ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ ಪ್ರಭುದ್ದ ನಾಗರಿಕರಾಗಿ ನಿರ್ಮಾಣ ಮಾಡಬೇಕು ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.
ತಾಲ್ಲೂಕಿನ ಕಾಖಂಡಕಿ ಗ್ರಾಮದ ನಂದಗೋಕುಲ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ಸಹಯೋಗದಲ್ಲಿ ಶುಕ್ರವಾರ ನಡೆದ 2025-26 ನೇ ಸಾಲಿನ ತಾಲ್ಲೂಕ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಅನಾವರಣ ಮಾಡಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಮಕ್ಕಳಲ್ಲಿರುವ ವ್ಯಕ್ತಿತ್ವವನ್ನು ಹಲವು ವಿಧಗಳ ಮೂಲಕ ಮಕ್ಕಳು ವ್ಯಕ್ತಪಡಿಸುತ್ತಾರೆ. ನವರಸಗಳು ಕೂಡಿದಾಗ ಒಂದು ಕಲೆಯಾಗುತ್ತದೆ. ಶಿಕ್ಷಕರು ಹಗಲಿರುಳು ಶ್ರಮಿಸಿ ಮಕ್ಕಳನ್ನು ಪ್ರತಿಭಾ ಕಾರಂಜಿಗೆ ತಯಾರು ಮಾಡಿದ್ದಾರೆ. ಮಕ್ಕಳ ಸುರಕ್ಷತೆ ಕಡೆಗೆ ಕೂಡಾ ಗಮನವಿರಲಿ ಎಂದರು.
ಗುರುಸ್ಪಂದನ ಕಾರ್ಯಕ್ರಮ ಮಾಡಲು ಚಿಂತನೆ ಮಾಡಿರುವ ಬಿಇಓ ತಳವಾರ 1763 ಶಿಕ್ಷಕರ ಸೇವಾ ಪುಸ್ತಕ ಅಪಡೇಟ್ ಮಾಡಿ ಶೀಘ್ರದಲ್ಲೇ ಗುರುಸ್ಪಂದನಾ ಕಾರ್ಯಕ್ರಮ ಮಾಡಲಾಗುವುದು. ಬಾಕಿ ಇರುವ ಕಾರ್ಯ ಪೂರ್ಣಗೊಳಿಸಲು ಗುರುಸ್ಪಂದನಾ ಮಾಡಲಾಗುವದು. ಶಾಲಾ ಸ್ವಚ್ಚತಾ , ಸಮಯ ಪಾಲನೆ, ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಉತ್ತಮವಾದ ಕಾರ್ಯ ಮಾಡುತ್ತಾ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಸಂತ ಮಾರುತಿ ಸಾಳುಂಕೆ, ಬಬಲೇಶ್ವರ ನೌಕರ ಸಂಘದ ಅಧ್ಯಕ್ಷ ಮುತ್ತು ಪೂಜಾರಿ, ಸಂಸ್ಥೆಯ ಸಂಸ್ಥಾಪಕ ಕೃಷ್ಣಾ ಕಾಮ್ಟೆ ಮಾತನಾಡಿದರು.
ಶಿಕ್ಷಕ ರಾಮಣ್ಣಾ ಬೊಳೆಗಾರ ಅವರ ಜೀವಸೆಲೆ ಜ್ಞಾನನೆಲೆ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅದ್ಯಕ್ಷತೆ ರಾಧಾ ಕಾಮ್ಟೆ ವಹಿಸಿಕೊಂಡಿದ್ದರು. ಕೃಷ್ಣಾ ಕಾಮ್ಟೆ, ಯುವ ಧುರಿಣ ಅಪ್ಪುಗೌಡ ಪಾಟೀಲ, ಜಿ. ಟಿ.ಕಾಗವಾಡ, ಪ್ರಭು ಬಿರಾದಾರ, ವಸಂತ ಚವ್ಹಾಣ, ಎಚ್.ಎಂ. ಚಿತ್ತರಗಿ, ಮುತ್ತು ಪೂಜಾರಿ, ತಿಕೋಟಾ ತಾಲ್ಲೂಕ ಶಿಕ್ಷಕ ಸಂಘದ ಅಧ್ಯಕ್ಷ ಎ.ಬಿ.ಧಡಕೆ, ಬಿಆರ್ಸಿ ಪ್ರಕಾಶ ಚವ್ಹಾಣ, ರಾಜಶೇಖರ ಬನಸೋಡೆ, ಶಿವಪ್ಪಾ ಹಾದಿಮನಿ, ಸುಭಾಸ ತೋಳನೂರ, ಅಶ್ವೀನಿ ಸುರೆಬಾನ, ಸೋಮನಾಥ ಬಾಗಲಕೋಟ, ಉದಯ ಕೊಟ್ಯಾಳ, ಮಲ್ಲಿಕಾರ್ಜುನ ಮಾದರ, ವಾಸಿಂ ಚಟ್ಟರಕಿ, ನಿಜು ಮೇಲಿನಕೇರಿ, ಅಶೋಕ ಭಜಂತ್ರಿ, ಬಸವರಾಜ ನಾವಿ, ಸದಾಶಿವ ಕೊಲಕಾರ, ಕಸ್ತೂರಿ ಕಲ್ಲಾರಿ, ಮೆಹತಾಬ ಕಾಗವಾಡ, ಆರ್.ಎಸ್.ಜಾಧವ, ಬಸವರಾಜ ಅಮರಪ್ಪಗೋಳ, ರಾಮಣ್ಣಾ ಬೋಳೆಗಾರ, ರವೀಂದ್ರ ಉಗಾರ, ಬಸವರಾಜ ಜಿ.ಬಿ ಇದ್ದರು.

