Author: editor.udayarashmi@gmail.com

ವಿಧಾನಸಭೆಯಲ್ಲಿ ಕೋಲಾಹಲ | ಬಿಜೆಪಿಯಿಂದ ಸರ್ಕಾರಕ್ಕೆ ತರಾಟೆ | ಬಿಜೆಪಿ ಮುಖಂಡರ ಮೇಲೆ ಕಿಡಿಕಾರಿದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು: ಕರ್ನಾಟಕ ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿರುವುದು ಮಂಗಳವಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ಬಿಜೆಪಿ ಅವರ ವಜಾಕ್ಕೆ ಕಾರಣಗಳನ್ನು ತಿಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.ಮತಕಳ್ಳತನ ವಿಚಾರವಾಗಿ ಬಹಿರಂಗವಾಗಿ ಮಾತನಾಡಿ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರನ್ನು ಸಿದ್ದರಾಮಯ್ಯ ಸಂಪುಟದಿಂದ ನಿನ್ನೆ ವಜಾಗೊಳಿಸಲಾಗಿತ್ತು. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ನಂತರ ಸಹಕಾರ ಸಚಿವರಾಗಿ ಸೇವೆ ಸಲ್ಲಿಸಿದ್ದ ರಾಜಣ್ಣ ಅವರನ್ನು ಸೋಮವಾರ ಸಂಪುಟದಿಂದ ಕೈಬಿಡಲಾಗಿತ್ತು. ಈ ಬೆಳವಣಿಗೆ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.ಮಂಗಳವಾರ ಇದೇ ವಿಚಾರ ವಿಧಾನಸಭೆ ಕಲಾಪದಲ್ಲೂ ಮಾರ್ದನಿಸಿದ್ದು, ಪ್ರತಿಪಕ್ಷ ಬಿಜೆಪಿ ಈ ಕುರಿತು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜಣ್ಣ ಅವರ ವಜಾಕ್ಕೆ ಸರ್ಕಾರ ಕಾರಣಗಳನ್ನು ನೀಡಲೇಬೇಕು ಎಂದು ಒತ್ತಾಯಿಸಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಚರ್ಚೆಯಿಂದ…

Read More

ಉದಯರಶ್ಮಿ ದಿನಪತ್ರಿಕೆ ಬಸವನ ಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಮಠವನ್ನು ತಳಿರು ತೋರಣ ಹಾಗೂ ವಿಶೇಷವಾದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಅರ್ಚಕ ಶ್ರೀವಾದಿರಾಜಾಚಾರ್ಯ ಯಜುರ್ವೇದಿ ಅವರ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ಕ್ಷೀರಾಭಿಷೇಕ, ತುಳಸಿ ಅರ್ಚನೆ, ವಿಶೇಷ ಅಲಂಕಾರ ಹಾಗೂ ಅಷ್ಟೋತ್ತರ ಮುಂತಾದ ಕಾರ್ಯಕ್ರಮಗಳು ನಡೆದವು. ನಂತರ ವೇ.ಮೂ. ನರಹರಿ ಆಚಾರ್ಯ ಜೋಶಿ ಮುತ್ತಗಿ ಅವರಿಂದ ಪ್ರವಚನವನ್ನು ಏರ್ಪಡಿಸಲಾಗಿತ್ತು.ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ನಡೆಸಲಾಯಿತು. ಪ್ರತಿದಿನ ಸಾಯಂಕಾಲ ಪಂಚ ಸುಳಾದಿ, ಪಲ್ಲಕ್ಕಿ ಉತ್ಸವ, ಸಂಗೀತ ಸೇವೆ, ಅಷ್ಟಾವಧಾನ ಸೇವೆ, ತೊಟ್ಟಲು ಸೇವೆ ಹಾಗೂ ಸ್ವಸ್ತಿವಾಚನಗಳು ಜರುಗಿದವು.ಉತ್ತರಾರಾಧನೆಯ ದಿನ ವೈಭವದ ಜಯಘೋಷ ಹಾಗೂ ಭಜನೆಯೊಂದಿಗೆ ರಥೋತ್ಸವ ನಡೆಯಿತು. ಬಳಿಕ ಶ್ರೀಮಠದ ಅಧ್ಯಕ್ಷ ವಸಂತಾಚಾರ್ಯ ಇಂಗಳೇಶ್ವರ ಅವರು ಮಾತನಾಡಿ, ರಾಯರ ಪಾದೋದಕ ಮತ್ತು ಮೃತ್ತಿಕೆಗಳಿಗೆ ಅದ್ಭುತ ಶಕ್ತಿ ಇದೆ. ತನ್ಮೂಲಕ ಎಲ್ಲರಿಗೂ ರಾಯರ ಆಶೀರ್ವಾದ ಸಿಗುವಂತಾಗಲಿ. ಎಲ್ಲ ಭಕ್ತರ ಅಭೀಷ್ಠೆಗಳನ್ನೂ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಶ್ರೀಬಸವೇಶ್ವರ ಕೋ-ಆಪರೇಟಿವ್ಹ್ ಬ್ಯಾಂಕು ೨೦೨೪-೨೫ ನೇ ಹಣಕಾಸು ವರ್ಷದಲ್ಲಿ ಒಟ್ಟು ರೂ. ೩೫,೧೩೨.೩೭ ಲಕ್ಷ ವ್ಯವಹಾರ ಮಾಡಿ ಒಂದು ಕೋಟಿ ರೂಪಾಯಿ ಆದಾಯ ಗಳಿಸಿದೆ. ೨೦೨೪-೨೫ ನೇ ೬೧ ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಆ.೧೭ ರಂದು ಬೆಳಗ್ಗೆ ೧೦ ಗಂಟೆಗೆ ಮುದ್ದೇಬಿಹಾಳ ರಸ್ತೆಯಲ್ಲಿರುವ ಜಗದ್ಗುರು ಪಂಚಾಚಾರ್ಯ ಜನಕಲ್ಯಾಣ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಮ್ಮ ಬ್ಯಾಂಕಿನಲ್ಲಿ ಪ್ರಸ್ತುತ ೩,೨೫೬ ಸಾಮಾನ್ಯ ಸದಸ್ಯರು, ೩,೨೭೨ ಸಹ ಸದಸ್ಯರನ್ನು ಹೊಂದಿದೆ. ಒಟ್ಟು ರೂ. ೩೪೮.೮೨ ಲಕ್ಷ ಶೇರು ಬಂಡವಾಳ, ೪೧೦.೧೩ ಲಕ್ಷ ಕಾಯ್ದಿಟ್ಟ ನಿಽ ಹಾಗೂ ಇತರೇ ನಿಽಗಳು ಸೇರಿ ಒಟ್ಟು ೯೫೬.೪೯ ಲಕ್ಷ ರೂ. ಹೊಂದಿದೆ. ಗ್ರಾಹಕರಿಂದ ರೂ.೧೦,೩೩೮.೧೯ ಲಕ್ಷ ಠೇವುಗಳು ಹೊಂದಿದೆ. ದುಡಿಯುವ ಬಂಡವಾಳ ರೂ. ೧೨,೦೯೦.೯೭ ಲಕ್ಷ ಇದೆ. ೨೦೨೫ರ ವರ್ಷಾಂತ್ಯಕ್ಕೆ ಸಾಲಗಾರರಿಂದ ಬರತಕ್ಕ ಸಾಲ ಬಾಕಿ ೬,೮೩೧.೬೨…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಪ.ಪಂ. ಹಾಗೂ ತಲಶೀಲ್ದಾರ ಕಛೇರಿ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ಧಿಡೀರ ದಾಳಿ ನಡೆಸಿ, ವಿವಿಧ ಕಡತಗಳನ್ನು ಪರಿಶೀಲನೆ ಮಾಡಿದರು.ಪ.ಪಂ. ಕಛೇರಿಯಲ್ಲಿ ೨೦೨೩-೨೪, ೨೦೨೪-೨೫ನೇ ಸಾಲಿನಲ್ಲಿ ಭೂಪರಿವರ್ತನೆ (ಎನ್.ಎ.) ಆಗಿರುವ ಜಮೀನುಗಳ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿ, ಅದರ ಸಂಪೂರ್ಣ ಮಾಹಿತಿಯನ್ನು ಪಡೆದ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ಮಾಹಿತಿಗಾಗಿ ಎಲ್ಲ ಭೂಪರಿವರ್ತನೆ ಕಡತಗಳ ನಕಲು ಪ್ರತಿಯನ್ನು ಪಡೆದರು. ಇತ್ತಿಚೆಗೆ ಪಟ್ಟಣದ ಹೊರವಲಯದಲ್ಲಿ ಭೂಪರಿವರ್ತನೆಯಾಗಿರುವ ಡೈಮಂಡ ಪಾರ್ಕನ ಸುಮಾರು ೪೦ ಎಕರೆ ಸಿಟಿ ಸರ್ವೆಯಲ್ಲಿ(ಪ.ಪಂಚಾಯತಿ ಸರಹದ್ದಿನಲ್ಲಿ) ಬರುವದಿಲ್ಲ ಮತ್ತು ಅದರಲ್ಲಿ ಈಗಾಗಲೇ ೪೦% ನಿವೇಶನಗಳ ಉತಾರಿಯನ್ನು ಪ.ಪಂ.ನವರು ನೀಡಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಣೆ ಮಾಡಿದಾಗ ಲೋಕಾಯುಕ್ತ ಅಧಿಕಾರಿಗಳು ಇದರ ಕುರಿತು ಪ.ಪಂ.ನ ಮುಖ್ಯಾಧಿಕಾರಿಯನ್ನು ವಿಚಾರಿಸಿ, ಹೆಚ್ಚಿನ ಮಾಹಿತಿಗಾಗಿ ಈ ಭೂಪರಿವರ್ತನೆ ಕಡತದ ನಕಲು ಪ್ರತಿಯನ್ನು ನೀಡುವಂತೆ ಸೂಚಿಸಿದರು.ನಂತರ ಪ.ಪಂ.ನ ಎಲ್ಲ ವಾಹನಗಳ ಲಾಗ್‌ಬುಕ್ ಪರಿಶೀಲನೆ ನಡೆಸಿ, ಅದರ ಖರ್ಚು ವೆಚ್ಚಗಳ ಬಗ್ಗೆ ಸಂಪೂರ್ಣ ಮಾಹಿತಿ ಪರಿಶೀಲನೆ ನಡೆಸಿದರು.…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ತೆರಳಿದ್ದ ಅಲಂಕೃತ ಮೂಲನಂದೀಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಭಕ್ತರ ಜಯಘೋಷ, ಬಸವಣ್ಣನ ಕುದರಿ ಶಿವಾನಂದ ಈರಕಾರಮುತ್ಯಾ ಅವರ ಹೇಳಿಕೆ ನುಡಿದ ನಂತರ ದೇವಸ್ಥಾನದಲ್ಲಿರುವ ಬೆಳ್ಳಿ ಪಲ್ಲಕ್ಕಿ ಇಡುವ ಕಟ್ಟೆಗೆ ಮರಳುವ ಮೂಲಕ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತ್ತು.ಪಟ್ಟಣದಿಂದ ಸುಮಾರು ೫ ಕಿಮೀ ಅಂತರದಲ್ಲಿರುವ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಸೋಮವಾರ ತೆರಳಿದ್ದ ಮೂಲನಂದೀಶ್ವರ (ಬಸವೇಶ್ವರ) ದೇವರ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವ ಸಂಜೆ ಆಕರ್ಷಕ ಸಿಡಿಮದ್ದು, ವಿವಿಧ ಕಲಾ ತಂಡಗಳ ಮೆರವಣಿಗೆ, ವಿವಿಧ ವಾದ್ಯಮೇಳದೊಂದಿಗೆ ಭಕ್ತರ ಜಯಘೋಷದೊಂದಿಗೆ ಪುರ ಪ್ರವೇಶ ಮಾಡಿದ ನಂತರ ಅದ್ದೂರಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಲುಪಿದ ನಂತರ ರಾತ್ರಿ ಪಲ್ಲಕ್ಕಿ ಪಲ್ಲಕ್ಕಿ ಕಟ್ಟೆಗೆ ಮರಳಿತು. ಮಂಗಳವಾರ ನಸುಕಿನ ಜಾವ ಬಸವಣ್ಣನ ಕುದರಿ ಶಿವಾನಂದ ಈರಕಾರಮುತ್ಯಾ ಅವರು ಆಗಮಿಸಿದ ನಂತರ ಪಲ್ಲಕ್ಕಿ ಉತ್ಸವವು ದೇವಸ್ಥಾನದ ಪ್ರಾಂಗಣದಲ್ಲಿ ಮೂರು ಪ್ರದಕ್ಷಿಣೆ ಹಾಕಿದ ನಂತರ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವದ ಉತ್ತರಾಧನೆ ಭಕ್ತಿಭಾವದಿಂದ ಅದ್ಧೂರಿಯಾಗಿ ಜರುಗಿತು.ಪಟ್ಟಣದ ವಿಠ್ಠಲಮಂದಿರದಲ್ಲಿ ಕಳೆದ ೩ ದಿನಗಳಿಂದ ಆರಂಭಗೊಂಡ ಆರಾಧನಾ ಮಹೋತ್ಸವದಲ್ಲಿ ಮೊದಲದಿನ ಪೂರ್ವಾರಾಧನೆ, ಎರಡನೆಯ ದಿನ ಮಧ್ಯಾರಾಧನೆ ನಂತರ ಉತ್ತರಾಧನೆ ಜರುಗಿದವು. ಪ್ರತಿದಿನ ಬೆಳಿಗ್ಗೆ ರಾಯರ ಮಹಾಪೂಜೆ, ಅಷ್ಠೋತ್ತರ ಸಾಂಗವಾಗಿ ಜರುಗಿ ನಂತರ ತೀರ್ಥ, ಮಹಾಪ್ರಸಾದ ವಿತರಣೆಯಾದವು. ರಾತ್ರಿ ರಾಯರ ಕುರಿತು ಭಕ್ತಿಗೀತೆಗಳ ಭಜನೆ ಜರುಗಿತು.ಮಹೋತ್ಸವದಲ್ಲಿ ವೈದ್ಯರುಗಳಾದ ಆರ್.ಆರ್.ನಾಯಿಕ್, ಸತೀಶ ನಾಡಗೌಡ, ಚಿದಂಬರ ಸೇವಾ ಸಮಿತಿಯ ವೆಂಕಟೇಶ ಕುಲಕರ್ಣಿ, ಸುಧೀರ ಪಾಟೀಲ, ಶ್ರೀಪಾದ ಜೋಷಿ, ಗುರುರಾಜ್ ಕುಲಕರ್ಣಿ, ನರೇಂದ್ರ ನಾಡಗೌಡ, ಪ್ರಲ್ಹಾದ ಕುಲಕರ್ಣಿ, ಪ್ರಭಾಕರ ಕುಲಕರ್ಣಿ, ಅಶೋಕ ಜೋಷಿ, ಶರತ್ ಕುಲಕರ್ಣಿ, ಸಂಗೀತಾ ನಾಯಿಕ್, ಮಾಧುರಿ ನಾಡಗೌಡ, ಶಶಿಕಲಾ ಕುಲಕರ್ಣಿ, ಪ್ರೀತಿ ಪಾಟೀಲ, ವಿದ್ಯಾಶ್ರೀ ಕುಲಕರ್ಣಿ, ಭಾವನಾ ಪುರೋಹಿತ, ವಿಜಯಲಕ್ಷ್ಮಿ ಕುಲಕರ್ಣಿ, ಪ್ರಮೀಳಾಬಾಯಿ ಕುಲಕರ್ಣಿ, ರೇಖಾ ನಾಡಗೌಡ, ಸುಜಾತಾ ನಾಡಗೌಡ, ಅಂಬಿಕಾ ಕುಲಕರ್ಣಿ, ಅನೀತಾ ಕುಲಕರ್ಣಿ, ಶ್ರೀದೇವಿ ಜೋಷಿ, ಉಮಾಬಾಯಿ ಜೋಷಿ, ವಾಸಂತಿ ಕುಲಕರ್ಣಿ ಸೇರಿದಂತೆ…

Read More

ಸರ್ಕಾರದ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸಲು ವಾರ್ತಾ ಇಲಾಖೆಯಿಂದ ಬೀದಿನಾಟಕ-ಜಾನಪದ ಕಲಾ ತಂಡಗಳ ಆಯ್ಕೆ | ಸಹಾಯಕ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರ ಜಾರಿಗೊಳಿಸಿರುವ ಪಂಚಗ್ಯಾರಂಟಿ ಯೋಜನೆಗಳು ಹಾಗೂ ಸರ್ಕಾರದ ಜನಪ್ರಿಯ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮತ್ತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ವಾರ್ತಾ ಇಲಾಖೆಯಿಂದ ಬೀದಿ ನಾಟಕ ಹಾಗೂ ಜಾನಪದ ಕಲಾ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಅವರು, ಸರ್ಕಾರದ ಪಂಚ ಗ್ಯಾರಂಟಿಗಳ ಯೋಜನೆ ಮತ್ತು ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ಮನವರಿಕೆ ಮಾಡಿಕೊಡುವಲ್ಲಿ ಬೀದಿ ನಾಟಕ ಹಾಗೂ ಜಾನಪದ ಕಲಾತಂಡಗಳ ಪಾತ್ರ ಬಹುಮುಖ್ಯವಾಗಿದೆ. ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಭಾಗವಾಗಿಯೇ ವಿವಿಧ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕೋಟಾದಡಿ ೨೦೨೫-೨೬ನೇ ಸಾಲಿನ ವಿವಿಧ ಸ್ನಾತಕೋತ್ತರ ಅಧ್ಯಯನದ ಪ್ರವೇಶಾತಿ ಪ್ರಕ್ರಿಯೆಯು ಆಗಸ್ಟ್ ೧೨ ರಿಂದ ಆಗಸ್ಟ್ ೨೩ರವರೆಗೆ ಹಂತ ಹಂತವಾಗಿ ನಡೆಯಲಿವೆ. ವೇಳಾಪಟ್ಟಿಯ ಅನ್ವಯ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಿತಿತಿ.ಡಿಛಿub.ಚಿಛಿ.iಟಿ ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೀನುಗಾರಿಕೆ ಇಲಾಖೆ ವತಿಯಿಂದ ೨೦೨೫-೨೬ನೇ ಸಾಲಿನ ಜಿಲ್ಲಾ ವಲಯ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಸೌಲಭ್ಯ ಯೋಜನೆಯಡಿ ಬಾವಿ ಹಾಗೂ ಕೃಷಿ ಹೊಂಡ ಹೊಂದಿರುವ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ವಿಜಯಪುರ, ಬಬಲೇಶ್ವರ, ತಿಕೋಟಾ, ಸಿಂದಗಿ, ಚಡಚಣ, ಇಂಡಿ, ದೇವರಹಿಪ್ಪರಗಿ, ಆಲಮೇಲ ತಾಲೂಕಿನ ರೈತರು ಆಗಸ್ಟ್ ೨೦ರೊಳಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊಬೈಲೆ ಸಂಖ್ಯೆ: ೯೮೪೫೯೨೭೧೧೦ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿ ವತಿಯಿಂದ ೨೦೨೫-೨೬ನೇ ಸಾಲಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.೨೦೨೫ ಮೇ ೩೧ರ ಪೂರ್ವದಲ್ಲಿ ನೋಂದಾಯಿತವಾಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಶೈಕ್ಷಣಿಕ ಸಹಾಯ ಧನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅಕ್ಟೋಬರ್ ೩೧ರೊಳಗಾಗಿ https://ssp.karnataka.gov.inವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿಜಯಪುರ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More