ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ದೇಶದಲ್ಲಿ ಬಲಿಷ್ಠ ಹಾಗೂ ಜನಪರ, ಭ್ರಷ್ಟಾಚಾರ ರಹಿತ ಆಡಳಿತ ನೀಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿಯಿಂದ “ಸೇವಾ ಪಾಕ್ಷಿಕ” ಸಾಮಾಜಿಕ ಸೇವಾ ಅಭಿಯಾನ ಭಾಗವಾಗಿ ಬಸವನಬಾಗೇವಾಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ “ಸೇವಾ ಪಾಕ್ಷಿಕ” ಅಭಿಯಾನದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17 ಹಾಗೂ ಸೆಪ್ಟೆಂಬರ್ 25 ರಂದು ಪಂಡಿತ ದೀನದಯಾಳ ಉಪಾಧ್ಯಾಯ, ಮಹಾತ್ಮ ಗಾಂಧಿ ರವರ ಜನ್ಮದಿನವಾದ ಅಕ್ಟೋಬರ್ 02 ರ ವರೆಗೆ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡು ಈಗಾಗಲೇ 17ರಂದು ರಕ್ತದಾನ, ಸ್ವಚತಾಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದು ಇದರ ಅಂಗವಾಗಿ ಬಸವನಬಾಗೇವಾಡಿ ಮಂಡಲದಲ್ಲಿ ಬರುವ 6 ಜಿಲ್ಲಾ ಪಂಚಾಯತ್ ಮತಕ್ಷೇತ್ರಗಳ ಮತ್ತು ಒಂದು ಪುರಸಭೆ, 3 ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪುರುಷರ ಹಗ್ಗಜಗ್ಗಾಟ ಮತ್ತು ಮಹಿಳೆಯರಿಗೆ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸೆ. 25 ರಂದು ಕೊಲ್ಹಾರ ನಗರ ಮತ್ತು ಮುಳವಾಡ ಜಿಲ್ಲಾ ಪಂಚಾಯತಿಯ ರೋಣಿಹಾಳ ಗ್ರಾಮದಲ್ಲಿ ಸೆ.26 ರಂದು ಮನಗೂಳಿ, ಸೆ.28 ನಿಡಗುಂದಿ ಪಟ್ಟಣದಲ್ಲಿ ಹಗ್ಗ ಜಗ್ಗಾಟ ಮತ್ತು ರಂಗೋಲಿ ಸ್ಪರ್ಧೆಯ ಜೊತೆಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.
ಬಸವನಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ ಕಾದಿ ಬಟ್ಟೆ ಮಾರಾಟ ಜೊತೆಗೆ ಹಗ್ಗ ಜಗ್ಗಾಟ, ರಂಗೋಲಿ ಸ್ಪರ್ಧೆ. ಸೆ.27 ರಂದು ಕೂಡಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಸೂತಿ ಗ್ರಾಮದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ಮತ್ತು ತೆಲಗಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ. ಸೆ.28 ರಂದು ಮುತ್ತಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಮುತ್ತಗಿ ಗ್ರಾಮದಲ್ಲಿ ಹಗ್ಗ ಜಗ್ಗಾಟ ಮತ್ತು ಮಸಬಿನಾಳ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ. ಸೆ.29 ಉಕ್ಕಲಿ ಜಿಲ್ಲಾ ಪಂಚಾಯತ ಮತ್ತು ಇಂಗಳೇಶ್ವರ ಪಂಚಾಯತಿಯ ಉಕ್ಕಲಿ ಗ್ರಾಮದಲ್ಲಿ ಹಗ್ಗ ಜಗ್ಗಾಟ, ರಂಗೋಲಿ ಸ್ಪರ್ಧೆ. ಸೆ.27 ರಂದು ಗೊಳಸಂಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗೋಳಸಂಗಿಯಲ್ಲಿ ಹಗ್ಗ ಜಗ್ಗಾಟ ಮತ್ತು ರಂಗೋಲಿ ಸ್ಪರ್ಧೆಯಯನ್ನು ಏರ್ಪಡಿಸಲಾಗಿದ್ದು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 5,000 ಮತ್ತು ದ್ವಿತೀಯ 3000 ರೂಪಾಯಿ ಬಹುಮಾನವನ್ನು ಕೂಡಮಾಡಲಾಗುವದು. ಮಹಿಳೆಯರಿಗೆ ಏರ್ಪಡಿಸಿದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 3000 ದ್ವಿತೀಯ ಸ್ಥಾನ ತೃತೀಯ ಸ್ಥಾನ ಪಡೆದವರಿಗೆ 1,000 ಬಹುಮಾನ ನೀಡಲಾಗುವುದು. ಇವೆಲ್ಲ ಪದ್ಯಗಳು ಮುಗಿದ ನಂತರ ಪ್ರಥಮ ದ್ವಿತೀಯ ತೃತೀಯ ಸ್ಥಾನ ಬಂದವರಿಗೆ ಅಕ್ಟೋಬರ್. 3 ರಂದು ವಿಜಯದಶಮಿಯ ಮರುದಿನ ಕೊಲ್ಹಾರ ಪಟ್ಟಣದಲ್ಲಿ ಸ್ನೇಹ ಮಿಲನ ಕಾರ್ಯಕ್ರಮದ ಜೊತೆಗೆ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಿಗೆ ಅಂತಿಮ (ಫೈನಲ್) ಸ್ಪರ್ಧಿಯನ್ನು ಏರ್ಪಡಿಸಲಾಗಿದ್ದು ಈ ಸ್ಪರ್ಧೆಗಳಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯ ಪ್ರಥಮ ಸ್ಥಾನಕ್ಕೆ 20.000, ದ್ವಿತೀಯ 15.000, ತೃತೀಯ ಸ್ಥಾನಕ್ಕೆ 10.000 ರೂ. ಬಹುಮಾನ ಘೋಷಿಸಿದ್ದು ಅದರಂತೆ ರಂಗೋಲಿ ಸ್ಪರ್ಧೆಗೆ ಪ್ರಥಮ ಸ್ಥಾನಕ್ಕೆ 10,000 ದ್ವಿತೀಯ ಸ್ಥಾನಕ್ಕೆ 5.000 ತೃತೀಯ ಸ್ಥಾನ 3000ಗಳನ್ನು ಬಹುಮಾನವಾಗಿ ನೀಡಲಾಗುವುದು ಎಲ್ಲ ಕಾರ್ಯಕ್ರಮಗಳಲ್ಲಿ ಮತಕ್ಷೇತ್ರದ ಎಲ್ಲಾ ಕಾರ್ಯಕರ್ತರು ಭಾಗವಹಿಸಿ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಹೇಳುವುದು.
ಈ ಸಂದರ್ಭದಲ್ಲಿ ಸಿ.ಎಂ. ಗಣಕುಮಾರ, ಈರಯ್ಯ ಮಠಪತಿ, ಇಸ್ಮಾಯಿಲಸಾಬ್ ತಹಶೀಲ್ದಾರ, ನಂದಪ್ಪ ಗಿಡ್ಡಪ್ಪಗೋಳ, ಸೇವಾ ಪಾಕ್ಷಿಕ ಅಭಿಯಾನದ ಸಂಚಾಲಕರಾದ ಜಗದೀಶ್ ಸುನಗದ, ಶ್ರೀಶೈಲ್ ಗಿಡ್ಡಪ್ಪಗೋಳ ಬಾಬು ಭಜಂತ್ರಿ ಇದ್ದರು.

