Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾನವನ ಬದುಕಿನೊಂದಿಗೆ ಹುಟ್ಟಿಬಂದ ಆಚಾರ ವಿಚಾರಗಳೇ ಜಾನಪದ ಸಂಸ್ಕೃತಿಯಾಗಿ ಇಂದು ನಮ್ಮೆಲ್ಲರಲ್ಲಿ ಉಳಿದುಕೊಂಡಿವೆ. ಬದುಕಿಗೆ ಉತ್ತಮವಾದ ಆದರ್ಶಗಳ ಮಾರ್ಗದರ್ಶನ ಮಾಡುತ್ತ ಜನ ಮಾನಸದಲ್ಲಿ ಶ್ರೇಷ್ಠ ಸಂಸ್ಕೃತಿ ತುಂಬುತ್ತಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಹೇಳಿದರು.ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮತ್ತು ಕೂಡಗಿ ವಲಯ ಘಟಕದ ಸಹಯೋಗದಲ್ಲಿ ಕೊಲ್ಹಾರ ತಾಲೂಕಿನ ಅರಸಣಗಿ ಗ್ರಾಮದ ಬೀರೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ ” ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಆಧುನಿಕತೆಯ ಭರಾಟೆಯಲ್ಲಿ ಮೂಲ ಜನಪದ ಸಂಸ್ಕೃತಿ ಮಂಕಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ನಾವು ಎಷ್ಟೇ ಪ್ರತಭಾವಂತರಾದರೂ ಮೂಲ ಸಂಸ್ಕೃತಿ ಮರೆಯಬಾರದು ಎಂದು ಕರೆನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪಾರಿಜಾತ ಕಲಾವಿದ ಶಂಕರಯ್ಯ ಚಿಕ್ಕಮಠ, ಇಂದಿನ ಯುವ ಜನಾಂಗ ಜಾನಪದ ಸಂಸ್ಕೃತಿ ಎಂದರೆ ಮೂಗು ಮುರಿಯುತ್ತಿದ್ದಾರೆ. ಹಿಂದಿನ ಕಲೆ, ಸಾಹಿತ್ಯ, ಆಚಾರ, ವಿಚಾರ, ಸಂಪ್ರದಾಯ ನಮ್ಮ ಬದುಕಿಗೆ ಉತ್ತಮವಾದ ದಾರಿ…
ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಸಮಾಲೋಚನಾ ಸಭೆ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಶತಮಾನದ ಇತಿಹಾಸ ಹೊಂದಿರುವ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಶೇರುದಾರರು, ಮತದಾರರು ಬ್ಯಾಂಕ್ ಹಾಗೂ ಜಿಲ್ಲೆಯ ಹಿತದೃಷ್ಟಿಯಿಂದ ಹಾಲಿ ಫೆನಲ್ ಆಯ್ಕೆ ಮಾಡುವಂತೆ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಮನವಿ ಮಾಡಿದರು.ಪಟ್ಟಣದ ಬಸವ ಭವನದಲ್ಲಿ ಶ್ರೀಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಮತದಾರ ಶೇರುದಾರರು, ಸದಸ್ಯರ ಸಹಕಾರ ಸಮಾಲೋಚನಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶತಮಾನದ ಇತಿಹಾಸ ಹೊಂದಿರುವ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಷಡ್ಯೂಲ್ ಬ್ಯಾಂಕ್ ಸ್ಥಾನಕ್ಕೆ ಪರಿವರ್ತನೆ ಆಗಲು ಅವಕಾಶವಿದೆ. ಹೀಗಾಗಿ ಸಾಲದ ಸಂಕಷ್ಟದಿಂದ ಲಾಭದತ್ತ ಕೊಂಡೊಯ್ದಿರುವ ಹಾಲಿ ಆಡಳಿತ ಮಂಡಳಿ ತಂಡವನ್ನೇ ಆಯ್ಕೆ ಮಾಡುವಂತೆ ಕೋರಿದರು.ಲಾಭದಲ್ಲಿರುವ ಸದರಿ ಬ್ಯಾಂಕಿಗೆ ಚುನಾವಣೆ ವೆಚ್ಚ ತಪ್ಪಿಸಲು ಆಡಳಿತ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುಗೆ ನೀಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಪಾಲಕರು ತಮ್ಮ ಪ್ರತಿಯೊಂದು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸಿ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಕರೆ ನೀಡಿದರು.ಪಟ್ಟಣದ ತೆಲಗಿ ರಸ್ತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 5 ಕೋಟಿ ರೂ. ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಸಕ್ತ ಸಂದರ್ಭದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಜಾಗತಿಕ ಮಟ್ಟದಲ್ಲಿ ಸುಮಾರು 230 ಕ್ಕೂ ಹೆಚ್ಚು ದೇಶಗಳಲ್ಲಿ ಇಂಗ್ಲಿಷ್ ಭಾಷೆಯೇ ಪ್ರಧಾನವಾಗಿ ವ್ಯವಹಾರಿಕ ಭಾಷೆಯಾಗಿದೆ. ಆಂಗ್ಲ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದನ್ನರಿತು ಸರ್ಕಾರ ರಾಜ್ಯದಲ್ಲಿಭಾಷೆಯಾಗಿದೆ. ಆಂಗ್ಲ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದನ್ನರಿತು ಸರ್ಕಾರ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ 100 ಮೌಲಾನ ಆಜಾದ ಆಂಗ್ಲ ಶಾಲೆ ಸ್ಥಾಪನೆಗೆ ಮುಂದಾಗಿದ್ದು,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಡೋಣೂರ ಗ್ರಾಮದ ಕೆರೆ ಅಂಗಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬಸವನಬಾಗೇವಾಡಿ ತಾಲೂಕು ಘಟಕ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ಶನಿವಾರ ಸಸಿ ನೆಡುವ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ರಾಜು ಬೆಟಗೇರಿ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಡೋಣೂರ ಗ್ರಾಮದ ಕೆರೆಯನ್ನು ಹೂಳೆತ್ತಲಾಗಿತ್ತು. ಈ ಯೋಜನೆಯಡಿ 763 ನೇ ಕೆರೆಯಾಗಿದೆ. ಇದೀಗ ಹೂಳೆತ್ತಲಾದ ಕೆರೆ ಅಂಗಳದಲ್ಲಿ 300 ವಿವಿಧ ಬಗೆಯ ಅರಣ್ಯ ಸಸಿ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಈ ಸಸಿಗಳು ಬೆಳೆಯುವಂತೆ ನೋಡಿಕೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕೆಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಕಲ್ಲನಗೌಡ ಪಾಟೀಲ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಅಧ್ಯಕ್ಷರು ಮಹಾಂತೇಶ ಕೆರೂಟಗಿ, ಸದಸ್ಯ ಬಂದೇನಮಾಜ ಸುತಾರ, ಕೃಷಿ ಪತ್ತಿನ ಸಹಕಾರಿ ಸಂಘದ ಶಾಖಾ ಪ್ರಬಂಧಕ ಸಂಗಮೇಶ ಹಳ್ಳಿ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ನಿವೃತಿ ಪ್ರಾಚಾರ್ಯ ಶೈಲಜಾ ಬಿರಾದಾರ ಹೇಳಿದರು.sಶುಕ್ರವಾರ ತಾಲೂಕಿನ ಆಳೂರ ಗ್ರಾಮದ ಸಿದ್ಧಾರೂಢರ ನೂತನ ಮಂದಿರದ ಕಳಸಾರೋಹಣ ಹಾಗೂ ಲಕ್ಷ್ಮೀಬಾಯಿ ತಾಯಿಯವರ, ಪಾರ್ವತೆಮ್ಮನವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ೫೫ನೇ ವರ್ಷದ ಆಧ್ಯಾತ್ಮಿಕ ಪ್ರವಚನ ಮಹೋತ್ಸವದಲ್ಲಿ ಅವರು ಮಾತನಾಡಿದರು.ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನೈತಿಕತೆ ಮೈಗೂಡಿಸಿಕೊಂಡರೆ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ನಾಗರಿಕರ ಅಗತ್ಯವಿದೆ. ಅದರಂತೆ ಮಗು ಬೆಳೆದು ಉತ್ತಮ ನಾಗರಿಕನಾಗಬೇಕಾದರೆ ತಾಯಿಯ ಪಾತ್ರ ಮಹತ್ವವಿದೆ. ಕುಟುಂಬ ನಿರ್ವಹಣೆ, ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರನ್ನು ಗೌರವಿಸುವುದು ನಮ್ಮ ಸಂಪ್ರದಾಯ ಎಂದರು.ಕಲರ್ಬುಗಿಯ ಸಿದ್ಧಾರೂಢ ಮಠದ ಮಾತೋಶ್ರೀ ಲಕ್ಷ್ಮೀತಾಯಿ ಅವರು ಮಾತನಾಡಿ, ಆಳೂರ ಸಿದ್ಧಾರೂಢರ ಮಠಕ್ಕೆ ಭಕ್ತರು ಆಸರೆಯಾಗಿದ್ದಾರೆ. ಸಿದ್ಧಾರೂಢರ ಸತ್ಯ ಸಂಕಲ್ಪದAತೆ ಸುಮಾರು ವರ್ಷಗಳಿಂದ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸಂಘಟನಾ ಚತುರರು ಬಿ. ಎಸ್. ಕವಲಗಿ ಅವರಿಗೆ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮೀತಿ ಅಧ್ಯಕ್ಷ ರೇವಣ್ಣ ಹತ್ತಳ್ಳಿ ಅಭಿನಂದನೆಗಳು ತಿಳಿಸಿದ್ದಾರೆ.ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಣ್ಣ ಕವಲಗಿ ಅವರು, ಸುಮಾರು 50 ವರ್ಷ ಕಾಂಗ್ರೆಸ್ ಪಕ್ಷದ ಕಟ್ಟ ಕಾರ್ಯಕರ್ತರಾಗಿ, ಪಕ್ಷದ ಸಲುವಾಗಿ ಹಗಲು ಇರಳು ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷ ಅನೇಕ ಚುನಾವಣೆಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಗೆಲುವಿನ ನಗೆ ಬಿರಲು ಕಾರಣರಾಗಿದ್ದಾರೆ. ಇಂದು ತಮ್ಮ ಇಳಿಯ ವಯಸ್ಸನಲ್ಲಿಯೂ ಕ್ಷೇತ್ರದ ಜೊತೆಯಲ್ಲಿ ಜಿಲ್ಲೆಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳಿಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ಇಂದು ಆ ಕಾರಣಕ್ಕಾಗಿ ಅವರನ್ನು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಲು ಕಾರಣರಾಗಿರುವಶಾಸಕ ಯಶವಂತರಾಯಗೌಡ ಪಾಟೀಲ,ಕಾಂಗ್ರೆಸ್ ಪಕ್ಷದ ರಾಜ್ಯ,ರಾಷ್ಟ್ರ ವರಿಷ್ಠರಿಗೆ ಹಾಗೂ ಮುಖಂಡರಿಗೂ ನಮ್ಮ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಮೂಲಕ ಹರನಾಳ ಗ್ರಾಮ, ನೂರಾರು ಜಮೀನುಗಳು ಹಾಗೂ ಹಿಂದೂ, ಮುಸ್ಲಿಂ ಸಮುದಾಯಗಳ ಸ್ಮಶಾನಕ್ಕೆ ತೆರಳುವ ರಸ್ತೆ ತ್ಯಾಜ್ಯ ನೀರು ಹಾಗೂ ಕೆಸರಿನಿಂದ ತುಂಬಿ ಪ್ರಯಾಣಿಸಲು ಬಾರದಂತಾಗಿದ್ದು, ಕೂಡಲೇ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.ಪಟ್ಟಣದ ಹಳೆಯ ಹರನಾಳ ರೋಡ್ ಎಂದೇ ಕರೆಯಲ್ಪಡುವ ರಸ್ತೆ ಈಗ ಮಳೆ ಹಾಗೂ ತ್ಯಾಜ್ಯ ನೀರಿನಿಂದ ಕೆಸರುಮಯವಾಗಿ ಬದಲಾಗಿದೆ. ಇಲ್ಲಿ ಬೈಕ್ ಸಹಿತ ದ್ವಿಚಕ್ರ ವಾಹನದಲ್ಲಿ ಚಲಿಸುವುದು ಹೋಗಲಿ ಬರಿಗಾಲಲ್ಲಿ ನಡೆಯಲು ಬಾರದಂತಾಗಿದೆ. ಸಿಂದಗಿ ರಸ್ತೆಯಲ್ಲಿನ ಬಸವಣ್ಣ ದೇವಸ್ಥಾನ ದಾಟಿ ಸ್ವಲ್ಪ ತೆರಳುವುದೇ ತಡ ತ್ಯಾಜ್ಯನೀರು ಹಾಗೂ ಕೊಳೆತ ನಿರುಪಯುಕ್ತ ವಸ್ತುಗಳಿಂದ ಬರುವ ಕೆಟ್ಟ ವಾಸನೆ ಇಡೀ ವಾತಾವರಣವನ್ನು ಕಲುಷಿತಗೊಳಿಸಿದೆ. ಇನ್ನೂ ರಸ್ತೆಯ ಎಡಬಲಗಳಲ್ಲಿ ತ್ಯಾಜ್ಯ ಸಂಗ್ರಹಗೊಂಡು ಮೂಗು ಮುಚ್ಚಿಕೊಂಡೇ ತೆರಳುವದು ಅನಿವಾರ್ಯವಾಗಿದೆ. ಇದೇ ರಸ್ತೆಯಲ್ಲಿ ಹಿಂದೂ, ಮುಸ್ಲಿಂ ಸಮುದಾಯಗಳೆರಡರ ಸ್ಮಶಾನ ಭೂಮಿಗಳಿದ್ದು ಅಂತ್ಯಕ್ರಿಯೆಗಳಿಗೆ ಬರುವ ಬೇರೆ ಗ್ರಾಮದ ಜನರು ಹಾಗೂ ಸ್ಥಳೀಯ ಸಾರ್ವಜನಿಕರು ಹಿಡಿಶಾಪ ಹಾಕುತ್ತಲೇ ತೆರಳುತ್ತಿದ್ದಾರೆ.ಹಳೆಯ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸೈನಿಕನೆಲೆ ಪ್ರಕಾಶನ ಬೆಂಗಳೂರು ಇವರಿಂದ “ನಮ್ಮ ಊರು ನಮ್ಮ ಹೆಮ್ಮೆ ದೇವರಹಿಪ್ಪರಗಿ” ಕೃತಿ ಇಂದು(ಭಾನುವಾರ) ಬಿಡುಗಡೆಗೊಳ್ಳಲಿದೆ.ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸಿಂದಗಿ ಭೀಮಾಶಂಕರ ಸಂಸ್ಥಾನಮಠದ ದತ್ತಪ್ಪಯ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ಥಳೀಯ ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಪಾಲ ನಾಯಕ, ವಿಶ್ರಾಂತ ಪ್ರಾಚಾರ್ಯ ಡಾ,ಮಹಾಂತೇಶ ಗುಬ್ಬೆವಾಡ , ತಹಶೀಲ್ದಾರ ಪ್ರಕಾಶ ಸಿಂದಗಿ ಭಾಗವಹಿಸಲಿದ್ದಾರೆ. ವಿಶ್ರಾಂತ ತಹಶೀಲ್ದಾರ ಆರ್.ಆರ್.ಮಣ್ಣೂರ ಕೃತಿ ಪರಿಚಯ ಹಾಗೂ ಫಿನಲ್ಯಾಂಡ್‌ನ ಎನ್‌ವೆಲಾಫ್ ಟೆಕ್ನಾಲಾಜಿ ಕಂಪನಿಯ ನಿತಿನಕುಮಾರ ನಾಡಗೌಡ “ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು” ಕುರಿತು ಉಪನ್ಯಾಸ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ನಮ್ಮ ಊರು ನಮ್ಮ ಹೆಮ್ಮೆ ಗೌರವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಜರುಗಲಿದೆ ಎಂದು ಸಂಪಾದಕರಾದ ಸುರೇಶ ದೇಸಾಯಿ, ಸದಾನಂದ ಬಬಲೇಶ್ವರ ಹಾಗೂ ಮಾಜಿಯೋಧ ರಾಜೇಂದ್ರ ನಾಡಗೌಡ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ರೆಡಿಯೋ ಖಗೋಳಶಾಸ್ತ್ರದ ಸವಾಲುಗಳು ಅವಕಾಶಗಳು ಎಂಬ ಒಂದು ದಿನದ ತಾಂತ್ರಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಮಿಳುನಾಡಿನ ಊಟಿಯಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ರೆಡಿಯೋ ಅಸ್ಟ್ರೋಫಿಸಿಕ್ಸ್‌ನ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಅಬ್ದುಲ್ ಖಾದರ್ ಪಟೇವಾಲೆ ಅವರು, 1971 ರಲ್ಲಿ ನಿರ್ಮಿಸಲಾದ ಖಗೋಳಶಾಸ್ತ್ರ ಪಠ್ಯಪುಸ್ತಕವು ದೇಶೀಯ ವಿಜ್ಞಾನ ಕ್ಷೇತ್ರಕ್ಕೆ ಹೊಸ ಪ್ರೇರಣೆ ನೀಡಿದೆ. ಪ್ರಾಚೀನ ವೈದ್ಯರು ಮತ್ತು ವಿಜ್ಞಾನಿಗಳು ವಿದ್ಯಾರ್ಥಿಗಳಿಗೆ ಆಕಾಶ ಮತ್ತು ನಕ್ಷತ್ರಗಳ ಅಧ್ಯಯನವನ್ನು ಕಲಿಸಲು ಶ್ರಮಿಸಿದ್ದಾರೆ.ನಮ್ಮ ಗ್ರಹಗಳು , ಆಕಾಶ ಮತ್ತು ವಿಸ್ತೀರ್ಣವಾದದನ್ನು ತಿಳಿದುಕೊಳ್ಳಲು ಈ ಅಧ್ಯಯನ ಬಹುಮುಖ್ಯವಾಗಿದೆ. ಹಾಗಾಗಿ ರೇಡಿಯೋ ಜಗತ್ತಿನ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಿಳಿದು ಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.ಇನ್ನು ಡಾ. ಸುಜಾ ಪುಣೆಕರ್ ಮಾತನಾಡಿ, ರೇಡಿಯೋ ಖಗೋಳಶಾಸ್ತ್ರದ ಉಪಕರಣ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೆಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ, ಸೈಯದ್ ಅಬ್ಬಾಸ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ಅಭಿವೃದ್ಧಿಗಾಗಿ ಯುವಕ ಪಾತ್ರ ಅನನ್ಯವಾಗಿದೆ ಎಂದು ವಿರತಿಶಾನಂದ ಸ್ವಾಮಿಗಳು ವಿರಕ್ತಮಠ ಮನಗೂಳಿ ಹೇಳಿದರು.ನಗರದ ಶ್ರೀ ಸ್ವಾಮಿ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ ಇವರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ದೇಶದ ಕುರಿತು ಪ್ರೀತಿ, ಅಭಿಮಾನವನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು. ದೇಶಕ್ಕಾಗಿ ಈಗಾಗಲೇ ಹಲವಾರು ಪ್ರಾಣ ಬಲದಾನಗೈದ ಮಹನೀಯರನ್ನು ನೆನೆಸಿಕೊಳ್ಳುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಬೇಕು. ಅವರ ದಾರಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು ಎಂದರು. ಎನ್.ಎಸ್. ಎಸ್ ಶಿಬಿರಗಳು ಆಗಾಗ ನಡೆಯಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಫಯಾಜ್ ಕಲಾದಗಿ ಅಧ್ಯಕ್ಷರು ಸುವಿದ ಸಾಮಾಜಿಕ ಸಂಸ್ಥೆ ವಿಜಯಪುರ ವಿದ್ಯಾರ್ಥಿಗಳು ಸಮಾಜದಲ್ಲಿ ಯಾವ ರೀತಿ ಸೇವೆಯನ್ನು ಮಾಡಬೇಕು. ಸಮಾಜ ನಮಗೇನು ಕೊಡುತ್ತದೆ ಎನ್ನುವುದಕ್ಕಿಂತ ನಾವು ಸಮಾಜಕ್ಕಾಗಿ ಏನನ್ನು ಕೊಡುತ್ತೇವೆ ಎಂಬ ವಿಷಯದ ಬಗ್ಗೆ ಎನ್‌ಎಸ್ ಎಸ್…
