ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ; ಗ್ರಾಮೀಣ ಜನತೆ ಕಾನೂನಿನ ಜ್ಞಾನ ಹಾಗೂ ಅರಿವು ಹೊಂದುವುದು ಇಂದು ಅಗತ್ಯವಾಗಿದೆ ಎಂದು ಹಿರಿಯ ನ್ಯಾಯಾಧೀಶ ನಾಗೇಶ ಮೋಗೆರ್ ಹೇಳಿದರು.
ತಾಲ್ಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಸಿಂದಗಿ ತಾಲ್ಲೂಕು ವಕೀಲರ ಸಂಘದಡಿ ಗುರುವಾರ ಜರುಗಿದ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು. ಅಪರಾಧ ಚಟುವಟಿಕೆಗಳಿಂದ ದೂರವಿರಬೇಕು. ಇಂದು ವರದಕ್ಷಿಣೆ ನೀಡುವುದು ಹಾಗೂ ತೆಗೆದುಕೊಳ್ಳುವುದು ಎರಡು ಅಪರಾಧಗಳೆನ್ನಿಸಿವೆ. ಆದ್ದರಿಂದ ಗ್ರಾಮವನ್ನು ವರದಕ್ಷಿಣೆಮುಕ್ತವಾಗಿಸಲು ತಾವೆಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು
ನ್ಯಾಯಾಧೀಶೆ ಪಂಕಜಾ ಕೊಣ್ಣೂರ ಮಾತನಾಡಿ, ಚಿಕ್ಕ ಮಕ್ಕಳಿಗೆ ವಾಹನ ಚಾಲನೆ ಮಾಡಲು ಕೊಡಬೇಡಿ. ಒಂದು ವೇಳೆ ನೀಡಿದರೆ ಅದಕ್ಕೆ ನ್ಯಾಯಾಲಯದಿಂದ ದಂಡ ವಿಧಿಸಲಾಗುತ್ತದೆ. ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದು ಕಾನೂನಾತ್ಮಕ ವಿಚಾರಗಳನ್ನು ತಿಳಿಸಿದರು.
ಸಿಂದಗಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಹಾಗೂ ಸರ್ಕಾರಿ ವಕೀಲ ಬಿ.ಜಿ.ನೆಲ್ಲಗಿ ಮಾತನಾಡಿ, ವರದಕ್ಷಿಣೆ ಮತ್ತು ಭೂಮಿಯ ಸಂರಕ್ಷಣೆ ಬಗ್ಗೆ ವಿಚಾರಗಳನ್ನು ತಿಳಿಹೇಳಿದರು.
ವಕೀಲ ಶ್ರೀಶೈಲ ಮುಳಜಿ (ಚಿಕ್ಕರೂಗಿ) ಮಾತನಾಡಿ, ನಮ್ಮ ಯುವಕರು ಕಾನೂನನ್ನು ಗೌರವಿಸಬೇಕು ಹಾಗೂ ಪಾಲಿಸಬೇಕು. ಕಾನೂನಿನ ವಿರುದ್ಧ ಯಾವುದೇ ಚಟುವಟಿಕೆ ಮಾಡಿದರೆ ಅದರ ಪರಿಣಾಮ ನಾವೇ ಎದುರಿಸಬೇಕಾಗುತ್ತದೆ ಎಂದರು.
ವಕೀಲರುಗಳಾದ ಕಾಶೀನಾಥ ಚವ್ಹಾಣ, ರವಿ ನಾಯಕ, ಬಿ.ಎಸ್.ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ನಾಗಣ್ಣ ಮುಳಜಿ, ಪಿಡಿಓ ಶಿವಾನಂದ ಮುಲಿಮನಿ, ಎಸ್.ಎಮ್.ಆನಂದಿ, ವಿಶ್ವನಾಥ್ ಚಂಡಕಿ ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಚಂಡಕಿ, ದೇವಾನಂದ ಬಾಗಲಕೋಟ, ಕುಮಾರಗೌಡ ಬಿರಾದಾರ, ಚಿದಾನಂದ ಬಿರಾದಾರ, ಕಲ್ಲು ನಾಟೀಕಾರ, ಶರಣಪ್ಪ ಕುಂಬಾರ, ಬಸವರಾಜ ಕುಂಬಾರ ಇದ್ದರು.

