ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಚಿವ ಜಮಿರ್ ಅಹ್ಮದಖಾನ್ ಅವರ ಹುಟ್ಟು ಹಬ್ಬವನ್ನು ಸಾಮಾಜಿಕ ಸೇವೆಯ ಮೂಲಕ ಆಚರಣೆ ಮಾಡಲಾಗುತ್ತಿದೆ ಎಂದು ಕನ್ನಡಪಡ ಹೋರಾಟಗಾರ ಸದ್ದಾಂ ಆಲಗೂರ ಹೇಳಿದರು.
ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮದ ಪರಮಾನಂದ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಸಚಿವ ಜಮೀರ್ ಅಹಮ್ಮದ್‌ಖಾನ್ ಅವರ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿ ಬಳಗದ ವತಿಯಿಂದ ವಿಕಲಚೇತನ ಮಕ್ಕಳಿಗೆ ನೋಟ್‌ಬುಕ್ ಪೆನ್ನುಗಳನ್ನು ವಿತರಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಬೇಕು.ಅವರ ಅಭಿಮಾನಿ ಬಳಗವು ಇಂತಹ ಸಮಾಜಮುಖಿ ಕಾರ್ಯಗಳಿಗೆ ಸದಾ ಸಿದ್ಧ ಎಂದರು.
ಈ ವೇಳೆ ಪತ್ರಕರ್ತ ಇಸ್ಮಾಯಿಲ್ ಶೇಖ್ ಪ್ರಾಸ್ತಾವಿಕ ಮಾತನಾಡಿದರು.
ಮುಖಂಡ ಮಡಿವಾಳ ನಾಯ್ಕೋಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪೈಗಂಬರ್ ಬುಕ್ಕದ್, ರಹೀಮ್ ಬೆನಕನಹಳ್ಳಿ, ಶ್ರೀಶೈಲ ಹಿಪ್ಪರಗಿ, ರಫೀಕ್ ಮುಲ್ಲಾ, ಅಪ್ಪು ದೇಸಾಯಿ, ರಸೀಧ್ ಕುಮಸಗಿ, ರಜಾಕ್ ಪಟೇಲ್, ಇಸ್ಮಾಯಿಲ್ ಹಳ್ಳಿಮನಿ,ದತ್ತಾತ್ರೇಯ ಕಲಕೇರಿ, ಸಲಿಂ ಅಸಂತಾಪುರ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

