Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರೈತರಿಗೆ ಯಾವುದೇ ಜಾತಿ-ಪಕ್ಷವಿಲ್ಲ :ಶಶಿಕಾಂತ ಗುರೂಜಿ

ಪ್ರವಾಸೋದ್ಯಮ ಬೆಳವಣಿಗೆಯಿಂದ ಹೊಸ ಉದ್ಯೋಗಗಳ ಸೃಷ್ಟಿ

ಮಿಣಜಗಿಯಲ್ಲಿ ಸದ್ಗುರು ಗುರುಪಾದೇಶ್ವರ ರಥೋತ್ಸವ ಸಂಪನ್ನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬರಗಾಲದ ಬಿಸಿ: ದೀಪಾವಳಿ ಖರೀದಿ ಉತ್ಸಾಹಕ್ಕೆ ತಣ್ಣೀರು!
(ರಾಜ್ಯ ) ಜಿಲ್ಲೆ

ಬರಗಾಲದ ಬಿಸಿ: ದೀಪಾವಳಿ ಖರೀದಿ ಉತ್ಸಾಹಕ್ಕೆ ತಣ್ಣೀರು!

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. ೭೫ರಷ್ಟು ವ್ಯಾಪಾರ ಕುಸಿತ | ವ್ಯಾಪಾರಿಗಳ ಮುಖದಲ್ಲಿ ಕಳೆ ಇಲ್ಲ

ಉದಯರಶ್ಮಿ ದಿನಪತ್ರಿಕೆ

ತಾಳಿಕೋಟೆ: ಸಂಭ್ರಮ, ಸಡಗರ ಹಾಗೂ ಬೆಳಕಿನ ಹಬ್ಬವೆಂದೇ ಹೆಸರಾದ ದೀಪಾವಳಿ ಈ ಬಾರಿ ತಾಳಿಕೋಟೆ ಪಟ್ಟಣದಲ್ಲಿ ಹಿಂದಿನ ವರ್ಷಗಳಂತೆ ಕಳೆಗಟ್ಟಿಲ್ಲ. ಮಳೆ-ಬೆಳೆ ಇಲ್ಲದೆ ಬರಗಾಲದ ಬವಣೆಯಿಂದ ತತ್ತರಿಸಿರುವ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನರ ಮೇಲೆ ಆರ್ಥಿಕ ಸಂಕಷ್ಟದ ಪರಿಣಾಮ ಬೀರಿದ್ದು, ಹಬ್ಬದ ಖರೀದಿ ವಹಿವಾಟಿನ ಮೇಲೂ ಅದರ ಕರಿನೆರಳು ಆವರಿಸಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳು, ಹೂವು, ಹಣ್ಣು, ಮಣ್ಣಿನ ಹಣತೆ, ಬಾಳೆಕಂಬ ಸೇರಿದಂತೆ ವಿವಿಧ ವಸ್ತುಗಳ ಮಾರಾಟಕ್ಕೆ ಅಂಗಡಿಗಳು ಸಜ್ಜಾಗಿದ್ದವು. ಬೆಲೆಗಳು ಕಳೆದ ವರ್ಷದಷ್ಟೇ ಇದ್ದರೂ ಗ್ರಾಹಕರ ಖರೀದಿ ಉತ್ಸಾಹ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಕಂಡುಬರಲಿಲ್ಲ. ಅಲ್ಲಲ್ಲಿ ಜನರು ಹಬ್ಬದ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡುಬಂದರೂ ವ್ಯಾಪಾರಸ್ಥರ ಮುಖದಲ್ಲಿ ಹಿಂದಿನ ವರ್ಷಗಳ ಸಂಭ್ರಮದ ಕಳೆ ಕಾಣಿಸಲಿಲ್ಲ.
ತಲೆತಲಾಂತರದಿಂದ ನಡೆದುಬಂದ ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳನ್ನು ಮುಂದುವರಿಸಬೇಕೆಂಬ ಉದ್ದೇಶದಿಂದ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸಿದ ಜನರು ತಮ್ಮ ಶಕ್ತ್ಯಾನುಸಾರ ಪೂಜಾ ಸಾಮಗ್ರಿಗಳನ್ನು ಖರೀದಿಸಿ ಮನೆಗಳಿಗೆ ತೆರಳುತ್ತಿರುವುದು ಕಂಡುಬಂದಿತು.
ಮಾರುಕಟ್ಟೆಯಲ್ಲಿ ಮುತ್ತಿನ ಹಾಗೂ ರೇಷ್ಮೆ ಹಾರಗಳು ಒಂದಕ್ಕೆ ೫೦ರಿಂದ ೧೫೦ರವರೆಗೆ, ಮಿತಿಗಟ್ಟಿಗಳು ೨೫ರಿಂದ ೫೦ರವರೆಗೆ ಮಾರಾಟವಾದವು. ಚೆಂಡು ಹೂವು ಕೆ.ಜಿ.ಗೆ ೧೦೦, ಶಾವಂತಿಗೆ ಹೂವು ಕೆ.ಜಿ.ಗೆ ೧೫೦ರಿಂದ ೨೦೦, ಹೂವಿನ ಹಾರ ೫೦ರಿಂದ ೧೦೦ ಹಾಗೂ ಸಾಮಾನ್ಯ ಹೂವಿನ ಹಾರ ೩೦ರಿಂದ ೪೦ರವರೆಗೆ ಮಾರಾಟವಾದವು. ಕುಂಬಳಕಾಯಿ ಗಾತ್ರಕ್ಕೆ ಅನುಗುಣವಾಗಿ ಒಂದಕ್ಕೆ ೧೦೦ರಿಂದ ೨೫೦ರವರೆಗೆ ಬೆಲೆಯಿತ್ತು.
ಮಣ್ಣಿನ ಹಣತೆಗಳಿಗೂ ಬೇಡಿಕೆ ಕಂಡುಬಂದರೂ ಖರೀದಿ ಪ್ರಮಾಣ ಕಡಿಮೆಯಾಗಿತ್ತು. ಹಣತೆಗಳ ಡಜನ್‌ಗೆ ೧೦೦, ನಾಲ್ಕು ನಂಬರ್ ಹಣತೆ ನಾಲ್ಕಕ್ಕೆ ೫೦, ಐದು ನಂಬರ್ ಹಣತೆ ನಾಲ್ಕಕ್ಕೆ ೩೦, ಎರಡು ನಂಬರ್ ಹಣತೆ ನಾಲ್ಕಕ್ಕೆ ೨೦ ಹಾಗೂ ಒಂದು ನಂಬರ್ ಹಣತೆ ಐದಕ್ಕೆ ೧೦ರಂತೆ ಮಾರಾಟವಾದವು.
ಹಣ್ಣುಗಳ ಮಾರುಕಟ್ಟೆಯಲ್ಲಿ ಬಾಳೆಹಣ್ಣು ಡಜನ್‌ಗೆ ೫೦, ಸೇಬು ಐದಕ್ಕೆ ೧೦೦, ಸೀತಾಫಲ ಐದಕ್ಕೆ ೧೦೦, ಕಿತ್ತಳೆ ಐದಕ್ಕೆ ೧೦೦, ದಾಳಿಂಬೆ ಐದಕ್ಕೆ ೫೦, ಮೋಸಂಬಿ ಐದಕ್ಕೆ ೧೦೦ ಹಾಗೂ ನಿಂಬೆಹಣ್ಣು ಐದಕ್ಕೆ ೨೦ರಂತೆ ಮಾರಾಟವಾದವು. ಬಾಳೆಕಂಬ ಜೋಡಿಗೆ ೫೦ರಿಂದ ೧೦೦, ತೆಂಗಿನ ಪರಿಕಿ ಜೋಡಿಗೆ ೧೦೦ ಹಾಗೂ ಚೆಂಡು ಹೂವಿನ ಗಿಡ ಜೋಡಿಗೆ ೫೦ರಂತೆ ಮಾರಾಟವಾಗುತ್ತಿದ್ದವು.

ಬಾಕ್ಸ್

ವ್ಯಾಪಾರಕ್ಕೆ ಬರಗಾಲದ ಹೊಡೆತ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಬ್ಬದ ವ್ಯಾಪಾರದಲ್ಲಿ ಸುಮಾರು ಶೇ.೭೫ರಷ್ಟು ಕುಸಿತ ಉಂಟಾಗಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ. ಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಇಲ್ಲದಿದ್ದರೂ ಜನರ ಕೈಯಲ್ಲಿ ಹಣದ ಹರಿವು ಕಡಿಮೆಯಾಗಿರುವುದರಿಂದ ಖರೀದಿ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ದೀಪಾವಳಿ ಹಬ್ಬವು ಸಂಪ್ರದಾಯದಂತೆ ಆಚರಣೆಯಾಗುತ್ತಿದ್ದರೂ ಹಿಂದಿನ ವರ್ಷಗಳಂತೆ ಮಾರುಕಟ್ಟೆಯಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿಲ್ಲ. ಮಳೆ ಇಲ್ಲದೆ ಬೆಳೆ ನಷ್ಟ ಅನುಭವಿಸಿರುವ ರೈತರು ಹಾಗೂ ಗ್ರಾಮೀಣ ಜನರ ಆರ್ಥಿಕ ಸಂಕಷ್ಟವೇ ಈ ಬಾರಿ ದೀಪಾವಳಿ ಹಬ್ಬದ ವ್ಯಾಪಾರದ ಉತ್ಸಾಹ ಕುಂದಲು ಪ್ರಮುಖ ಕಾರಣವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

“ಪ್ರತಿ ವರ್ಷ ಸಾಮಗ್ರಿಗಳ ಖರಿದಿಯಲ್ಲಿ ದರಗಳು ವ್ಯತ್ಯಾಸವಾಗುವದು ಸಹಜವಾಗಿತ್ತು ಆದರೆ ಈ ಭಾರಿ ದರಗಳು ಕಡಿಮೆ ಮಾಡಿದರೂ ಕೊಂಡುಕೊಳ್ಳುವವರ ಸಂಖ್ಯೆ ಶೇ. ೫೦ ರಷ್ಟು ಗಣನೀಯ ಇಳಿಕೆಯಾಗಿದೆ ಮಳೆ-ಬೆಳೆ ಇಲ್ಲದೇ ಬರಗಾಲದ ಭವಣೆಗೆ ರೈತರು ಸಂಕಷ್ಟಕ್ಕೆ ಇಡಾಗಿದ್ದಾರೆ ರೈತರ ಬಳಿ ದುಡ್ಡಿದ್ದರ ಪಟ್ಟಣದ ವ್ಯಾಪಾರಸ್ಥರಿಗೆ ಮೊಗದಲ್ಲಿ ಸಂತಸ ಕಾಣಲು ಸಾದ್ಯ.”

– ಅಲ್ತಾಫ್ ಹುಲ್ಲೂರ
ಹಣ್ಣಿನ ವ್ಯಾಪಾರಿ

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರೈತರಿಗೆ ಯಾವುದೇ ಜಾತಿ-ಪಕ್ಷವಿಲ್ಲ :ಶಶಿಕಾಂತ ಗುರೂಜಿ

ಪ್ರವಾಸೋದ್ಯಮ ಬೆಳವಣಿಗೆಯಿಂದ ಹೊಸ ಉದ್ಯೋಗಗಳ ಸೃಷ್ಟಿ

ಮಿಣಜಗಿಯಲ್ಲಿ ಸದ್ಗುರು ಗುರುಪಾದೇಶ್ವರ ರಥೋತ್ಸವ ಸಂಪನ್ನ

ಸುರಕ್ಷತೆ ಇಲ್ಲದ ಜಿ.ವಿ.ಪಿ.ಆರ್. ಪೈಪ್‌ಲೈನ್ ಕಾಮಗಾರಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರೈತರಿಗೆ ಯಾವುದೇ ಜಾತಿ-ಪಕ್ಷವಿಲ್ಲ :ಶಶಿಕಾಂತ ಗುರೂಜಿ
    In (ರಾಜ್ಯ ) ಜಿಲ್ಲೆ
  • ಪ್ರವಾಸೋದ್ಯಮ ಬೆಳವಣಿಗೆಯಿಂದ ಹೊಸ ಉದ್ಯೋಗಗಳ ಸೃಷ್ಟಿ
    In (ರಾಜ್ಯ ) ಜಿಲ್ಲೆ
  • ಮಿಣಜಗಿಯಲ್ಲಿ ಸದ್ಗುರು ಗುರುಪಾದೇಶ್ವರ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಬರಗಾಲದ ಬಿಸಿ: ದೀಪಾವಳಿ ಖರೀದಿ ಉತ್ಸಾಹಕ್ಕೆ ತಣ್ಣೀರು!
    In (ರಾಜ್ಯ ) ಜಿಲ್ಲೆ
  • ಸುರಕ್ಷತೆ ಇಲ್ಲದ ಜಿ.ವಿ.ಪಿ.ಆರ್. ಪೈಪ್‌ಲೈನ್ ಕಾಮಗಾರಿ
    In (ರಾಜ್ಯ ) ಜಿಲ್ಲೆ
  • ಮಹಾತ್ಮ ಗಾಂಧಿ ಹಾದಿಯಲ್ಲಿ ನಡೆದ ಹರ್ಡೇಕರ್ ಮಂಜಪ್ಪ
    In ವಿಶೇಷ ಲೇಖನ
  • ಮಧ್ಯಮವರ್ಗದ ಬದುಕು: ಆಸೆ, ಆತಂಕ, ಆನಂದದ ನಡುವಿನ ಸಂಘರ್ಷ!
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 10,2026
    In ದಿನಪತ್ರಿಕೆ
  • ಅಗ್ನಿ ದುರಂತ: ಒಂದೇ ಕುಟುಂಬದ ಆರು ಮಂದಿ ಸಾವು!
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಸಂಶೋಧನಾ ಆಸಕ್ತಿ ಬೆಳೆಸಲು ವಿಜ್ಞಾನ ಸಮಾವೇಶ ಸಹಕಾರಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.