ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಜರುಗಿದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ-೧ ನೇಯ ಸೆಮೆಸ್ಟರ್ ವ್ಯಾಸಂಗ ಮಾಡುತ್ತಿರುವ ಅಮೀರ ತಾಂಬೋಳಿ ಇವರು ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾನೆ.
ಅದೇ ರೀತಿ ಮಲ್ಲಮ್ಮ ತೋಳಮಟ್ಟಿ ಇವಳು ೧೫೦೦ ಮೀಟರ್ ಹಾಗೂ ೫೦೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಾಲೇಜಿನ ಮೆಚ್ಚುಗೆ ಪಾತ್ರರಾಗಿದ್ದಾಳೆ.
ಈ ಇಬ್ಬರು ಕ್ರೀಡಾಪಟುಗಳ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮೀತಿ ಅಧ್ಯಕ್ಷರೂ ಹಾಗೂ ವಿಜಯಪುರ ನಗರದ ಶಾಸಕರೂ ಆದ ಬಸನಗೌಡ. ಆರ್. ಪಾಟೀಲ, ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ, ಕ್ರೀಡಾ ನಿರ್ದೇಶಕ ಪ್ರೊ ಸಂಗಮೇಶ ಗುರವ, ಕ್ರೀಡಾ ಸಮೀತಿಯ ಸದಸ್ಯರಾದ ಡಾ. ಚಿದಾನಂದ ಆನೂರ, ಪ್ರೊ. ಎಂ.ಎಸ್, ಖೊದ್ನಾಪೂರ, ಡಾ. ದೇವೇಂದ್ರಗೌಡ ಪಾಟೀಲ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.
“ಪ್ರಾಂಶುಪಾಲರ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿವರ್ಗ ಪ್ರೇರಣೆ ಮತ್ತು ಹೆಚ್ಚಿನ ಪ್ರೋತ್ಸಾಹವೇ ನಮ್ಮ ಸಾಧನೆಗೆ ಸ್ಪೂರ್ತಿ. ಈ ಸರ್ಕಾರಿ ಕಾಲೇಜು ನಮ್ಮಂತಹ ಅದೇಷ್ಟೋ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಸಾಧನೆ ತೋರಲು ಪೂರಕವಾದ ಸೌಲಭ್ಯಗಳನ್ನು ಒದಗಿಸುತ್ತಿದೆ.”
– ಅಮೀರ ತಾಂಬೋಳಿ
ಕ್ರೀಡಾಪಟು

