Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಪತ್ರಿಕಾ ರಂಗದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ, ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುವ ಮೂಲಕ ಹಲವು ಉತ್ತಮ ಬರಹಗಾರರನ್ನು ರೂಪಿಸಿದ ಹಿರಿಯ ಪತ್ರಕರ್ತ ಬಾಬು ಮುರಾಳ ಅವರ ಸೇವೆ ಸಮಾಜಕ್ಕೆ ಇನ್ನೂ ಅಗತ್ಯವಾಗಿತ್ತು ಎಂದು ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಮುಖ್ಯರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಶನಿವಾರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಹಿರಿಯ ಪತ್ರಕರ್ತ ಬಾಬು ಮುರಾಳ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಬಾಬು ಮುರಾಳ ಅವರ ಕುಟುಂಬಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ ಮಾತನಾಡಿ, ಬಾಬು ಮುರಾಳ ಅವರು ಸಂಘದ ಬೆಳವಣಿಗೆಗೆ ಶ್ರಮಿಸುವುದರ ಜೊತೆಗೆ ಯುವ ಪತ್ರಕರ್ತರಿಗೆ…
ಮುದ್ದೇಬಿಹಾಳ & ತಾಳಿಕೋಟೆ ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆಗೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸುವಂತೆ ಆಗ್ರಹಿಸಿ ಸೋಮವಾರ, ಆಗಸ್ಟ್ 10, 2026ರಂದು ತಾಳಿಕೋಟೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.ಈ ಹಿನ್ನೆಲೆಯಲ್ಲಿ ಇಂದು ತಾಳಿಕೋಟೆ ನಗರದ ಅತಿಥಿಗೃಹದಲ್ಲಿ ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷರಾದ ಎ.ಎಸ್. ಪಾಟೀಲ ನಡಹಳ್ಳಿ ಹಾಗೂ ಮಾಜಿ ಶಾಸಕರು ಸೋಮನಗೌಡ ಪಾಟೀಲ್ ಸಾಸನೂರ್ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅತ್ಯಂತ ಬರಪೀಡಿತ ಪ್ರದೇಶಗಳಲ್ಲಿ ತಾಳಿಕೋಟೆ, ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಭಾಗಗಳು ಪ್ರಮುಖವಾಗಿವೆ ಎಂದು ಹೇಳಿದರು. ವಿಜಯಪುರ ಜಿಲ್ಲೆಯ ಈ ಭಾಗಗಳು ಉತ್ತರ ಕರ್ನಾಟಕದ ಒಣಹವಾಮಾನ ಪ್ರದೇಶದ ಭಾಗವಾಗಿದ್ದು, ಕೃಷಿ ಮಳೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಕರ್ನಾಟಕ ಸರ್ಕಾರದ ದಾಖಲೆಗಳಲ್ಲಿಯೂ ಮುದ್ದೇಬಿಹಾಳ ಸೇರಿದಂತೆ ವಿಜಯಪುರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೈತರ ಹಿತದೃಷ್ಟಿಯಿಂದ ಪಾರದರ್ಶಕ ವಹಿವಾಟಿಗಾಗಿ ಆರಂಭಿಸಲಾದ ಆನ್ ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ಕಲ್ಪಿಸಲು ಈಚೆಗೆ ಸಭೆ ನಡೆಸಿ, ಸೂಚನೆ ನೀಡಿದ ನಂತರ ನಡೆದ ಒಣದ್ರಾಕ್ಷಿ ವಹಿವಾಟಿನಲ್ಲಿ ಈವರೆಗೆ ನಡೆಯುತ್ತಿದ್ದ ಸರಾಸರಿ ರೂ.5 ಕೋಟಿ ಯಿಂದ ರೂ.12 ಕೋಟಿಗೆ ಭಾರಿ ಏರಿಕೆ ಆಗಿರುವುದು ಒಳ್ಳೆಯ ಬೆಳವಣಿಗೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ತಿಳಿಸಿದ್ದಾರೆ.ವಿಜಯಪುರ ನಗರದಲ್ಲಿ ಒಣದ್ರಾಕ್ಷಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆ ಆರಂಭಗೊಂಡರೂ, ಕೆಲ ವ್ಯಕ್ತಿಗಳು ಖಾಸಗಿ ಅಸೋಷಿಯನ್ ರಚಿಸಿ, ಎಪಿಎಂಸಿಗೆ ಸಂಬಂಧವೇ ಇಲ್ಲದಂತೆ ತಮ್ಮದೆಯಾದ ನಿಯಮಾವಳಿಗಳನ್ನು ಮಾಡಿಕೊಂಡು, ಕೆಲವೇ ಕೆಲವು ವ್ಯಕ್ತಿಗಳು ಹರಾಜ್ ದಲ್ಲಿ ಭಾಗವಹಿಸಿ ಮನಸ್ಸಿಗೆ ಬಂದ ದರದಲ್ಲಿ ಖರೀದಿ ಮಾಡಿಕೊಂಡು ರೈತರಿಗೆ ವಂಚನೆ ಮಾಡಲಾಗುತ್ತಿತ್ತು. ಅಲ್ಲದೇ, ತಮ್ಮ ಕೋಲ್ಡ್ ಸ್ಟೋರೇಜ್ ಗಳಲ್ಲಿ ರೈತರು ತಂದಿಡುವ ಉತ್ಪನ್ನಗಳಿಗೆ ಬಾಡಿಗೆ ಪಡೆದುಕೊಳ್ಳುವುದಲ್ಲದೇ, ಮಾರಾಟದ ಬಳಿಕ ಶೇ 2 ರಷ್ಟು ಕಮಿಷನ್ ಸಹ ವಸೂಲಿ ಮಾಡುತ್ತಿದ್ದರು. ಇದರಿಂದ ರೈತರಿಗೆ ಸೂಕ್ತ ಬೆಲೆ ಮತ್ತು ವಿನಾಕಾರಣ ಕಮಿಷನ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ರವಿವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಜಿಲ್ಲೆಯಲ್ಲಿ ಬರಪೀಡಿತವಾದ ನಾನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.ಮೊದಲಿಗೆ ನಾಗಠಾಣ ಮತಕ್ಷೇತ್ರದ ಹಿಟ್ಟಿನಹಳ್ಳಿಗೆ ಭೇಟಿ ನೀಡಲಿರುವ ಅವರು ಹತ್ತಿ ಬೆಳೆ ವೀಕ್ಷಣೆ ನಡೆಸಲಿದ್ದಾರೆ. ನಂತರ ಬಸವನ ಬಾಗೇವಾಡಿ ಮತಕ್ಷೇತ್ರದ ಮನಗೂಳಿಗೆ ತೆರಳಿ ಕಬ್ಬು, ಹತ್ತಿ ಹಾಗೂ ಉಳ್ಳಾಗಡ್ಡೆ ಬೆಳೆ ವೀಕ್ಷಿಸಲಿದ್ದಾರೆ. ಬಳಿಕ ಯರನಾಳ ಗ್ರಾಮಕ್ಕೆ ತೆರಳಿ ಸೂರ್ಯಕಾಂತಿ ಬೆಳೆ ವೀಕ್ಷಿಸಲಿದ್ದಾರೆ. ಅಲ್ಲಿಂದ ಬಸವನ ಬಾಗೇವಾಡಿಗೆ ತೆರಳಿ ತೊಗರಿ, ಹೆಸರು ಹಾಗೂ ಉಳ್ಳಾಗಡ್ಡೆ ಬೆಳೆ ವೀಕ್ಷಿಸಲಿದ್ದಾರೆ.ನಂತರ ದೇವರ ಹಿಪ್ಪರಗಿ ಮತಕ್ಷೇತ್ರದ ಹೂವಿನ ಹಿಪ್ಪರಗಿಗೆ ತೆರಳಿ ಹತ್ತಿ ಬೆಳೆ ವೀಕ್ಷಿಸಲಿದ್ದಾರೆ. ಬಳಿಕ ಮುದ್ದೇಬಿಹಾಳ ಮತಕ್ಷೇತ್ರದ ಕೊಣ್ಣೂರಿಗೆ ತೆರಳಿ ತೊಗರಿ ಮತ್ತು ಹತ್ತಿ ಬೆಳೆ ವೀಕ್ಷಣೆ ಮಾಡಲಿದ್ದಾರೆ. ಹೂವಿನ ಹಿಪ್ಪರಗಿ ಮೂಲಕ ದೇವರ ಹಿಪ್ಪರಗಿಗೆ ಆಗಮಿಸಲಿರುವ ಸಚಿವರು ಬೊಮ್ಮನಜೋಗಿ ಕ್ರಾಸ್ ಬಳಿ ಕಬ್ಬು ಬೆಳೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ಅಗಸ್ಟ್ 9 ಮತ್ತು 10 ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.ದಿ.9 ರವಿವಾರ ಬೆ.9-12ಗಂ. ವರೆಗೆ ವಿಜಯಪುರ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮ.1ಗಂ. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಹಂಜಗಿಸಿದ್ಧೇಶ್ವರ, ಹಿರೋಡೇಶ್ವರ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಕನಕದಾಸ ಸರ್ಕಲ್ ಉದ್ಘಾಟಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮ.3ಗಂ. ಹಿರೇಮಠ ಸಹೋದರರು ನಗರದ ರಾಜಕುಮಾರ ಲೇಔಟ್ ನಲ್ಲಿ ನಿರ್ಮಿಸಿದ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.ದಿ.10 ಸೋಮವಾರ ಬೆ.9ಗಂ. ಟೋಯೋಟಾ ಕಂಪನಿ ಸಿಎಸ್ಆರ್ ಅನುದಾನದಲ್ಲಿ ಬಬಲೇಶ್ವರ ತಾಲೂಕಿನ ಹೆಬ್ಬಾಳಟ್ಟಿ ಸರ್ಕಾರಿ ಪ್ರೌಢಶಾಲೆ ಹೆಬ್ಬಾಳಟ್ಟಿ ನಾಲ್ಕು ಕೊಠಡಿ, ಮ.12ಗಂ. ಅರ್ಜುಣಗಿ ಕೆ.ಪಿ.ಎಸ್ ಶಾಲಾ ಕಟ್ಟಡ, ಪಿ.ಯು ಕಾಲೇಜ್ 4 ಕೊಠಡಿ ಉದ್ಘಾಟಿಸಲಿದ್ದಾರೆ.ನಂತರ ಮ.2ಗಂ. ಬೋಳಚಿಕ್ಕಲಕಿ ಸರ್ಕಾರಿ ಪ್ರೌಢಶಾಲೆಯ ನಾಲ್ಕು ಕೊಠಡಿ ಉದ್ಘಾಟಿಸುವರು. ನಂತರ ಮ.3ಗಂ. ಮಮದಾಪುರ ಕೋಕೋ ಕೋಲಾ ಕಂಪನಿ ಸಿ.ಎಸ್.ಆರ್ ಅನುದಾನದಲ್ಲಿ ಮಮದಾಪುರ…
ಲೇಖನ- ಡಾ.ಅಪ್ಪು ಏಮ್ಉಪನ್ಯಾಸಕರುಅಥಣಿ ಉದಯರಶ್ಮಿ ದಿನಪತ್ರಿಕೆ ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ಕೊರತೆಯನ್ನು ನೀಗಿಸುವಲ್ಲಿ ಅತಿಥಿ ಉಪನ್ಯಾಸಕರ ಸೇವೆ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಯಾವುದೇ ಅಡಚಣೆಯಾಗದಂತೆ ಪಾಠ-ಪ್ರವಚನ ನಡೆಸುವುದು, ಪರೀಕ್ಷಾ ಕಾರ್ಯಗಳಲ್ಲಿ ಭಾಗವಹಿಸುವುದು, ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವುದು ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಅವರು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆದರೆ, ಇಷ್ಟೊಂದು ಮಹತ್ವದ ಸೇವೆ ಸಲ್ಲಿಸುತ್ತಿದ್ದರೂ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವಾ ಭದ್ರತೆಯ ಕೊರತೆ, ಕಡಿಮೆ ವೇತನ, ನೇಮಕಾತಿಯಲ್ಲಿನ ಅನಿಶ್ಚಿತತೆ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳ ಅಭಾವದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮರುನೇಮಕಾತಿಗಾಗಿ ಕಾಯುವ ಪರಿಸ್ಥಿತಿ ಅವರಲ್ಲಿ ಆತಂಕವನ್ನು ಉಂಟುಮಾಡುತ್ತದೆ. ಇದರಿಂದ ಅವರ ಕುಟುಂಬದ ಆರ್ಥಿಕ ಸ್ಥಿರತೆ ಹಾಗೂ ವೃತ್ತಿ ಭವಿಷ್ಯದ ಮೇಲೂ ಪರಿಣಾಮ ಬೀಳುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ…
ಲೇಖನ- ಜಯಶ್ರೀ.ಜೆ.ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಪ್ರಿಯ ಹೃದಯದರಸಿ ರೂಪಾನೀನು ನನ್ನ ಮನದರಸಿ. ಸಪ್ತಸಾಗರ ದಾಟಿ ಬಂದರೂ ಸಿಗದ ಅಪರೂಪದ ರೂಪವತಿ. ಶುಭ್ರ ಹಗಲು ನಾಚುವಂತಹ ಅಂದಗಾತಿ. ಚೆಂದದ ಚೆಲುವೆಯರೆಲ್ಲ ನಿನ್ನ ಮುಂದೆ ತೀರ ತೀರ ಸಪ್ಪೆ ಎನಿಸುವಂತಹ ಸೊಗಸುಗಾತಿ. ಮಾತುಗಳೇ ಇಲ್ಲದ ಮೌನದಲ್ಲೂ ಎಲ್ಲವನ್ನೂ ಹೇಳಬಲ್ಲ ಮಾಯಗಾತಿ. ಹೃದಯ ಕದ್ದ ಚೋರಿ ಅಷ್ಟೇ ಅಲ್ಲ ಹೃದಯ ಸಾಮ್ರಾಜ್ಯದ ಅರಸಿ. ಒಲವನು ಉಣಬಡಿಸುತ್ತ ಜೀವನ ಸಂಭ್ರಮಿಸುವ ಕಲೆ ಕಲಿಸಿದ ರಾಜಕುಮಾರಿ. ಆ ದೇವರು ಪುರುಸೊತ್ತು ಮಾಡಿಕೊಂಡು ತಿದ್ದಿ ತೀಡಿ ಮಾಡಿದ ಶ್ವೇತ ಭಾವದ ಶ್ವೇತಾಂಬರಿ. ಸರಳ ಜೀವನ ಉನ್ನತ ಚಿಂತನೆಯ ಕರುಣಾಮಯಿ. ಮೃದು ಸ್ವಭಾವದ ಕ್ಷಮಯಾಧರಿತ್ರಿ.. ನಿನ್ನ ಅಂದ ಚೆಂದಕೆ ಮರುಳಾಗದವರು ಯಾರೂ ಇಲ್ಲ. ಹೀಗಾಗಿಯೇ ನನ್ನ ಹೃದಯಂಗಳದಲ್ಲಿ ಒಲವಿನ ಬಳ್ಳಿ ನನ್ನ ಅರಿವಿಗೆ ಬರದಂತೆ ಆಕಾಶದತ್ತ ಮುಖ ಮಾಡಿದೆ. ಕಂಗಳ ಹೊಳಪಿಗೆ ಮುದ್ದಾದ ದುಂಡು ಮುಖಕ್ಕೆ ಮುಗ್ದ ನಗುವಿಗೆ ಸುಮಧುರ ಕಂಠಕೆ ಸ್ನೇಹ ಸಿಂಚನಕೆ ಮರುಳಾದೆ.ಕನಸುಗಳೇ ಜೀವನದ ಜೀವ.…
ಅರ್ಜನಾಳದಲ್ಲಿ ಲೋಣಿ (ಬಿ.ಕೆ.) ವಲಯದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನೆ | ಬಿಇಒ ಎಚ್.ನಾಗೇಂದ್ರಪ್ಪ ಕರೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಕ್ರೀಡೆ ಕೇವಲ ಸ್ಪರ್ಧೆ ಅಥವಾ ಮನರಂಜನೆಯ ಸಾಧನವಲ್ಲ; ಅದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ನಾಟಿ ಔಷಧಿಯಾಗಿದೆ ಎಂದು ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಗೇಂದ್ರಪ್ಪ ಅಭಿಪ್ರಾಯಪಟ್ಟರು.ಇಂಡಿ ತಾಲೂಕಿನ ಚಡಚಣ ಶೈಕ್ಷಣಿಕ ವಲಯದ ಅರ್ಜನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಲೋಣಿ (ಬಿ.ಕೆ.) ವಲಯದ ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಯಾಂತ್ರಿಕ ಜೀವನಶೈಲಿಯಲ್ಲಿ ಮಕ್ಕಳಿಂದ ಹಿಡಿದು ಯುವಜನತೆಯವರೆಗೆ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಕ್ರೀಡೆ ಅಥವಾ ಯೋಗ, ವ್ಯಾಯಾಮಕ್ಕೆ ಮೀಸಲಿಡಬೇಕು. ಇದರಿಂದ ದೇಹ ಸದೃಢವಾಗುವುದರ ಜೊತೆಗೆ ಮನಸ್ಸಿಗೂ ಉಲ್ಲಾಸ ದೊರೆಯುತ್ತದೆ. ಕ್ರೀಡೆಯು ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಗುಣ, ಸಹಕಾರ ಮನೋಭಾವ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಘಟಕದ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದೊಡನೆ ಸ್ವಾತಂತ್ರೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜರುಗಿದ ಸ್ವಾತಂತ್ರೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರೋತ್ಸವದ ಸಂಭ್ರಮದ ಆಚರಣೆಗೆ ಎಲ್ಲ ಇಲಾಖೆ, ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಆದ್ದರಿಂದ ಸರ್ಕಾರದ ನಿರ್ದೇಶನ ಜೊತೆಗೆ ನಿಮ್ಮ ಸಲಹೆಗಳನ್ನು ಅನುಸರಿಸಿ ಆಚರಣೆ ಮಾಡೋಣ ಎಂದರು.ಸಭೆಯಲ್ಲಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ರೈತಸಂಘದ ಸಿದ್ಧನಗೌಡ ಪಾಟೀಲ, ಅಜೀಜ್ ಯಲಗಾರ, ರೆಹಮಾನ್ ಕಣಕಾಲ್, ಕಾಶೀನಾಥ ತಳಕೇರಿ ಮಾತನಾಡಿದರು.ಸಭೆಯಲ್ಲಿ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ, ಶಾಲಾ ಮಕ್ಕಳಿಗೆ ಉಪಹಾರದ ವ್ಯವಸ್ಥೆ, ಕಾರ್ಯಕ್ರಮ ಪೂರ್ಣ ಶಾಸಕರ ಉಪಸ್ಥಿತಿ, ಸರ್ಕಾರದ ನಡಾವಳಿ ಅನುಸಾರ ವೇದಿಕೆಯಲ್ಲಿ ಗಣ್ಯರ ಹಾಜರಾತಿ ಕುರಿತು ಚರ್ಚೆಗಳಾದವು.ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಸಿಂದಗಿ ಬಿಇಓ ಟಿಎಸ್. ಆಲಗೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ, ಅಕ್ಷರದಾಸೋಹ ಸಹಾಯಕ ನಿರ್ದೇಶಕ…
