Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರೈತರಿಗೆ ಯಾವುದೇ ಜಾತಿ-ಪಕ್ಷವಿಲ್ಲ :ಶಶಿಕಾಂತ ಗುರೂಜಿ

ಪ್ರವಾಸೋದ್ಯಮ ಬೆಳವಣಿಗೆಯಿಂದ ಹೊಸ ಉದ್ಯೋಗಗಳ ಸೃಷ್ಟಿ

ಮಿಣಜಗಿಯಲ್ಲಿ ಸದ್ಗುರು ಗುರುಪಾದೇಶ್ವರ ರಥೋತ್ಸವ ಸಂಪನ್ನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸುರಕ್ಷತೆ ಇಲ್ಲದ ಜಿ.ವಿ.ಪಿ.ಆರ್. ಪೈಪ್‌ಲೈನ್ ಕಾಮಗಾರಿ
(ರಾಜ್ಯ ) ಜಿಲ್ಲೆ

ಸುರಕ್ಷತೆ ಇಲ್ಲದ ಜಿ.ವಿ.ಪಿ.ಆರ್. ಪೈಪ್‌ಲೈನ್ ಕಾಮಗಾರಿ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಎಚ್ಚರಿಕೆ ಫಲಕಗಳ ಅಳವಡಿಕೆಗೆ ನಿರ್ಲಕ್ಷ್ಯ | ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ!

ಉದಯರಶ್ಮಿ ದಿನಪತ್ರಿಕೆ

ವರದಿ: ಜಿ.ಪಿ.ಘೋರ್ಪಡೆ
ತಾಳಿಕೋಟೆ: ಪಟ್ಟಣದ ಅಭಿವೃದ್ಧಿಗಾಗಿ ಕೈಗೊಳ್ಳುವ ಕಾಮಗಾರಿಗಳು ಸಾರ್ವಜನಿಕರ ಅನುಕೂಲಕ್ಕೆ ಪೂರಕವಾಗಿರಬೇಕು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಕಾಮಗಾರಿಗಳು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವಂತಾಗಬಾರದು. ಆದರೆ ತಾಳಿಕೋಟೆ ಪಟ್ಟಣದಲ್ಲಿ ಜಲಧಾರೆ ಯೋಜನೆಯಡಿ ಜಿ.ವಿ.ಪಿ.ಆರ್. ಕಂಪನಿಯಿಂದ ನಡೆಯುತ್ತಿರುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯು ರಸ್ತೆ ಅಗೆತ ಸಾರ್ವಜನಿಕರ ಆಹುತಿಗೆ ಬಾಯ್ತೇರೆದು ನಡೆಯುತ್ತಿದೆ ಎಂದರೆ ತಪ್ಪಾಗಲಾರದು.
ಪಟ್ಟಣದ ಮಹಾರಾಣಾ ಪ್ರತಾಪಸಿಂಹ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್‌ವರೆಗೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ವಾಹನಗಳು, ದ್ವಿಚಕ್ರ ಸವಾರರು, ಪಾದಚಾರಿಗಳು ಹಾಗೂ ವ್ಯಾಪಾರಸ್ಥರು ಸಂಚರಿಸುತ್ತಾರೆ. ಜನಸಂಚಾರ ಮತ್ತು ವಾಹನ ದಟ್ಟಣೆ ಹೆಚ್ಚಿರುವ ಇಂತಹ ಪ್ರದೇಶದಲ್ಲಿ ಪೈಪ್‌ಲೈನ್ ಅಳವಡಿಕೆಗಾಗಿ ಬೃಹತ್ ಗಾತ್ರದ ತೆಗ್ಗುಗಳನ್ನು ತೋಡುವಾಗ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಆದರೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಅಳವಡಿಸದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ರಸ್ತೆಯ ಮೇಲೆ ತೆಗ್ಗುಗಳನ್ನು ತೋಡಿದ ನಂತರ ಅವುಗಳ ಸುತ್ತಲೂ ಗಟ್ಟಿಯಾದ ಬ್ಯಾರಿಕೇಡ್‌ಗಳನ್ನು ಅಳವಡಿಸುವುದು, ದೂರದಿಂದಲೇ ವಾಹನ ಸವಾರರಿಗೆ ಕಾಣುವಂತೆ ಅಪಾಯದ ಸೂಚನಾ ಫಲಕಗಳನ್ನು ಹಾಕುವುದು, ರಾತ್ರಿ ವೇಳೆ ಪ್ರತಿಫಲಕ ದೀಪಗಳು ಹಾಗೂ ಎಚ್ಚರಿಕೆ ದೀಪಗಳನ್ನು ಅಳವಡಿಸುವುದು ಅತ್ಯಗತ್ಯ. ಪಾದಚಾರಿಗಳಿಗೆ ಪ್ರತ್ಯೇಕ ಸುರಕ್ಷಿತ ಮಾರ್ಗ ಕಲ್ಪಿಸುವುದರ ಜೊತೆಗೆ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಬೇಕು. ಆದರೆ ಇಂತಹ ಮೂಲಭೂತ ಮುನ್ನೆಚ್ಚರಿಕೆ ಕ್ರಮಗಳೇ ಸಮರ್ಪಕವಾಗಿ ಕಂಡುಬರದೇ ಮನಸ್ಸಿಚ್ಚೆಯಂತೆ ಯದ್ವಾತದ್ವಾ ಕಾಮಗಾರಿ ನಡೆಯುತ್ತಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಂಪನಿಯ ಜವಾಬ್ದಾರಿ ಏನು?
ಜಿ.ವಿ.ಪಿ.ಆರ್. ಕಂಪನಿಯು ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ಕೈಗೊಳ್ಳುವಾಗ ಕೇವಲ ಪೈಪ್‌ಗಳನ್ನು ಅಳವಡಿಸಿ ಕಾಮಗಾರಿ ಮುಗಿಸುವುದನ್ನೇ ಗುರಿಯಾಗಿಸಿಕೊಳ್ಳಬಾರದು. ಕಾಮಗಾರಿ ಆರಂಭಿಸುವ ಮೊದಲು ಪುರಸಭೆಯಿಂದ ಅಗತ್ಯ ಅನುಮತಿ ಪಡೆಯಬೇಕು. ಅನುಮೋದಿತ ನಕ್ಷೆ ಮತ್ತು ತಾಂತ್ರಿಕ ಮಾರ್ಗಸೂಚಿಗಳ ಪ್ರಕಾರವೇ ರಸ್ತೆ ಅಗೆಯಬೇಕು. ಕಾಮಗಾರಿ ನಡೆಯುವ ಪ್ರದೇಶದ ಜನಸಂದಣಿ, ವಾಹನಗಳ ಓಡಾಟ, ಅಂಗಡಿ-ಮುಂಗಟ್ಟುಗಳು ಹಾಗೂ ಮನೆಗಳ ಪ್ರವೇಶದ್ವಾರಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸದ ಯೋಜನೆ ರೂಪಿಸಬೇಕು. ಆದರೆ ಈ ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸುರಕ್ಷತೆ ಕಾಣುತ್ತಿಲ್ಲ.
ಒಂದೇ ಬಾರಿಗೆ ಉದ್ದನೆಯ ರಸ್ತೆಯನ್ನು ಅಗೆದು ದಿನಗಟ್ಟಲೆ ತೆರೆದಿಡಲಾಗುತ್ತಿದೆ ಪೈಪ್‌ಲೈನ್ ಅಳವಡಿಸಿದ ತಕ್ಷಣ ತೆಗ್ಗುಗಳನ್ನು ಮುಚ್ಚಿ ರಸ್ತೆ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಬೇಕು. ಮತ್ತು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕಾರ್ಮಿಕರಿಗೂ ಹೆಲ್ಮೆಟ್, ಸುರಕ್ಷತಾ ಬೂಟುಗಳು ಹಾಗೂ ಅಗತ್ಯ ರಕ್ಷಣಾ ಪರಿಕರಗಳನ್ನು ಒದಗಿಸಬೇಕು. ಇದೆಲ್ಲವನ್ನು ಅಧಿಕಾರಿಗಳು ಪರಿಶೀಲಿಸಿ ಕೆಲಸವನ್ನು ತೆಗೆದುಕೊಳ್ಳಬೇಕು ಅದ್ಯಾವುದು ಈ ಕಾಮಗಾರಿಯಲ್ಲಿ ನಡೆಯುತ್ತಿಲ್ಲ. ಕಂಪನಿಯವರು ಬೇಜವಾಬ್ದಾರಿತನದಿಂದ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡತನಕ್ಕೆ ಜಾರಿದ್ದಾರೆ.
ಪಟ್ಟಣದ ರಸ್ತೆಗಳಲ್ಲಿ ಕಾಮಗಾರಿ ನಡೆಯಲು ಅನುಮತಿ ನೀಡಿದ ನಂತರ ಅದರ ಗುಣಮಟ್ಟ ಮತ್ತು ಸುರಕ್ಷತೆಯ ಮೇಲ್ವಿಚಾರಣೆ ನಡೆಸುವುದು ಪುರಸಭೆಯ ಪ್ರಮುಖ ಜವಾಬ್ದಾರಿಯಾಗಿದೆ. ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಂಜಿನಿಯರ್‌ಗಳು ಕಾಮಗಾರಿ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅನುಮೋದಿತ ನಕ್ಷೆಯ ಪ್ರಕಾರವೇ ಪೈಪ್‌ಲೈನ್ ಅಳವಡಿಸಲಾಗುತ್ತಿದೆಯೇ, ಕಾಮಗಾರಿಯ ತಾಂತ್ರಿಕ ಗುಣಮಟ್ಟ ಹೇಗಿದೆ, ಸುರಕ್ಷತಾ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆಯೇ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ ಕಾಮಗಾರಿ ಪ್ರಾರಂಭಗೊಂಡು ಸುಮಾರು ೨ ತಿಂಗಳು ಗತಿಸಿದರೂ ಯಾವೊಬ್ಬ ಅಧಿಕಾರಿಯು ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲನೆ ನಡೆಸದಿರುವದು ಅಧಿಕಾರಿಗಳ ನಡೆಯ ಮೇಲೆ ಹಲವಾರು ಅನುಮಾನಗಳು ಸೃಷ್ಠಿಯಾಗಿವೆ. ತಾಳಿಕೋಟೆ ನಗರದಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ವಿಶೇಷ ಗಮನಹರಿಸಬೇಕಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಸುರಕ್ಷತಾ ವ್ಯವಸ್ಥೆ, ರಸ್ತೆ ಅಗೆತದ ವಿಧಾನ, ಕಾರ್ಮಿಕರ ರಕ್ಷಣೆ ಮತ್ತು ಸಾರ್ವಜನಿಕರ ಸಂಚಾರದ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಂಪನಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂಬುದು ಪಟ್ಟಣದ ಜನತೆಯ ಆಗ್ರಹವಾಗಿದೆ.
ತಾಳಿಕೋಟೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆಯುತ್ತಿರುವ ಈ ಯದ್ವಾ ತದ್ವಾ ಕಾಮಗಾರಿಯಿಂದ ಅನಾಹುತ ಸಂಭವಿಸಿದ ಬಳಿಕ ಹೊಣೆಗಾರರನ್ನು ಹುಡುಕುವ ಬದಲು, ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದು ಅಧಿಕಾರಿಗಳು ಇನ್ನಾದರೂ ಏಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.

"ಜಿವಿಪಿಆರ್ ಕಂಪನಿಯ ವತಿಯಿಂದ ನಡೆಯುತ್ತಿರುವ ಜಲಧಾರೆ ಯೋಜನೆ ಕಾಮಗಾರಿ ಜನರಿಗೆ ಒಳ್ಳೆಯದ್ದಾಗಿದ್ದರೂ ಕಾಮಗಾರಿ ನಿರ್ವಹಣೆಯಲ್ಲಿ ಯಾವುದೇ ಸುರಕ್ಷತೆ ಕಾಣುತ್ತಿಲ್ಲ. ಬೃಹತ್ ಆಕಾರದು ಉದ್ದನೆಯ ತಗ್ಗು ತೋಡಿ ವಾರಗಟ್ಟಲೇ ಬಿಡಲಾಗುತ್ತಿದೆ. ಈ ತಗ್ಗಿನಲ್ಲಿ ವಾಹನಗಳಾಗಲಿ, ಜನರಾಗಲಿ ಬಿದ್ದರೆ ಅನಾಹುತ ತಪ್ಪಿದ್ದಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ವಿಕ್ಷಣೆ ಮಾಡಿ ಸಂಬಂದಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕು."

– ಜೈಸಿಂಗ್ ಮೂಲಿಮನಿ
ಪುರಸಭೆ ಮಾಜಿ ಸದಸ್ಯರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರೈತರಿಗೆ ಯಾವುದೇ ಜಾತಿ-ಪಕ್ಷವಿಲ್ಲ :ಶಶಿಕಾಂತ ಗುರೂಜಿ

ಪ್ರವಾಸೋದ್ಯಮ ಬೆಳವಣಿಗೆಯಿಂದ ಹೊಸ ಉದ್ಯೋಗಗಳ ಸೃಷ್ಟಿ

ಮಿಣಜಗಿಯಲ್ಲಿ ಸದ್ಗುರು ಗುರುಪಾದೇಶ್ವರ ರಥೋತ್ಸವ ಸಂಪನ್ನ

ಬರಗಾಲದ ಬಿಸಿ: ದೀಪಾವಳಿ ಖರೀದಿ ಉತ್ಸಾಹಕ್ಕೆ ತಣ್ಣೀರು!

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರೈತರಿಗೆ ಯಾವುದೇ ಜಾತಿ-ಪಕ್ಷವಿಲ್ಲ :ಶಶಿಕಾಂತ ಗುರೂಜಿ
    In (ರಾಜ್ಯ ) ಜಿಲ್ಲೆ
  • ಪ್ರವಾಸೋದ್ಯಮ ಬೆಳವಣಿಗೆಯಿಂದ ಹೊಸ ಉದ್ಯೋಗಗಳ ಸೃಷ್ಟಿ
    In (ರಾಜ್ಯ ) ಜಿಲ್ಲೆ
  • ಮಿಣಜಗಿಯಲ್ಲಿ ಸದ್ಗುರು ಗುರುಪಾದೇಶ್ವರ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಬರಗಾಲದ ಬಿಸಿ: ದೀಪಾವಳಿ ಖರೀದಿ ಉತ್ಸಾಹಕ್ಕೆ ತಣ್ಣೀರು!
    In (ರಾಜ್ಯ ) ಜಿಲ್ಲೆ
  • ಸುರಕ್ಷತೆ ಇಲ್ಲದ ಜಿ.ವಿ.ಪಿ.ಆರ್. ಪೈಪ್‌ಲೈನ್ ಕಾಮಗಾರಿ
    In (ರಾಜ್ಯ ) ಜಿಲ್ಲೆ
  • ಮಹಾತ್ಮ ಗಾಂಧಿ ಹಾದಿಯಲ್ಲಿ ನಡೆದ ಹರ್ಡೇಕರ್ ಮಂಜಪ್ಪ
    In ವಿಶೇಷ ಲೇಖನ
  • ಮಧ್ಯಮವರ್ಗದ ಬದುಕು: ಆಸೆ, ಆತಂಕ, ಆನಂದದ ನಡುವಿನ ಸಂಘರ್ಷ!
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 10,2026
    In ದಿನಪತ್ರಿಕೆ
  • ಅಗ್ನಿ ದುರಂತ: ಒಂದೇ ಕುಟುಂಬದ ಆರು ಮಂದಿ ಸಾವು!
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಸಂಶೋಧನಾ ಆಸಕ್ತಿ ಬೆಳೆಸಲು ವಿಜ್ಞಾನ ಸಮಾವೇಶ ಸಹಕಾರಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.