ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೇಂದ್ರ ಸರ್ಕಾರದ ಜವಾಹರ ನವೋದಯ ವಿದ್ಯಾಲಯದಲ್ಲಿ
೨೦೨೬-೨೭ ನೇ ಸಾಲಿನಲ್ಲಿ ೯ ಮತ್ತು ೧೧ ನೇ ತರಗತಿಯ ಖಾಲಿ ಉಳಿಯುವ ಸ್ಥಾನಗಳಿಗೆ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶ ಪರೀಕ್ಷೆಯ ಮೂಲಕ ಈ ಆಯ್ಕೆ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸಲು ಸೆ ೨೩ ಕೊನೆಯ ದಿನವಾಗಿದೆ. ೨೦೨೬ ರ ಫೆಬ್ರುವರಿ ೭ ರಂದು ಪ್ರವೇಶ ಪರೀಕ್ಷೆ ಜರುಗಲಿದೆ. ಅರ್ಜಿ ಸಲ್ಲಿಸಲು ಹಾಗೂ ಮತ್ತೀತರ ಹೆಚ್ಚಿನ ವಿವರಗಳಿಗಾಗಿ ಜವಾಹರ ನವೋದಯ ವೆಬ್ ಸೈಟ್ ಇಲ್ಲವೇ ಪ್ರಾಚಾರ್ಯರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
