ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಪ್ರತಿ ವರ್ಷದಂತೆ ಈ ಸಲ ಶನಿವಾರರಂದು ತಾಲೂಕಿನ ಸುಕ್ಷೇತ್ರ ಮಿಣಜಗಿ ಗ್ರಾಮದಲ್ಲಿ ಸದ್ಗುರು ಶ್ರೀ ಗುರುಪಾದೇಶ್ವರ ಮಹಾ ಸ್ವಾಮಿಗಳ ೫೮ನೇ ವರ್ಷದ ಪುನ್ಯ ಸ್ಮರಣೋತ್ಸವ ಹಾಗೂ ೨ ನೇ ವರ್ಷದ ಮಹಾ ರಥೋತ್ಸವ ಕಾರ್ಯಕ್ರಮವು ಭಕ್ತಿಭಾವದಿಂದ ಜರುಗಿತು.
ಮದ್ಯಾಹ್ನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಧಾರ್ಮಿಕ ಸಭೆ ಜರುಗಿತ್ತಲ್ಲದೇ ಸಾಧಕರಿಗೆ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಯೂ ಕೂಡಾ ವಿತರಿಸಿ ಗೌರವಿಸಲಾಯಿತು. ಇದು ಅಲ್ಲದೇ ಬೆಳಿಗ್ಗೆ ೯ ರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಡಾ.ಸಿ.ಕೆ.ಶಿವಯೋಗಿಮಠ ಮುದ್ದೇಬಿಹಾಳ, ಡಾ.ವಿರೇಶ ದಿಂಡವಾರ ಬಿದರಕುಂದಿ ಇವರಿಂದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಜರುಗಿತು. ಇದು ಅಲ್ಲದೇ ಕಳೆದ ದಿ. ೨ ರಿಂದ ೬ರವರೆಗೆ ಸಾಗಿಬಂದಂತಹ ಸದ್ಗುರುವಿನ ಸ್ಮರಣೆಯ ಪ್ರವಚನವನ್ನು ನೀಡಿದಂತಹ ಪ್ರವಚನಕಾರ ವೇ.ಚಂದ್ರಶೇಖರ ಶಾಸ್ತ್ರಿಗಳು ಅವರು ಪುರಾಣ ಪ್ರವಚನವನ್ನು ಮಂಗಲಗೊಳಿಸಿ ಪುನಃ ಪ್ರಾರಂಬಿಸಿದರು.
ಸೋಮನಗೌಡ ಭಂಟನೂರ, ಉಮಾಪತಿ ಹಿರೇಮಠ, ಹಾಗೂ ಆಕಾಶ ಹಿರೇಮಠ, ಶ್ರೀ ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.
ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾಪ್ರಸಾದ ಜರುಗಿತು ಸಾಯಂಕಾಲ ೪ ಗಂಟೆಗೆ ಸದ್ಗುರುವಿನ ಮಹಾ ರಥೋತ್ಸವವು ಸಾಗಿಬಂದು ೫-೩೦ ಗಂಟೆಗೆ ಸದ್ಗುರುವಿನ ಫಲ್ಲಕ್ಕಿ ಉತ್ಸವದೊಂದಿಗೆ ಸದ್ಗುರು ಮೂಲ ಸ್ಥಳ ಶ್ರೀಮಠದ ಸ್ಥಳಕ್ಕೆ ತಲುಪಿತು.
ಈ ಉತ್ಸವದಲ್ಲಿ ಮಿಣಜಗಿ ಗ್ರಾಮದ ಸಮಸ್ತ ಭಕ್ತಾಧಿಗಳು, ಸುತ್ತಮುತ್ತಲಿನ ಭಕ್ತ ಸಮೂಹವು ಆಗಮಿಸಿ ತಮ್ಮ ಭಕ್ತಿಭಾವವನ್ನು ಸಮರ್ಪಿಸಿದರು.
ಮಿಣಜಗಿ ಗ್ರಾಮದ ಭಕ್ತಮಂಡಳಿ, ಶ್ರೀ ಸದ್ಗುರು ಗುರುಪಾದೇಶ್ವರ ಮಹಾಸ್ವಾಮಿಗಳ ಮಠದ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಶ್ರೀಮಠದ ಉಸ್ತುವಾರಿಯಾದ ವೇ.ಸೋಮಶೇಖರಯ್ಯ ಹಿರೇಮಠ ಅವರು ರಥೋತ್ಸವಕ್ಕೆ ಚಾಲನೆ ನೀಡಿ ಸಮಸ್ತ ಭಕ್ತಾಧಿಗಳಿಗೆ ಆಶಿರ್ವದಿಸಿದರು.

