Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮನುಷ್ಯನಲ್ಲಿ ಸಮಾನತೆ, ತಾಳ್ಮೆ ಇದ್ದಾಗ ಮಾತ್ರ ಸಾಧನೆ ಸಾಧ್ಯ

ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೂ ನೀಡಿ ಸ್ವಾಗತಿಸಿದ ಸಿಬ್ಬಂದಿ

ಹಂಚನಾಳ ಕೆರೆ ಸೌಂದರ್ಯೀಕರಣಕ್ಕೆ ಡಿಸಿ ಡಾ.ಆನಂದ ಕೆ. ಸೂಚನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಡಾ.ಮಹಾಂತ ಶಿವಯೋಗಿ
(ರಾಜ್ಯ ) ಜಿಲ್ಲೆ

ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಡಾ.ಮಹಾಂತ ಶಿವಯೋಗಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಕೊಲ್ಹಾರ: ಬಸವಣ್ಣನವರ ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಡಾ.ಮಹಾಂತ ಶಿವಯೋಗಿ ಶ್ರೀಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜೋಳಿಗೆ ಹಾಕಿಕೊಂಡು ಊರುರು ಸುತ್ತಿ ನಿಮ್ಮ ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ವ್ಯಸನಿಗಳ ಮನ‌ ಪರಿವರ್ತನೆ ಮಾಡುವುದುಕ್ಕೆ ತಮ್ಮ ಜೀವನವನ್ನು ಉತ್ತಮ ಸಮಾಜದ ನಿರ್ಮಾಣಕ್ಕೆ  ಮೀಸಲಿರಿಸಿದ್ದು ನಮಗೆ ಮಾದರಿ ಮತ್ತು ಮತ್ತು ಸಮಾಜಕ್ಕೆ ಶ್ರೇಷ್ಠ ಕೊಡುಗೆ ಎಂದು ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಹೇಳಿದರು.
ತಾಲೂಕು ಆಡಳಿತದಿಂದ ಪಟ್ಟಣದ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳು, ವಿದ್ಯಾರ್ಥಿಗಳು, ಯುವ ಜನಾಂಗ ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದಾಗಿ ಲಕ್ಷಾಂತರ ಜನರು ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ.
ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನ ಆಗಸ್ಟ್ 1. ರಾಜ್ಯ ಸರ್ಕಾರವು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಆದೇಶಿಸಿದ್ದು, ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ರಾಜ್ಯ ಯುವ ಪಶಸ್ತಿ ಪುರಸ್ಕೃತ, ಚಿಂತಕ ಅರವಿಂದ ಕೊಪ್ಪ ಮಾತನಾಡಿ ಆಕಾರದಲ್ಲಿ ಇರುವ ಮನುಷ್ಯನ ಒಳಗೆ ಮತ್ತು ಹೊರಗೆ ನಿಜ ಸ್ವರೂಪದ ಮನುಷ್ಯನನ್ನಾಗಿ ಮಾಡುವಲ್ಲಿ ಮಹಾಂತ ಶ್ರೀಗಳ ಕೊಡುಗೆ ಅನನ್ಯ ಅಂಥವರನ್ನ ಸ್ಮರಿಸುವ ಈ ಕಾರ್ಯಕ್ರಮ ಮಾಡಿದ್ದು ಬಹಳಷ್ಟು ಶ್ಲಾಘನೀಯ.
ಶ್ರೀ ಮಹಾಂತ ಶಿವಯೋಗಿಗಳು ಮನುಷ್ಯನ ಬಾಹ್ಯ, ಆಂತರಿಕ ಮನಃ ಪರಿವರ್ತನೆಗೆ ಆ ಕಾಲವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಜೀವನದಲ್ಲಿ ಸದಾಚಾರ, ಉತ್ತಮ ನಡತೆ, ಮಾತು ಮತ್ತು ಜ್ಞಾನದ ಮಹತ್ವವನ್ನು ಸಾರುವ ನುಡಿ. ಒಳ್ಳೆಯದು ಕೆಟ್ಟದ್ದು ಎರಡು ಕೂಡ ನಮ್ಮ ಹತ್ತಿರವೇ ಇವೆ ಇದರಲ್ಲಿ ಒಳ್ಳೆಯದನ್ನ ಆಯ್ಕೆ ಮಾಡಿಕೊಂಡು ದುಶ್ಚಟಗಳ ದಾಸನಾಗದೆ ಹೆತ್ತ ತಂದೆ ತಾಯಿ ಸೇರಿದಂತೆ ವಿದ್ಯೆ ಕಲಿಸಿದ ಗುರುಗಳು ಮತ್ತು ಶಾಲೆಗೆ ಕೀರ್ತಿ ತರುವಂತಾಗಬೇಕು. ನಾವು ಇಂದು ಯುವ ಜನತೆಯನ್ನು ಉತ್ತಮ ಮಾರ್ಗಕ್ಕೆ ತರಲು, ಶಿಕ್ಷಕರು ಪೋಷಕರು ಸಮಾಜದ ಹಿರಿಯರು ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಎಸ್.ಎಸ್. ನಾಯಕಲಮಠ, ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಮುಖ್ಯಾಧಿಕಾರಿ ವೀರೇಶ ಹಟ್ಟಿ, ಪ್ರಾಚಾರ್ಯ ಎಂ.ಎಸ್. ಗರಸಂಗಿ, ಪಿಎಸ್ಐ ಎಂ.ಬಿ. ಬಿರಾದಾರ, ವೈದ್ಯಾಧಿಕಾರಿ ಡಾ.ಲಕ್ಷ್ಮೀ ತೆಲ್ಲೂರು ಸಮಾಜ ಕಲ್ಯಾಣ ಅಧಿಕಾರಿ ಮನು ಪತ್ತಾರ, ರವಿ ಗೊಳಸಂಗಿ, ಮಹೇಶ್ ತುಂಬರಮಟ್ಟಿ, ಶ್ರೀಕಾಂತ ಗಣಿ, ಪ್ರದೀಪಗೌಡ ಪಾಟೀಲ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮನುಷ್ಯನಲ್ಲಿ ಸಮಾನತೆ, ತಾಳ್ಮೆ ಇದ್ದಾಗ ಮಾತ್ರ ಸಾಧನೆ ಸಾಧ್ಯ

ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೂ ನೀಡಿ ಸ್ವಾಗತಿಸಿದ ಸಿಬ್ಬಂದಿ

ಹಂಚನಾಳ ಕೆರೆ ಸೌಂದರ್ಯೀಕರಣಕ್ಕೆ ಡಿಸಿ ಡಾ.ಆನಂದ ಕೆ. ಸೂಚನೆ

ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮನುಷ್ಯನಲ್ಲಿ ಸಮಾನತೆ, ತಾಳ್ಮೆ ಇದ್ದಾಗ ಮಾತ್ರ ಸಾಧನೆ ಸಾಧ್ಯ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೂ ನೀಡಿ ಸ್ವಾಗತಿಸಿದ ಸಿಬ್ಬಂದಿ
    In (ರಾಜ್ಯ ) ಜಿಲ್ಲೆ
  • ಹಂಚನಾಳ ಕೆರೆ ಸೌಂದರ್ಯೀಕರಣಕ್ಕೆ ಡಿಸಿ ಡಾ.ಆನಂದ ಕೆ. ಸೂಚನೆ
    In (ರಾಜ್ಯ ) ಜಿಲ್ಲೆ
  • ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ
    In (ರಾಜ್ಯ ) ಜಿಲ್ಲೆ
  • ಕೃಷ್ಣಾ ನದಿ ತೀರದತ್ತ ನೂರಾರು ದೇವ-ದೇವತೆಗಳ ಪಲ್ಲಕ್ಕಿಗಳ ಮಹಾಪೂರ
    In (ರಾಜ್ಯ ) ಜಿಲ್ಲೆ
  • ಗ್ರಾಪಂ ಅಧ್ಯಕ್ಷರಾಗಿ ಶೃತಿ, ಉಪಾಧ್ಯಕ್ಷರಾಗಿ ಚಂದ್ರಮ್ಮ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ :ಡೋಣುರ
    In (ರಾಜ್ಯ ) ಜಿಲ್ಲೆ
  • ಸಾವಿಲ್ಲದ, ಕೊನೆಯಿಲ್ಲದ ಭಾಷೆ ಕನ್ನಡ :ಡಾ.ನಾಗರಾಜ
    In (ರಾಜ್ಯ ) ಜಿಲ್ಲೆ
  • ಪರೀಕ್ಷೆ ವೆಬ್ ಕಾಸ್ಟಿಂಗ್ ಕೇಂದ್ರ ಕ್ಕೆ ಜಿಪಂ ಸಿಇಒ ರಿಷಿ ಆನಂದ ಭೇಟಿ
    In (ರಾಜ್ಯ ) ಜಿಲ್ಲೆ
  • ಉಚಿತ ತರಬೇತಿ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.