ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಶರಣ ಮಾಸದ 9ನೇ ದಿನದ ಅನುಭಾವ ಮಾಲಿಕೆಯಲ್ಲಿ ಡಾ. ಮಹಾಬಲೇಶ್ವರಪ್ಪ, ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕರು" ಹೈದ್ರಾಬಾದ್ ಮತ್ತು ಮದ್ರಾಸ್ ಕರ್ನಾಟಕ ಭಾಷಾವಾರು ಪ್ರಾಂತ ಚಳುವಳಿಯ ಬಗೆಗೆ ಎಳೆ ಎಳೆಯಾಗಿ ಅತ್ಯಂತ ಸವಿಸ್ತಾರವಾಗಿ ತಮ್ಮ ಅನುಭಾವವನ್ನು ಹಂಚಿಕೊಂಡರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಆಯಾ ಪ್ರದೇಶದ ಸರ್ವಾoಗೀಣ ಬೆಳವಣಿಗೆ, ಪ್ರಾದೇಶಿಕ ಭಾಷೆ ಕಾಪಾಡುವುದು, ಸಾಂಸ್ಕೃತಿಕ ಸೌರಭವನ್ನು ಕಾಪಾಡುವುದು ಅತ್ಯಂತ ಅವಶ್ಯವಾಗಿತ್ತು. ಕರ್ನಾಟಕ ಭಾಗದ ಜನರಿಗೆ ತಮ್ಮ ಆಡಳಿತ ಭಾಷೆ ಕನ್ನಡವಿದ್ದರೆ ಮಾತ್ರ ಎಲ್ಲ ವ್ಯವಹಾರಕ್ಕೂ ಒಳ್ಳೆಯದು ಎಂದು ಮನಗಂಡು, ಭಾವನಾತ್ಮಕವಾಗಿ ಎಲ್ಲರೂ ಒಗ್ಗೂಡಿ ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಕಾರಣರಾದರು.
ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಿಂದ ಹಿಡಿದು ಕಲ್ಯಾಣ ಕರ್ನಾಟಕದ ಹಲವಾರು ಹೋರಾಟಗಳಾದ ಭಾಷಾವಾರು ತತ್ವ ಚಳುವಳಿ, ನಿಜಾಮ ಕರ್ನಾಟಕ ಪರಿಷತ್ – ಹೈದ್ರಾಬಾದ್ ಗೊತ್ತುವಳಿ, ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಭಾಲ್ಕಿ ಪಟ್ಟದದೇವರು, ಶರಣ ಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ, ಉತ್ತಂಗಿ ಚೆನ್ನಪ್ಪ ಅವರು ಭಾಗವಹಿಸಿ, ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದು,ಬಾಂಬೆ ಕರ್ನಾಟಕದಲ್ಲಿ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಆಲೂರು ವೆಂಕಟರಾಯರು ವಿ.ಕೆ ಗೋಕಾಕ್ ಅವರನ್ನೂ ಸಹ ಉಲ್ಲೇಖಿಸುತ್ತಾ, ಕರ್ನಾಟಕ ಸಾಹಿತ್ಯ ಪರಿಷತ್, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಗಳು, ನಿಜಲಿಂಗಪ್ಪನವರ ನೇತೃತ್ವದಲ್ಲಿ ನಡೆದ ಕರ್ನಾಟಕ ಏಕೀಕರಣದ ಸಭೆ,ಅಖಂಡ ಕರ್ನಾಟಕ ಸಮಿತಿ, ಕನ್ನಡದ ಕವಿ ಕುವೆಂಪು ಮತ್ತು ಗೋಪಾಲಗೌಡರ ಒಮ್ಮತ, ಸ್ತ್ರೀ ಸಮಿತಿಯಲ್ಲಿ ಜಯದೇವಿ ತಾಯಿ ಲಿಗಾಡೆ, ತೊಗರಿ ಸರ್ವ ಮಂಗಳಾ, ಬಳ್ಳಾರಿ ಸಿದ್ದಮ್ಮ ನವರ ಜೊತೆಗೆ ಹೋರಾಡಿದ ಹಲವಾರು ಮಹಿಳೆಯರು, ಅಳ ವಂಡಿ ಶಿವಮೂರ್ತಿ ಸ್ವಾಮಿಗಳಜೊತೆಗೆ ಮಹಾ ದೇವ ಪಟ್ಟಣ, ನಾಗನಗೌಡರು, ಕೊ. ಚೆನ್ನಬಸಪ್ಪ, ಗಾದಿ ಲಿಂಗಪ್ಪ ಮತ್ತು ಇನ್ನೂ ಹಲವಾರು ಮಹನೀಯರ ಜೊತೆ ಕ್ರಿಯಾ ಸಮಿತಿ ರಚಿಸಿ, 500 ಜನರ ಜೊತೆಗೂಡಿ ಮನವಿ ಸಲ್ಲಿಸಿದ್ದು, ಹುಬ್ಬಳ್ಳಿ ಮತ್ತು ರೋಣ ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು, ವಾಲಿ ಚೆನ್ನಪ್ಪ, ಗುದ್ಲೆಪ್ಪ ಹಳ್ಳಿಕೇರಿ ಮತ್ತಿತರರು ಭಾಷಾವಾರು ಪ್ರಾಂತಕ್ಕೆ ಹೆಚ್ಚು ಒತ್ತಡ ಕೊಟ್ಟಿದ್ದು, ಕೇಂದ್ರ ಸಮಿತಿಯ ವರದಿ, ಹಂಪಿ ಸತ್ಯಾಗ್ರಹ ಹೀಗೆ ಪ್ರತಿಯೊಂದರ ವಿವರವನ್ನು ಭಾಷಾವಾರು ಪ್ರಾಂತ ಚಳುವಳಿ
ಬಗೆಗೆ ನಮಗೆಲ್ಲ ಅತ್ಯಂತ ಸಮರ್ಪಕವಾಗಿ ತಿಳಿಸಿ ಕೊಟ್ಟರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಇಂದಿನ ಉಪನ್ಯಾಸಕರಾದ ಮಹಾ ಬಲೇಶ್ವರಪ್ಪ ಅವರನ್ನು ಶ್ಲಾಘೀ ಸುತ್ತಾ, ಪ್ರಾದೇಶಿಕ ಅಸಮಾ ನತೆಯನ್ನು ಹೋಗಲಾಡಿಸಲು ಕರ್ನಾಟಕ ಏಕೀಕರಣ ಹೇಗೆ ಒಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿತು ಎಂದು ತಿಳಿಸಿದರು ಏಕೀಕರಣಕ್ಕಾಗಿ ಹೋರಾಡಿದ ಸಾಣಿಕೊಪ್ಪ, ಅಂಬಲಿ ಚೆನ್ನಬಸಪ್ಪ, ಬಸರಿಗಿಡದ, ಸಿದ್ದಪ್ಪ ಹೊಸಮನಿ, ಶಂಕರಗೌಡರ ಜೊತೆಗೆ ಹಲವಾರು ಮಹನೀಯರನ್ನು ನೆನಪು ಮಾಡಿಕೊಳ್ಳುತ್ತಾ, ಕರ್ನಾಟಕ ಏಕೀಕರಣದ ಮೊದಲ ಮುಖ್ಯಮಂತ್ರಿ ನಿಜಲಿಂಗಪ್ಪನವರು ಎಂದು ಹಲವಾರು ಮಹತ್ತರ ವಿಚಾರ ಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ಶರಣೆ ಸೋನಾಲಿ ನೀಲಕಂಠ ಅವರ ವಚನ ಪ್ರಾರ್ಥನೆ, ಶರಣ ಶ್ರೀಶೈಲ ಐನಾಪುರ ಅವರ ಸ್ವಾಗತ, ಶರಣೆ ವಿಜಯಲಕ್ಷ್ಮಿ ಹಂಗರಗಿ ಅವರ ಶರಣು ಸಮರ್ಪಣೆ, ಶರಣೆ ಭಾಗ್ಯ ಕೋಟಿ ಅವರ ವಚನ ಮಂಗಳ ಮತ್ತು ಶರಣೆ ವಿಜಯಲಕ್ಷ್ಮಿ ಕಲ್ಬುರ್ಗಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.

ಶಾರದಾ ಪಾಟೀಲ (ಮೇಟಿ) ದತ್ತಿ ಉಪನ್ಯಾಸ
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಪ್ರೊ. ಶಾರದಾ ಪಾಟೀಲ (ಮೇಟಿ) ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 309
