Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ರೈತ ಸಮೂಹಕ್ಕೆ ಪಾಲ್ಗೊಳ್ಳಲು ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೇ ೭ ರಿಂದ ೯ ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಬೃಹತ್ ರೈತ ಜಾಗೃತಿ ಸಮಾವೇಶ, ಕೃಷಿಮೇಳ, ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರಿಂದ ಚಿಂತನಾ ಘೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ವಾಲ್ ಪೋಸ್ಟರನ್ನು ಜಿಲ್ಲೆಯ ವಿವಿಧ ಮಠಾಧಿಶರು ಹಾಗೂ ಸರಕಾರಿ ಅಧಿಕಾರಿಗಳು ಮತ್ತು ಮುಖಂಡರಿಂದ ಬಿಡುಗಡೆಗೋಳಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.ಮೇ.೭ ರಂದು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಬೃಕತ್ ರೈತ ಶೋಭಾಯಾತ್ರೆಯು ವಿವಿಧ ಕಲಾ ತಂಡಗಳಿಂದ ಗಾಂಧಿ ವೃತ್ತದ ಮಾರ್ಗವಾಗಿ ಕಂದಗಲ್ ಹಣಮಂತ್ರಾಯ ರಂಗಮಂದಿರದವರೆಗೆ ಆಗಮಿಸಿ ಕೃಷಿ ಮೇಳವನ್ನು ಉದ್ಘಾಟಿಸಿ ೩ ದಿನಗಳ ಕಾರ್ಯಕ್ರಮಗಳು ನಡೆಯಲಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಪತ್ರಿಕೆ ಪ್ರಕಟಣೆಯ ಮುಖಾಂತರ ತಿಳಿಸಿದರು.ಈ ವರ್ಷ ವಿಶೇಷವಾಗಿ ೩ ದಿನಗಳ ಕಾಲ ನಮ್ಮ ಜಿಲ್ಲೆಯ ಪ್ರತಿಯೊಂದು ಹಳ್ಳಿಯಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಯುವನಿಧಿ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ನಮ್ಮ ರಾಜ್ಯದ ಯುವಕರಿಗೆ ಆತ್ಮವಿಶ್ವಾಸ ಹಾಗೂ ಆರ್ಥಿಕ ನೆರವನ್ನು ನೀಡುವ ಉದ್ದೇಶವಿರುವ ಯೋಜನೆ ಎಂದು ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ ಹೇಳಿದರು.ಪಟ್ಟಣದ ಜಿ.ಆರ್. ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಮತ್ತು ನೇಮಕಾತಿ ಘಟಕ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ವಿಜಯಪುರ ಇವರ ಸಹಯೋಗದೊಂದಿಗೆ ಯುವನಿಧಿ ಬಗ್ಗೆ ಜಾಗೃತಿ ಕಾರ್ಯಕ್ರಮ ಜರುಗಿತು.ಪದವಿ ಅಥವಾ ಡಿಪ್ಲೊಮಾ ಪೂರೈಸಿದ ನಂತರ ಉದ್ಯೋಗವಿಲ್ಲದೆ ಇರುವ ಅರ್ಹ ಅಭ್ಯರ್ಥಿಗಳಿಗೆ ನಿರ್ದಿಷ್ಟ ಸಮಯದವರೆಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಇದು ತಮ್ಮ ಮುಂದಿನ ಉದ್ಯೋಗ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಪಠಣೆಗೆ ಸಹಾಯವಾಗಲಿದೆ. ಈ ಯೋಜನೆಯ ಉದ್ದೇಶ ಮಾತ್ರ ಹಣದ ನೆರವು ನೀಡುವುದು ಮಾತ್ರವಲ್ಲ — ಆದರೆ ಯುವಕರಲ್ಲಿ ಮುಂದಿನ ಹೆಜ್ಜೆ ಇಡುವ ಆತ್ಮವಿಶ್ವಾಸ ಹಾಗೂ ಉತ್ಸಾಹ ತುಂಬುವುದು ಕೂಡ.…
ಉದಯರಶ್ಮಿ ದಿನಪತ್ರಿಕೆ ಇಂಡಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕದಲ್ಲಿ ಹರಿಯುವ ಭೀಮಾ ನದಿಗೆ ೬೦೦೦ ಕ್ಯೂ ಸೆಕ್ಸ ನೀರು ನದಿ ಪಾತ್ರಕ್ಕೆ ಹರಿಯಬಿಡಲಾಗಿದೆ.ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಮತ್ತು ವಿಜಯಪುರ ಜಿಲ್ಲಾಧಿಕಾರಿ ಗಳ ಮನವಿ ಮೇರೆಗೆ ಸೋಲಾಪುರ ಜಿಲ್ಲಾಧಿಕಾರಿಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಸೋಲಾಪುರ ಸಂಸದೆ ಪ್ರಣಿತಾ ಶಿಂಧೆ ಇವರಿಗೆ ಮಾಡಿಕೊಂಡ ಮನವಿ ಮೇರೆಗೆ ಭೀಮಾ ಪಾತ್ರಕ್ಕೆ ನೀರು ಬಿಡಲಾಗಿದೆ.ಸಧ್ಯ ನೀರು ಇಂಡಿ ತಾಲೂಕಿನ ಬರಗುಡಿ ಗ್ರಾಮಕ್ಕೆ ಬಂದಿದ್ದು ಸಂಜೆ ಅಗರಖೇಡ ತಲುಪುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ನಿಧನ | ಏ.27ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ (RRI) ಅಂತಿಮ ದರ್ಶನಕ್ಕೆ ವ್ಯವಸ್ಥೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಇಸ್ರೋದ ಮಾಜಿ ಅಧ್ಯಕ್ಷ ಮತ್ತು ಮಹತ್ವಾಕಾಂಕ್ಷೆಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಕೆ ಕಸ್ತೂರಿರಂಗನ್ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅವರಿಗೆ 84 ವರ್ಷ ವಯಸ್ಸಾಗಿತ್ತು.’ಕಸ್ತೂರಿರಂಗನ್ ಅವರು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಏಪ್ರಿಲ್ 27ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ (RRI) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.NEPಯಲ್ಲಿನ ಶಿಕ್ಷಣ ಸುಧಾರಣೆಗಳ ಹಿಂದಿನ ವ್ಯಕ್ತಿ ಎಂದು ಕರೆಯಲ್ಪಡುವ ಕಸ್ತೂರಿರಂಗನ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.ಅಲ್ಲದೆ, ರಾಜ್ಯಸಭೆಯ ಸದಸ್ಯರಾಗಿ (2003-09) ಮತ್ತು ಭಾರತದ ಯೋಜನಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಸ್ತೂರಿರಂಗನ್ 2004ರ ಏಪ್ರಿಲ್ ನಿಂದ 2009 ರವರೆಗೆ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಸಂಸ್ಥೆಯ…
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆರೋಪ ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ಡಾ.ಶಂಕರ ಬಿದರಿ ಅವರು ತಮಗೆ ತಿಳಿದಿದ್ದನ್ನು ಮಾತನಾಡುವುದು ನೋಡಿದರೆ ಅವರು ಪಂಚಪೀಠದ ಸ್ವಾಮಿಗಳ ಪ್ರಭಾವಕ್ಕೆ ಒಳಗಾಗಿದ್ದಾರೆ, ಇಲ್ಲಾ ಅಂದ್ರೆ ಅವರಿಗೆ ವಯೋಸಹಜ ಅರಳು ಮರಳು ಅಂತ ಕಾಣುತ್ತದೆ. ಈ ಐಏಎಸ್ – ಐಪಿಎಸ್ ಅಧಿಕಾರಿಗಳು ಸೇವಾವಧಿಯಲ್ಲಿ ಏನೂ ಲಿಂಗಾಯತ ಧರ್ಮಕ್ಕೆ ಮಾಡದೇ ಈಗ ಏನೇನೋ ಹೇಳಿಕೆ ನೀಡಿ ಯಾರೋ ಆಡಿಸುವ ಸೂತ್ರದ ಗೊಂಬೆಯಾಗಿದ್ದಾರೆ ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಮತ್ತು ಇತರರು ಆರೋಪಿಸಿದ್ದಾರೆ.ಶುಕ್ರವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಶಂಕರ ಬಿದರಿ ಅವರು ತಮ್ಮ ವೀರಶೈವವನ್ನು ಜಗತ್ತಿನ ಶ್ರೇಷ್ಠ ಪಂಥ ಅಂತ ಹೇಳಿ ಕೊಳ್ಳಲಿ, ಆದರೆ ಬಸವ ತತ್ವದ ಗಂಧ ಗಾಳಿ ಗೊತ್ತಿರದೆ ಲಿಂಗಾಯತ ಒಂದು ಪಂಥ ಧರ್ಮ ಎನ್ನಲಾಗದು ಎಂದು ಹೇಳಲು ಇವರಿಗೆ ಲಿಂಗಾಯತ ಧರ್ಮದ ಬಗ್ಗೆ ಏನು ಗೊತ್ತಿದೆ. ಇಂತವರನ್ನು…
ಬರಿದಾದ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ I ಮಹಾರಾಷ್ಟ್ರದ ಕೊಯ್ನಾದಿಂದ ಹರಿಯದ ನೀರು ಉದಯರಶ್ಮಿ ದಿನಪತ್ರಿಕೆ ವರದಿ: ಎಸ್.ಎಮ್.ಇಟ್ಟಿ ಜಮಖಂಡಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವ ಬಗ್ಗೆ ಎರಡು ರಾಜ್ಯಗಳ ಸರ್ಕಾರದ ನಡುವೆ ಮಾತುಕತೆ ನಡೆದಿಲ್ಲ. ಹಿಪ್ಪರಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಮತ್ತೊಂದೆಡೆ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ಸಂಪೂರ್ಣ ಖಾಲಿಯಾಗಿ ಜಮಖಂಡಿ ತಾಲೂಕಿನ ಕೃಷ್ಣಾ ತೀರದಲ್ಲಿ ಬಾಯಾರಿಕೆ ದಾಹ ಹೆಚ್ಚಾಗುತ್ತಿದೆ.ರೈತರ ಬ್ಯಾರೇಜ್ ಎಂದೇ ಖ್ಯಾತಿ ಪಡೆದಿರುವ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರ 4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಒಂದು ವಾರದ ಹಿಂದೆಯೇ ಸಂಪೂರ್ಣ ಖಾಲಿ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ರೈತರೇ ಸೇರಿಕೊಂಡು ವಂತಿಗೆ ಕೂಡಿಸಿ ಕೃಷ್ಣಾ ನದಿ ನೀರು ಎತ್ತಿ ಬ್ಯಾರೇಜ್ ತುಂಬಿಸಿಕೊಳ್ಳುತ್ತಿದ್ದರು.ಖರ್ಚು ಜಾಸ್ತಿ ಆಗುತ್ತದೆ ಎಂದು ಪ್ರಸಕ್ತ ವರ್ಷ ಗಲಗಲಿ ಬ್ಯಾರೇಜ್ ತುಂಬಿಸಲು ಪ್ಯಾನ್ ಮಾಡಲಾಗಿತ್ತು. ಅದಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ಕೊಡಲು ಸಚಿವರು ಒಪ್ಪಿಗೆ ನೀಡಿದ್ದರಂತೆ. ಆದರೆ, ಕೆಲ ತಾಂತ್ರಿಕ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಅಮಾನುಷ್ಯವಾಗಿ ಹತ್ಯೆ ಮಾಡಿರುವ ಉಗ್ರರ ಹೇಯ ಕೃತ್ಯವನ್ನು ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಪಂಜಿನ ಮೆರವಣಿಗೆ ಮೂಲಕ ಶ್ರದ್ದಾಂಜಲಿ ಅರ್ಪಿಸಿ, ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಗುರುವಾರ ರಾತ್ರಿ ಮೇನ್ ಬಜಾರದ ದೇವಿ ಗುಡಿಯ ಬಳಿ ಹಿಂದೂ ಕಾರ್ಯರ್ತರು ಕಾಶ್ಮೀರದಲ್ಲಿ ನಡೆದ ಉಗ್ರರ ಹತ್ಯ ಖಂಡಿಸಿ ಮೇಣದ ಬತ್ತಿ ಹಚ್ಚಿ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಪಂಜು ಹಿಡಿದು ಮೌನ ಮೆರವಣಿಗೆ ಮಾಡುವ ಮೂಲಕ ಪ್ರತಿಭಟಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಅರ್ಪಿಸಿದರು.ಅಳ್ಳೋಳ್ಳಿಮಠದ ಶ್ರೀಶೈಲಯ್ಯ ಸ್ವಾಮಿಜಿ, ಅರ್ಜುನಗಿ ಹಿರೇಮಠದ ಸಂಗನಬಸವ ಶಿವಾಚಾರ್ಯರು ಸಾನಿದ್ಯದಲ್ಲಿ ಶ್ರದ್ದಾಂಜಲಿ ಮತ್ತು ಪಂಜಿನ ಮೌನ ಮೆರವಣಿಗೆ ಮಾಡಲಾಯಿತು.ಅಪ್ಪು ಶೆಟ್ಟಿ, ಕಮಲಕರ ಪತ್ತಾರ, ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ಹಣಮಂತ ರಜಪೂತ, ರಾಕೇಶ ರಾಂಪೂರಮಠ, ವಿಶ್ವನಾಥ ಅಮರಗೊಂಡ, ಶ್ರೀಶೈಲ ಕಲ್ಲೂರಮಠ, ಅಂಬಣ್ಣ ರಜಪೂತ, ಅಲೋಕ ಬಡದಾಳ, ರಾಹುಲ ರಜಪೂತ, ಸಾಗರ ಪಾಟೀಲ, ಬಸವರಾಜ ಬಡಿಗೇರ, ಅಭಿ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಾಧಿಕಾರದ ೨೫ನೇ ವರ್ಷದ ವರ್ಧಂತಿ ಮಹೋತ್ಸವ ಅಂಗವಾಗಿ ಶ್ರೀಮಠದಲ್ಲಿ ಶ್ರೀರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ, ಮಹಿಳಾಗೋಷ್ಠಿ, ರೈತಗೋಷ್ಠಿಗಳ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಜಡಿಮಠದ ಜಡಿಸಿದ್ಧೇಶ್ವರಶ್ರೀಗಳು ಹೇಳಿದರು.ಪಟ್ಟಣದ ಜಡಿಮಠದ ಆವರಣದಲ್ಲಿ ಗುರುವಾರ ಜರುಗಿದ ಪೂರ್ವಭಾವಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಠದ ಲೋಕಾರ್ಪಣೆ ಅಂಗವಾಗಿ ಮೇ ೨೨ ರಿಂದ ಜೂನ್ ೫ ರವರೆಗೆ ಪುರಾಣ ಕಾರ್ಯಕ್ರಮ ನಂತರ ರಂಭಾಪುರಿಶ್ರೀಗಳ ಅಡ್ಡಪಲ್ಲಕ್ಕಿ , ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ರೇಣುಕಾಚಾರ್ಯರ ಪ್ರತಿಮೆ ಪ್ರತಿಷ್ಠಾಪನೆಯಂತಹ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳು ಭಕ್ತರ ಆಶಯದಂತೆ ಅಚ್ಚುಕಟ್ಟಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಆದ್ದರಿಂದ ವಿವಿಧ ಸಮಿತಿಗಳನ್ನು ರಚಿಸಿ ಸಹಕಾರದಿಂದ ಜವಾಬ್ದಾರಿ ನಿರ್ವಹಿಸುವಂತೆ ಸಲಹೆ ನೀಡಿದರು.ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಹಿರಿಯ ವೈದ್ಯ ಆರ್.ಆರ್.ನಾಯಿಕ್ ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ಬಸಯ್ಯ ಮಲ್ಲಿಕಾರ್ಜುನಮಠ, ಪಂಚಾಕ್ಷರಿ ಮಿಂಚನಾಳ, ಬಂಡೆಪ್ಪಗೌಡ ದಿಂಡವಾರ ಮಾತನಾಡಿ ಕಾರ್ಯಕ್ರಮ ರೂಪುರೇಷೆಗಳ ಕುರಿತು ತಮ್ಮ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೈಸೂರು ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿರುವ ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ (ಬಿ.ವಿ.ಎ) ಪ್ರಥಮ ವರ್ಷದ ಪದವಿ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಗಳ ವಿಶೇಷ ಅಧ್ಯಯನಗಳು ಈ ಪದವಿಯಲ್ಲಿರುತ್ತವೆ.ಆಸಕ್ತ ಅಭ್ಯರ್ಥಿಗಳು ವೆಬ್ ಸೈಟ್ htts://uucms.karnataka.gov.in CxÀªÁ https://www.cavamysore.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಕಚೇರಿ ದೂರವಾಣಿ ಸಂಖ್ಯೆ ೦೮೨೧-೨೪೩೮೯೩೧ಗೆ ಸಂಪರ್ಕಿಸಬಹುದಾಗಿದೆ ಎಂದು ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ-ನೀಟ್ ಮೂಲಕ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ಅರಿವು ಸಾಲ ಯೋಜನೆಯಡಿಯಲ್ಲಿ ವಿದ್ಯಾಭ್ಯಾಸ (ಶೈಕ್ಷಣಿಕ) ಸಾಲ ಪಡೆಯಲು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಹಾಗೂ ಆಂಗ್ಲೋ ಇಂಡಿಯನ್ ಜನಾಂಗಕ್ಕೆ ಸೇರಿದ ಸಿಇಟಿ-ನೀಟ್ ಪರೀಕ್ಷೆಗೆ ಹಾಜರಾಗಿ ವೈದ್ಯಕೀಯ (ಎಂಬಿಬಿಎಸ್), ಬಿಡಿಎಸ್, ಬಿಇ, ಬಿಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಟರ್, ಬಿ.ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶು ವೈದ್ಯಕೀಯ ಕೋರ್ಸ್ ಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಹೊಸದಾಗಿ ಸಾಲ ಸೌಲಭ್ಯ ಒದಗಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅರ್ಹರು ನಿಗಮದ ವೆಬ್ ಸೈಟ್ https://kmdconline.karnataka.gov.inಮೂಲಕ ಅರ್ಜಿ ಸಲ್ಲಿಸಿ, ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ ತೆಗೆದು, ಇತರೆ ಅವಶ್ಯಕ ದಾಖಲೆಗಳೊಂದಿಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ನಂತರ ಅರ್ಹ ವಿದ್ಯಾರ್ಥಿಗಳಿಗೆ ಅವರು ಸೇರಬಯಸುವ ಕಾಲೇಜಿಗೆ…
