ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಶ್ರೀಬಸವೇಶ್ವರ ಕೋ-ಆಪರೇಟಿವ್ಹ್ ಬ್ಯಾಂಕು ೨೦೨೪-೨೫ ನೇ ಹಣಕಾಸು ವರ್ಷದಲ್ಲಿ ಒಟ್ಟು ರೂ. ೩೫,೧೩೨.೩೭ ಲಕ್ಷ ವ್ಯವಹಾರ ಮಾಡಿ ಒಂದು ಕೋಟಿ ರೂಪಾಯಿ ಆದಾಯ ಗಳಿಸಿದೆ. ೨೦೨೪-೨೫ ನೇ ೬೧ ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಆ.೧೭ ರಂದು ಬೆಳಗ್ಗೆ ೧೦ ಗಂಟೆಗೆ ಮುದ್ದೇಬಿಹಾಳ ರಸ್ತೆಯಲ್ಲಿರುವ ಜಗದ್ಗುರು ಪಂಚಾಚಾರ್ಯ ಜನಕಲ್ಯಾಣ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಮ್ಮ ಬ್ಯಾಂಕಿನಲ್ಲಿ ಪ್ರಸ್ತುತ ೩,೨೫೬ ಸಾಮಾನ್ಯ ಸದಸ್ಯರು, ೩,೨೭೨ ಸಹ ಸದಸ್ಯರನ್ನು ಹೊಂದಿದೆ. ಒಟ್ಟು ರೂ. ೩೪೮.೮೨ ಲಕ್ಷ ಶೇರು ಬಂಡವಾಳ, ೪೧೦.೧೩ ಲಕ್ಷ ಕಾಯ್ದಿಟ್ಟ ನಿಽ ಹಾಗೂ ಇತರೇ ನಿಽಗಳು ಸೇರಿ ಒಟ್ಟು ೯೫೬.೪೯ ಲಕ್ಷ ರೂ. ಹೊಂದಿದೆ. ಗ್ರಾಹಕರಿಂದ ರೂ.೧೦,೩೩೮.೧೯ ಲಕ್ಷ ಠೇವುಗಳು ಹೊಂದಿದೆ. ದುಡಿಯುವ ಬಂಡವಾಳ ರೂ. ೧೨,೦೯೦.೯೭ ಲಕ್ಷ ಇದೆ. ೨೦೨೫ರ ವರ್ಷಾಂತ್ಯಕ್ಕೆ ಸಾಲಗಾರರಿಂದ ಬರತಕ್ಕ ಸಾಲ ಬಾಕಿ ೬,೮೩೧.೬೨ ಲಕ್ಷವಿದೆ. ಇದರ ಪೈಕಿ ಒಟ್ಟು ೮೧ ಸಾಲಗಾರರಿಂದ ಮುದ್ದತ್ ಮೀರಿದ ಬರತಕ್ಕ ಮೊತ್ತ ೩೫೫.೪೨ ಲಕ್ಷವಿದೆ. ಇದು ಶೇ.೫.೨೦ ರಷ್ಟಿದೆ. ಪ್ರಸ್ತಕ ಸಾಲಿನಲ್ಲಿ ರೂ. ೭೫೬.೩೨ ಲಕ್ಷ ಸಾಲ ವಿತರಿಸಲಾಗಿದ. ಅನುತ್ಪಾದಕ ಸಾಲದ ಮೊತ್ತ ೮೫.೮೫ ರಷ್ಟಿದೆ. ಜುಲೈ ೧ ರಿಂದ ಬ್ಯಾಂಕಿನ ಎಲ್ಲ ಸದಸ್ಯ ಸಾಲಗಾರರಿಗೆ ಅಪಘಾತ ವಿಮಾ ರಕ್ಷಣೆ ಹಾಗೂ ಲಾಕರ್ ವಿಮಾ ರಕ್ಷಣೆ ಒದಗಿಸಲಾಗಿದೆ. ಬ್ಯಾಂಕಿನಲ್ಲಿ ಆರ್ಟಿಜಿಎಸ್, ನೆಪ್ಟ್ ಸೌಲಭ್ಯವಿದೆ. ಮುಂದಿನ ದಿನಗಳಲ್ಲಿ ಎಟಿಎಂ, ಯುಪಿಆರ್ ಮೊಬೈಲ್ ಬ್ಯಾಂಕ್ ಸೌಲಭ್ಯ ಆರಂಭಿಸಲಾಗುವದು ಎಂದು ಲೋಕನಾಥ ಅಗರವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.