ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ (ಫ್ರೆಶ್), ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಪ್ರೋತ್ಸಾಹಧನ ಯೋಜನೆ ಹಾಗೂ ಸಾಂತ್ವನ ಯೋಜನೆಗಾಗಿ ಸಹಾಯಧನ ಸೌಲಭ್ಯ ಪಡೆಯಲು ಅಕ್ಟೋಬರ್ ೧೬ರೊಳಗಾಗಿ https://kmdconline.karnataka.gov.in/ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಜಯಪುರದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ: ೦೮೩೫೨-೨೭೮೩೪೪ ಹಾಗೂ ಮೊಬೈಲ್ ಸಂಖ್ಯೆ: ೮೨೭೭೯೪೪೨೦೯ ಸಂಪರ್ಕಿಸಬಹುದಾಗಿದೆ ಎಂದು ವಿಜಯಪುರದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.
ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಇದೇ ಅಕ್ಟೋಬರ್ ೨ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಯೋಜನೆಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಅಧಿಕಾರಿಗಳಿಗೆ ಸೂಚಿಸಿದರು.ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದರು.ಸಾರ್ವಜನಿಕರಿಗೆ ಮಹಾತ್ಮ ಗಾಂಧೀಜಿಯವರ ಬದುಕು, ಆದರ್ಶ ಹಾಗೂ ಅವರ ಜೀವನ ಸಂದೇಶದ ಅರಿವು ಮೂಡಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ ೩೦ ರಂದು ಬೆಳಗ್ಗೆ ೬.೩೦ಕ್ಕೆ ಸೈನಿಕ ಶಾಲೆಯ ಎದುರಿಗೆ ಇರುವ ಲಾಲ್ ಬಹದೂರ ಶಾಸ್ತ್ರಿ ಪುತ್ಥಳಿಯಿಂದ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಸೈಕಲ್ ಜಾಥಾ ತಂಡವು ಇಂಡಿ ರಸ್ತೆ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಶ್ರಮ ದಾನ ಕೈಗೊಳ್ಳಲಾಗುವುದು.ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ವಿವಿಧ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ದೇಶದಲ್ಲಿ ಬಲಿಷ್ಠ ಹಾಗೂ ಜನಪರ, ಭ್ರಷ್ಟಾಚಾರ ರಹಿತ ಆಡಳಿತ ನೀಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿಯಿಂದ “ಸೇವಾ ಪಾಕ್ಷಿಕ” ಸಾಮಾಜಿಕ ಸೇವಾ ಅಭಿಯಾನ ಭಾಗವಾಗಿ ಬಸವನಬಾಗೇವಾಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ “ಸೇವಾ ಪಾಕ್ಷಿಕ” ಅಭಿಯಾನದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17 ಹಾಗೂ ಸೆಪ್ಟೆಂಬರ್ 25 ರಂದು ಪಂಡಿತ ದೀನದಯಾಳ ಉಪಾಧ್ಯಾಯ, ಮಹಾತ್ಮ ಗಾಂಧಿ ರವರ ಜನ್ಮದಿನವಾದ ಅಕ್ಟೋಬರ್ 02 ರ ವರೆಗೆ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡು ಈಗಾಗಲೇ 17ರಂದು ರಕ್ತದಾನ, ಸ್ವಚತಾಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದು ಇದರ ಅಂಗವಾಗಿ ಬಸವನಬಾಗೇವಾಡಿ ಮಂಡಲದಲ್ಲಿ ಬರುವ 6 ಜಿಲ್ಲಾ ಪಂಚಾಯತ್ ಮತಕ್ಷೇತ್ರಗಳ ಮತ್ತು ಒಂದು ಪುರಸಭೆ, 3 ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ…
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ | ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಸರಸ್ವತಿ ಸಮ್ಮಾನ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಎಸ್ಎಲ್ ಬೈರಪ್ಪ (94) ಬುಧವಾರ ನಿಧನರಾದರು.ಪರ್ವ, ಉತ್ತರಕಾಂಡ, ವಂಶವೃಕ್ಷ, ಆವರಣ ಸೇರಿ ಹಲವು ಕೃತಿಗಳನ್ನು ಎಸ್ಎಲ್ ಬೈರಪ್ಪ ರಚಿಸಿದ್ದರು. ಇಂದಿಗೂ ಕೂಡ ಎಸ್ಎಲ್ ಭೈರಪ್ಪನವರ ಕೃತಿಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.ಮೈಸೂರಿನಲ್ಲಿ ವಾಸವಿದ್ದ ಎಸ್ಎಲ್ ಬೈರಪ್ಪ ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಎಸ್ಎಲ್ ಭೈರಪ್ಪ ಅವರ ಅನೇಕ ಕೃತಿಗಳು ಮರಾಠಿ, ಗುಜರಾತ್ ಸೇರಿದಂತೆ ದೇಶದ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಎಸ್ ಎಲ್ ಬೈರಪ್ಪ ನಿಧನರಾಗಿದ್ದಾರೆ.ಗುರುವಾರ ಬೆಳಿಗ್ಗೆ 8 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. ಆ ಬಳಿಕ ಎಸ್ ಭೈರಪ್ಪ ಅವರ ಅಂತ್ಯಕ್ರಿಯೆ ಶುಕ್ರವಾರ ಅಂದರೆ ಸೆಪ್ಟೆಂಬರ್ 26ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಲಿದೆ. ಸುವರ್ಣ ಪದಕದೊಂದಿಗೆ…
ಹೆದ್ದಾರಿಯ ತಗ್ಗು-ಗುಂಡಿಗಳ ಮದ್ಯೆ ಸಸಿ ನೆಡುವ ಮೂಲಕ ಬಿಜೆಪಿ ಪ್ರತಿಭಟನೆ | ಮಾಜಿ ಶಾಸಕ ರಮೇಶ ಭೂಸನೂರ ವಾಗ್ದಾಳಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ:ಉಪಚುನಾವಣೆಯಲ್ಲಿ ನಾನು ನೀಡದ್ದ ಭರವಸೆಗಳಾದ ಡಂಬಳ ಗ್ರಾಮದಿಂದ ಕರ್ನಾಳವರೆಗೆ ಡಾಂಬರ ರಸ್ತೆ, ಗೋಲ್ಲಾಳೇಶ್ವರ ದೇವಸ್ಥಾನದಿಂದ ಕೊಂಡಗೂಳಿವರೆಗೆ, ಗೋಲಗೇರಿಯಿಂದ ಗುಬ್ಬೆವಾಡವರೆಗೆ ರಸ್ತೆ ನನ್ನ ಅವಧಿಯಲ್ಲಿಯೇ ಆಗಿವೆ. ಸುಖಾ ಸುಮ್ಮನೆ ಟೀಕೆ ಮಾಡುವುದನ್ನು ಬಿಟ್ಟು, ಸುಳ್ಳು ಆಶ್ವಾಸನೆಗಳನ್ನು ನೀಡುವುದನ್ನು ಬಿಡಿ. ಶಾಸಕರೇ ನಿಮ್ಮ ಎರಡುವರೆ ವರ್ಷದ ಅವಧಿಯಲ್ಲಿ ಈ ಭಾಗದಲ್ಲಿ ಒಂದೇ ೧ಕಿಮೀ ರಸ್ತೆ ಮಾಡಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹಾಲಿ ಶಾಸಕರಿಗೆ ಸಾವಲೆಸೆದರು.ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಡಂಬಳ ಕ್ರಾಸ್‌ನಲ್ಲಿ ಹಾದು ಹೋಗುವ ಕೋಡಂಗಲ್ ರಾಜ್ಯ ಹೆದ್ದಾರಿಯ ತಗ್ಗು-ಗುಂಡಿಗಳ ಮದ್ಯೆ ಸಸಿ ನೆಡುವ ಮೂಲಕ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ಕೋಡಂಗಲ್ ರಾಜ್ಯ ಹೆದ್ದಾರಿಯು ಸುಮಾರು ವರ್ಷದಿಂದ ಹದಗೆಟ್ಟು ಎಲ್ಲಂದರಲ್ಲಿ ತಗ್ಗು-ಗುಂಡಿಗಳು ಬಿದ್ದು ಪ್ರಾಣಾಪಯಕ್ಕೆ ಕೈಬಿಸಿ…
ಆರ್ಭಟಿಸುತ್ತಿರುವ ಭೀಮೆ ಆತಂಕದಲ್ಲಿ ಜನ | ನದಿ ಪಾತ್ರದ ಗ್ರಾಮಗಳಲ್ಲಿ ಹೆಚ್ಚಿದ ಪ್ರವಾಹದ ಪರಿಸ್ಥಿತಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರ ಜಿಲ್ಲೆಯ ಚಡಚಣ, ಇಂಡಿ, ಆಲಮೇಲ ತಾಲೂಕಿನಲ್ಲಿ ಹಾಯ್ದು ಹೋಗಿರುವ ಭೀಮಾ ನದಿಯು ತನ್ನ ಆರ್ಭಟವನ್ನು ಮುಂದುವರಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಭೀಮಾ ನದಿಯ ಉಪನದಿ ಹಾಗೂ ಭೀಮಾನದಿಗೆ ಸೇರುವ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹದ ಪರಿಸ್ಥಿತಿ ಮತ್ತಷ್ಟು ಹೆಚ್ಚಿದೆ. ಆಲಮೇಲ ತಾಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್‌ನಲ್ಲಿ ಮಂಗಳವಾರ ೨ಲಕ್ಷ ೪೦ಸಾವಿರ ಕ್ಯೂಸೆಕ್ಸ್ ಇದ್ದ ನೀರಿನ ಹರಿವಿನ ಪ್ರಮಾಣ ಬುಧವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಏರು ಮಟ್ಟದಲ್ಲಿ ಸಾಗಿ ಸಾಯಂಕಾಲದ ವೇಳೆಗೆ ೨ಲಕ್ಷ ೯೦ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ ಎಂದು ಅಫ್ಜಲಪುರ ಕೆಎನ್‌ಎನ್‌ಎಲ್ ಎಇಇ ಸಂತೋಷಕುಮಾರ ಸಜ್ಜನ ತಿಳಿಸಿದ್ದಾರೆ.ಹಳೆಯ ತಾರಾಪುರ ಗ್ರಾಮವನ್ನು ಸುತ್ತುವರೆದಿರುವ ಭೀಮಾನದಿಯ ನೀರು ಗ್ರಾಮವನ್ನು ಸಂಪೂರ್ಣ ನಡುಗಡ್ಡಿಯನ್ನಾಗಿಸಿದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಬಂದಿರುವ ಪರಿಣಾಮ ಗ್ರಾಮವು ಸಂಪೂರ್ಣ ನಡುಗಟ್ಟಾಗಿ ಪರಿವರ್ತನೆಯಾಗಿದೆ. ಹಳೆ ತಾವರಖೇಡ ಗ್ರಾಮದಲ್ಲಿ…
ವಿಜಯಪುರದ ಡಾ.ಮಹಾಂತೇಶ ಬಿರಾದಾರ ಉತ್ತರ ಕರ್ನಾಟಕದ ಏಕೈಕ ಪ್ರತಿನಿಧಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಧಾರ್ಮಿಕ ಇಲಾಖೆ ವ್ಯಾಪ್ತಿಯ ಐತಿಹಾಸಿಕ ದೇವಾಲಯಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ನಾನಾ ಕ್ಷೇತ್ರಗಳ ಗಣ್ಯರ ವಿಜನ್ ಗ್ರುಪ್ ರಚಿಸಲಾಗಿದ್ದು, ಸಮಿತಿಯ ಸದಸ್ಯರಾಗಿ ಡಾ. ಮಹಾಂತೇಶ ಬಿರಾದಾರ ಅವರನ್ನು ನೇಮಕ ಮಾಡಲಾಗಿದೆ. ಇವರು ಉತ್ತರ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿದ್ದಾರೆ.ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆಗಿರುವ ಡಾ. ಮಹಾಂತೇಶ ಬಿರಾದಾರ ಅವರನ್ನು ಏಳು ಜನ ಸದಸ್ಯರನ್ನು ಹೊಂದಿರುವ ವಿಜನ್ ಗ್ರುಪ್ ಸದಸ್ಯರನ್ನಾಗಿ ಧಾರ್ಮಿಕ ಇಲಾಖೆ ಆಯುಕ್ತರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ರಾಜ್ಯ ಧಾರ್ಮಿಕ ಪರಿಷತ್ ಸಭೆಯ ನಿರ್ದೇಶನದಂತೆ ಯಾವುದೇ ಆದಾಯವಿಲ್ಲದ 35165 ‘ಸಿ’ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾಜದ ಗಣ್ಯರು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡವ ವಿಜನ್ ಗ್ರುಪ್ (Vision Group) ರಚಿಸಲಾಗಿದೆ.ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 34563 ಅಧಿಸೂಚಿತ ದೇವಾಲಯಗಳಿವೆ ಇವುಗಳಲ್ಲಿ ಪ್ರವರ್ಗ “ಎ”…
